ಯೋಗಕ್ಷೇಮ ಹಾಗೂ ಭಾವನಾತ್ಮಕ ಚಿಕಿತ್ಸೆಗಾಗಿ ಯೋಗಾ ಮುದ್ರೆಗಳು..!- Yoga mudras for well-being and emotional healing

  • by


ಬ್ರಹ್ಮಾಂಡವು ಪಂಚ ತತ್ವಗಳಿಂದ ಕೂಡಿದೆ. ಅಗ್ನಿ, ವಾಯು , ಆಕಾಶ, ಪೃಥ್ವಿ, ಜಲ. ಅದೇ ರೀತಿ ನಮ್ಮ ಶರೀರವು ಪಂಚ ತತ್ವಗಳಿಂದ ಕೂಡಿದೆ ಎನ್ನಬಹುದು. ಪಂಚತತ್ವಗಳ ಸಮತೋಲನ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ. ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಕೈಯ ಅಂಗುಷ್ಠದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತ ಮುದ್ರೆಗಳು ಎಂದು ಕರೆಯುತ್ತಾರೆ. ಈ ಮುದ್ರೆಗಳಿಂದ ಆಱೋಗ್ಯ ವರ್ಧಿಸುತ್ತದೆ.

ಮುದ್ರಾ ಎಂದರೇನು..?

ಮುದ್ರಾ ಎಂಬುದು ಕೈಗಳ ಸೂಚಕವಾಗಿದ್ದು, ಇದು ಮೆದುಳಿನ ನಿರ್ದಿಷ್ಟ ಪ್ರದೇಶಗಳಿಗೆ ಶಕ್ತಿಯ ಹರಿವನ್ನು ಮಾರ್ಗದರ್ಶಿಸುತ್ತವೆ. ಮುದ್ರಾಗಳಲ್ಲಿ ಹಲವು ವಿಧಗಳಿವೆ. ದೇಹದಲ್ಲಿ ಪ್ರಾಣದ ಹರಿವನ್ನು ಹೆಚ್ಚಿಸಲು ಉಸಿರಾಟದ ಜತೆ ಇದನ್ನು ಮಾಡಲಾಗುತ್ತದೆ.

ವಾಯು ಮುದ್ರಾ

ತೋರುಬೆರಳಿನ ತುದಿಯನ್ನು ಹೆಬ್ಬಟ್ಟಿನ ಬುಡಕ್ಕೆ ತಾಗಿಸಿ ಹೆಬ್ಬಟ್ಟನ್ನು ತೋರು ಬೆರಳಿನ ಬೆನ್ನಿನ ಮೇಲೆ ಇಡಬೇಕು. ಆಗ ವಾಯು ಮುದ್ರೆ ಆಗುತ್ತದೆ. ಶರೀರದ ಹಲವು ಭಾಗಗಲ್ಲಿ ವಾಯುವು ಹೆಚ್ಚಾಗಿ ನೋವುಗಳು ಬರುತ್ತವೆ. ಈ ಮುದ್ರೆ ಮಾಡುವುದರಿಂದ ಎಲ್ಲಾ ನೋವನ್ನು ಶಮನಗೊಳಿಸುತ್ತದೆ.

Yoga mudras, well-being, emotional healing , ಯೋಗಾ ಮುದ್ರೆಗಳು, ಯೋಗಕ್ಷೇಮ,

ಸೂರ್ಯ ಮುದ್ರ

ಉಗುರು ಬೆರಳಿನ ತುದಿಯನ್ನು ಹೆಬ್ಬಟ್ಟಿನ ಬುಡಕ್ಕೆ ತಾಗಿಸಿ, ಹೆಬ್ಬಟ್ಟಿನ ಉಂಗುರ ಬೆರಳಿನ ಬೆನ್ನಿನ ಮೇಲೆ ಇರಿಸಬೇಕು. ಆಗ ಸೂರ್ಯ ಮುದ್ರೆ ಆಗುತ್ತದೆ. ಇದು ಬೊಜ್ಜು ಕರಗಿಸುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹದ ಉಷ್ಣಾಂಶ ಕಡಿಮೆ ಆದಾಗ ಈ ಮುದ್ರೆ ಮಾಡುವುದರಿಂದ ಉಷ್ಣಾಂಶ ಹೆಚ್ಚಾಗುತ್ತದೆ. ಇದು ದೃಷ್ಟಿಯ ಹಲವು ನಿವಾರಿಸುತ್ತದೆ. ನಿಮ್ಮ ದೇಹದ ಚಯಾಪತಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ವರುಣ ಮುದ್ರಾ

ಚರ್ಮದ ಟೋನ್ ಸಮಸ್ಯೆಯನ್ನು ನಿವಾರಿಸಲು ವರುಣ್ ಮುದ್ರಾ ಹೆಚ್ಚು ಉಪಯುಕ್ತ ಎಂದು ಹೇಳಬಹುದು. ಇದು ದೇಹದಲ್ಲಿನ ನೀರಿನ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ದೇಹವನ್ನು ತೇವಾಂಶವಾಗಿರಿಸುತ್ತದೆ. ಚರ್ಮದ ಮೇಲೆ ಗುಳ್ಳೆಗಳನ್ನು ಹಾಗೂ ಕಲೆಗಳನ್ನು ನಿವಾರಿಸುತ್ತದೆ. ಚರ್ಮದ ಸುಕ್ಕನ್ನು ನಿವಾರಿಸುತ್ತದೆ. ಹೊಟ್ಟೆಯ ಅಲ್ಸರ್ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂತ್ರಪಿಂಡದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.

Yoga mudras, well-being, emotional healing , ಯೋಗಾ ಮುದ್ರೆಗಳು, ಯೋಗಕ್ಷೇಮ,

ಜ್ಞಾನ ಮುದ್ರಾ

ಜ್ಞಾನ ಮುದ್ರಾ ಉದ್ವೇಗವನ್ನು ಕಡಿಮೆ ಮಾಡುವುದಲ್ಲದೇ, ಖಿನ್ನತೆಯನ್ನು ನಿವಾರಿಸುತ್ತದೆ. ಮನಸ್ಸನ್ನು ಶಾಂತವಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ. ಇದು ವ್ಯಕ್ತಿಯ ಆಧ್ಯಾತ್ಮಿಕತೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ. ಧ್ಯಾನಕ್ಕೆ ಸಹಾಯ ಮಾಡುತ್ತದೆ. ಮೆದುಳು ನರಮಂಡಲ ಮತ್ತು ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸುತ್ತದೆ. ಏಕಾಗ್ರತೆ ಹೆಚ್ಚಿಸಿ ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ವಜ್ರ ಮುದ್ರೆಯು ನಿಮ್ಮ ದೇಹದ ಎಲ್ಲಾ ಪಂಚತತ್ವಗಳಿಂದ ಕೂಡಿದೆ. ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಚಡಪಡಿಕೆ ಸಮಸ್ಯೆಯನ್ನು ನಿವಾರಿಸುತ್ತದೆ. ಆತಂಕವನ್ನು ನಿವಾರಿಸುತ್ತದೆ.

ಗಣೇಶ ಮುದ್ರೆ

ಈ ಭಂಗಿ ಗಣೇಶನ ಸಂಕೇತವಾಗಿದೆ. ಈ ಮುದ್ರೆ ಮಾಡುವುದರಿಂದ ಚಯಾಪಚಯಕ್ರಿಯೆ ಸುಧಾರಿಸುವುದಲ್ಲದೇ, ರಕ್ತ ಪರಿಚಲನೆ ಹಾಗೂ ಖಿನ್ನತೆಯಿಂದ ಚೇತರಿಸಿಕೊಳ್ಳಲು , ಹೃದಯದ ಸಮಸ್ಯೆಗಳನ್ನು ನಿವಾರಿಸಿ, ಕೊಲೆಸ್ಟ್ರಾಲ್ ನಿವಾರಿಸುತ್ತದೆ.

ಪೃಥ್ವಿ ಮುದ್ರಾ
ಈ ಮುದ್ರೆ ಸ್ಥಿರತೆ ಹಾಗೂ ಶಕ್ತಿಯನ್ನು ಸಂಕೇತಿಸುತ್ತದೆ. ದೇಹವನ್ನು ಸ್ಟ್ರಾಂಗ್ ಆಗಿ ಇಡಲು ಮತ್ತು ಸ್ಥಿರವಾಗಿಡಲು ನೆರವಾಗುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಅಲ್ಲದೇ, ಕೂದಲು ಬೆಳವಣಿಗೆ ಸೇರಿದಂತೆ ತೂಕ ಇಳಿಕೆಗೆ ಸಹಾಯ ಕಾರಿಯಾಗಿದೆ.

ಕನಿಷ್ಠ ಮುದ್ರಾ
ಕನಿಷ್ಠ ಮುದ್ರಾ ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನಗೊಳಿಸುತ್ತದೆ. ಅಧಿಕ ರಕ್ತದೋತ್ತಡವನ್ನು ನಿಯಂತ್ರಿಸುವುದಲ್ಲದೇ, ವಾಕರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ. ಅಜೀರ್ಣ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ.


ಪ್ರಾಣ ಮುದ್ರಾ
ಈ ಭಂಗಿ ಜೀವನದ ಬಗ್ಗೆ ಆಸಕ್ತಿಯನ್ನು ಸಂಕೇತಿಸುತ್ತದೆ. ಕಣ್ಣಿನ ಸಮಸ್ಯೆಯನ್ನು ನಿವಾರಿಸಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ದೌರ್ಬಲ್ಯವನ್ನು ನಿವಾರಿಸಿ, ಬುದ್ಧಿಶಕ್ತಿಯ ಸ್ಥಿರತೆಯನ್ನು ಕಾಪಾಡುತ್ತದೆ.
ನೀವು ಸಹ ದೀರ್ಘಕಾಲದವರೆಗೆ ರೋಗಗಳಿಂದ ಮುಕ್ತವಾಗಿರಲು ಬಯಸಿದರೆ, ಈ ಮುದ್ರೆಗಳನ್ನು ನಿಮ್ಮ ದಿನಚರಿಯಲ್ಲಿ ಅಭ್ಯಾಸ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗಿದೆ.

ಅಪಾನ ಮುದ್ರೆ
ಹೆಬ್ಬಟ್ಟಿನ ತುದಿಯೊಂದಿಗೆ ಮಧ್ಯದ ಬೆರಳಿನ ತುದಿ ಮತ್ತು ಉಂಗುರ ಬೆರಳಿನ ತುದಿ ಸ್ಪರ್ಶ ಮಾಡಿದಾಗ ಅಪಾನ ಮುದ್ರೆ ಆಗುತ್ತದೆ. ಇದು ಮೂಲವ್ಯಾಧಿ, ಮಧುಮೇಹ ಕಾಯಿಲೆ ಹಾಗೂ ಹೊಟ್ಟೆ , ಎದೆ ಉರಿಗಳನ್ನು ಶಮನಗೊಳಿಸುತ್ತದೆ.

Yoga mudras, well-being, emotional healing , ಯೋಗಾ ಮುದ್ರೆಗಳು, ಯೋಗಕ್ಷೇಮ,

ಆಕಾಶ ಮುದ್ರೆ
ಹೆಬ್ಬರಳಿನ ತುದಿ ಮತ್ತು ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಆಕಾಶ ಮುದ್ರೆ ಆಗುತ್ತದೆ. ಹೃದಯದ ಯಾವುದೇ ಸಮಸ್ಯೆಯಿದ್ದರೇ, ಈ ಮುದ್ರೆಯಿಂದ ಶಮನವಾಗುತ್ತದೆ. ಕಿವಿಯ ತೊಂದರೆ ಸರಿಪಡಿಸುತ್ತದೆ. ಎಲುಬುಗಳನ್ನು ಗಟ್ಟಿ ಮುಟ್ಟಾಗಿಡುತ್ತದೆ. ಮೈಗ್ರೇನ್ ತಲೆನೋವು ಸರಿಪಡಿಸುತ್ತದೆ. ದೇಹದಲ್ಲಿನ ವಿಷದ್ರವ್ಯಗಳನ್ನು ಹೊರ ಹಾಕುವಲ್ಲಿ ನೆರವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ