ಚಳಿಗಾಲದ ಮೇಕಪ್ ಹೇಗಿರಬೇಕು..?

 • by

ಚಳಿಗಾಲದಲ್ಲಿ ಮೇಕಪ್ ಹೇಗಿರಬೇಕು? ಚಳಿಗಾಲದ ಸ್ಟೈಲಿಶ್ ಬಟ್ಟೆಗಳು
ಚಳಿಗಾಲ ಬಂತೆಂದರೆ ತ್ವಚೆಯ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಸ್ವಲ್ಪ ಹೆಚ್ಚಾಗೇ
ಕಾಳಜಿವಹಿಸಬೇಕಾಗುತ್ತದೆ. ನಿಮ್ಮಸ್ವೆಟರ್ ಗಳು, ಶಾಲ್ ಗಳು, ಟೋಪಿಗಳು, ಶೂಗಳು ಎಲ್ಲವೂ ಮೆಲ್ಲಗೆ
ನಿಮ್ಮ ವಾರ್ಡರೋಬಿನಿಂದ ಚಳಿಗಾಲದಲ್ಲಿ ಹೊರಗಿಣಕಲು ಆರಂಭಿಸುತ್ತವೆ. ಆದಷ್ಟು ದೇಹ
ಬೆಚ್ಚಗಿಟ್ಟುಕೊಳ್ಳುವ ಕಡೆಯೇ ನಮ್ಮೆಲ್ಲರ ಗಮನವಿರುತ್ತದೆ. ಅದರಂತೆ, ನಮ್ಮ ಮೇಕಪ್ ನಲ್ಲೂ ಕೂಡ
ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ತ್ವಚೆಯ ಒಣಗುವಿಕೆ ಮತ್ತು ಸಿಪ್ಪೆಸುಲಿಯುವುದನ್ನು
ತಪ್ಪಿಸಬೇಕಾದರೆ, ತ್ವಚೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗು ಅದರ ತೆವಾಂಶವನ್ನು
ಕಾಪಾಡುವುದು ತುಂಬಾ ಮುಖ್ಯ.

ಚರ್ಮ ಮೃದುವಾಗಿದ್ದರೆ ಬಿರುಕುಗಳ ಬಾಧೆ ಹತ್ತಿರವೂ ಸುಳಿಯುವುದಿಲ್ಲ. ಬೆಸ್ ಅಥವಾ ಫೌಂಡೇಷನ್
ಕ್ರೀಮ್ ಬಳಕೆ – ಫೌಂಡೇಷನ್ ಪೌಡರ್ ಗಿಂತ ಕ್ರೀಮ್ ಬಳಸುವುದು ಉತ್ತಮ. ಹಾಗೇ ಅದನ್ನು ಚನ್ನಾಗಿ
ಕಲಸಿ(ಬ್ಲೆಂಡ ಮಾಡಿ) ಬಳಸಬೇಕು. ಒಂದೇ ಬಣ್ಣದ ಕ್ರೀಮನ್ನು ಬಳಸುವ ಬದಲು, ನಿಮ್ಮ ತ್ವಚೆಯ
ವರ್ಣಕ್ಕೆ ಹೋಲುವ ಎರಡು ಬಣ್ಣಗಳನ್ನು ಬೆರೆಸಿ ಬಳಸಿದರೆ ಆಕರ್ಷಣೀಯವಾಗಿ ಕಾಣುವಿರಿ.
ಚಳಿಗಾಲದಲ್ಲಿ ಸ್ವರ್ಣ ವರ್ಣ ಅಥವಾ ಯಾವುದಾದರೂ ಲೋಹ ವರ್ಣವನ್ನು ಕಣ್ಣಿಗೆ ಲೇಪಿಸಿಕೊಳ್ಳಬೇಕು.
ಇದು ತಟಸ್ಥವಾಗಿದ್ದರೂ ಉತ್ಕೃಷ್ಟವಾಗಿ ಕಾಣುತ್ತದೆ.

ಸಂಜೆಯ ಔತಣಕೂಟದಲ್ಲಿ ಲೋಹವರ್ಣದ ಸಿಂಗಾರ ಹೊಂದಿದ ನಯನಗಳು ನಶೆ ಏರಿಸುತ್ತವೆ. ಕೊಹ್ಲ್,
ಐ-ಲೈನರ್ ಮತ್ತು ಮಸ್ಕಾರಾಗಳನ್ನು ತಪ್ಪದೆ ಲೇಪಿಸಿರಿ. ಚಳಿಗಾಲದಲ್ಲಿ ಸೌಮ್ಯವಾದ ಹಾಗು
ಹೊಳೆಯುವ ಈ ಎರಡೂ ಬಗೆಯ ತುಟಿಗಳನ್ನೂ ಹೊಂದಬಹುದು. ತುಟಿಗಳ ಬಿರುಕುಗಳನ್ನು ತಪ್ಪಿಸಲು
ಮತ್ತು ಅವುಗಳಲ್ಲಿ ತೆವವನ್ನು ಉಳಿಸುವಲ್ಲಿ ಲಿಪ್-ಬಾಮ್ ಗಳು ಸಹಾಯಕಾರಿ. ಗಾಢ ವರ್ಣವು ನಿಮ್ಮ
ಮುಖಕ್ಕೆ ಹೊಳಪನ್ನು ತರುವದಲ್ಲದೆ ಚಳಿಯ ವಾತಾವರಣದಲ್ಲಿ ಅತ್ಯುತ್ತಮ ಕಾಣುತ್ತದೆ.
ಚಳಿಗಾಲದಲ್ಲಿ ಬ್ಲಶ್ ಮಾಡುವದು ತುಂಬಾ ಅಗತ್ಯ. ಇದು ನಿಮ್ಮ ಕೆನ್ನೆಯೆಲುಬುಗಳ ಸ್ಪಷ್ಟತೆಯನ್ನು
ತೋರಿಸುವದಲ್ಲದೆ ನಿಮಗೆ ತಾಜಾ ನೋಟವನ್ನು ನೀಡುತ್ತದೆ ಕೂದಲು ಮತ್ತು ಚರ್ಮ ಎರಡಕ್ಕೂ
ಚಳಿಗಾಲದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಆದ್ದರಿಂದ ತಲೆತೊಳೆಯುವಾಗ ಬಿಸಿ ನೀರಿನ ಬದಲಿಗೆ
ಉಗುರು ಬೆಚ್ಚಗಿನ ನೀರು ಬಳಸುವುದು ಒಳ್ಳೆಯದು. ಕ್ರೀಮ್ ಆಧಾರಿತ ಉತ್ಪನ್ನಗಳನ್ನೇ ಬಳಸಿರಿ ಹಾಗೂ
ಯಾವಾಗಲೂ ನಿಮ್ಮ ಕೂದಲಿಗೆ ಕಂಡೀಷನ್ ಮಾಡಿಕೊಳ್ಳುತ್ತಿರಿ. ಚಳಿಗಾಲವು ಶುಷ್ಕತೆ ಹೆಚ್ಚಿರುವದರಿಂದ
ನಿಮ್ಮ ಕೂದಲುಗಳಿಗೆ ತೈಲ ಲೇಪಿಸುವದು ಅತ್ಯಗತ್ಯ.

ಚಳಿಗಾಲದಲ್ಲಿ ಮೇಕಪ್ ತೆಗೆಯಲು ಮನೆಮದ್ದುಗಳು

 • ಮೇಕಪ್ ತೆಗೆಯದೆ ಮಲಗಬೇಡಿ, ರಾತ್ರಿಯಿಡೀ ಮೇಕಪ್ ಮುಖದ ಮೇಲಿದ್ದರೆ ಅದು ತ್ವಚೆಯ
  ರಂಧ್ರವನ್ನು ಮುಚ್ಚಿ ಮೊಡವೆ ಏಳಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಕಣ್ಣಿಗೆ ಬಳಸಿದ ಮೇಕಪ್
  ಕೂಡ ಹಾಗೇ ಉಳಿಸಿದರೆ ಕಣ್ಣಿನ ಉರಿ ಅಲರ್ಜಿ ಉಂಟಾಗುತ್ತದೆ.
  *ಕಣ್ಣಿನ ಮೇಕಪ್ ತೆಗೆಯಲು ಹತ್ತಿಗೆ ಕೊಬ್ಬರಿ ಅಥವಾ ಆಲಿವ್ ಎಣ್ಣೆ ಸೋಕಿಸಿ ಒರೆಸಿ ನೀರು ಹಾಕಿಕೊಂಡು
  ಐ ಶ್ಯಾಡೊ, ಐ ಲೈನರ್ ಮತ್ತು ಮಸ್ಕಾರ ಹೋಗುವವರೆಗೂ ತೊಳೆದುಕೊಳ್ಳಬೇಕು. ಮಕ್ಕಳಿಗೆ ಬಳಸುವ
  ಎಣ್ಣೆಯನ್ನೂ ಕೂಡ ಕಣ್ಣಿನ ಮೇಕಪ್ ತೆಗೆಯಲು ಬಳಸಬಹುದು.
  *ಮೇಕಪ್ ತೆಗೆಯುವಲ್ಲಿ ಕ್ಲೆನ್ಸರ್ ಹೆಚ್ಚು ಪರಿಣಾಮಕಾರಿ. ನಿಮ್ಮ ತ್ವಚೆಗೆ ಸರಿಹೊಂದುವ ಕ್ಲೆನ್ಸರ್
  ಖರೀದಿಸಿ, ಹತ್ತಿಯಿಂದ ಕ್ಲೆನ್ಸರ್ ಅದ್ದಿಕೊಂಡು ಒರೆಸಿ ಸುಲಭವಾಗಿ ಮೇಕಪ್ ತೆಗೆಯಬಹುದು.
  *ಕಣ್ಣಿನ ಮೇಕಪ್ ತೆಗೆಯಲು ಕ್ಲೆನ್ಸರ್ ಬಳಸಬಾರದು, ಹಾಗೆಯೇ ಕಣ್ಣಿನ ಮೇಕಪ್ ತೆಗೆಯಲು ಬಳಸುವ
  ವಿಧಾನವನ್ನು ಮುಖಕ್ಕೆ ಬಳಸಬಾರದು.
  ಮೇಕಪ್ ತೆಗೆಯಲು ನೈಸರ್ಗಿಕ ಅಂಶವೆಂದರೆ ಮೊದಲು ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು
  ಹಾಲು ಅಥವಾ ಮೊಸರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಕೆಲ ನಿಮಿಷದ ನಂತರ
  ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ತ್ವಚೆ ತಾಜಾ ಆಗಿ, ಮೇಕಪ್ ಒಂದಿಷ್ಟೂ ಉಳಿಯದೆ
  ಹೋಗುತ್ತದೆ. 6. ಮುಖದ ಮೇಕಪ್ ತೆಗೆಯುವಾಗ, ಕುತ್ತಿಗೆ ಮತ್ತು ಕಿವಿಯ ಹಿಂದಿನ ಭಾಗವನ್ನು ಒಮ್ಮೆ
  ಹತ್ತಿಯಿಂದ ಒರೆಸುವುದನ್ನು ಮರೆಯಬೇಡಿ. ಎರಡು ಬಾರಿ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದು,
  ಕೊನೆಗೆ ನಿಮ್ಮ ಮುಖಕ್ಕೆ ಹೊಂದುವ ಮಾಯಿಶ್ಚರೈಸರ್ ಹಚ್ಚಿಕೊಂಡು ಮಲಗಬಹುದು.

ಇವುಗಳು ಬಹಳ ಹಿಂದಿನಿಂದಲೂ ಬಳಸಲ್ಪಡುತ್ತಿದ್ದ ಬಗೆಗಳಾಗಿದ್ದರೂ ಫ್ಯಾಷನ್‌ಲೋಕದಲ್ಲಿ ನಡೆಯುವ
ಪ್ರಯೋಗಗಳಿಗೊಳಪಟ್ಟು ವಿಭಿನ್ನವಾದ ಮತ್ತು ಸುಂದರವಾದ ಬಗೆಗಳಲ್ಲಿ ದೊರೆಯಲಾರಂಭಿಸಿವೆ
ಎನ್ನಬಹುದಾಗಿದೆ. ಶಾಲುಗಳು ಮತ್ತು ದುಪಟ್ಟಾಗಳು ಹೆಚ್ಚಾಗಿ ಸೀರೆಗಳೊಂದಿಗೆ ಅಥವಾ
ಚೂಡಿದಾರಗಳಂತಹ ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇವುಗಳಲ್ಲಿ ಹಲವು
ಡಿಸೈನುಗಳ ಶಾಲುಗಳು ಮತ್ತು ದುಪಟ್ಟಾಗಳು ದೊರೆಯುತ್ತವೆ.

ಉಲ್ಲನ್… ಬಟ್ಟೆಯು ಚಳಿಗಾಲಕ್ಕೆ ನಮ್ಮ ದೇಹವನ್ನು ಬೆಚ್ಚಗಿಡುವಲ್ಲಿ ಸಹಾಯಕವಾಗಬಲ್ಲವು.
ಇವುಗಳು ಕೇವಲ ಸ್ವೆಟರುಗಳ ಮಾದರಿಯಲ್ಲಿ ದೊರೆಯುತ್ತಿತ್ತು. ಆದರೆ ಇಂದು ಉಲ್ಲನ್‌ನಲ್ಲಿ ಎಲ್ಲಾ
ಬಗೆಯ ಮಾಡರ್ನ್ ಹಾಗೂ ಫ್ಯಾಷನೇಬಲ… ಎನಿಸುವ ದಿರಿಸುಗಳು ದೊರೆಯುತ್ತವೆ. ಚಳಿಗಾಲಕ್ಕೆಂದೇ
ವಿಶೇಷವಾಗಿ ಉಲ್ಲನ್‌ಥೆಡ್‌ಗಳಿಂದ ಸಿದ್ಧಪಡಿಸಿದ ಮಾಡರ್ನ್ ಮತ್ತು ಫ್ಯೂಷನ್‌ವೇರು ಗಳಾದ ಕುರ್ತಾಗಳು,
ಟ್ಯೂನಿಕ್‌ಗಳು, ಸ್ವೀಟ… ಶರ್ಟುಗಳು, ಟಾಪುಗಳು ಇತ್ಯಾದಿಗಳು ದೊರೆಯುತ್ತವೆ. ಇವುಗಳನ್ನು ಧರಿಸಿದಾಗ

ಸ್ವೆಟರುಗಳ ಆವಶ್ಯಕತೆಯಿರುವುದಿಲ್ಲ. ಈ ಬಗೆಯ ಉಲ್ಲನ್‌ಉಡುಪುಗಳೇ ನಮ್ಮ ದೇಹವನ್ನು
ಬೆಚ್ಚಗಿಡುವಲ್ಲಿ ಸಹಾಯಕವಾಗಬಲ್ಲವು.

ಇನ್ನು ಬಹು ಉಪಯೋಗಿಯಾಗಿ ಆಗಿ ಬಳಸಬಹುದಾದ ಸ್ಕಾಫ‌್ಸುಗಳ ಬಗೆಗೆ ಹೇಳುವುದಾದರೆ ಹಲವು
ಬಗೆಗಳಲ್ಲಿ ದೊರೆಯುವ ಇವುಗಳು ಚಳಿಗಾಲದ ಟ್ರೆಂಡಿ ಆಕ್ಸೆಸ್ಸರಿ ಎನಿಸಿವೆ. ಕುತ್ತಿಗೆಯನ್ನು ಆವರಿಸುವ ಈ
ಬಗೆಯ ಸ್ಕಾರ್ಫ್ಗಳು ಹಲವು ವಿಧಗಳಲ್ಲಿ ದೊರೆಯುತ್ತವೆ. ಹಲವು ವಿಧದ ಬಟ್ಟೆಗಳಿಂದ ತಯಾರಿಸಲ್ಪಟ್ಟ
ಸ್ಕಾರ್ಫ್ಗಳು ದೊರೆಯುತ್ತಲಿದ್ದು ವಿಭಿನ್ನ ಡಿಸೈನನ್ನು ಹೊಂದಿರುತ್ತವೆ. ಸಿಲ್ಕ…, ಉಲ್ಲನ್‌, ಕಾಟನ್‌,
ನೆಟ್ಟೆಡ್‌, ಜ್ಯೂಟ್, ಶಿಫಾನ್‌, ಟೆರಿಕಾಟ್, ಸಿಲ್ಕ… ಇತ್ಯಾದಿ ಬಟ್ಟೆಗಳಲ್ಲಿ ದೊರೆಯುತ್ತವೆ. ಅಷ್ಟೇ ಅಲ್ಲದೆ
ಪ್ರಿಂಟೆಡ್‌ಮತ್ತು ಪ್ಲೆ„ನ್‌ಎರಡೂ ಬಗೆಗಳಲ್ಲಿಯೂ ದೊರೆಯುವುದರಿಂದ ಆಯ್ಕೆಗೆ ವಿಫ‌ುಲ
ಅವಕಾಶವಿರುತ್ತವೆ. ಪ್ರಯಾಣದ ಸಂದರ್ಭದಲ್ಲಿ ಇವುಗಳ ಧರಿಸುವಿಕೆಯಿಂದ ನಮ್ಮ ಕೂದಲನ್ನೂ ರಕ್ಷಿಸುವ
ಕೆಲಸವನ್ನು ಮಾಡುತ್ತವೆ ಈ ಸ್ಕಾರ್ಫ್ಗಳು. ದಿರಿಸಿಗೆ ಮ್ಯಾಚ್‌ಆಗುವಂತಹ ಸ್ಕಾರ್ಫ್ಗಳನ್ನು
ಆಯ್ಕೆಮಾಡಿಕೊಳ್ಳಬಹುದು. ಮಫ್ಲರುಗಳಲ್ಲಿ ಹತ್ತು ಹಲವಾರು ವಿಧಗಳನ್ನು ಕಾಣಬಹುದಾಗಿದೆ.
ದೇಹದ ಅಂಗಾಂಗಗಳನ್ನು ಹೋಲಿಸಿದಾಗ ಚಳಿಯ ಅನುಭವ ಹೆಚ್ಚಾಗಿ ಬರುವುದು ಕಿವಿಗೆ. ಆದ್ದರಿಂದ
ಕಿವಿಯನ್ನು ಆವರಿಸುವ ಮಫ್ಲರುಗಳು ಕೂಡ ಫ್ಯಾಷನಬಲ… ಆದ ಬಗೆಗಳಲ್ಲಿ ದೊರೆಯುತ್ತವೆ.
ಚಳಿಗಾಲದಲ್ಲಿ ಕೈಗಳನ್ನು ಬೆಚ್ಚಗಿಡುವುದು ಕೂಡ ಅತ್ಯಂತ ಆವಶ್ಯಕವಾದ ಅಂಶವಾಗಿದೆ.
ಲೆದರ್‌ಗ್ಲೌಸುಗಳು, ಕಾಟನ್‌ಗ್ಲೌಸುಗಳು, ಲೇಸ್‌ಗ್ಲೌಸುಗಳು, ಪ್ರಿಂಟೆಡ್‌ಗ್ಲೌಸುಗಳು ದೊರೆಯುತ್ತವೆ.
ಇಂತಹ ಗ್ಲೌಸುಗಳು ನಿಮ್ಮನ್ನು ಬೆಚ್ಚಗಿಡುವುದಷ್ಟೇ ಅಲ್ಲದೆ ನಿಮ್ಮ ದಿರಿಸಿಗೂ ಒಳ್ಳೆಯ ಸಾಥ್‌
ಕೊಡುತ್ತವೆ. ಸ್ವೆಟರುಗಳೆಂದರೆ ಥಟ್ಟನೆ ನೆನಪಿಗೆ ಬರುವುದು ಉಲ್ಲನ್‌ಸ್ವೆಟರುಗಳು. ಇವುಗಳು ಹೆಚ್ಚಾಗಿ
ಸಾಂಪ್ರದಾಯಿಕ ಉಡುಗೆಗಳಾದ ಚೂಡಿದಾರ, ಕುರ್ತಾಗಳು ಅಥವಾ ಸೀರೆ ಇಗಳಿಗೆ ಮಾತ್ರ
ಹೊಂದುವಂತಹುದಾಗಿದೆ. ಇವುಗಳು ಮಾಡರ್ನ್ ಬಟ್ಟೆಗಳೊಂದಿಗೆ ಹೆಚ್ಚಿನ ಲುಕ್ಕನ್ನು ನೀಡುವುದಿಲ್ಲ.
ಆದರೂ ಕೂಡ ಇವುಗಳು ಎವರ್‌ಗ್ರೀನ್‌ವಿಂಟರ್‌ಆಕ್ಸೆಸ್ಸರಿಗಳಲ್ಲೊಂದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ