World Earth Day: ಕೊರೊನಾ ವೈರಸ್, ವಾಯುಮಾಲಿನ್ಯದಿಂದ ಬಚಾವ್ ಆಗೋದು ಹೇಗೆ..?

  • by

ವಾಯು ಮಾಲಿನ್ಯದಿಂದಾಗಿ ಉಸಿರಾಟ ಹಾಗೂ ಹೃದಯ ಕಾಯಿಲೆಯಂತಹ ಅನೇಕ ಶ್ವಾಸಕೋಶದ ಸಮಸ್ಯೆಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ವಾಯು ಮಾಲಿನ್ಯ ಸಂಬಂಧಿತ ಕಾಯಿಲೆಗಳ ಅಪಾಯ ತುಂಬಾ ಹೆಚ್ಚುತ್ತಿದೆ. ಈ ಪರಿಸ್ಥಿತಿ ಬಗ್ಗೆ ನಿರಾಶೆಗೊಳ್ಳುವ ಬದಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವೆಂದು ಪರಿಗಣಿಸಲಾಗಿದೆ. ನಿಮ್ಮನ್ನು ರಕ್ಷಿಸಲು ಮತ್ತು ಅದರಿಂದ ಹಾನಿಯನ್ನು ತಪ್ಪಿಸಲು ಕೆಲವು ಪರಿಣಾಮ ಕಾರಿ ಕ್ರಮಗಳು ಇಲ್ಲಿವೆ.


world-earth-day-effects-air-pollution-lungs- ವಾಯುಮಾಲಿನ್ಯ, ತಡೆಗಟ್ಟುವ ಕ್ರಮ, ವರ್ಲ್ಡ್ ಅರ್ತ್ ಡೇ.

ವಾಯುಮಾಲಿನ್ಯ ತಡೆಗಟ್ಟುವಿಕೆ

ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ ಹೋಗುವುದರಿಂದ ಮಾಲಿನ್ಯ ವನ್ನು ತಡೆಗಟ್ಟಬಹುದು. ಅಲ್ಲದೇ ಕಣ್ಣುಗಳಿಗೆ ಕನ್ನಡಕ ಬಳಸುವುದರಿಂದ ಅಪಾಯವನ್ನು ತಡೆಗಟ್ಟಬಹುದು. ಮಾಸ್ಕ್ ಧರಿಸಿದ ಮೇಲೆ ಪದೇ ಪದೇ ಮುಟ್ಟದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ಮಾಸ್ಕ್ ನ್ನು ಒಂದೇ ಸಲ ಬಳಸುವುದು ಒಳ್ಳೆಯದು. ಏಕೆಂದರೆ ಅದೇ ಮಾಸ್ಕ್ ನ್ನು ಪದೇ ಪದೇ ಬಳಸುವುದರಿಂದ ವೈರಸ್ ಗಳು ಹಾಗೂ ಸೋಂಕು ಉಂಟು ಮಾಡುವ ಅನೇಕ ಬ್ಯಾಕ್ಚೇರಿಯಾಗಳು ನಮ್ಮ ಮೇಲೆ ದಾಳಿ ಮಾಡಬಹುದು.ಕಲುಷಿತ ಧೂಳಿನ ಕಣಗಳು ಗಾಳಿಯಲ್ಲಿ ಹಾರಿ ಹೋಗದಂತೆ ಮನೆಯ ಹೊರಗಿನ ರಸ್ತೆಗಳನ್ನು ಒದ್ದೆಯಾಗಿ ಇರಿಸಿ. ಅಲ್ಲದೇ, ಮನೆಯಲ್ಲಿಯೂ

ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿವುದು ಒಳ್ಳೆಯದು.
ಪರಿಸರದ ಮಾಲಿನ್ಯ ಮಟ್ಟ ಕಡಿಮೆಯಾದಾಗ ಮಾತ್ರ ಹೊರಗೆ ಪ್ರಯಾಣ ಬೆಳೆಸಿ.
ಮಾಲಿನ್ಯದಿಂದ ದೂರವಿರಲು ಆಹಾರ ಕ್ರಮ ಹೀಗಿರಲಿ..

ಆಹಾರವನ್ನು ಸೇವಿಸಿದ ನಂತರ ಸ್ವಲ್ಪ ಬೆಲ್ಲವನ್ನು ಸೇವಿಸಿ. ಬೆಲ್ಲ ರಕ್ತವನ್ನು ಶುದ್ಧಗೊಳಿಸುತ್ತದೆ. ಇದು ನಿಮ್ಮನ್ನು ಮಾಲಿನ್ಯದಿಂದ ದೂರವಿರಿಸುತ್ತದೆ. ಧೂಳಿನ ಕಣಗಳಿಂದ ಶ್ವಾಸಕೋಶವನ್ನು ರಕ್ಷಿಸಲು , ನೀವು ಪ್ರತಿದಿನ ಒಂದು ಲೋಟ ಬೆಚ್ಚಗಿನ ಹಾಲನ್ನು ಸೇವಿಸಿರಿ.
ಶುಂಠಿ ರಸ ಹಾಗೂ ಸಾಸಿವೆ ಎಣ್ಣೆಯನ್ನು ಮೂಗಿನಲ್ಲಿ ಬಿಡುವುದರಿಂದ ಹಾನಿಕಾರಕ ಧೂಳಿನ ಕಣಗಳಿಂದ ರಕ್ಷಣೆ ದೊರೆಯುತ್ತದೆ.
ಮಾಲಿನ್ಯದ ಪರಿಣಾಮಗಳಿಂದ ರಕ್ಷಿಸಲು ,ನೀವು ಸಾಧ್ಯವಾದಷ್ಟು ನೀರನ್ನು ಸೇವಿಸಬೇಕು.

ವಾಯುಮಾಲಿನ್ಯ ತಡೆಗಟ್ಟಲು ಆಯುರ್ವೇದದ ಕ್ರಮಗಳು..?


ಜೇನುತುಪ್ಪದಲ್ಲಿ ಕರಿಮೆಣಸನ್ನು ಮಿಕ್ಸ್ ಮಾಡಿ ಸೇವಿಸಿ. ಇದರಿಂದ ಹೆಪ್ಪುಗಟ್ಟಿದ ಕಫ, ಮತ್ತು ಶ್ವಾಸಕೋಶದ ಕಲ್ಮಶವನ್ನು ನಿವಾರಿಸಲು ಸಾಧ್ಯವಾಗುತ್ತದೆ.ಅಜೈನ್ ಎಲೆಗಳ ನೀರನ್ನು ಕುಡಿಯುವುದರಿಂದ ವ್ಯಕ್ತಿಯ ರಕ್ತವು ಶುದ್ಧವಾಗುತ್ತದೆ. ಮತ್ತು ಹೃದಯದೊಳಗೆ ಇರುವ ಕಲುಷಿತ ಅಂಶಗಳನ್ನು ತೆಗೆದುಹಾಕುವಲ್ಲಿ ನೆರವಾಗುತ್ತದೆ ಎಂದು ಹೇಳಬಹುದು.

ಮನೆಯಲ್ಲಿರುವಾಗ ಏನು ಮಾಡಬೇಕು…?

ಮಾಲಿನ್ಯವನ್ನು ತಡೆಗಟ್ಟಲು ನಿಮ್ಮ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಕ್ಲೋಸ್ ಮಾಡಿ. ಕಿಟಕಿಗಳನ್ನು ತೆಗೆದಾಗ ಮನೆಯೊಳಗೆ ಗಾಳಿಯ ಮೂಲಕ ಧೂಳಿನ ಕಣಗಳು ಮನೆಯೊಳಗೆ ಬರಬಹುದು. ಹಾಗಾಗಿ ಕೀಟಕಿ ಹಾಗೂ ಬಾಗಿಲುಗಳನ್ನು ಸಾಧ್ಯವಾದಷ್ಟು ಕ್ಲೋಸ್ ಮಾಡಿ.
ಹೆಚ್ಚಾಗಿ ಕಲುಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನೀವು ನಿಯಮಿತವಾಗಿ ಶುದ್ಧ ಗಾಳಿಯ ವಾತಾವರಣ ದೊರೆಯುವುದಿಲ್ಲ. ಆದ್ದರಿಂದ ಪರಿಸರ ಕಲುಷಿತವಾಗಿದ್ದರೆ, ನೀವು ಉದ್ಯಾನವನಕ್ಕೆ ಆಳವಾಗಿ ಉಸಿರಾಟದ ವ್ಯಾಯಾಮ ಮಾಡಬಹುದು.
ಮನೆಯಲ್ಲಿ ಗಾಳಿ ಶುದ್ಧೀಕರಿಸುವ ಸಸ್ಯಗಳನ್ನು ತಂದು ಇಡುವುದು ಸೂಕ್ತ. ಏಕೆಂದರೆ ಗಾಳಿ ಶುದ್ಧೀಕರಿಸುವ ಸಸ್ಯ ಇಟ್ಟರೆ, ಮನೆಯೊಳಗಿನ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.


world-earth-day-effects-air-pollution-lungs- ವಾಯುಮಾಲಿನ್ಯ, ತಡೆಗಟ್ಟುವ ಕ್ರಮ, ವರ್ಲ್ಡ್ ಅರ್ತ್ ಡೇ.

ಏನು ಮಾಡಬೇಕು..?

1.ನೀವು ಕಚೇರಿಗೆ ಹೋಗುವ ಬದಲು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ನೀಡಿದರೆ, ಇದರ ಲಾಭವನ್ನು ಪಡೆದುಕೊಳ್ಳಿ. ಇದು ಹಣವನ್ನು ಉಳಿಸುವುದಲ್ಲದೇ, ವಾಯುಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ವಾಕಿಂಗ್ ಗೆ ಹೋಗಿ, ಬೈಸಿಕಲ್ ಸವಾರಿ ಮಾಡಬಹುದು. ಇದರಿಂದ ವಾಯು ಮಾಲಿನ್ಯ ತಡೆಗಟ್ಟಬಹುದು.

2. ವಿಪರೀತ ವಾಯುಮಾಲಿನ್ಯದ ಸಂದರ್ಭದಲ್ಲಿ ಹೊರಗೆ ವ್ಯಾಯಾಮ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಕಾರಣ, ನೀವು ವ್ಯಾಯಾಮ ಮಾಡುವಾಗ ಹೆಚ್ಚು ಉಸಿರಾಡುತ್ತೀರಿ. ಇದರಿಂದಾಗಿ ಹೆಚ್ಚು ಧೂಳಿನ ಹಾಗೂ ಕಲುಷಿತ ವಾತಾವರಣವನ್ನು ಉಸಿರಾಟದ ಮೂಲಕ ಉಸಿರಾಡುತ್ತೀರಿ.ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

3.ನಿಮ್ಮ ಕಾರಿನ ಏರ್ ಫಿಲ್ಟರ್ ಗಳನ್ನು ನಿಯಮಿತವಾಗಿ ಬದಲಾಯಿಸಲಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೀವು ಮನೆಯಿಂದ ಹೊರಗೆ ಹೋಗುವಾಗಲೆಲ್ಲಾ ಮರುಬಳಕೆ ಮಾಡಬಹುದಾದ ಏರ್ ಮಾಸ್ಕ್ ಧರಿಸಿದರೆ ಉತ್ತಮ. ಏಕೆಂದರೆ ಸರಳವಾದ ಬಟ್ಟೆಯ ಮಾಸ್ಕ್ ಗಳು ಹೆಚ್ಚಿನ ಮಟ್ಟದ ಮಾಲಿನ್ಯದಿಂದ ರಕ್ಷಿಸಲು ಸಾಧ್ಯವಾಗಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ