ಮಕ್ಕಳಿಲ್ಲದ ದಂಪತಿಗಳಿಗೆ ವಾಸ್ತು ಪರಿಹಾರಗಳು..!

  • by

ಆಧುನಿಕ ಯುಗದಲ್ಲಿ ಮಕ್ಕಳಿಲ್ಲದಿರುವುದು ಅಂದ್ರೆ ಶಾಪವಿದ್ದಂತೆ ಭಾವಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಾಹಿತರಲ್ಲಿ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಅಂದ್ರೆ ಬಂಜೆತನ. ಈ ಸಮಸ್ಯೆ ಮಹಿಳೆ ಅಥವಾ ಪುರಷರಲ್ಲೂ ಕಾಡಬಹುದು. ನಮ್ಮ ದಿನ ನಿತ್ಯದ ಚಟುವಟಿಕೆಗಳು, ಆಹಾರ ಕ್ರಮ, ವ್ಯಾಯಾಮ ಜೀವನಶೈಲಿ ಇವೆಲ್ಲವು ಕೂಡಾ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲವು. ಇವತ್ತಿಗೂ ಬಂಜೆತನದ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ ತುಂಬಾ ಹತಾಶೆ ಭಾವನೆ ಹೊಂದಿರುತ್ತಾರೆ. ಆದ್ರೆ ಸಮಸ್ಯೆಗೆ ವಾಸ್ತು ದೋಷ ಕೂಡಾ ಕಾರಣವಾಗಬಲ್ಲದ್ದು.


vastu-tips-childless-couples-geting-pregnant- , ಬಂಜೆತನ, ಗರ್ಭಧಾರಣೆ, ವಾಸ್ತು ಚಿಪ್ಸ್,

ದಂಪತಿಯಲ್ಲಿ ಹೊಸ ಭರವಸೆ ಮುಖ್ಯ…!

ಮಕ್ಕಳಿಲ್ಲದ ದಂಪತಿ ಎಷ್ಟು ಹತಾಶೆ ಭಾವನೆ ಹೊಂದಿರುತ್ತಾರೆಂದು ಊಹಿಸಿಕೊಳ್ಳುವುದು ಅಸಾಧ್ಯ. ಮಕ್ಕಳಿಲ್ಲದಿರುವುದು ಎಂದರೆ ತುಂಬಾ ಕಹಿ ಸತ್ಯ. ಇನ್ನು ಸಂಬಂಧಿಕರು ಮಾಡುವ ಪ್ರತಿಯೊಂದು ಅಪಹಾಸ್ಯ ಮತ್ತಷ್ಟು ಹತಾಶೆ ಭಾವನೆ ಮೂಡಿಸುತ್ತದೆ. ಆದ್ರೆ ಇದೆಲ್ಲದಕ್ಕೂ ಪರಿಹಾರವಾಗಬಲ್ಲದ್ದು ವಾಸ್ತು ಶಾಸ್ತ್ರ. ಮಕ್ಕಳಿಲ್ಲದ ದಂಪತಿಗೆ ವಾಸ್ತು ಪರಿಹಾರಗಳು ಸಮಸ್ಯೆಯನ್ನು ನಿವಾರಿಸುತ್ತದೆ. ಬದಲು, ಭರವಸೆ , ಆಶಾಭಾವನೆ ಹೊಂದಬೇಕಾಗುತ್ತದೆ. ನಮ್ಮ ಪ್ರಾಚೀನ ವಿಜ್ಞಾನಗಳಾದ ವಾಸ್ತು, ಜ್ಯೋತಿಷ್ಯ ಬಂಜೆತನ ಗುಣಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬಂಜೆತನ ಸರಿದೂಗಿಸಲು 20 ವಾಸ್ತು ಸಲಹೆಗಳು ಇಲ್ಲಿವೆ.

1.ನೀವು ಮಲಗುವ ಕೋಣೆಯಲ್ಲಿ ಶಿಶುಗಳ ಫೋಟೋಗಳನ್ನು ಹಾಕಬೇಕು.
2. ಸೂರ್ಯನ ಕಿರಣಗಳು ಇರುವ ಕಡೆ ಮಲಗಬೇಡಿ..
3.ನೈಖುತ್ಯ ಭಾಗಕ್ಕೆ ಬೆಡ್ ರೂಂ ಆಯ್ಕೆಮಾಡಿ. ಈ ಡೈರೆಕ್ಷನ್ ಮಕ್ಕಳಾಗುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
4. ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿನ ಕಡೆಗೆ ಇರಿಸಿ.
5. ನೀವು ಮಲಗುವ ಕೋಣೆಯಲ್ಲಿ ಶಿಶುಗಳೊಂದಿಗೆ ನಗುವ ಬುದ್ಧನನ್ನು ಇರಿಸಿ.
6. ನಿಮ್ಮ ಹಿತ್ತಲಿನಲ್ಲಿ ನೈಖುತ್ಯ ದಿಕ್ಕಿನಲ್ಲಿ ಕೆಲವು ಹಣ್ಣಿನ ಮರಗಳನ್ನು ಬೆಳೆಸಿಕೊಳ್ಳಿ.
7. ನೀವು ಗರ್ಭಧರಿಸಲು ಪ್ರಯತ್ನಿಸುತ್ತಿರುವಾಗ, ನಿಮ್ಮ ಮನೆಯಲ್ಲಿ ಯಾವುದೇ ನಿರ್ಮಾಣ ಅಥವಾ ನವೀಕರಣ ಕಾರ್ಯಗಳನ್ನು ತಪ್ಪಿಸಿ.
8. ನಿಮ್ಮ ಮನೆಯ ಮುಖ್ಯ ದ್ವಾರ ನಿಯಮಿತ ಸ್ವಚ್ಛಗೊಳಿಸಿ.
9. ಮನೆಯ ಮುಖ್ಯದ್ವಾರವನ್ನು ನಿರ್ಭಂಧಿಸಬಹುದಾದ ಎಲ್ಲಾ ಗೊಂದಲಗಳನ್ನು ತೆಗೆದು ಹಾಕಿ.
10. ನೀವು ಮಲಗುವ ಕೋಣೆ ಪಶ್ಚಿಮ ದಿಕ್ಕಿನ ಮೂಲೆಯಲ್ಲಿರಲಿ
11. ಆನೆ ಚಿತ್ರಗಳನ್ನು ನಿಮ್ಮ ರೂಂ ನಲ್ಲಿ ಇರಿಸುವುದು ಮುಖ್ಯ.
12.ನಿಮ್ಮ ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನಲ್ಲಿ ಲೋಹದ ಐಟಂಗಳಿಂದ ಅಲಂಕಾರ ಮಾಡುವುದನ್ನು ಹೆಚ್ಚಿಸಿ.
13. ಸಕರಾತ್ಮಕ ಶಕ್ತಿ ಹೆಚ್ಚಿಸಲು ನಿಮ್ಮ ಮಲಗುವ ಕೋಣೆಯಲ್ಲಿ ತಾಜಾ ಹೂಗಳನ್ನು ಹಾಕಿ.
14.ಮಲಗುವ ಕೋಣೆಯಲ್ಲಿ ದಾಳಿಂಬೆಯ ಚಿತ್ರ ಅಥವಾ ಚಿಹ್ನೆ ಹೊಂದಿರುವ ಫೋಟೋವನ್ನು ಹಾಕುವುದು ಉತ್ತಮ
15. ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ, ಅದನ್ನು ನೈಖುತ್ಯ ಅಥವಾ ವಾಯುವ್ಯ ದಿಕ್ಕಿಗೆ ಬದಲಾಯಿಸಿ.
16. ಮಲಗುವ ಕೋಣೆಯಲ್ಲಿ ಅಳುವ, ಹಿಂಸೆ ಇರುವ ಕಾಡು ಪ್ರಾಣಿಗಳ ಫೋಟೋಗಳನ್ನು ಹಾಕಬೇಡಿ.
17. ನಿಮ್ಮ ಗಂಡನ ಎಡಭಾಗದಲ್ಲಿ ಮಲಗಿಕೊಳ್ಳಿ.
18. ನಿಮ್ಮ ಬೆಡ್ ರೂಂ ನಲ್ಲಿ ಶೌಚಾಲಯ ಬಳಸುತ್ತಿದ್ದರೆ, ಅದರ ಬಾಗಿಲನ್ನು ಬಿಗಿಯಾಗಿ ಮುಚ್ಚಿ.
19. ನೀವು ಮಲಗುವ ಕೋಣೆಯಲ್ಲಿ ಕೆಂಪು ಬಣ್ಣದ ವಸ್ತುಗಳನ್ನು ಇಡಬೇಡಿ. ಕೆಂಪು ಬಣ್ಣವನ್ನು ನೀವು ಮಲಗುವ ಕೋಣೆಯಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು. ಏಕೆಂದರೆ ಅದು ಶಕ್ತಿಯನ್ನು ವೇಗವಾಗಿ ಹೊರಹಾಕುತ್ತೆದ. ಬೆಂಕಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಕೋಣೆಯಲ್ಲಿ ಇಡಬೇಡಿ.
20. ನೀವು ಮಲಗುವ ಕೋಣೆಯಿಂದ ಕನ್ನಡಿಯನ್ನು ತೆಗೆದು ಹಾಕಿ.


vastu-tips-childless-couples-geting-pregnant- , ಬಂಜೆತನ, ಗರ್ಭಧಾರಣೆ, ವಾಸ್ತು ಚಿಪ್ಸ್,

ಮಕ್ಕಳಿಲ್ಲದ ದಂಪತಿಗೆ ಜ್ಯೋತಿಷ್ಯ ಪರಿಹಾರ..!

ಗರ್ಭಧಾರಣೆ ವಿಳಂಬ ವಾಗುತ್ತಿದ್ದರೆ, ಸಂತಾನ ಗೋಪಾಲ್ ಮಂತ್ರವನ್ನು ಪಠಿಸಬಹುದು. ಬಹಳ ಮುಖ್ಯವಾದ ಸಿದ್ಧಿ ಮಂತ್ರ ಇದಾಗಿದೆ. ಈ ಮಂತ್ರವು ನಿಮ್ಮ ಸುತ್ತ ಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮತ್ತು ಸರಿಯಾದ ಸಮತೋಲನವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯ ಹಾಗೂ ವಾಸ್ತು ತಜ್ಞರ ಪ್ರಕಾರ, ಎಷ್ಟೇ ಪ್ರಯತ್ನಿಸಿದರೂ ಮಕ್ಕಳನ್ನು ಪಡೆಯದೇ ಇರುವ ಅನೇಕ ಜನರಿದ್ದಾರೆ. ಇಂತಹ ಅನೇಕ ಪ್ರಕರಣಗಳಿಗೆ ಸಂತಾನ ಗೋಪಾಲ್ ಮಂತ್ರ ಸಹಾಯ ಮಾಡುತ್ತದೆ.

ಈ ಮಂತ್ರವು.. 100,000 ಪಠಣಗಳ ಸಿದ್ಧಿ ಪಡೆಯುತ್ತದೆ. ಈ ಮಂತ್ರವನ್ನು ನೀವು 1 ಲಕ್ಷ ಬಾರಿ ಪಠಿಸಲು ಸಾಧ್ಯವಾಗದಿದ್ದರೆ, ಬೆಳಿಗ್ಗೆ ಸ್ನಾನ ಮಾಡಿದ ನಂತರ ಪ್ರತಿದಿನ ಕನಿಷ್ಠ 108 ಬಾರಿ ಪಠಿಸಲು ಪ್ರಯತ್ನಿಸಿ. ಪತಿ ಹಾಗೂ ಪತ್ನಿ ಇಬ್ಬರೂ ಪಠಣ ಮಾಡುವುದು ಸೂಕ್ತವಾಗಿದೆ. ನೆಲದ ಮೇಲೆ ಕುಳಿತುಕೊಳ್ಳುವ ಬದಲು ಚಾಪೆ ಮೇಲೆ ಕುಳಿತುಕೊಂಡು ಪಠಣ ಮಾಡುವುದು ಉತ್ತಮ. ಪೂರ್ವ ದಿಕ್ಕಿಗೆ ಕುಳಿತುಕೊಂಡು ಪಠಿಸಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ