ಕಷ್ಟದ ಸಮಯದಲ್ಲಿ ಹಣ ಉಳಿಸಲು 5 ಮಾರ್ಗಗಳು..! ( 5 ways to save money during difficult times )

  • by

ಇಂದಿನ ದಿನಗಳಲ್ಲಿ ವಿದ್ಯುತ್, ಆಹಾರ, ಇಂಧನ ಹೀಗೆ ಮೂಲಭೂತ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದೆ. ಇದ್ರಿಂದ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಎಷ್ಟೋ ಸಲ ಹಣ ಉಳಿತಾಯ ಮಾಡಬೇಕೆಂದರೂ ಸಾಧ್ಯವಾಗುವುದಿಲ್ಲ. ಕಷ್ಟದ ಸಮಯದಲ್ಲಿ ಹಣವನ್ನು ಹೇಗೆ ಉಪಯೋಗಿಸಬೇಕು. ಯಾವ ರೀತಿ ಸೇವಿಂಗ್ ಮಾಡಬೇಕು ಎಂದು ಇವತ್ತಿನ ಲೇಖನದಲ್ಲಿ ತಿಳಿಸಲಾಗಿದೆ. ನೀವು ಹೆಚ್ಚು ಗಳಿಸಿದಾಗಲೆಲ್ಲಾ ಖರ್ಚಿಗಾಗಿ ನಿರ್ದಿಷ್ಟ ಮೊತ್ತವನ್ನು ನಿಗದಿಮಾಡಬೇಕು. ಹಣವನ್ನು ವ್ಯರ್ಥ ಮಾಡುವುದು, ಅನಾವಶ್ಯಕ ಶಾಂಪಿಗ್ ಗೆ ಖರ್ಚು ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಸ್ಥಿರ ಆದಾಯವನ್ನು ಹೊಂದಿರುವವರಿಗೆ ಮಾತ್ರ ಹಣ ಉಳಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.


 ways to save money, during difficult times, ಹಣ ಉಳಿತಾಯ , ಮಾರ್ಗಗಳು, ಟಿಪ್ಸ್

ಲಂಚ್ ಬಾಕ್ಸ್ ಕೇವಲ ಶಾಲಾ ಮಕ್ಕಳಿಗೆ ಮಾತ್ರವಲ್ಲ

ಅನಾರೋಗ್ಯ ಉಂಟು ಮಾಡುವ ಆಹಾರಗಳಿಂದ ಸಾಕಷ್ಟು ದೂರವಿರಬೇಕಾಗುತ್ತದೆ. ಆಫೀಸ್ ಹೋಗುವವರು ಹೆಚ್ಚಾಗಿ ಹೊರಗಡೆ ಊಟ ಮಾಡುತ್ತಾರೆ. ಜಂಕ್ ಫುಡ್ ನಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ನಿಮ್ಮ ಹಣವನ್ನು ಉಳಿಸಲು ಅತ್ಯುತ್ತಮ ಮಾರ್ಗವೆಂದರೆ ಲಂಚ್ ಬಾಕ್ಸ್ ತೆಗೆದುಕೊಂಡು ಹೋಗುವುದು. ಇದ್ರಿಂದ ಅನಗತ್ಯ ವೆಚ್ಚವನ್ನು ನಿಯಂತ್ರಿಸಬಹುದಾಗಿದೆ. ಕೆಲಸದ ಅವಧಿಯಲ್ಲಿ ಊಟಕ್ಕಾಗಿ ಎಷ್ಟು ವ್ಯಯ ಮಾಡುತ್ತೇವೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಸ್ಟಾರ್ಟ್ ಶಾಂಪಿಂಗ್ ನಿಮ್ಮದಾಗಿರಲಿ..!

ಸಾಧ್ಯವಾದರೆ ಸ್ಮಾರ್ಟ್ ಶಾಂಪಿಂಗ್ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಗ್ಗವಾಗಿರುವ ವಸ್ತುಗಳ ಬದಲೂ ಕಡಿಮೆ ಬೆಲೆಯಲ್ಲಿ ಸೀಗುವ ಉತ್ತಮ ಗುಣಮಟ್ಟದ ವಸ್ತುಗಳನ್ನು, ದಿನಸಿ ತರಕಾರಿಗಳನ್ನು, ಕಡಿಮೆ ಬಜೆಟ್ ನಲ್ಲೇ ಖರೀದಿ ಮಾಡಬಹುದು. ಕಷ್ಟದ ಸಮಯದಲ್ಲಿ ಹಿಂದೆ ಮುಂದೆ ಯೋಚಿಸದೇ, ಬೆಲೆ ಹೆಚ್ಚಾಗಿರುವ ಅಗತ್ಯ ವಸ್ತುಗಳನ್ನು ಖರೀದಿಸಬೇಡಿ. ಅಗ್ಗವಾಗಿರುವ ವಸ್ತುಗಳನ್ನು ಕೊಳ್ಳುವುದರಿಂದಲೂ ಹಣ ಉಳಿತಾಯ ಮಾಡುವ ಉತ್ತಮ ಮಾರ್ಗವಾಗಿದೆ.


 ways to save money, during difficult times, ಹಣ ಉಳಿತಾಯ , ಮಾರ್ಗಗಳು, ಟಿಪ್ಸ್

ನಿಮ್ಮ ಬಜೆಟ್ ಮೇಲೆ ನಿಗಾ ಇರಿಸಿ

ನಿಮ್ಮ ಬಜೆಟ್ ಅನ್ನು ನೀವು ಈಗ ಗಮನಿಸದಿದ್ದರೆ, ಮುಂದೆ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲಮೊಮ್ಮೆ ಖರ್ಚುಗಳು ಹೆಚ್ಚಾಗುತ್ತಾ ಹೋಗುತ್ತವೆ. ಅವುಗಳ ನೀವು ನಿಗಾ ಇಡಬೇಕು. ಇಲ್ಲದಿದ್ದರೆ ನಂತರ ಸಮಯದಲ್ಲಿ ಅವುಗಳ ಖರ್ಚು ವೆಚ್ಚದ ಮೇಲೆ ನೆನಪಿಟ್ಟುಕೊಳ್ಳುವುದು ಮುಖ್ಯ. ಹಣ ಖರ್ಚು ಮಾಡಿರುವ ಬಗ್ಗೆ ಬರೆದು ಇಟ್ಟುಕೊಳ್ಳಬಹುದು. ಇದು ಉತ್ತಮ ಹಣಕಾಸು ಯೋಜನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ಖರ್ಚು ಹಾಗೂ ಉಳಿತಾಯಕ್ಕಾಗಿ ನಿಮ್ಮಲ್ಲಿರುವ ಹಣವನ್ನು ನೀವು ಹೇಗೆ ವಿಂಗಡಿಸಬಹುದು ಎಂಬುದರ ಬಗ್ಗೆ ಸಹಾಯ ಮಾಡುತ್ತದೆ.

ಅನಾವಶ್ಯಕವಾಗಿ ಯಾವುದೇ ವಸ್ತು ಖರೀದಿ ಮಾಡಬೇಡಿ..!

ನಿಮ್ಮ ಬಾಲ್ಯವನ್ನು ನೀವು ಒಮ್ಮೆ ನೆನಪಿಸಿಕೊಳ್ಳಿ. ನೀವು ಚಿಕ್ಕವರಾಗಿದ್ದಾಗ ಚಾಕಲೇಟ್ ಹಾಗೂ ಆಟಿಕೆ ಸಾಮಾನು ಕೊಳ್ಳಲು ಹಠ ಮಾಡುತ್ತಿದ್ದೀರಿ. ಆಗ ನಿಮ್ಮ ಪೋಷಕರು ಚಾಕಲೇಟ್ ಗಾಗಿ 1 ರೂ. ಕೊಡುವುದಕ್ಕೂ ಯೋಚನೆ ಮಾಡುತ್ತಿದ್ದರು. ಅವರು ಏಕೆ ಮಾಡುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ.. ಆ ಸಮಯದಲ್ಲಿ ಚಿಕ್ಕವರಿದ್ದಾಗ ಇದನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿತ್ತು. ಹಾಗಾಗಿ ಆವೇಶಕ್ಕೆ ಒಳಗಾಗಿ, ಉತ್ಸಾಹದಿಂದ ಶಾಪಿಂಗ್ ಮಾಡಬೇಡಿ. ಅನಾವಶ್ಯಕ ವಸ್ತುಗಳನ್ನು ಖರೀದಿ ಮಾಡುವುದನ್ನು ಅವೈಡ್ ಮಾಡಿ. ನಿಮಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿ ಮಾಡಲು ಮುಂದಾಗಿ. ಕೆಲಮೊಂದು ಸಂದರ್ಭದಲ್ಲಿ ಈ ಅಭ್ಯಾಸ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.


 ways to save money, during difficult times, ಹಣ ಉಳಿತಾಯ , ಮಾರ್ಗಗಳು, ಟಿಪ್ಸ್

ಸಾಧ್ಯವಾದಷ್ಟು ಹಣ ಉಳಿಸಲು ಪ್ರಯತ್ನಿಸಿ

ನಿಮ್ಮ ಸಾಧ್ಯವಾದಷ್ಟು ಹಣ ಉಳಿಸುವ ಬಗ್ಗೆ ಪ್ಲ್ಯಾನ್ ಮಾಡಬೇಕಾಗುತ್ತದೆ. ಆರಾಮದಾಯಕ ನಿವತ್ತಿ ಜೀವನ ನಡೆಸಲು ದೊಡ್ಡ ಮೊತ್ತದ ಹಣದ ಅಗತ್ಯವಿರುತ್ತದೆ. ಈ ಉಳಿತಾಯ ಬಹಳ ಮುಖ್ಯ, ಹಾಗಾಗಿ ಅದನ್ನು ಆದಷ್ಟು ಬೇಗ ಪ್ರಾರಂಭಿಸಬೇಕು. ನಿಮ್ಮ ಗಳಿಕೆಯನ್ನು ಮತ್ತಷ್ಟು ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಇದು ನೆರವಿಗೆ ಬರುತ್ತದೆ ಎಂದು ಹೇಳಬಹುದು.

ದೀರ್ಘಕಾಲದವರೆಗೆ ಹೂಡಿಕೆ ಮಾಡಿ..!

ಖರ್ಚು ಮಾಡಿದ ನಂತರ ಉಳಿದ ಹಣವನ್ನು ದೀರ್ಘಾವಧಿಯ ಹೂಡಿಕೆಯ ಆಯ್ಕೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಮನೆ ಖರೀದಿಸುವುದು, ನಿವೃತ್ತಿಗಾಗಿ ಹಣವನ್ನು ಉಳಿಸುವುದು ಮುಂತಾದ ಜೀವನದ ಗುರಿಗಳನ್ನು ಪೂರೈಸಲು ಸಹಾಯವಾಗುತ್ತದೆ.
ಹಣಕಾಸಿನ ಸುರಕ್ಷತೆಯೂ ನಿಮ್ಮ ಮೇಲೆ ಮಾತ್ರ ಅವಲಂಬಿತವಾಗಿದೆ. ಬೇರೆಯವರ ಮೇಲೆ ಅಲ್ಲ. ಆದ್ದರಿಂದ ನಿಮ್ಮ ಆರ್ಥಿಕ ಭವಿಷ್ಯವನ್ನು ನಿಮ್ಮ ಕೈಯಲ್ಲೇ ತೆಗೆದುಕೊಳ್ಳಿ. ನಿಮ್ಮ ಹಣಕಾಸಿನ ಭದ್ರತೆಯನ್ನು ಬೇರೆಯವರ ಕೈಯಲ್ಲಿ ನೀಡಬೇಡಿ.

ದಿನಸಿ ಅಂಗಡಿ ಬಜೆಟ್ ಬಗ್ಗೆ ಗಮನವಿರಲಿ

ನಿಮ್ಮ ಬಜೆಟ್ ಅನ್ನು ಪ್ಲ್ಯಾನ್ ಮಾಡಿದ್ದರೆ, ಅಗತ್ಯ ವಸ್ತುಗಳನ್ನು ಕೊಳ್ಳಲು ಕಿರಾಣಿ ಅಂಗಡಿಗೆ ಹೋಗುವ ಮುನ್ನ ಅಗತ್ಯ ವಸ್ತುಗಳ ಬಗ್ಗೆ ಖರೀದಿ ಮಾಡಿ. ಪಟ್ಟಿಯನ್ನು ತಯಾರಿಸುವಾಗ ಯಾವ ವಸ್ತುಗಳು ಬೇಕು ಎಂಬುದರ ಬಗ್ಗೆ ನೆನಪಿನಲ್ಲಿಡಿ. ನಿಮ್ಮ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವುದನ್ನು ತಪ್ಪಿಸಿದರೆ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಕ್ರೆಡಿಟ್ ಕಾರ್ಡ ಬಳಕೆಯನ್ನು ತಪ್ಪಿಸಿ..!

ಪ್ರತಿಯೊಬ್ಬರು ನೀಡುವ ಸಾಮಾನ್ಯ ಸಲಹೆ ಎಂದರೆ ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡುವುದು. ಹಾಗೇ ಮಾಡಲು ನಿಮಗೆ ಕಷ್ಟವಾಗಿದ್ದರೆ, ಕಡಿಮೆ ಮಿತಿಯೊಂದಿಗೆ ಕ್ರೆಡಿಟ್ ಕಾರ್ಡ್ ಬಳಸಿ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದನ್ನು ತಪ್ಪಿಸುವ ಪ್ರಮುಖ ಉದ್ದೇಶವೆಂದರೆ ಅನಗತ್ಯ ವಸ್ತುಗಳ ಖರೀದಿಯನ್ನು ತಪ್ಪಿಸುವುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ