ಯಾವ ಸೋಪು ಸ್ನಾನಕ್ಕೆ ಒಳ್ಳೆಯದು..?

  • by

ಇಂದಿನ ವೈಭವೋಪೇತ ಯುಗದಲ್ಲಿ ಮಹಿಳೆಯರು ಸುಗಂಧಿತ
ಸೋಪುಗಳು ಮತ್ತು ಸುಗಂಧ ದ್ರವ್ಯಗಳಿಗೆ ಮನಸೋಲುತ್ತಿದ್ದಾರೆ. ಮೈ
ಮನ ಸುಗಂಧವಾಗಿದ್ದರೆ ದಿನ ಅತ್ಯುತ್ತಮವಾಗಿರುತ್ತದೆ ಎಂಬುದು ಅವರ
ನಂಬಿಕೆಯಾಗಿದೆ. ಅದಕ್ಕಾಗಿ ಸೋಪು, ಮತ್ತು ಸುಗಂಧ ದ್ರವ್ಯಗಳ ಮೇಲೆ
ಹೆಚ್ಚು ಹಣ ಖರ್ಚು ಮಾಡಲು ಅವರು ಹಿಂದೆ ಮುಂದೆ ನೋಡುವುದಿಲ್ಲ.
ಇನ್ನು ಇವರ ಇಚ್ಛೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಸೋಪುಗಳ
ವಿವಿಧ ಬ್ರ್ಯಾಂಡ್‌ಗಳು ಬಂದಿದ್ದು ಅವುಗಳಲ್ಲಿ ಯಾವುದು ಮಹಿಳೆಯರ
ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಹೆಚ್ಚು ಖರೀದಿಯಾಗಿದೆ ಅವುಗಳ
ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ.

ಲಕ್ಸ್ ವೆಲ್ವೇಟ್ ಟಚ್ ಜಾಸ್ಮಿನ್ ಆಲ್ಮಂಡ್ ಆಯಿಲ್ ಸೋಪ್
ಭಾರತದಲ್ಲಿ ಲಕ್ಸ್ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ ಆಗಿದ್ದು
ನಮ್ಮ ದೇಶದ ಹೆಚ್ಚಿನ ಮಹಿಳೆಯರು ಬಳಸುತ್ತಿರುವ ಸೋಪ್ ಆಗಿದೆ.
ಇದು ಕ್ರೀಮಿ ಮತ್ತು ಮೃದುವಾದ ರಚನೆಯನ್ನು ಹೊಂದಿದ್ದು ಸೂಕ್ಷ್ಮ
ತ್ವಚೆಗೆ ಅತ್ಯುತ್ತಮವಾಗಿದೆ ಮತ್ತು ತ್ವಚೆಯ ಮೇಲೆ ಇದರ
ಮಾಯಿಶ್ಚರೈಸರ್ ಹಾಗೆಯೇ ಇರುತ್ತದೆ ಮತ್ತು ಇದು ತ್ವಚೆಯನ್ನು
ಒಣಗಲು ಬಿಡುವುದಿಲ್ಲ. ಇದರ ಸುವಾಸನೆ ದಿನಪೂರ್ತಿ ನಿಮ್ಮನ್ನು
ಉಲ್ಲಾಸದಿಂದ ಇರಿಸುತ್ತದೆ.

ಹಿಮಾಲಯ ಹರ್ಬ್ ನರಿಶಿಂಗ್ ಕ್ರೀಮ್ ಮತ್ತು ಹನಿ ಸೋಪ್

ಹಿಮಾಲಯದ ಹರ್ಬ್ ನರಿಶಿಂಗ್ ಕ್ರೀಮ್ ಮತ್ತು ಹನಿ ಸೋಪ್
ಮಹಿಳೆಯರ ಸೂಕ್ಷ್ಮ ತ್ವಚೆಗೆ ಹೇಳಿ ಮಾಡಿಸಿರುವಂಥದ್ದು. ಇದರಲ್ಲಿರುವ
ಜೇನು ಮತ್ತು ಹಾಲು ತ್ವಚೆಯನ್ನು ಹೈಡ್ರೇಟ್ ಆಗಿ ಇರಿಸುತ್ತದೆ ಮತ್ತು
ಮೃದುವಾಗಿರಿಸುತ್ತದೆ. ನಿತ್ಯ ಸ್ನಾನಕ್ಕೆ ಈ ಸೋಪ್ ಅನ್ನು
ಬಳಸಬಹುದು. ಇದು ಕಲೆಯನ್ನು ಹೋಗಲಾಡಿಸಿ ನಿಮಗೆ ಶುದ್ಧ ತ್ವಚೆ
ಹೊಳೆಯುವ ಮೈ ಕಾಂತಿಯನ್ನು ಒದಗಿಸುತ್ತದೆ. ಇದು ಆ್ಯಂಟಿಸೆಪ್ಟಿಕ್
ಮತ್ತು ಆ್ಯಂಟಿಮೈಕ್ರೊಬಯಾಲ್ ಅಂಶಗಳನ್ನು ಹೊಂದಿದೆ ಇದು
ತ್ವಚೆಯನ್ನು ಆರೋಗ್ಯಕಾರಿಯಾಗಿ ಮತ್ತು ಅಲರ್ಜಿಗಳ
ಅಡ್ಡಪರಿಣಾಮಗಳಿಂದ ರಕ್ಷಿಸುತ್ತದೆ.

ಡವ್ ಬ್ಯೂಟಿ ಬಾರ್
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸೋಪ್ ಇದಾಗಿದ್ದು
ಚರ್ಮರೋಗ ತಜ್ಞರ ಶಿಫಾರಸಿಗೆ ಈ ಸೋಪು ಭಾಜನವಾಗಿದೆ. ಇದು
ಸೂಕ್ಷ್ಮ ತ್ವಚೆಗೆ ಹೇಳಿಮಾಡಿಸಿರುವಂಥದ್ದು. ಇದು ಮೈ ಕಾಂತಿಯನ್ನು
ಯುವತ್ವದಿಂದ ಕಂಗೊಳಿಸುವಂತೆ ಮಾಡುವಂತಿದೆ. ಇದು ತ್ವಚೆಯನ್ನು
ಮೃದು ಮತ್ತು ಕಾಂತಿಯುಕ್ತವನ್ನಾಗಿಸುತ್ತದೆ. ನಿಮ್ಮ ಕೈಗಳು, ಮುಖ
ಮತ್ತು ದೇಹಕ್ಕೆ ಈ ಸೋಪ್ ಅನ್ನು ನಿಸ್ಸಂಶಯವಾಗಿ ಬಳಸಬಹುದು.

ಪಿಯರ್ಸ್ ಸೋಪ್
ಇದು ಹೆಚ್ಚು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದ್ದು ನಿಮಗೆ ಕಾಂತಿಯುಕ್ತ
ತ್ವಚೆಯನ್ನು ನೀಡುತ್ತದೆ. ಇದರಲ್ಲಿ ರಾಸಾಯನಿಕ ಇಲ್ಲದೇ

ಇರುವುದರಿಂದ ಇದನ್ನು ಸೂಕ್ಷ್ಮ ತ್ವಚೆಗೆ ಕೂಡ ಬಳಸಬಹುದು. ಇದು
ಪೂರ್ಣ ಗ್ಲಿಸರಿನ್ ಅಂಶವನ್ನು ಹೊಂದಿದ್ದು ನಿಮ್ಮ ದೇಹಕ್ಕೆ
ಸಕೋಮಲತೆಯನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಈ ಸೋಪ್ ಕೂಲ್
ಅನುಭವವನ್ನು ಒದಗಿಸುತ್ತದೆ.

ಲಿರಿಲ್ 2000 ಟಿ ಟ್ರಿ ಆಯಿಲ್
ಇದು ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಮೈಕ್ರೊಬಯಾಲ್
ಅಂಶಗಳನ್ನು ಹೊಂದಿದ್ದು ಇದರಲ್ಲಿ ಲಿಂಬೆಯ ಸತ್ವವಿದೆ.

ಬಯೋಟಿಕ್ ಆರೆಂಜ್ ಪೀಲ್ ಬಾಡಿ ಕ್ಲೆನ್ಸರ್
ಬಯೋಟೆಕ್ ಆಯುರ್ವೇದಿಕ್ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ.
ಇದು ತ್ವಚೆಗೆ ಆರೋಗ್ಯಕಾರಿ ಅಂಶಗಳನ್ನು ಒದಗಿಸುತ್ತದೆ ಮತ್ತು
ಇದರಲ್ಲಿರುವ ನೈಸರ್ಗಿಕ ಅಂಶಗಳು ಅಂತೆಯೇ ಹಣ್ಣು ಮತ್ತು ಎಣ್ಣೆಯ
ಸತ್ವಗಳು ನಿಮ್ಮ ತ್ವಚೆಯ ಕೋಶಗಳನ್ನು ತೆರೆಯಿಸುತ್ತದೆ ಮತ್ತು
ಮೃತಕೋಶವನ್ನು ನಿವಾರಿಸುತ್ತದೆ.

ಮೈಸೂರು ಸ್ಯಾಂಡಲ್ ಸೋಪ್
ಹೆಸರೇ ಹೇಳುವಂತೆ ಇದನ್ನು ಶ್ರೀಗಂಧದ ಎಣ್ಣೆಯಿಂದ
ತಯಾರಿಸಲಾಗಿದ್ದು ಗಂಧದ ಸುವಾಸನೆಯನ್ನು ನಿಮ್ಮ ದೇಹಕ್ಕೆ ನೀಡಲಿದೆ.
ಈ ಸೋಪಿನಲ್ಲಿ ಸುವಾಸನೆಗಾಗಿ ಯಾವುದೇ ರಾಸಾಯನಿಕವನ್ನು

ಸೇರಿಸುವುದಿಲ್ಲ. ಇದರಲ್ಲಿ ಗ್ಲಿಸರಿನ್ ಇದೆ, ಅಂತೆಯೇ ವೆಜಿಟೇಬಲ್
ಆಯಿಲ್, ಮತ್ತು ಶುದ್ಧ ಶ್ರೀಗಂಧದ ಎಣ್ಣೆ ಇದೆ. ಇದು ನಿಮ್ಮ
ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ ಮತ್ತು
ತ್ವಚೆಯ ಕಾಂತಿಯನ್ನು ನವೀನತೆಯಿಂದ ಕೂಡಿರುವಂತೆ ಮಾಡುತ್ತದೆ.

ಫಿಯಾಮಾ ಡಿವಿಲ್ಸ್
ಹೆಂಗಳೆಯರೇ ನಿಮ್ಮ ದಿನವನ್ನು ಈ ಸೋಪ್‌ನಿಂದ ಆರಂಭಿಸಿ ಮತ್ತು
ಇದು ನಿಮ್ಮ ಯುವತ್ವವನ್ನು ನವಿರಾಗಿ ಇರಿಸುತ್ತದೆ. ನಿಮ್ಮ ತ್ವಚೆಯನ್ನು
ಮೃದುವಾಗಿಸುತ್ತದೆ ಮತ್ತು ಚೇತೋಹಾರಿಯಾಗಿಸುತ್ತದೆ.

ಖಾದಿ ಸ್ಯಾಂಡಲ್‌ವುಡ್ ಮಡ್ ಸ್ಕ್ರಬ್ ಬಾರ್
ಇದು ಕೈಯಲ್ಲೇ ತಯಾರಿಸಲಾಗಿರುವ ಸೋಪ್ ಆಗಿದ್ದು ನಿಮ್ಮ ತ್ವಚೆಗೆ
ಬೇಕಾಗಿರುವ ಮೈ ಕಾಂತಿಯನ್ನು ಒದಗಿಸುತ್ತದೆ. ಇದನ್ನು ಗಂಧದ
ಹುಡಿಯಿಂದ ತಯಾರಿಸಲಾಗಿದೆ. ಮುಲ್ತಾನಿ ಮಿಟ್ಟಿ, ಬಾದಮಿ ಮತ್ತು
ಶೆಲ್ ಪೌಡರ್ ಈ ಸೋಪ್‌ನಲ್ಲಿದೆ. ಅಲ್ಲದೆ ಗ್ಲಿಸರಿನ್, ನೊರೆಕಾಯಿ,
ಕರ್ಪೂರವನ್ನು ಸೇರಿಸಲಾಗಿದೆ. ಇದು ನೆರಿಗೆಯನ್ನು ಕಪ್ಪು ಕಲೆಗಳನ್ನು
ವರ್ತುಗಳನ್ನು ನಿವಾರಿಸುತ್ತದೆ ಮತ್ತು ಮುಖದಿಂದ ಮೊಡವೆಗಳನ್ನು
ಹೋಗಲಾಡಿಸುತ್ತದೆ.

ವಿಪ್ರೊ ಸಂತೂರ್

ಸಂತೂರ್ ಸೋಪ್ ವಿಪ್ರೊ ಪ್ರಾಡಕ್ಟ್ ಆಗಿದ್ದು ಇದು ಹಳೆಯ ಸೋಪ್
ಎಂದೇ ದೇಶದಲ್ಲಿ ಖ್ಯಾತಿವೆತ್ತಿದೆ. ಇದರಲ್ಲಿ ಶ್ರೀಗಂಧ ಮತ್ತು ಅರಶಿನ
ಇದ್ದು ಮಹಿಳೆಯರಿಗೆ ಹೇಳಿ ಮಾಡಿಸಿರುವ ಸೋಪ್ ಆಗಿದೆ.

ನಿವಿಯಾ ಕ್ರೀಮ್ ಸಾಫ್ಟ್ ಸೋಪ್
ನಿವಿಯಾ ಉತ್ತಮ ಗುಣಮಟ್ಟದ ಪ್ರಾಡಕ್ಟ್‌ಗಳಿಗಾಗಿ
ಹೆಸರುವಾಸಿಯಾಗಿದೆ. ನಿವಿಯಾ ಕ್ರೀಮ್ ಸೋಪ್ ಹಾಲಿನ ರಚನೆಯನ್ನು
ಹೊಂದಿದ್ದು ತಾಜಾ ಸುವಾಸನೆಯನ್ನು ಒಳಗೊಂಡಿದೆ. ಇದರಲ್ಲಿರುವ
ಬಾದಾಮಿ ಎಣ್ಣೆ ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು
ತ್ವಚೆಗೆ ಮಾಯಿಶ್ಚರೈಸಿಂಗ್ ಅನುಭೂತಿಯನ್ನು ಒದಗಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ