ಶ್ವಾಸಕೋಶದ ಆರೋಗ್ಯಕ್ಕೆ ಟಿಪ್ಸ್..!

  • by
happinessಶ್ವಾಸಕೋಶ ನಮ್ಮ ಶರೀರದ ಬಹುಮುಖ್ಯ ಅಂಗಗಳಲ್ಲಿ ಒಂದು. ನಾವು ಉಸಿರಾಡಬೇಕಾದರೆ ಅದಕ್ಕೆ ಶ್ವಾಸಕೋಶದ ಆರೋಗ್ಯ ಮುಖ್ಯವಾಗುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೇ, ಕೊರೊನಾ ವೈರಸ್ ಸೋಂಕಿನ ಸಾಮಾನ್ಯ ಲಕ್ಷಣ ಜ್ವರ ಎಂದು ಹೇಳಬಹುದು. ಈ ಲಕ್ಷಣ ತೀವ್ರವಾದರೆ, ಕೊರೊನಾವೈರಸ್ ನಿಮ್ಮ ಶ್ವಾಸಕೋಶದ ಮೇಲೆ ಅಟ್ಯಾಕ್ ಮಾಡಬಹುದು. ಇದು ವ್ಯಕ್ತಿಯ ಶ್ವಾಸಕೋಶವನ್ನು ಗುರಿಯಾಗಿಸುತ್ತದೆ. ಇದ್ರಿಂದ ಲೋಳೆ ದಪ್ಪವಾಗುವುದು, ಉಸಿರಾಡಲು ಕಷ್ಟವಾಗಬಹದು.

Ways to Keep, Lungs Healthy, ಶ್ವಾಸಕೋಶ ಆರೋಗ್ಯ, ಟಿಪ್ಸ್, ಮನೆಮದ್ದು

ಆರೋಗ್ಯಕರ ಶ್ವಾಸಕೋಶಗಳು ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಯ ರಕ್ಷಣಾ ಕಾರ್ಯದಂತೆ ಕಾರ್ಯ ನಿರ್ವಹಿಸುತ್ತವೆ. ಮಾರಣಾಂತಿಕ ವೈರಸ್ ನಿಂದ ರಕ್ಷಿಸಿಕೊಳ್ಳಲು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕಾಗುತ್ತದೆ.

ಹೋಲಿಸ್ಟಿಕ್ ಲೈಫ್ ಸ್ಟೈಲ್ ಕೋಚ್ ಲ್ಯೂಕ್ ಕೌಟಿನ್ಹೋ ಅವರ ಇತ್ತೀಚಿನ ವೀಡಿಯೋಗಳಲ್ಲಿ, ಲ್ಯೂಕ್ ಕೌಟಿನ್ಹೋ ಅವರು ಶ್ವಾಸಕೋಶವನ್ನು ಹೇಗೆ ಆರೋಗ್ಯಕರವಾಗಿಡಬೇಕು. 5 ಸುಲಭ ಮಾರ್ಗಗಳು ಯಾವವು ಎಂಬ ಬಗ್ಗೆ ಮಾತನಾಡಿದ್ದಾರೆ.

ನಮ್ಮ ದೇಹಕ್ಕೆ ಲೋಳೆ ಏಕೆ ಅಗತ್ಯ.?

ನಮ್ಮ ದೇಹಕ್ಕೆ ಶ್ವಾಸಕೋಶದ ಲೋಳೆ ಅಗತ್ಯವಾದರೂ, ಹೆಚ್ಚು ಲೋಳೆ ಸಂಗ್ರಹವಾದರೆ ಹಾನಿ ತಪ್ಪಿದ್ದಲ್ಲ. ಲೋಳೆ ನಮ್ಮ ದೇಹದ ರಕ್ಷಣಾ ವಿಧಾನವಾಗಿ ಕಾರ್ಯ ನಿರ್ವಹಿಸುತ್ತದೆ. ನಾವು ಕೆಲವು ಬ್ಯಾಕ್ಟೇರಿಯಾ ಹಾಗೂ ವೈರಸ್ ಗಳ ಜತೆಗೆ ಉಸಿರಾಡಿದಾಗ, ಇವೆಲ್ಲ ಶ್ವಾಸಕೋಷದ ಲೋಳೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ನಂತರ ಸೀನು, ಕೆಮ್ಮು, ಅಥವಾ ಮೂಗು ಸೋರುವಿಕೆ ಮೂಲಕ ಹೊರಹಾಕಲ್ಪಡುತ್ತದೆ. ಹೀಗೆ ಶ್ವಾಸಕೋಶದಲ್ಲಿ ಹೆಚ್ಚು ಲೋಳೆ ಹೊಂದಿದಾಗ ಅನೇಕ ಸಮಸ್ಯೆಗಳು ಕಾಡಬಹುದು. ಅವುಗಳಲ್ಲಿ ಸಿಒಪಿಡಿ, ಅಸ್ತಮಾ, ಬ್ರಾಂಕೈಟಿಸ್ ಇರುವವರು ತಮ್ಮ ಶ್ವಾಸಕೋಷದಲ್ಲಿ ಹೆಚ್ಚು ಲೋಳೆ ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ.

Ways to Keep, Lungs Healthy, ಶ್ವಾಸಕೋಶ ಆರೋಗ್ಯ, ಟಿಪ್ಸ್, ಮನೆಮದ್ದು

ನಮ್ಮ ದೇಹ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು, ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಪರಿಹಾರಗಳೇನು. ಏನು ಮಾಡಬೇಕು ಎಂಬ ಬಗ್ಗೆ ತಿಳಿಯೋಣ.

  1. ಮೆಂತ್ಯ ಬೀಜಗಳು.

ಒಂದು ಟೇಬಲ್ ಸ್ಪೂನ್ ಮೆಂತ್ಯಾ ಬೀಜಗಳನ್ನು ತೆಗೆದುಕೊಂಡು ಇದನ್ನು 4, 5 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ನಂತರ ಕುಡಿಯಿರಿ. ದಿನಕ್ಕೆ ನೀವು 1 ಅಥವಾ 2 ಕಪ್ ಸೇವಿಸಬಹುದು. ಇದ್ರಿಂದ ಲೋಳೆ ಒಡೆಯುತ್ತದೆ. ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಹೆಚ್ಚು ಲೋಳೆ ನಿಮ್ಮ ದೇಹದಲ್ಲಿ ಸೂಕ್ಷ್ಮಾಣುಜೀವಿ, ಬ್ಯಾಕ್ಟೇರಿಯಾ ಹಾಗೂ ರೋಗಕಾರಕಗಳಿಗೆ, ವೈರಲ್ ಗಳಿಗೆ ಸಂತಾನೋತ್ಪತ್ತಿಯ ಮೂಲವೆಂದೇ ಹೇಳಬಹುದು. ಆದ್ದರಿಂದ ನಿಮ್ಮ ಶ್ವಾಸಕೋಶ ಆರೋಗ್ಯಕರವಾಗಿರಬೇಕಾದರೆ ಲೋಳೆಯು ಬೇಗ ಒಡೆಯುವುದು ಉತ್ತಮ ಮಾರ್ಗವಾಗಿದೆ.

2 ಪ್ರಾಣಾಯಾಮ ಮತ್ತು ವ್ಯಾಯಾಮ

ಆಳವಾದ ಉಸಿರಾಟವು ಲೋಳೆ ಒಡೆಯಲು ಹಾಗೂ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಶ್ವಾಸಕೋಶದ ಆರೋಗ್ಯಕ್ಕೆ ಪ್ರಾಣಾಯಾಮ ಹಾಗೂ ವ್ಯಾಯಾಮ ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವುದರಿಂದ ಆಳವಾಗಿ ಉಸಿರಾಡಲು ಸಾಧ್ಯವಾಗುವುದಲ್ಲದೇ, ಲೋಳೆ ಒಡೆಯಲು ಸಾಧ್ಯವಾಗುತ್ತದೆ.

Ways to Keep, Lungs Healthy, ಶ್ವಾಸಕೋಶ ಆರೋಗ್ಯ, ಟಿಪ್ಸ್, ಮನೆಮದ್ದು
  1. ಉಪ್ಪು ನೀರಿನ ಗಾರ್ಗ್

ಶ್ವಾಸಕೋಶದ ಆರೋಗ್ಯ ಕಾಪಾಡಲು ಉಪ್ಪು ನೀರಿನ ಗಾರ್ಗ್ ನೆರವಾಗಬಲ್ಲದ್ದು. ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುದಿಸಿ. ನಂತರ ಆ ನೀರನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಉಪ್ಪು ನೀರಿನಿಂದ ಗಾರ್ಗ್ ಮಾಡಿ. ಇದು ಸುಲಭ ಪರಿಹಾರವಾಗಿದ್ದು, ಲೋಳೆ ಒಡೆಯಲು ಸಹಾಯ ಮಾಡುತ್ತದೆ.

  1. ಹಬೆ (ಸ್ಟೀಮ್ )

ಮನೆಯಲ್ಲಿ ನೀವು ಸ್ಟೀಮರ್ ಹೊಂದಿದದ್ರೆ. ಅದನ್ನು ತೆಗೆದುಕೊಂಡು. ದೊಡ್ಡ ಬಟ್ಟಲಿನಲ್ಲಿ ನೀರನ್ನು ಕುದಿಸಿ, ಆಗ ನಿಮ್ಮ ತಲೆಯನ್ನು ಟವೆಲ್ ನಿಂದ ಮುಚ್ಚಿ ಅದರಿಂದ ಹಬೆ ತೆಗೆದುಕೊಳ್ಳಬಹುದು. ನೀರಿನಿಂದ ಬರುವ ಬಿಸಿ ಹಬೆ ಶ್ವಾಸಕೋಶದ ಹೆಚ್ಚುವರಿ ಲೋಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿರಿಸುವಲ್ಲಿ ನೆರವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ