ಪಿತ್ತ, ಕಫ ಮುಂತಾದ ಸಮಸ್ಯೆಗಳಿಗೆ ತ್ರಿಫಲ ಚೂರ್ಣ ರಾಮಬಾಣ..!

  • by

ತ್ರಿಫಲ ಚೂರ್ಣವನ್ನು  ಅಳಲೆ ಕಾಯಿ ಜತೆಗೆ ತಾರೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಬಳಸಿ ಮಾಡುವ ಔಷಧೀಯ ಪುಡಿ. ಬೆಟ್ಟದ ನೆಲ್ಲಿಕಾಯಿ, ಕರಕ ಕಾಯಿ ಮತ್ತು ತಾರೇಕಾಯಿ ಅಥವಾ ತಂದ್ರಿ ಕಾಯಿ ಎಂಬ ಮೂರು ವಸ್ತುಗಳಿಂದ ಇದನ್ನು ತಯಾರಿಸಲಾಗುತ್ತದೆ. 

ಕಾಯಿಗಳ ವಿಶೇಷತೆಯೇನು?

ಬೆಟ್ಟದ ನೆಲ್ಲಿಕಾಯಿ ಗ್ಲೂಕೇಸ್ , ವಿಟಮಿನ್ ಮತ್ತು ಪ್ರೋಟೀನ್ ಅಂಶಗಳು ಯಥೇಚ್ಛವಾಗಿರುತ್ತವೆ. ಬೆಟ್ಟದ ನೆಲ್ಲಿಕಾಯಿ ಪಿತ್ತ ದೋಷವನ್ನು ಸರಿಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೇ ರಕ್ತ ಸಂಚಾರವನ್ನು ಸರಾಗಗೊಳಿಸುತ್ತದೆ. ಅಂತೆಯೇ ಜ್ವರವನ್ನು ಕಡಿಮೆ ಮಾಡುತ್ತದೆ. 

ಕರಕ ಕಾಯಿ ಮುಖ್ಯವಾದ ಫಲ. ಇದರಲ್ಲಿ ಟೆರ್ಪೆನ್ಸ್ , ಪಾಲಿ ಫಿನಾಲ್ಸ್ ಹಾಗೂ ಆಂಥೋಸಯಾನಿನ್ ಮತ್ತು ಫ್ರೋವೊನೈಡ್ ಗಳಂತಹ ಫೈಟೊಕೆಮಿಕಲ್ ಗಳಿವೆ. ಇದು ಭೇದಿಯನ್ನು ತಡೆಗಟ್ಟುತ್ತದೆ. ಎದೆಯ ಉರಿಯನ್ನು ನಿವಾರಿಸುತ್ತದೆ. ನಾಡಿಗೆ ಸಂಬಂಧಿತ ತೊಂದರೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ತಾರೇಕಾಯಿ ಘಾಟು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಅಲರ್ಜಿಯಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಕರುಳಿನಲ್ಲಿರುವಂತಹ ಕಲ್ಮಶವನ್ನು ನಾಶ ಮಾಡುತ್ತದೆ. ಗಂಟಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕಫ ಕಡಿಮೆ ಮಾಡುವುದಲ್ಲದೇ, ಉಬ್ಬಸವನ್ನು ಕಡಿಮೆ ಮಾಡುತ್ತದೆ. 

ತ್ರಿಫಲ ಚೂರ್ಣ ತಯಾರಿಸುವುದು ಹೇಗೆ..? 

3 ಬೆಟ್ಟದ ನೆಲ್ಲಿಕಾಯಿ, 2 ತಾರೆಕಾಯಿ ಮತ್ತು 1 ಕರಕಕಾಯಿಯನ್ನು ಚೆನ್ನಾಗಿ ಒಣಗಿಸಿ ನಂತರ, ಬೀಜಗಳನ್ನು ಹೊರತೆಗೆದು ಮೇಲಿನ ಭಾಗವನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ತ್ರಿಫಲ ಚೂರ್ಣ ಎನ್ನುತ್ತಾರೆ. 

ಪ್ರಯೋಜನಗಳೇನು..?

ನಿಯಮಿತವಾಗಿ ತ್ರಿಫಲಾ ಚೂರ್ಣವನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ 100ಕ್ಕೂ ಅಧಿಕ ಕಾಯಿಲೆಗಳನ್ನು ನಿವಾರಿಬಹುದು… ಇದನ್ನು ಪ್ರತಿ ದಿನ 1ರಿಂದ 5 ಗ್ರಾಂ ತ್ರಿಫಲಾ ಚೂರ್ಣವನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬಹುದು. ರಾತ್ರಿ ಹೊತ್ತು ಹಾಲು ಅಥವಾ ಜೇನುತುಪ್ಪ ಜೆತೆ ಇದನ್ನು ತೆಗೆದುಕೊಳ್ಳಬಹುದು.

ಅಜೀರ್ಣ ಅಥವಾ ಭೇದಿಯ ಸಂದರ್ಭದಲ್ಲಿ 2 ಚಮಚ ನೀರಿನ  ಜತೆ 1 ಚಮಚ ಚೂರ್ಣವನ್ನು ಚೆನ್ನಾಗಿ ಕುದಿಸಿ ಶೋಧಿಸಿ, ಅದಕ್ಕೆಸ್ವಲ್ಪ ನೀರು ಬೆರೆಸಿ ಕುಡಿಯಬೇಕು. ಮಲಬದ್ಧತೆ ಸಮಸ್ಯೆ ಇರುವವರು 5 ಗ್ರಾಂ ತ್ರಿಫಲ ಚೂರ್ಣವನ್ನು

ಜೇನು ತುಪ್ಪದಲ್ಲಿ ಉಂಡೆಯ ರೀತಿ ಮಾಡಿ, ಅರ್ಧ ಲೋಟ ಹಾಲಿನ ಜೆತೆಗೆ ಸೇವಿಸಿ. ಕೂದಲು ಉದರುವಿಕೆ ನಿಯಂತ್ರಣತ್ರಿಫಲ ಚೂರ್ಣವನ್ನು 2 ಚಮಚ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಶೋಧಿಸಿ ತಲೆಗೆ ಹಚ್ಚಿಕೊಂಡರೆ ಕೂದಲು ಚೆನ್ನಾಗಿ ಬೆಳೆಯುತ್ತದೆ. ಚರ್ಮದ ಸಮಸ್ಯೆ , ಮುಟ್ಟಿನ ಸಮಸ್ಯೆ ಮತ್ತುತೂಕ ನಿಯಂತ್ರಣಕ್ಕೂ ತ್ರಿಫಲ ಚೂರ್ಣ ರಾಮಬಾಣವಾಗಿದೆ. ತ್ರಿಫಲ ಚೂರ್ಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಜ್ವರದ ವಿರುದ್ಧ ಹೋರಾಡಲು ನೆರವಾಗುತ್ತದೆ. ರಕ್ತಶುದ್ಧಿ ಮಾಡಲು ಇದು ಸಹಾಯಕಾರಿಯಾಗುತ್ತದೆ. ರಕ್ತ ಸಂಚಾರವನ್ನು  ಇದು ಅಧಿಕಗೊಳಿಸುತ್ತದೆ. ಶ್ವಾಸಕೋಶ,ಮತ್ತು ಯಕೃತ ಶುದ್ಧ ಮಾಡಲು ಸಹಾಯ ಮಾಡುತ್ತದೆ. ಶ್ವಾಸಕೋಶ ಹಾಗೂ ಯಕೃತ ಸಂಬಂಧಿಸಿದ 

ಕಾಯಿಲೆ ಗಳನ್ನು ದೂರ ಮಾಡುತ್ತದೆ.  ಇಲ್ಲದೇ ನೈಸರ್ಗಿಕವಾಗಿ ವಿರೇಚಕವಾಗಿಯೂ ಈ ತ್ರಿಫಲ ಚೂರ್ಣ ಕೆಲಸ ಮಾಡಲಿದೆ. ಕ್ಯಾನ್ಸರ್ ಕಾಯಿಲೆ ದೂರವಿರಲು ನೆರವಾಗುತ್ತದೆ.  ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯಕಾರಿಯಾಗಿದೆ. ದೇಹದಲ್ಲಿ ಕೊಬ್ಬಿನ  ಅನಾವಶ್ಯಕ ಶೇಖರಣೆಯನ್ನು ಇದು ತಡೆಗಟ್ಟುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ