ವಾಕಿಂಗ್ ಮಾಡಿದಾಗ ತೂಕ ನಷ್ಟವಾಗುತ್ತಾ?

  • by

ತೂಕ ನಷ್ಟ ಮಾಡಿಕೊಳ್ಳುವುದು ಎಂದರೆ ಇವತ್ತಿನ ದಿನಗಳಲ್ಲಿ ಸವಾಲಿನ ಸಂಗತಿ… ತೂಕ ನಷ್ಟಕ್ಕೆ ಹಲವರು ಜೀಮ್ , ವರ್ಕೌಟ, ಈಜು, ವ್ಯಾಯಾಮ, ಸೈಕ್ಲಿಂಗ್ ಮತ್ತು ಇತರ ಸಕ್ರೀಯ ಚಟುವಟಿಗೆಗಳಲ್ಲಿ ಪಾಲ್ಗೊಳ್ಳುತ್ತಾರೆ.  ವ್ಯಾಯಾಮ ದೇಹಕ್ಕೆ ಹಾಗೂ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ.  ಆದ್ರೆ ತೂಕ ನಷ್ಟಕ್ಕೆ ನಿಜಕ್ಕೂ ವಾಂಕಿಂಗ್ ಸಹಕಾರಿಯಾಗುತ್ತಾ.. ? ಇಲ್ಲಿದೆ ಡಿಟೇಲ್ಸ್  

Walking benefits, weight loss, ವಾಕಿಂಗ್ , ತೂಕ ನಷ್ಟ

ವಾಂಕಿಂಗ್ ಪ್ರಯೋಜನಗಳು

ತೂಕ ಇಳಿಸಿಕೊಳ್ಳುವವರಿಗೆ ವಾಕಿಂಗ್ ಉತ್ತಮ ವ್ಯಾಯಾಮ ಎಂದು ಹೇಳಬಹುದು. 

ವಾಕಿಂಗ್ ಎನ್ನವುದು ಒಬ್ಬ ವ್ಯಕ್ತಿಗೆ ಹೆಚ್ಚು ನೈಸರ್ಗಿಕ ರೀತಿಯ ಚಲನೆಯನ್ನು ಹೊಂದಿದೆ. ತೂಕ ಇಳಿಸಿಕೊಳ್ಳುವವರಿಗೆ ವಾಕಿಂಗ್ ಉತ್ತಮ ಎಂದು ಹೇಳಲಾಗುತ್ತದೆ. ೮ ವಾರಗಳ ನಂತರ ಅವರ ತೂಕವನ್ನು ಪರಿಶೀಲಿಸಲಾಯಿತು. ಆಗ ವಾಕಿಂಗ್ ನಲ್ಲಿ ಭಾಗವಹಿಸಿದ ಶೇ ೫೦ ಕ್ಕಿಂತ ಹೆಚ್ಚು ಜನರು ಸರಾಸರಿ ೫ ಪೌಂಡಗಳನ್ನು ಕಳೆದುಕೊಂಡಿರುತ್ತಾರೆ.. 

ವಾಕಿಂಗ್ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದೋತ್ತಡ, ಎನರ್ಜಿ ಹೆಚ್ಚಿಸುತ್ತದೆ. ವಾಕಿಂಗ್ ರಕ್ತದೋತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.ರಕ್ತದೋತ್ತಡ ಮಟ್ಟ ನಿಯಂತ್ರಣಕ್ಕೆ ಬರಬೇಕೆಂದರೆ ಪ್ರತಿ ದಿನ ಕನಿಷ್ಠ ೬೦ ನಿಮಿಷಗಳ ಕಾಲ ನಡೆಯಬೇಕು.

ವಾಕಿಂಗ್ ಮಾಡುವುದರಿಂದ ಬುದ್ಧಿ ಶಕ್ತಿ ಹೆಚ್ಚಳ ವಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ, ಅಪಧಮನಿಗಳನ್ನು ಮುಚ್ಚುವ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಇದರಿಂದ ಪಾರ್ಶ್ವವಾಯು ಅಪಾಯವನ್ನು ತಪ್ಪಿಸಬಹುದು. 

ವಾಕಿಂಗ್ ವೇಗ ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ನಿಧಾನ ಅಥವಾ ಮಧ್ಯಮ ವೇಗದಲ್ಲಿ ನಡೆಯಲು ಪ್ರಾರಂಭಿಸಿ.  1 ವಾರ ಅಥವಾ 2 ನಂತರ ವೇಗವಾಗಿ ನಡೆಯಿರಿ.

ಒಂದು ವಾರ ಅಥವಾ ಎರಡು ದಿನಗಳ ನಂತರ ನೀವು ಹಾಯಾಗಿರುತ್ತೀರಿ ಎಂದು ವೇಗವಾಗಿ ಅಥವಾ ಚುರುಕಾಗಿ ನಡೆಯಿರಿ. ನೀವು ದಿನಕ್ಕೆ 20-30 ನಿಮಿಷಗಳೊಂದಿಗೆ ಪ್ರಾರಂಭಿಸಬಹುದು. ಇದನ್ನು ವಾರಕ್ಕೆ ಒಂದು ಗಂಟೆಗೆ ಹೆಚ್ಚಿಸಿ. ಮೇಲಿನ ಮಾದರಿಯನ್ನು ಅನುಸರಿಸುವ ಮೂಲಕ ನಿಮ್ಮ ದೇಹವು ವಾಕಿಂಗ್‌ಗೆ ಹೊಂದಿಕೊಳ್ಳುತ್ತದೆ.

ಜೀವನ ಶೈಲಿ ಸರಿಯಾಗಿದ್ದರೆ ಬರುವ ಕಾಯಿಲೆಗಳು ದೂರವಾಗಿರುತ್ತವೆ. ಪ್ರತಿ ದಿನ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.  ಇನ್ನು ವಾಕಿಂಗ್ ಮಾಡಿದರೆ ಸ್ನಾಯುಗಳು ಬಲಗೊಳ್ಳುತ್ತವೆ. ನಿಯಮತವಾಗಿ ನಡೆಯುವುದಿರಿಂದ  ಕಾಲು ಹಾಗೂ ಬೆನ್ನಿನ ಸ್ನಾಯುಗಳನ್ನು ಬಲಪಡಿಸಬಹುದು. 

ಜೀರ್ಣಕ್ರಿಯೆ ಸರಿಯಾಗದಿದ್ದರೆ, ಜಠಕ ಗರುಳಿನ ಅಸ್ವಸ್ಥತೆ , ಉಬ್ಬರ , ಮಲಬದ್ಧತೆ ಅತಿಯಾದ ಕರುಳಿನ ಸಮಸ್ಯೆಯನ್ನು ನಿವಾರಿಸುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಉತ್ತಮ ಆಹಾರ ಪದ್ಧತಿ, ನೀರನ್ನು ಹೆಚ್ಚಾಗಿ ಕುಡಿಯಬೇಕು. 

ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ. ಆರೋಗ್ಯ ತಜ್ಞರ ಪ್ರಕಾರ, ೭-೮ ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ನಿಮ್ಮ ಮುಂದಿನ ನಡಿಗೆಯನ್ನು ಸಕ್ರೀಯವಾಗಿ ಹಾಗೂ ಫ್ರೆಶ್ ಆಗಿ ಮಾಡಲು ಸಹಾಯವಾಗುತ್ತದೆ. ವಾಕಿಂಗ್ ಮಾಡುವುದರಿಂದ ಸ್ನಾಯುಗಳ ಶಕ್ತಿ ಬಲಗೊಳ್ಳುತ್ತದೆ. 

ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ವಾಕಿಂಗ್ , ಸ್ಥೂಲಕಾಯ ಮಹಿಳೆಯರು ವಾರಕ್ಕೆ ಮೂರು ಅಥವಾ ವಾರಕ್ಕೆ ಮೂರು ಬಾರಿ 50-70 ನಿಮಿಷಗಳ ಕಾಲ 12 ವಾರಗಳವರೆಗೆ ನಡೆದುಕೊಂಡು ಬಂದರೆ, ತಮ್ಮ ಸೊಂಟo ಬೊಜ್ಜನ್ನು 2.8 ಸೆ.ಮೀ ಮತ್ತು ದೇಹಹ ಕೊಬ್ಬಿನ ಶೇ, 1.5 ರಷ್ಟು ಕಡಿಮೆಗೊಳಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ