ಸ್ನಾನದ ನಂತರ, ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ..!?

  • by

ಸ್ನಾನ ನಮ್ಮ ದೈನಂದಿನ ದಿನಚರಿಯ ಭಾಗವಾಗಿದೆ. ಆರೋಗ್ಯದ ಹೊರತಾಗಿ, ಅನೇಕ ಧಾರ್ಮಿಕ ಅಂಶಗಳು ನಮ್ಮ ಸಂಪರ್ಕ ಹೊಂದಿವೆ. ಧರ್ಮಗ್ರಂಥಗಳಲ್ಲಿ ಮತ್ತು ಪುರಾಣಗಳಲ್ಲಿ ಸ್ನಾನದ ನಂತರ ಅನೇಕ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಸ್ನಾನದ ನಂತರ ಯಾವು ಕೆಲಸಗಳನ್ನು ಮಾಡಬಾರದು ಈ ಲೇಖನದಲ್ಲಿ ತಿಳಿಸಲಾಗಿದೆ.


vaastu-tips-never-do-these-things-after-shower ವಾಸ್ತು ಟಿಪ್ಸ್, ಸ್ನಾನದ ನಂತರ

ಸ್ನಾನದ ನಂತರ ಹೂವುಗಳನ್ನು ಕೀಳಬೇಡಿ..!

ಹೂವುಗಳನ್ನು ಭಗವಂತನ ಮೇಲೆ ಇಡುವ ಮೊದಲೇ ಕೀಳಬೇಕು ಎಂದು ವಾಯು ಪುರಾಣಗಳಲ್ಲಿ ಹೇಳಲಾಗಿದೆ. ಸ್ನಾನದ ನಂತರ ಹೂವುಗಳನ್ನು ಕೀಳಿ ದೇವರಿಗೆ ಇಡುವುದರಿಂದ ದೇವರು ಆ ಹೂವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗೇ ಹೂಗಳನ್ನು ತೊಳೆಯುವುದನ್ನು ಸಹ ನಿಷೇಧಿಸಲಾಗಿದೆ.

ಸ್ನಾನದ ಪಾತ್ರೆಗಳನ್ನು ತೊಳೆಯಬೇಡಿ..!


ಸ್ನಾನದ ನಂತರ ಪೂಜೆ ಪಾತ್ರೆಗಳನ್ನು ಮತ್ತು ಥಾಲಿಗಳನ್ನು ಸ್ವಚ್ಛಗೊಳಿಸಬಾರದಂತೆ. ವಾಸ್ತವವಾಗಿ ದೇವರ ಪಾತ್ರೆಗಳನ್ನು ಸ್ನಾನದ ನಂತರ ಸ್ವಚ್ಛ ಮಾಡುವುದರಿಂದ ದೇಹವು ಅಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ.

ಸ್ನಾನದ ಮಾಡಿದ ನಂತರ ದೇಹಕ್ಕೆ ಎಣ್ಣೆ ಹಚ್ಚಬೇಡಿ..!

ಶಾಸ್ತ್ರದ ಪ್ರಕಾರ, ನೀವು ನಿಮ್ಮ ಶರೀರವನ್ನು ಎಣ್ಣೆಯಿಂದ ಮಸಾಜ್ ಮಾಡಲು ಬಯಸಿದರೆ, ನೀವು ಸ್ನಾನ ಮಾಡುವುದಕ್ಕಿಂತ ಮೊದಲು ಇದನ್ನು ಮಾಡಬೇಕು. ಸ್ನಾನದ ನಂತರ ದೇಹಕ್ಕೆ ಎಣ್ಣೆ ಹಚ್ಚಿಕೊಳ್ಳುವುದನ್ನು ತಪ್ಪಿಯೂ ಮಾಡಬೇಡಿ. ಯಾಕಂದರೆ
ದೇಹವನ್ನು ಮಸಾಜ್ ಮಾಡುವುದರಿಂದ ಅನೇಕ ಮಾಲಿನ್ಯಕಾರಕಗಳು ಹೊರ ಬರುತ್ತದೆ. ಹಾಗಾಗಿ ಸ್ನಾನದ ನಂತರ ಮಸಾಜ್ ಮಾಡಬಾರದು. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಸ್ನಾನದ ನಂತರ ಬಟ್ಟೆಗಳನ್ನು ಸ್ವಚ್ಛಗೊಳಿಸಬೇಡಿ

ಸ್ನಾನ ಮಾಡಿದ ನಂತರ ನಿಮ್ಮ ಬಟ್ಟೆಗಳನ್ನು ಸ್ವಚ್ಛಗೊಳಿಸಬಾರದು. ಸ್ನಾನದ ನಂತರ ನೀವು ಬಟ್ಟೆಗಳನ್ನು ಸ್ವಚ್ಛಗೊಳಿಸಿದರೆ ನಿಮ್ಮ ದೇಹವು ಅಶುದ್ಧವಾಗುತ್ತದೆ ಎಂದು ನಂಬಲಾಗಿದೆ. ನಂತರ ಪೂಜೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸ್ನಾನಕ್ಕೂ ಮುನ್ನವೇ ಬಟ್ಟೆಗಳನ್ನು ಸ್ವಚ್ಛಗೊಳಿಸಬೇಕು.

ತುಳಸಿ ಎಲೆಗಳನ್ನು ಕೀಳಬಾರದ

ಸ್ನಾನ ಮಾಡಿದ ನಂತರ ತುಳಸಿ ಎಲೆಗಳನ್ನು ಕೀಳಬಾರದು ಎಂಬ ನಂಬಿಕೆ ಇದೆ. ತುಳಸಿ ಎಲೆಗಳನ್ನು ಕೀಳುವಾಗ ದೇವರು ಕೋಪಗೊಳ್ಳುತ್ತಾನೆ ಮತ್ತು ತುಳಸಿ ಎಲೆಗಳನ್ನು ಸ್ವೀಕರಿಸುವುದಿಲ್ಲ ಎಂದು ವಾಯು ಪುರಾಣದಲ್ಲಿ ಹೇಳಲಾಗಿದೆ.

ಧರ್ಮಗ್ರಂಥಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸಮಯ ತುಂಬಾ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಸ್ನಾ ಮಾಡುವುದು ದೇವರನ್ನು ಧ್ಯಾನಿಸುವುದು, ಪೂಜಿಸುವುದು ಒಂದು ನಿಯಮವಾಗಿದ್ದರೆ, ಅದೇ ರೀತಿ ಸಂಜೆಯ ಸಮಯದಲ್ಲಿ ಕೆಲವು ಕೆಲಸಗಳು ಮಾಡುವುದನ್ನು ನಿಷೇಧಿಸಲಾಗಿದೆ. ಸಂಜೆ ಸಮಯದಲ್ಲಿ ಈ ಕೆಲಸಗಳನ್ನು ಮಾಡುವುದರಿಂದ ಆರೋಗ್ಯ, ಸಂಪತ್ತು ನಷ್ಟವಾಗಬಹುದು ಎಂದು ನಂಬಲಾಗಿದೆ.

ಸಂಜೆ ಮಲಗಬಾರದು

ಸಂಜೆ ಹೊತ್ತು ಮಲಗುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಸಂಜೆ ಸಮಯವು ದೇವರ ಧ್ಯಾನಕ್ಕಾಗಿ ಮೀಸಲಿಟ್ಟ ಸಮಯ. ಅಲ್ಲದೇ ಲಕ್ಷ್ಮೀದೇವಿ ಇದನ್ನು ಮಾಡುವುದರಿಂದ ಕೋಪಗೊಳ್ಳುತ್ತಾಳೆ. ಇದ್ರಿಂದ ಹಣ ನಷ್ಟವಾಗಬಹುದು. ಶಾರೀರಿಕ ಸಂಬಂಧವನ್ನು ಈ ಸಮಯದಲ್ಲಿ ಹೊಂದಬಾರದು ಎಂದು ಹೇಳಲಾಗುತ್ತದೆ.ಇದೇ ಸಮಯದಲ್ಲಿ ದಾನ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಈ ಸಮಯದಲ್ಲಿ ದಾನ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಗೊಳ್ಳುವಸಾಧ್ಯತೆ ಇರುತ್ತದೆ. ಇದ್ರಿಂದ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ, ಧರ್ಮಗ್ರಂಥಗಳ ಪ್ರಕಾರ, ಸಂಜೆ ಹೊತ್ತು ಮನೆ ಗುಡಿಸುವುದನ್ನು ನಿಷೇಧಿಸಲಾಗಿದೆ. ಸಂಜೆ ಹೊತ್ತು ಪೂರೆಕೆ ಹಿಡಿದು ಕಸ ಗುಡಿಸುವುದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ ಇದು ಬಡತನಕ್ಕೂ ಕಾರಣವಾಗಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ