ಬಿಳಿ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದಾ..?

  • by

ಬಿಳಿ ಅಕ್ಕಿ ಸಾಮಾನ್ಯವಾಗಿ ಆಹಾರ ಪದಾರ್ಥಗಳಲ್ಲಿ ಒಂದು. ಬಹುತೇಕ ಎಲ್ಲರಿಗೂ ಬಿಳಿ ಅಕ್ಕಿ ಬಗ್ಗೆ ತಿಳಿದಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಅಕ್ಕಿಯನ್ನು ಬೆಳೆಯಲಾಗುತ್ತದೆ. ಗಾತ್ರ ಹಾಗೂ ಗುಣಮಟ್ಟವನ್ನು ಅವಲಂಬಿಸಿ ಅನೇಕ ರೀತಿಯ ಬಿಳಿ ಅಕ್ಕಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಲವು ಜನರು ಬಿಳಿ ಅನ್ನವನ್ನು ಸೇವನೆ ಮಾಡುತ್ತಾರೆ. ಬಿಳಿ ಅಕ್ಕಿಯನ್ನು ಹಲವು ಖಾದ್ಯಗಳನ್ನಾಗಿ ತಯಾರಿಸಲಾಗುತ್ತದೆ. ಬಿರಿಯಾನಿ, ಖಿಚಡಿ, ಖೀರ್ ಹೀಗೆ ಹಲವು ರೂಪಗಳಲ್ಲಿ ಅಕ್ಕಿಯನ್ನು ಬಳಸಲಾಗುತ್ತದೆ. ಆದರೆ ಬಿಳಿ ಅಕ್ಕಿಯನ್ನುಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ಬಿಳಿ ಅಕ್ಕಿ ಸೇವಿಸಬೇಕಾ.. ಅಥವಾ ಬೇಡವೇ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಬಿಳಿ ಅಕ್ಕಿ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ?

ಬಿಳಿ ಅಕ್ಕಿ ಸ್ವಲ್ಪ ಮಟ್ಟಿಗೆ ಪ್ರಯೋಜನಕಾರಿ ಅಂತಲೇ ಹೇಳಬಹುದು. ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್ , ಕಬ್ಬಿಣ, ಪೊಟ್ಯಾಶಿಯಂ ಮತ್ತು ವಿಟಮಿನ್ ಎ ನಂತಹ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಬಿಳಿ ಅಕ್ಕಿಗಿಂತ ಕಂದು ಬಣ್ಣದ ಅಕ್ಕಿ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸಂಶೋಧನೆ ಪ್ರಕಾರ, ಕಂದು ಬಣ್ಣದ ಅಕ್ಕಿಯಲ್ಲಿ ಬಿಳಿ ಬಣ್ಣದ ಅಕ್ಕಿಗಿಂತ ಹೆಚ್ಚಿನ ಪ್ರೋಟೀನ್ ಇರುತ್ತದೆ. ಬಿಳಿ ಅಕ್ಕಿ ಕೆಲಮೊಮ್ಮೆ ಮಧುಮೇಹಕ್ಕೆ ಕಾರಣವಾಗಬಹುದು.

100 ಗ್ರಾಂ ಬಿಳಿ ಅಕ್ಕಿಯಲ್ಲಿರುವ ಪೌಷ್ಟಿಕ ಅಂಶಗಳು…!

ಕ್ಯಾಲೋರಿ – 356 ಕೆ.ಸಿ.ಎಲ್
ಪ್ರೋಟೀನ್ – 6.78 ಗ್ರಾಂ
ಕಾರ್ಬೋಹೈಡ್ರೇಟ್ – 83.05 ಗ್ರಾಂ
ಫೈಬರ್ – 1.7 ಗ್ರಾಂ
ಪೊಟ್ಯಾಶಿಯಂ – 68 ಮಿ.ಗ್ರಾಂ
ನಿಯಾಸಿನ್ – 3.39 ಮಿ.ಗ್ರಾಂ
ವಿಟಮಿನ್ ಎ- 169 ಐಯು..

ಬಿಳಿ ಅಕ್ಕಿಯ ಆರೋಗ್ಯ ಪ್ರಯೋಜನಗಳು

ಬಿಳಿ ಅನ್ನವಿಲ್ಲದ ಆಹಾರ ಅಂಪೂರ್ಣವೆನಿಸುತ್ತದೆ. ಬಿಳಿ ಅಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ನೆರವಾಗುತ್ತದೆ. ಕೆಲವರಿಗೆ ಅಕ್ಕಿ ಸೇವನೆ ಮಾಡಿದಾಗ ಮೈಯೆಲ್ಲಾ ಅಲರ್ಜಿ ಉಂಟಾಗುತ್ತದೆ. ಆದ್ರೆ ಬಿಳಿ ಅಕ್ಕಿಯಲ್ಲಿ ಕೆಲವರಿಗೆ ಅಲರ್ಜಿ ಉಂಟು ಮಾಡುವ ಗ್ಲುಟೀನ್ ಅಂಶವಿರುವುದಿಲ್ಲ. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶ ಇದರಲ್ಲಿ ಹೆಚ್ಚಾಗಿರುತ್ತದೆ. ಹಾರ್ಮೋನ್ ಬದಲಾವಣೆಗಳಿಂದ ಬಳಲುತ್ತಿರುವವರಿಗೆ ಇದು ಹೇಳಿ ಮಾಡಿಸಿದ್ದು.

ಅಕ್ಕಿಯು ದೇಹದ ಆರೋಗ್ಯಕ್ಕೆ ಉತ್ತಮ ಎಂಬುದರಲ್ಲಿ ಎರಡು ಮಾತಿಲ್ಲ. ಬಿಳಿ ಅಕ್ಕಿಯ ಅನ್ನ ಹಾಗೂ ಕಂದು ಅಕ್ಕಿಯ ಅನ್ನದಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ಕಂದು ಬಣ್ಣದ ಅಕ್ಕಿಯ ಅನ್ನವು ಜೀರ್ಣವಾಗಲು ಬಿಳಿ ಅಕ್ಕಿಯ ಅನ್ನಕ್ಕಿಂತಲೂ ತುಸು ಹೆಚ್ಚಪ ಸಮಯ ತೆಗೆದುಕೊಳ್ಳುತ್ತದೆ. ಅದು ಬಿಟ್ಟರೆ ಯಾವುದೇ ಅಕ್ಕಿ ಸೇವಿಸಿದರೂ ತೊಂದರೆ ಇಲ್ಲ. ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಕಡಿಮೆ ಪಾಲಿಷ್ ಅಕ್ಕಿಯ ಅನ್ನ ಆರೋಗ್ಯಕ್ಕೆ ಹೆಚ್ಚು ಉತ್ತಮವಾದದ್ದು. ಬಿಳಿ ಅಕ್ಕಿಗೆ ಹೋಲಿಸಿದರೆ, ಕಂದು ಅಥವಾ ಕೈಯಿಂದ ಕುಟ್ಟಿದ ಅಕ್ಕಿಯಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ.

ಬಿಳಿ ಅಕ್ಕಿ ಸೇವನೆ ಮಾಡುವುದರಿಂದ ಎನರ್ಜಿ ಹೆಚ್ಚುತ್ತದೆ. ಅದರಲ್ಲಿ ಕಾರ್ಬೋಹೈಡೇಟ್ ಗಳು ಬಿಳಿ ಅಧಿಕವಾಗಿರುತ್ತದೆ. ಕಾರ್ಬೋಹೈಡ್ರೇಟ್ ಗಳು ಹೋಲಿಸಿದರೆ, ಬಿಳಿ ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಬೇಗನೆ ಶಕ್ತಿ ನೀಡುತ್ತದೆ.

ಬಿಳಿ ಅಕ್ಕಿ ಸೇವಿಸುವುದರಿಂದ ಅನಾನುಕೂಲಗಳು..!

ಬಿಳಿ ಅಕ್ಕಿ ಸೇವಿಸುವುದರಿಂದ ಮಧುಮೇಹ ಅಪಾಯ ಹೆಚ್ಚಾಗುತ್ತದೆ. ಬಿಳಿ ಅಕ್ಕಿ ಗ್ಲೈಸೆಮಿಕ್ ಅಂಶ ಹೊಂದಿರುತ್ತದೆ. ಇಂತಹ ಆಹಾರಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೆಟಾಬಾಲಿಕ್ ಸಿಡ್ರೋಮ್ ಸಮಸ್ಯೆ

ಮೆಟಾಬಾಲಿಕ್ ಸಿಂಡ್ರೋಮ್ ಎನ್ನುವುದು ಹೃದಯ ಕಾಯಿಲೆಗೆ ಜತೆಗೆ ಪಾರ್ಶ್ವವಾಯು ಹಾಗೂ ಮಧುಮೇಹ ಅಪಾಯ ಹೆಚ್ಚಿಸುವ ಅಪಾಯಕಾರಿ ಅಂಶಗಳು ಒಂದು ಗುಂಪು. ಈ ಅಪಾಯಕಾರಿ ಅಂಶಗಳು ಅಧಿಕ ರಕ್ತದೋತ್ತಡ , ಅಧಿಕ ಸಕ್ಕರೆ, ಕೊಲೆಸ್ಟ್ರಾಲ್ ಸಮಸ್ಯೆ ಎದುರಿಸಬಹುದು. ಬಿಳಿ ಅಕ್ಕಿ ಸೇವನೆಯಿಂದ ಚಯಾಪಚಯ ಸಿಂಡ್ರೋಮ್ ಸಮಸ್ಯೆ ಕಾಡಬಹುದು.

ತೂಕ ಹೆಚ್ಚಳ

ಬಿಳಿ ಅಕ್ಕಿ ಸೇವಿಸುವುದರಿಂದ ತೂಕ ಅಥವಾ ಬೊಜ್ಜು ಸಮಸ್ಯೆ ಕಾಡಬಹುದು. ಬಿಳಿ ಅಕ್ಕಿಯಲ್ಲಿ ಬೊಜ್ಜು ಉತ್ತೇಜಿಸುವ ಗುಣಗಳಿವೆ. ಇವು ಅತಿಯಾದ ಬೊಜ್ಜು ಉಂಟು ಮಾಡಲು ಕಾರಣವಾಗುತ್ತದೆ. ನಿಮ್ಮ ಆಹಾರದಲ್ಲಿ ಬಿಳಿ ಅಕ್ಕಿ ಸೇವಿಸುವ ಬದಲು, ಕಂದು ಬಣ್ಣದ ಅಕ್ಕಿಯನ್ನು ಸೇರಿಸಿಕೊಳ್ಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ