ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಸರಿಯಾದ ಯೋಗ ಆಯ್ಕೆ ಮಾಡಿ..

  • by

ಚಾಲೆಂಜ್ ಸ್ವೀಕರಿಸುವವರಿಗೆ ಅಷ್ಟಾಂಗ ಯೋಗ :

ದಿನಗಳಲ್ಲಿ ಯೋಗಾ ಹೆಚ್ಚು ಪಾಪ್ಯೂಲರ್ ಆಗಿ ಪ್ರಪಂಚದಾದ್ಯಂತ ಜನರ ಮನ ಗೆದ್ದಿದೆ. ಫಿಸಿಕಲ್ ಆ್ಯಕ್ಟಿವಿಟಿಗಾಗಿ ಯೋಗಾವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ. ವ್ಯಾಯಾಮವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಿದ್ರಾಹೀನತೆ, ದೀರ್ಘಕಾಲದ ನೋವು, ಮತ್ತು ಕೀಲು ನೋವುಗಳ ಸಮಸ್ಯೆಯನ್ನು ನಿಭಾಯಿಸುವಲ್ಲಿ ವ್ಯಾಯಾಮ ಪ್ರಯೋಜಕಾರಿಯಾಗಿದೆ. 

2. ಆಧ್ಯಾತ್ಮಕ ಸಂಪರ್ಕಕ್ಕೆ ಕುಂಡಲಿನಿ ಯೋಗ 

ಕುಂಡಲಿನಿ ಯೋಗ ನಿಮ್ಮ ಮಸಲ್ಸ್ ಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಯೋಗ ಆಧ್ಯಾತ್ಮಿಕವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಿಸುತ್ತದೆ. ಕುಂಡಲಿನಿ ಯೋಗವು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಯೋಗ ಸಾಕಷ್ಟು ಧ್ಯಾನ, ಪಠಣ, ಮುದ್ರೆ ಮತ್ತು ಉಸಿರಾಟದದ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ. ಈ ಯೋಗದ ಮುಖ್ಯ ಉದ್ದೇಶವೆಂದರೆ ಬೆನ್ನು ಮೂಳೆಯ ಕೆಳಭಾಗದಲ್ಲಿ ಕುಂಡಲಿನಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.  ವಿವಿಧ ಉಸಿರಾಟದ ಭಂಗಿಗಳಿಂದ ಮುಕ್ತರಾಗಲು ನೆರವಾಗುತ್ತದೆ. ನರ ಮಂಡಲವನ್ನು ಬಲಪಡಿಸುವ ಮೂಲಕ ಶ್ವಾಸಕೋಶದ ಸಾಮರ್ಥ್ಯವನ್ನು ಕೂಡ ಉತ್ತಮಗೊಳಿಸುತ್ತದೆ. ಆದ್ರೆ ಕುಂಡಲಿನಿ ಯೋಗ ಅಭ್ಯಾಸ ಮಾಡುವುದಕ್ಕೂ ಮುನ್ನ ವ್ಯಕ್ತಿ ಧೂಮಪಾನ ಹಾಗೂ ಮಧ್ಯಪಾನ ತ್ಯಜಿಸಿರಬೇಕು. ಇದು ಸ್ವಾಭಾವಿಕ ಶಕ್ತಿಯ ಹರಿವಿಗೆ ಅಡಚಣೆಯನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಪದ್ವಾಸನ ನರಮಂಡಲದ ಶಕ್ತಿಯನ್ನು ಹೆಚ್ಚಿಸುತ್ತದೆ. ವಜ್ರಾಸನವು ನರಮಂಡಲವನ್ನು ಬಲಪಡಿಸುತ್ತದೆ.  ಯಾರು ಬೇಕಾದ್ರೂ ಕುಂಡಲಿನಿ ಯೋಗವನ್ನು ಮಾಡಬಹುದು. ಆದರೆ ಸರಿಯಾದ ಮಾರ್ಗದರ್ಶನ ಪಡೆದು ಅಭ್ಯಾಸ ಮಾಡಬೇಕು.

 yoga, personality! Health, benefits, ಆರೋಗ್ಯ. ಯೋಗ, ಪ್ರಯೋಜನಗಳು,

3. ರಿಲ್ಯಾಕ್ಟ್ ಮೈಂಡ್ ಗಾಗಿ – ಶವಾಸನ 

ಶವಾಸನವು ನಿಮ್ಮನ್ನು ಧ್ಯಾನದ ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವ ಮೂಲಕ ನಿಮ್ಮ ದೇಹಕ್ಕೆ ಬೇಕಾದ ಆಹ್ಲಾದಕತೆಯನ್ನು ಒದಗಿಸುತ್ತದೆ. ಶವಾಸನವು ಒತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ. ಇದು ನಿದ್ರಿಸುವ ಭಂಗಿಯಾಗಿದೆ. ಇದನ್ನು ಯಾರು ಬೇಕಾದರೂ ಮಾಡಬಹುದು. ಶವಾಸನ ಮಾಡಲು ಹೆಚ್ಚಿನ ಏಕಾಗ್ರತೆ ಬೇಕು. ಈ ಶೈಲಿಯ ಯೋಗವು ವಿಶ್ರಾಂತಿ ಪಡೆಯಲು ಬಯಸುವವರಿಗೆ ಸೂಕ್ತವಾದದ್ದು. ರಕ್ತದೋತ್ತಡವನ್ನು ಕಡಿಮೆ ಮಾಡಿ, ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಶವಾಸನ ಸಹಾಯ ಮಾಡುತ್ತದೆ. 

4. ಧ್ಯಾನ ಯೋಗ 

ಧಾನ್ಯ ಯೋಗದ ಸಾಕಷ್ಟು ಉಪಯೋಗಗಳನ್ನು ಅನುಭವಕ್ಕೆ ಬರುತ್ತವೆ. ಶಾಂತ ಮನಸ್ಸು, ಲೌಕಿಕ ಆಕರ್ಷಣೆಯಿಂದ ಹೊರತಾದ ಸ್ಥಿತಿ. ಏಕಾಗ್ರತೆಯ ಸಾಧನೆಯಲ್ಲಿ ಮನಸ್ಸನ್ನು ಒಂದು ವಸ್ತು, ವಿಷಯದತ್ತ  ಕೇಂದ್ರಿಕರಿಸುವುದಾಗಿರುತ್ತದೆ. ಧ್ಯಾನಸ್ಥ ಪ್ರಕ್ರಿಯೆಗೆ ಮನಸ್ಸನ್ನು ತೆರೆದುಕೊಳ್ಳುವುದು. ಜಾಗೃತ ಸ್ಥಿತಿಯಿಂದಾಚೆ ಮನಸ್ಸನ್ನು ಕೇಂದ್ರಿಕರಿಸುವುದು, ಅದೇ ಹಂತದಲ್ಲಿ ಮನಸ್ಸನ್ನು ಆಲೋಚನೆ, ಶಬ್ದ, ಭಾವನೆಗಳಿಗೆ ತೆರೆದಿಡುವುದು ಇತ್ಯಾದಿ. ಅಂತರಮೌನ ಅಂತಲೇ ಈ ಯೋಗವನ್ನು ಕರೆಯಲಾಗುತ್ತದೆ. ಈ ಧ್ಯಾನದ ಪ್ರತಿ ಹಂತದಲ್ಲೂ ಉಪಯೋಗ ಅನುಭವಿಸಬಹುದು. ಯೋಗಿಗಳ ಪ್ರಕಾರ, ಶರೀರವು ಪಂಚಕೋಶಗಳಿಂದ ಮಾಡಲ್ಪಟ್ಟಿದೆ. ಅನ್ನಮಯ (ಕಾಯ). ಪ್ರಾಣಮಯ (ಚೈತನ್ಯ). ಮನೋಮಯ (ಉಲ್ಲಾಸ, ಜಾಗೃತಾವಸ್ಥೆ) ಶಾರೀರಿಕ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಅನ್ನಮಯ ಕೋಶದ ಸ್ನಾಯುಗಳನ್ನು ವಿಶ್ರಾಂತ ಸ್ಥಿತಿಗೆ ಕರೆದ್ಯೊಯ್ಯಬಹುದು. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಸಂಜೀವಿನಿ.

5. ಶೋಲ್ಡರ್ ಸ್ಟ್ಯಾಂಡ್ – ಸರ್ವಾಂಗಾಸನ 

ದೇಹದ ಆರೋಗ್ಯವನ್ನು ಸಮತೋಲನದಲ್ಲಿಡುವ ಯೋಗಾಸನಗಳಲ್ಲಿ ಸರ್ವಾಂಗಸನ ಕೂಡಾ ಒಂದು. ಸರ್ವಾಂಗಾಸನದಿಂದ ರಕ್ತದೋಷ, ಹಸಿವು ಹೆಚ್ಚುವುದು, ಈ ಆಸನದಲ್ಲಿ ಬೆನ್ನುಮೂಳೆ ನೇರವಾಗುವುದರಿಂದ ಜ್ಞಾನ ತಂತುಗಳು ವಿಶೇಷ ಲಾಭ ಪಡೆಯುತ್ತವೆ.  

5.

4.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ