ವ್ಯಾಲೆಂಟೈನ್ಸ್ ಡೇ ಯಾಕೆ ಆಚರಿಸಲಾಗುತ್ತದೆ? ಇದರ ಹಿಂದಿನ ಕಥೆಯೇನು!

  • by

ವ್ಯಾಲೆಂಟೈನ್ಸ್ ವೀಕ್ ಈಗಾಗ್ಲೇ ಫೆಬ್ರುವರಿ 7ರಿಂದ ಪ್ರಾರಂಭಗೊಂಡಿದೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾವಿರಾರು ಪ್ರೇಮಿಗಳು ಕಾದು ಕುಳಿತಿದ್ದಾರೆ. ಪ್ರೇಮಿಗಳು ಈ ದಿನದಂದು ತಮ್ಮ ಪ್ರೇಮಿಗೆ ಒಲವಿನ ಉಡುಗೊರೆ ನೀಡಿ, ಪ್ರೀತಿಯನ್ನು ವ್ಯಕ್ತಪಡಿಸುವ ದಿನ. ಫೆಬ್ರುವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳ ಹಬ್ಬ ಶುರುವಾಗುತ್ತದೆ. ಎಲ್ಲಾ ಅಂಗಡಿಗಳು , ಇ-ಕಾಮರ್ಸ್ ತಾಣಗಳು ಮತ್ತು ಮಾರುಕಟ್ಟೆಗಳು ಪ್ರೇಮಿಗಳು ದಿನಕ್ಕೆ ಭರ್ಜರಿಯಾಗಿಯೇ ತಯಾರಿ ನಡೆಸಿವೆ. ಆದ್ರೆ ಅದಕ್ಕೂ ಮುನ್ನ ವ್ಯಾಲೆಂಟೈನ್ ಡೇ ಏಕೆ ಆಚರಿಸಲಾಗುತ್ತದೆ..? ಯಾವಾಗ ಪ್ರಾರಂಭವಾಯಿತು. ಇದರ ಹಿಂದಿನ ಕಥೆಯೇನು? ಇಲ್ಲಿದೆ ಮಾಹಿತಿ.


Valentine's Day, 
celebrated,  story , 
 ವ್ಯಾಲೆಂಟೈನ್ ಡೇ , ಸ್ಪೆಷಲ್,

ಇಂದಿನ ದಿನಗಳಲ್ಲಿ ತೋರಿಕೆಯ ನಾಟಕ ಪ್ರೀತಿ ನಮ್ಮೆದುರಿಗೆ ಅನಾವರಣಗೊಳ್ಳುತ್ತದೆ. ಹೃದಯಗಳ ಮಿಲನಕ್ಕಿಂತ ದೇಹಗಳ ಮಿಲನ ಇವತ್ತಿನ ದಿನಗಳಲ್ಲಿ ಹೆಚ್ಚು ಕಾಣಬಹುದು. ಪ್ರೇಮ ನಿವೇದನೆಗೆ ಡಿಫರೆಂಟ್ ಆಗಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.  

ಮನಸು ಗೆದ್ದವರಿಗೆ ಇಂಥದ್ದೇ ದಿನ ಬೇಕು ಎಂದೇನಿಲ್ಲ. ಮನದಲ್ಲಿ ಯಾವಾಗ ಬೇಕಾದರೂ ಪ್ರೀತಿ ಚಿಗುರಬಹುದು.ಮೊದಲ ಬಾರಿಗೆ ಪ್ರೇಮ ನಿವೇದನೆ ಮಾಡುವವರಿಗೆ ಈ ನಿಯಮ ಅನ್ವಯಿಸುತ್ತದೆ. ಯಾಕಂದ್ರೆ ಪ್ರೇಮ ನಿವೇದನೆಯಲ್ಲಿ ಗೆದ್ದ ಲವರ್ಸ್ ಗೆ ಈ ದಿನ ವಿಶೇಷ ಅನ್ನಿಸದೇ ಇರದು.

ಫೆಬ್ರುವರಿ 14ರಂದು ವಾಲೆಂಟೈನ್ ದಿನ ಯಾಕೆ ಆಚರಿಸಲಾಗುತ್ತದೆ..?

ಪ್ರೇಮಿಗಳ ದಿನ ಕ್ರಿ.ಶ 270 ರಲ್ಲಿ ಎರಡನೇ ಕ್ಲಾಡಿಯಸ್ ಅವಧಿಯಲ್ಲಿ ಜಾರಿಗೆ ಬಂದಿತ್ತು. ಸಂತ ವಾಲೆಂಟೈನ್! ಮರಣದ ದಿನವನ್ನು ವ್ಯಾಲೆಂಟೈನ್ ದಿನವನ್ನಾಗಿ ಆಚರಿಸಲಾಗುತ್ತದೆ. ಸಂತ ವಾಲೆಂಟೈನ್ ಮೋಸ್ಟ್ ಆ್ಯಂಬೀಷಿಯಸ್ ರೂಲರ್ ಎನಿಸಿಕೊಂಡಿದ್ದ ಕ್ಲಾಡಿಯಸ್ ಎಂಬ ರಾಜನ ಆಸ್ಥಾನದಲ್ಲಿ ಸಂತನಾಗಿದ್ದನು. ಆತನ ಕಾಲದಲ್ಲಿ ತನ್ನ ಸೇನೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ಕ್ಲಾಡಿಯಸ್ ಗೆ ತಮ್ಮ ಯುವಕರು ಯುದ್ಧದ ವೇಳೆಯಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಯಾಕಂದ್ರೆ ಯುವಕರು ಮದುವೆಯಾಗದೇ ಒಂಟಿಯಾಗಿದ್ದಷ್ಟು ಯುದ್ಧದಲ್ಲಿ ಉತ್ತಮ ಪ್ರದರ್ಶನ ತೋರಬಹುದು ಎಂಬುದಾಗಿತ್ತು. ಆತನ ಸೈನ್ಯದಲ್ಲಿ ಬಹಳಷ್ಟು ಮಂದಿ ಕೀಳರಿಮೆಗೆ ಒಳಗಾಗಿದ್ದರು ಎನ್ನುವ ಸತ್ಯ ಆತನಿಗೆ ಗೊತ್ತ ಇರಲಿಲ್ಲವಂತೆ.


Valentine's Day, 
celebrated,  story , 
 ವ್ಯಾಲೆಂಟೈನ್ ಡೇ , ಸ್ಪೆಷಲ್,

ಕ್ಲಾಡಿಯಸ್ ನಿರ್ಧಾರಕ್ಕೆ ಸಂತ ವ್ಯಾಲೆಂಟೈನ್ ಗೆ ಬೇಸರವಿತ್ತು. ಹಾಗಾಗಿ ಇದನ್ನು ಇವರು ವಿರೋಧಿಸುತ್ತಿದ್ದರು. ಪ್ರೀತಿಯಿಂದ ಸೈನಿಕರನ್ನು ಹುರಿದುಂಬಿಸಬಹುದು ಎಂಬುವುದು ಅವರ ನಂಬಿಕೆಯಾಗಿತ್ತು. ಸೈನ್ಯದಲ್ಲಿದ್ದ ಎಷ್ಟೋ ಜನರಿಗೆ ಇವರು ಕಂಕಣ ಭಾಗ್ಯ ದೊರಕಿಸಿಕೊಟ್ಟರು. ಈ ವಿಚಾರ ಹೇಗೋ ಕ್ಲಾಡಿಯಸ್ ಗೆ ತಿಳಿಯುತ್ತದೆ. ಇದೊಂದು ಅಪರಾಧ ಎಂದು ಸಂತ ವ್ಯಾಲೆಂಟೀನ್ ಅಪರಾಧಿ ಎಂದು ಘೋಷಣೆ ಮಾಡಲಾಗುತ್ತದೆ. ಈ ಅಪರಾಧಕ್ಕಾಗಿ ಅವರನ್ನು ಸೆರೆಮನೆಗೆ ಹಾಕಲಾಗುತ್ತದೆ. ಆದ್ರೆ ಸಂತ ವ್ಯಾಲೆಂಟೈನ್ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಇವರ ಸಹಾಯ ಪಡೆದ ಅದೆಷ್ಟೋ ಪ್ರೇಮಿಗಳು ಇವರನ್ನು ನೋಡಲು ಬರುತ್ತಿದ್ದರಂತೆ. ಇನ್ನು ಜೈಲರ್ ಅವರ ಮಗಳನ್ನು ಮೆಚ್ಚಿ, ಸಂತ ವ್ಯಾಲೆಂಟೀನ್ ಅವಳಿಗೆ ಪತ್ರ ಬರೆಯುತ್ತಾರಂತೆ. ಅವರನ್ನು ನೋಡಲು ಜೈಲರ್ ಮಗಳು ಆಗಾಗ ನೋಡಲು ಬರುತ್ತಿರುತ್ತಾಳೆ. ಆಗ ಅವಳ ಮೇಲೆ ಆತನಿಗೆ ಪ್ರೇಮವಾಗುತ್ತದೆ. ಈ ಸಂತ ತನ್ನ ಸಾವಿಗೂ ಮುನ್ನ ಇಂತಿ ನಿಮ್ಮ ವ್ಯಾಲೆಂಟೀನ್ ಎಂದು ಸಹಿ ಬರೆದು ಪ್ರೇಮ ಪತ್ರವನ್ನು ಬರೆದು, ಸಾವನ್ನಪ್ಪುತ್ತಾರಂತೆ. ಇದೇ ಭವಿಷ್ಯದಲ್ಲಿ ವ್ಯಾಲೆಂಟೈನ್ಸ್ ಡೇ ಎಂದು ಕರೆಯಲ್ಪಡುತ್ತದೆ. 

ಸಂಬಂಧಗಳ ಅಂತರ ದೂರ ಮಾಡುತ್ತಾ ಪ್ರೇಮಿಗಳ ದಿನ..!

ಪ್ರೇಮಿಗಳ ದಿನ ಪ್ರೀತಿಯ ದಿನ ಅಂತಲೇ ಹೇಳಬಹುದು. ಆದರೆ ಜನರಿಗೆ ಅವರ ಸ್ಥಿತಿಯನ್ನು ಆಧರಿಸಿ ವಿಭಿನ್ನ ವಿಷಯಗಳನ್ನು ಅರ್ಥೈಸಬಲ್ಲದ್ದು. ನೀವು ಒಬ್ಬಂಟಿಯಾಗಿರಲಿ, ಡೇಟಿಂಗ್ ಮಾಡಲಿ, ಅಥವಾ ವಿವಾಹಿತರಾಗಿರಲಿ, ನಿಶ್ಚಿತಾರ್ಥ ಮಾಡಿಕೊಂಡಿರಲಿ, ದೂರದ ಸಂಬಂಧಿಯಾಗಿರಲಿ, ಅಥವಾ ಸಂಗಾತಿ ಜತೆ ನಿಮ್ಮ ಹೊಂದಾಣಿಕೆ ಕಷ್ಟವಾಗಿರಲಿ.. ಏನೇ ಆಗಿದ್ರು ವ್ಯಾಲೆಂಟೈನ್ಸ್ ಡೇ ನಿಮ್ಮ ಸಂಬಂಧದ ಸ್ಥಿತಿಯನ್ನು ಸುಧಾರಿಸುವಲ್ಲಿ ನೆರವಾಗುತ್ತದೆ. ಅದು ಹೇಗೆ.. ಇಲ್ಲಿದೆ ಡಿಟೇಲ್ಸ್.


Valentine's Day, 
celebrated,  story , 
 ವ್ಯಾಲೆಂಟೈನ್ ಡೇ , ಸ್ಪೆಷಲ್,

ಸಿಂಗಲ್ಸ್ ಗಳಿಗಾಗಿ..!

ಪ್ರೇಮಿಗಳ ದಿನ ಬಂತೆಂದರೆ ನೀವು ಒಂಟಿಯಾಗಿದ್ದೇನೆ ಅಂತಾ ಯೋಚಿಸಬೇಕಾಗಿಲ್ಲ. ಒಂಟಿಯಾಗಿದ್ದರು ನಿಮ್ಮ ಬಗ್ಗೆ ನಿಮಗೆ ಪ್ರೀತಿ ಇರಲಿ, ಆತ್ಮವಿಶ್ವಾಸ ವಿರಲಿ. ಈ ದಿನದಂದು ಏನಾದರೂ ಸ್ಪೆಷಲ್ ಮಾಡಿ. ನಿಮಗೆ ಇಷ್ಟವೆನಿಸಿದ ಕೆಲಸಗಳನ್ನು ಮಾಡಿ. ಮೂವೀ ನೋಡಿ, ಯಾವುದಾದರೂ ಉತ್ತಮ ಪುಸ್ತಕ ಓದಿ. ಸಂಗೀತ ಆಲಿಸಿ ಇದು ನಿಮ್ಮ ಒಂಟಿತನವನ್ನು ಹೋಗಲಾಡಿಸಲು ನೆರವಾಗಬಹುದು. 

ನಿಶ್ಚಿತಾರ್ಥ ಆಗಿರುವ ಕಪಲ್ಸ್!

ವ್ಯಾಲೆಂಟೆನ್ಸ್ ಡೇಗೆ ನಿಶ್ಚಿತಾರ್ಥ ಆಗಿರುವ ಕಪಲ್ಸ್ ಒಟ್ಟಿಗೆ ಕಳೆಯಬೇಕು ಎಂದು ಪ್ಲ್ಯಾನ್ ಮಾಡಿದ್ದರೆ. ಡಿಫರೆಂಟ್ ಆಗಿ ಪ್ರೇಮಿಗಳ ದಿನ ಆಚರಿಸಬಹುದು. ನಿಮ್ಮ ನೆನಪುಗಳನ್ನು ಮತ್ತೆ ಮರುಕಳಿಸಲು ಇದು ಅತ್ಯುತ್ತಮ ಸಮಯ. ಇಬ್ಬರ ಜತೆಯಾಗಿ ಹೋರಗಡೆ ಹೋಗಬಹುದು. ಇದ್ರಿಂದ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಕೆಲವು ಸತ್ಯಗಳನ್ನು ತಿಳಿಯಲು ನಿಮಗೆ ನೆರವಾಗುತ್ತದೆ. ಇದ್ರಿಂದ ನಿಮ್ಮ ಮುಂದಿನ ವೈವಾಹಿಕ ಜೀವನ ಮತ್ತಷ್ಟು ಉತ್ತಮವಾಗಿರಲು ಸಹಾಯ ಮಾಡುತ್ತದೆ. ಇದು ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಉತ್ತಮ ಸಮಯ ಎಂದೇ ಹೇಳಬಹುದು.

ಮದುವೆಯಾದ ಕಪಲ್ಸ್..!

ಮದುವೆಯಾದ ಕಪಲ್ಸ್ ವ್ಯಾಲೆಂಟೈನ್ ದಿನವನ್ನು ವಿಭಿನ್ನವಾಗಿ ಆಚರಿಸಬಹುದು. ಇತ್ತೀಚಿನ ದಿನಗಳಲ್ಲಿ ಕಪಲ್್ಸ ಒತ್ತಡದಿಂದ ಕೆಲಸ ನಿರ್ವಹಿಸುತ್ತಾರೆ. ತುಂಬಾ ಒತ್ತಡದಲ್ಲಿದ್ದರೆ ವ್ಯಾಲೆಂಟೈನ್ಸ್ ದಿನ ನೀವು ರಿಲ್ಯಾಕ್ಸ್ ಮಾಡಿಕೊಳ್ಳಬಹುದು. ಹೊರಗಡೆ ಹೋಗಿ ದಿನ ಪೂರ್ತಿ ಕಳೆಯಬಹುದು. ಇಬ್ಬರಿಗೂ ಇಷ್ಟವೆನಿಸುವ ಕೆಲಸಗಳನ್ನು ಮಾಡಬಹುದು.ನಿಮ್ಮ ಸಂಬಂಧ ಯಾವುದೇ ಹಂತದಲ್ಲಿರಬಹುದು. ನಿಮ್ಮ ಪಾರ್ಟನರ್ ಜತೆಗೆ ಮುಕ್ತವಾಗಿ ಮಾತನಾಡಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ