ಎಲ್ಲರೂ ಬಿರಿಯಾನಿ ಪ್ರಿಯರೇ..! ಬಗೆ ಬಗೆ ಬಿರಿಯಾನಿ ಮಾಡಲು ಗೊತ್ತಾ?

 • by

ತರೇಹವಾರಿ ರುಚಿ ರುಚಿ ಬಿರಿಯಾನಿ
ಹೈದರಾಬಾದ್ ಬಿರಿಯಾನಿ, ಹೈದರಾಬಾದ್ ನಲ್ಲಿ ಮಾತ್ರವಲ್ಲ ಭಾರತದ ಎಲ್ಲಾ ಕಡೆ ಪ್ರಸಿದ್ಧಿಯನ್ನು
ಪಡೆದಿದೆ. ಹೈದರಾಬಾದಿ ಬಿರಿಯಾನಿ ಅಂದರೆ ಸಾಕು ಬಿರಿಯಾನಿ ಪ್ರಿಯರ ಬಾಯಲ್ಲಿ ನೀರು ಬರುವುದು
ಸಹಜ. ಈ ರುಚಿಕರವಾದ ಬಿರಿಯಾನಿ ಆಂಧ್ರ ಹೋಟೆಲ್ ಗಳಲ್ಲಿ ಸಿಗುತ್ತದೆ. ಈ ಬಿರಿಯಾನಿಯನ್ನು
ಆಂಧ್ರದವರಷ್ಟು ಟೇಸ್ಟ್ ಆಗಿ ನಮಗೆ ಮಾಡಲು ಬರುವುದಿಲ್ಲ ಅಂದುಕೊಳ್ಳುತ್ತೇವೆ, ಆದರೆ ಹಾಕಬೇಕಾದ
ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ತಿಳಿದರೆ ಈ ಹೈದರಾಬಾದಿ ಬಿರಿಯಾನಿ ತಯಾರಿಸುವುದು
ಸುಲಭ. ಈ ಕೆಳಗಿನ ವಿಧಾನದಂತೆ ಅಡುಗೆ ಮಾಡಿದರೆ ನೀವೂ ಕೂಡ ಸೂಪರ್ ಟೇಸ್ಟ್ ನ
ಹೈದರಾಬಾದ್ ಬಿರಿಯಾನಿ ತಯಾರಿಸಬಹುದು.
ಸ್ವಲ್ಪ ಪುದೀನಾ * ಏಲಕ್ಕಿ 2 * ಸಾಧಾರಣ ತುಂಡಿನ ಚಿಕನ್ ಮುಕ್ಕಾಲು ಕೆಜಿ * ಕತ್ತರಿಸಿದ ಕೊತ್ತಂಬರಿ
ಸೊಪ್ಪು (ಸ್ವಲ್ಪ) * ಚಕ್ಕೆ 2 ತುಂಡು * ಜೀರಿಗೆ ಅರ್ಧ ಚಮಚ * ಕೊತ್ತಂಬರಿ ಪುಡಿ ಅರ್ಧಚಮಚ * ಕೆಂಪು
ಮೆಣಸಿನ ಪುಡಿ 1 ಚಮಚ * ಚಿಕ್ಕದಾಗಿ ಕತ್ತರಿಸಿದ ಶುಂಠಿ ಪೇಸ್ಟ್ 2 ಚಮಚ * ಬೆಳ್ಳುಳ್ಳಿ ಪೇಸ್ಟ್ 2 ಚಮಚ

 • ಬಾಸುಮತಿ ಅಕ್ಕಿ 2 ಕಪ್ * ಹಸಿಮೆಣಸಿನ ಕಾಯಿ 2 (ಕತ್ತರಿಸಿದ್ದು) * ಜಾಯಿಕಾಯಿ ಪುಡಿ ಅರ್ಧ ಚಮಚ
 • ನಿಂಬೆ ರಸ ಒಂದು ಚಮಚ * ಎಣ್ಣೆಯಲ್ಲಿ ಹುರಿದ ಈರುಳ್ಳಿ 4 * ತುಪ್ಪ 2 ಚಮಚ * ಕಾಳು ಮೆಣಸು 6-7
 • ಕೇಸರಿ ಅರ್ಧ ಚಮಚ * ರುಚಿಗೆ ತಕ್ಕ ಉಪ್ಪು * ಅರಿಶಿಣ ಪುಡಿ 1/4 ಚಮಚ
  ಒಂದು ಪಾತ್ರೆಯಲ್ಲಿ ಶುಚಿ ಮಾಡಿದ ಚಿಕನ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಮೊಸರು,
  ಹಸಿಮೆಣಸಿನ ಕಾಯಿ, ಜೀರಿಗೆ, ಕಾಳು ಮೆಣಸು, ಕೆಂಪು ಮೆಣಸಿನ ಪುಡಿ, ಅರಶಿಣ, ಸ್ವಲ್ಪ ಉಪ್ಪು, ಜೀರಿಗೆ,
  ಕೊತ್ತಂಬರಿ ಪುಡಿ, ಗರಂ ಮಸಾಲ(ಚಕ್ಕೆ, ಜಾಜ್ ಕಾಯಿ) ಫ್ರೈ ಮಾಡಿದ ಈರುಳ್ಳಿ (ಸ್ವಲ್ಪ ಈರುಳ್ಳಿ ಫ್ರೈ
  ತೆಗೆದಿಡಿ) ಮತ್ತು ತುಪ್ಪ, ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 2. ಇನ್ನೊಂದು ಪಾತ್ರೆಯಲ್ಲಿ
  ನೀರಿಗೆ ಸ್ವಲ್ಪ ಉಪ್ಪು ಹಾಕಿ ನೀರನ್ನು ಕುದಿಸಬೇಕು. ನಂತರ ತೊಳೆದ ಅಕ್ಕಿ ಹಾಕಿ ಅರ್ಧದಷ್ಟು
  ಬೇಯಿಸಬೇಕು. ನಂತರ ಅನ್ನದಿಂದ ನೀರನ್ನು ಸೋಸಬೇಕು. 3. ಈಗ ಬಿರಿಯಾನಿ ಪಾತ್ರೆ ತೆಗೆದುಕೊಂಡು
  ಚಿಕನ್ ಅನ್ನು ಪಾತ್ರೆಯ ಕೆಳಭಾಗದಲ್ಲಿ ಹಾಕಿ, ನಂತರ ಅರ್ಧ ಬೆಂದ ಅನ್ನವನ್ನು ಹಾಕಿ ಅದರ ಮೇಲೆ
  ಹುರಿದ ಈರುಳ್ಳಿ, ಪುದೀನಾ ಎಲೆ, ಕೇಸರಿ ಹಾಕಿ ಪಾತ್ರೆಯ ಬಾಯಿಯನ್ನು ಮುಚ್ಚಿ ಅದರಿಂದ ಆವಿ
  ಹೊರಹೋಗದಂತೆ ಪಾತ್ರೆಯ ಬಾಯಿಯ ಸುತ್ತ ಮೈದಾ ಮಿಶ್ರಣವನ್ನು ಮೆತ್ತಿ 20 ನಿಮಿಷ ಸಾಧಾರಣ

ಹುರಿಯಲ್ಲಿ ಬೇಯಿಸಿ, ಬೆಂದ ಬಿರಿಯಾನಿಯನ್ನು ಸೌಟ್ ನಿಂದ ಚಿಕನ್ ಮತ್ತು ಅನ್ನ ಮಿಶ್ರ ಮಾಡಿ
ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹೈದರಾಬಾದ್ ಚಿಕನ್ ರೆಡಿ.

ಮಟನ್ ಬಿರಿಯಾನಿ
ಬೇಕಾಗುವ ಸಾಮಾಗ್ರಿಗಳು

 1. ಬಾಸುಮತಿ ಅಕ್ಕಿ – 1 ಪಾವು
 2. ಮಟನ್ – ಅರ್ಧ ಕೆಜಿ
 3. ಧನಿಯಾ ಪುಡಿ – 1 ಚಮಚ
 4. ಗರಂ ಮಸಾಲ ಪುಡಿ – 1 ಚಮಚ
 5. ಬಿರಿಯಾನಿ ಮಸಾಲ ಪುಡಿ – 1.5 ಚಮಚ
 6. ಖಾರದ ಪುಡಿ – 1 ಚಮಚ
 7. ಕೊತ್ತಂಬರಿ ಮತ್ತು ಪುದೀನ – 1 ಬಟ್ಟಲು
 8. ಉಪ್ಪು – ರುಚಿಗೆ ತಕ್ಕಷ್ಟು
 9. ಮೊಸರು – 4-5 ಚಮಚ
 10. ಎಣ್ಣೆ+ತುಪ್ಪ – 2-4 ಚಮಚ
 11. ಅರಿಶಿನ ಪುಡಿ – ಚಿಟಿಕೆ
 12. ನಿಂಬೆ ರಸ – 1 ನಿಂಬೆಹಣ್ಣು
 13. ಈರುಳ್ಳಿ – 1 ದೊಡ್ಡದು
 14. ಶುಂಠಿ+ಬೆಳ್ಳುಳ್ಲಿ ಪೇಸ್ಟ್ – 1 ಚಮಚ
 15. ಟೊಮೋಟೋ – 1
  ಮೊದಲಿಗೆ ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ ಅನ್ನ ಮಾಡಿಟ್ಟುಕೊಳ್ಳಿ.
 • ನಂತರ ಒಂದು ಪ್ಯಾನ್‍ಗೆ ತುಪ್ಪ ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿರಿ.
 • ಬಳಿಕ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಸೇರಿಸಿ ಫ್ರೈ ಮಾಡಿರಿ.
 • ಎಲ್ಲವೂ ಫ್ರೈ ಆದ ಮೇಲೆ ಅದಕ್ಕೆ ತೊಳೆದ ಮಟನ್, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ 2 ನಿಮಿಷ ಮುಚ್ಚಳ ಮುಚ್ಚಿ
  ಬೇಯಿಸಿರಿ.
 • ಬಳಿಕ ಅದಕ್ಕೆ ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲ, ಬಿರಿಯಾನಿ ಮಸಾಲ ಪುಡಿ ಸೇರಿಸಿ ಮಿಕ್ಸ್ ಮಾಡಿ ಫ್ರೈ ಮಾಡಿರಿ.
 • ಈಗ ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಪುದಿನಾ, ಟೋಮೊಟೋ, ಸ್ವಲ್ಪ ಮೊಸರು ಸೇರಿಸಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿರಿ.
  (ಕುಕ್ಕರ್‍ನಲ್ಲಿ ಮಾಡುವುದಾದರೆ 2 -3 ಕೂಗು ಕೂಗಿಸಿ)
 • ಮಟನ್ ಚೆನ್ನಾಗಿ ಬೆಂದ ಬಳಿಕ ಆ ಮಿಶ್ರಣವನ್ನು ಪಾತ್ರೆಗೆ ಹಾಕಿ. ಮಾಡಿಟ್ಟುಕೊಂಡ ಅನ್ನವನ್ನು ಮಿಕ್ಸ್ ಮಾಡಿರಿ.
 • ಕೊನೆಯದಾಗಿ ನಿಂಬೆರಸ ಸೇರಿಸಿ ಮುಚ್ಚಳ ಮುಚ್ಚಿ ದಮ್ ಕಟ್ಟಿ 2-3 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿರಿ.
 • ಕೊನೆಗೆ ಮುಚ್ಚಳ ತೆಗೆದು ಬಿಸಿಬಿಸಿಯಾಗಿ ರುಚಿಯಾದ ಮಟನ್ ಬಿರಿಯಾನಿ ಸರ್ವ್ ಮಾಡಿ.
  (ಈರುಳ್ಳಿಯನ್ನು ಉದ್ದುದ್ದ ಹೆಚ್ಚಿ, ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗೋವರೆಗೆ ಫ್ರೈ ಮಾಡಿ ಕೊನೆಯಲ್ಲಿ ಮಿಕ್ಸ್ ಮಾಡಿಕೊಳ್ಳಬಹುದು)

ಮೊಘಲ್ ಬಿರಿಯಾನಿ
ಮೊಘಲ್ ಬಿರಿಯಾನಿ ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ಬಿರಿಯಾನಿಯಾಗಿದೆ. ಮೊಘಲ್ ಮಟನ್ ಬಿರಿಯಾನಿ ತಿನ್ನಲು ತುಂಬಾ
ರುಚಿಕರವಾಗಿರುತ್ತದೆ. ಈ ಬಿರಿಯಾನಿಯನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
ಅರ್ಧ ಕೆಜಿ ಬಾಸುಮತಿ ಅಕ್ಕಿ
1 ಕೆಜಿ ಮಟನ್ (ಚಿಕ್ಕ ತುಂಡುಗಳು)
2 ಚಮಚ ಗರಂ ಮಸಾಲ
6 ಕೆಂಪು ಮೆಣಸು
ಸ್ವಲ್ಪ ಚಕ್ಕೆ
ಏಲಕ್ಕಿ 2
ಹಸಿ ಮೆಣಸಿನ ಕಾಯಿ 2
ಸ್ವಲ್ಪ ಗೋಡಂಬಿ
ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
ಬೆಳ್ಳುಳ್ಳಿ 5 ಎಸಳು
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಪುದೀನಾ ಸೊಪ್ಪು
ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಒಂದೊಂದು ಚಮಚ
1 ಕಪ್ ಮೊಸರು
1 ನಿಂಬೆ ಹಣ್ಣು
4 ಬೇಯಿಸಿದ ಮೊಟ್ಟೆ
ಕೇಸರಿ
ಸ್ವಲ್ಪ ಹಾಲು

ಸ್ವಲ್ಪ ತುಪ್ಪ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:

 1. ಕೆಂಪು ಮೆಣಸು ಹಾಗೂ ಗೋಡಂಬಿಯನ್ನು ಅರೆದು ಪೇಸ್ಟ್ ರೀತಿಯಲ್ಲಿ ಮಾಡಬೇಕು.
 2. ಮಟನ್ ತುಂಡುಗಳನ್ನು ಶುಚಿ ಮಾಡಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಮೊಸರು ಹಾಕಿ ಬದಿಯಲ್ಲಿ ಇಡಿ.
 3. ಈಗ ಕೆಂಪು ಮೆಣಸು ಹಾಗೂ ಗೋಡಂಬಿ ಪೇಸ್ಟ್, ಈರುಳ್ಳಿ ಅನ್ನು ಚೆನ್ನಾಗಿ ಫ್ರೈ ಮಾಡಬೇಕು. ಈ ಪೇಸ್ಟ್ ಗೆ ಮಟನ್, ಗರಂ ಮಸಾಲ
  ಹಾಗೂ ರುಚಿಗೆ ತಕ್ಕ ಉಪ್ಪು ಸೇರಿಸಬೇಕು. ನಂತರ ಒಂದು ಕಪ್ ಬಿಸಿ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಮಟನ್ ಬೇಯುವವರೆಗೆ
  ಬೇಯಿಸಿ. ಈ ಮಟನ್ ಡ್ರೈ ರೀತಿಯಲ್ಲಿ ಇರಲಿ.
 4. ಈಗ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಚಕ್ಕೆ, ಲವಂಗ, ಏಲಕ್ಕಿ, ಪುದೀನಾ ಹಾಕಬೇಕು. ಈಗ ಹಸಿ ಮೆಣಸಿನ ಕಾಯಿ
  ಹಾಕಿ, 2 ಕಪ್ ಅಕ್ಕಿಯನ್ನು ಹಾಕಿ 2 ಕಪ್ ಗೆ 4 ಕಪ್ ನೀರು, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಬೇಕು.
 5. ನಂತರ ಮತ್ತೊಂದು ಪಾತ್ರೆಯ ಅಡಿಯಲ್ಲಿ ತುಪ್ಪ ಹಾಕಿ ಅದರ ಮೇಲೆ ಬೇಯಿಸಿದ ಅನ್ನ ಹಾಕಿ ನಂತರ ಮಟನ್, ಅದರ ಮೇಲೆ ಸ್ವಲ್ಪ
  ನಿಂಬೆ ರಸ, ಪುನಃ ಅನ್ನ, ಮಟನ್, ನಿಂಬೆ ರಸ ರೀತಿ ಹಾಕಿ ಪಾತ್ರೆಯ ಬಾಯಿ ಮುಚ್ಚಿ 20 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಬೇಕು.
  ನಂತರ ತುಪ್ಪ ಹಾಕಿ, ಹಾಲಿನಲ್ಲಿ ಕಲಿಸಿದ ಕೇಸರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಅದರ ಮೇಲೆ ಮೊಟ್ಟೆಯನ್ನು
  ಕತ್ತರಿಸಿಟ್ಟರೆ ಮೊಘಲ್ ಮಟನ್ ಬಿರಿಯಾನಿ ರೆಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ