ವಿಟಮಿನ್ ಡಿ ಕೊರತೆಯಾದ್ರೆ ಡೇಂಜರ್.. ಮಧುಮೇಹ ಅಪಾಯ ಹೆಚ್ಚಾಗಬಹುದು..!

  • by


ಹೃದಯದ ಆರೋಗ್ಯವಾಗಿರಲು ದೇಹದಲ್ಲಿನ ವಿಟಮಿನ್ ಡಿ ಮುಖ್ಯವಾದದ್ದ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದ ಮೂಳೆಗಳು ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಟಮಿನ್ ಡಿ ಕೊರತೆ ಹೃದಯದ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಬಹುದು. ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಇನ್ಸುಲಿನ್ ಪರಿಣಾಮದಿಂದಾಗಿ ಹೃದಯ ವೈಫಲ್ಯ ಉಂಟಾಗಬಹುದು.


ಇನ್ಸುಲಿನ್ ಅತ್ಯಂತ ಉಪಯುಕ್ತ ಹಾರ್ಮೋನ್ ಆಗಿದ್ದು, ಅದು ರಕ್ತದಲ್ಲಿನ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ದೇಹದ ಅನೇಕ ಅಂಗಾಂಶಗಳಲ್ಲಿ ಸೆಲ್ಯುಲರ್ ಚಯಾಪಚಯ ಕ್ರಿಯೆ ಯನ್ನು ನಿಯಂತ್ರಿಸುವಲ್ಲಿ ಇನ್ಸುಲಿನ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ ಕೋಶಗಳಲ್ಲಿನ ಇನ್ಸುಲಿನ್ ಪ್ರತಿರೋಧದಿಂದಾಗಿ ಹೃದಯದಲ್ಲಿನ ಗ್ಲೂಕೋಸ್ ಮತ್ತು ಕೊಬ್ಬಿನಾಮ್ಲಗಳಂತಹ ಶಕ್ತಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.

ವಿಟಮಿನ್ ಡಿ ಕೊರತೆಯನ್ನು ಅಧ್ಯಯನ ನಡೆಸಲು ಸಂಶೋಧಕರು ಇಲಿಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಉದಾಹರಣೆಗೆ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಕ್ಯಾಲೋರಿ ಆಹಾರಗಳು ಹೃದಯಕ್ಕೆ ಹಾನಿ ಮಾಡುತ್ತವೆ. ಇಲಿಗಳನ್ನು ಮೂರು ಗುಂಪುಗಳಾಗಿ ಮಾಡಿ ಸಂಶೋಧನೆ ನಡೆಸಲಾಗಿದೆ. ಈ ವೇಳೆ ಕಂಡು ಬಂದ ಅಂಶವೆಂದರೆ ವಿಟಮಿನ್ ಡಿ ಕೊರತೆ ಇರುವ ಆಹಾರ ನೀಡಿದಾಗ, ಹೃದಯ ವೈಫಲ್ಯ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಹೆಚ್ಚಿನ ಕ್ಯಾಲೋರಿ ಆಹಾರದಂತಹ ಇತರ ಅಪಾಯಕಾರಿ ಅಂಶಗಳು ಒಂದೇ ಆಗಿರುತ್ತವೆ ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ. ವಿಟಮಿನ್ ಡಿ ಕೊರತೆಯ ಪರಿಣಾಮ ಹೃದಯದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ತಿಳಿದು ಬಂದಿದೆ.


ಫರಿದಾಬಾದ್ ನ ಇನ್ ಸ್ಟಿಟ್ಯೂಟ್ ಆಫ್ ಟ್ರಾನ್ಸ್ ಟಮೆಂಟಲ್ ಹೆಲ್ತ್ ಸೈನ್ಸ್ ಆಂಡ್ ಟೆಕ್ನಾಲಜಿ ಯ ಪ್ರಮುಖ ಸಂಶೋಧಕ ಡಾ. ಸಂಜಯ್ ಪ್ರಕಾರ, ವಿಟಮಿನ್ ಡಿ ಕೊರತೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವನ್ನು ಅನ್ವೇಷಿಸಿದ್ದೇವೆ. ಕಂಡು ಹಿಡಿಯಲು ಪ್ರಯತ್ನಿಸಿದ್ದೇವೆ. ವಿಟಮಿನ್ ಡಿ ಹೃದಯ ಸ್ನಾಯು ಅಂಗಾಂಶಗಳಿಗೆ ಸಂಬಂಧಿಸಿದ ಇನ್ಸುಲಿನ್ ಸೂಕ್ಷ್ಮತೆಯ ಮೇಲೆ ಪರಿಣಾಮ ಬೀರಬಹುದು. ಇನ್ಸುಲಿನ್ ಕೊರತೆಯು ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಕ್ರಮವನ್ನು ತಡೆಯುವುದಲ್ಲದೇ, ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ದೇಹದಲ್ಲಿ ವಿಟಿಮಿನ್ ಡಿ ಪೂರೈಕೆಯು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ವಿಟಮಿನ್ ಕೊರತೆಯಿಂದ ಈ ಕಾಯಿಲೆ ಬರುವ ಅಪಾಯ ಹೆಚ್ಚು…!


ಮಧುಮೇಹ ಅಪಾಯ

ಬೊಜ್ಜಿನ ಜತೆಗೆ ವಿಟಮಿನ್ ಡಿ ಕೊರತೆಯು ಮಧುಮೇಹಕ್ಕೆ ಕಾರಣವಾಗಬಹುದು. ಬೊಜ್ಜು ಮತ್ತು ವಿಟಮಿನ್ ಡಿ ಸಮಸ್ಯೆಗಳು ಒಟ್ಟಿಗೆ ಇದ್ದರೆ, ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಅಸಮತೋಲನಗೊಳಿಸುವ ಮಧುಮೇಹ ರೋಗ ಹೆಚ್ಚಾಗುವ ಸಾಧ್ಯತೆ ಹೆಚ್ಚು.

ಕೊಲೆಸ್ಟ್ರಾಲ್, ಉರಿಯೂತ ಸಮಸ್ಯೆ

ವಿಟಮಿನ್ ಡಿ ಕೊರತೆಯಿಂದಾಗಿ ದೇಹದ ಉರಿಯೂತಕ್ಕೆ ಕಾರಣವಾಗಬಹುದು. ದೇಹವು ಸೂರ್ಯನ ಬೆಳಕನ್ನು ಪಡೆಯದಿದ್ದಾಗ, ವಿಟಮಿನ್ ಡಿ ಯನ್ನು ರೂಪಿಸುವ ಅಂಶಗಳು ಕೊಲೆಸ್ಟ್ರಾಲ್ ಆಗಿ ಪರಿವರ್ತಿಸಲಾಗುತ್ತದೆ.

ಚರ್ಮದ ಬಣ್ಣ ಬದಲಾಗುವುದು

ವಿಟಮಿನ್ ಡಿ ಕೊರತೆಯಿಂದ ಚರ್ಮವು ಕಪ್ಪಗಾಗುವ ಸಾಧ್ಯತೆ ಹೆಚ್ಚು. ಅಲ್ಲದೇ, ವಿಟಮಿನ್ ಡಿ ಕೊರತೆಯಿಂದ ಆರೋಗ್ಯಕರ ದೇಹಕ್ಕೆ ಮಾತ್ರವಲ್ಲ, ನಿಮ್ಮ ಮೆದುಳಿನ ಮೇಲೂ ಪರಿಣಾಮ ಬೀರಬಹುದು. ಮೆದುಳಿನಲ್ಲಿರುವ ರಾಸಾಯನಿಕ ಸಿರೊಟೋನಿನ್ ಮತ್ತು ಡೋಪಮೈನ್ ತಯಾರಿಸುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಮೆದುಳಿಗೆ ವಿಟಮಿನ್ ಡಿ ಮಟ್ಟವು ದೇಹದಲ್ಲಿ ಉತ್ತಮವಾಗಿರಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ