ಯುಗಾದಿ ಹಬ್ಬ 2020.. ಹಬ್ಬದ ಮಹತ್ವ, ಇತಿಹಾಸ, ಶುಭಾಷಯಗಳು, ಸಂದೇಶಗಳು..!

  • by


ಯುಗಾದಿ ಬಂತೆದರೆ ಸಾಕು, ಎಲ್ಲೆಡೆ ಸಂಭ್ರಮ, ಸಂತೋಷ ತುಂಬಿ ತುಳುಕುತ್ತಿರುತ್ತದೆ. ಚೈತ್ರ ಮಾಸದ ವಸಂತ ಖುತು ಶುರುವಾಗುತ್ತದೆ. ಚೈತ್ರ ಮಾಸದ ಮೊದಲ ದಿನವಾದ ಇಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಯುಗಾದಿ ಎಂದರೆ ಯುಗ + ಆದಿ ಎಂದರೆ ಹೊಸ ಯುಗದ ಆರಂಭ ಎಂದು ಕರೆಯಲಾಗುತ್ತದೆ. ಯುಗವೆಂದರೆ ಸೃಷ್ಟಿಯ ಕಾಲಮಾನ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನು ಎಂದು, ಅಂದಿನಿಂದ ಗ್ರಹ, ನಕ್ಷತ್ರ, ಮಾಸ, ವರ್ಷ ಇವುಗಳನ್ನು ಏರ್ಪಡಿಸಿದನು ವ್ರತ ಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ.


ugadi-festival-2020-history-wishes-significance-festival-ಯುಗಾದಿ ಹಬ್ಬ, ಸಂದೇಶಗಳು, ಹಬ್ಬದ ಮಹತ್ವ, ಇತಿಹಾಸ, ಮೆಸೇಜ್

ಈ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಧರ್ಮಗ್ರಂಥಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ರಾಮನ ಪಟ್ಟಾಭಿಷೇಕ ಈ ಸುವರ್ಣಯುಗವು ಈ ದಿನದಿಂದ ಪ್ರಾರಂಭವಾಯಿತು. ಆದ್ದರಿಂದ ಈ ದಿನವನ್ನು ಮಹತ್ವದ ದಿನವನ್ನಾಗಿ ಪರಿಗಣಿಸಲಾಗಿದೆ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ ಎಂದು ಹೇಳಲಾಗುತ್ತದೆ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.

ಶ್ರೀ. ರಾಮ್ ನ ಕಿರೀಟಧಾರಣೆ

ಇದೇ ವರ್ಷ ಅಂದ್ರೆ ಮಾರ್ಚ್ 25 ರಂದು ಉಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಶಾಸ್ರ್ತ ಗ್ರಂಥಗಳಲ್ಲಿ ಯುಗಾದಿಯ ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೇ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪ್ಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ. ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.


ugadi-festival-2020-history-wishes-significance-festival-ಯುಗಾದಿ ಹಬ್ಬ, ಸಂದೇಶಗಳು, ಹಬ್ಬದ ಮಹತ್ವ, ಇತಿಹಾಸ, ಮೆಸೇಜ್

ಯುಗಾದಿಯ ಇತಿಹಾಸ

ದಕ್ಷಿಣ ಭಾರತದಲ್ಲಿ ಆಳಿದ ಶಾಲಿವಾಹನ ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನರೂಢನಾದನೆಂದು, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತು ಎಂದು ಹೇಳಲಾಗುತ್ತದೆ. ವರಾಹಮಿಹಿರಾಚಾರ್ಯನು ವರ್ಷಾರಂಭವನ್ನು ಚೈತ್ರ ಮಾಸವೆಂದು ಹೇಳಿದನು. ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ, ಶುಭ ದಿನ ಅತ್ಯಂತ ಶುಭ ಮೂಹೂರ್ತದ ಮೂರುವರೆ ದಿನಗಳೆಂದರೆ, ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತದಿಗೆ. ಅದರಲ್ಲೂ ಯುಗಾದಿ ಅತಿ ಶ್ರೇಷ್ಠ ಮೂಹೂರ್ಥ ಎಂದು ಭಾರತೀಯರು ನಂಬುತ್ತಾರೆ. ಯಾವುದಾದರೂ ಮಂಗಳ ಕಾರ್ಯ ಮಾಡಲು ಯೋಗ್ಯ ದಿನ ಎಂದು ಹೇಳಲಾಗುತ್ತದೆ.


ಎಲ್ಲೆಲ್ಲಿ ಹಬ್ಬ ಆಚರಣೆ..?

ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ, ಗುಜರಾತ್ , ಕೇರಳ ದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಯುಗಾದಿ ಹಾಗೂ ಮಹಾರಾಷ್ಟ್ರದಲ್ಲಿ ಗುಢಿಪಾಡವಾ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹೊಸ ವರ್ಷದ ಹಬ್ಬವೆಂದು , ಉತ್ತರ ಭಾರತದಲ್ಲಿ ಬೈಸಾಖಿ ಎಂದು ಆಚರಿಸಲಾಗುತ್ತದೆ.

ugadi-festival-2020-history-wishes-significance-festival-ಯುಗಾದಿ ಹಬ್ಬ, ಸಂದೇಶಗಳು, ಹಬ್ಬದ ಮಹತ್ವ, ಇತಿಹಾಸ, ಮೆಸೇಜ್

ಯುಗಾದಿ ಹಬ್ಬ ಆಚರಣೆ ಹೇಗೆ ಮಾಡಲಾಗುತ್ತದೆ…?

ಯುಗಾದಿ ಹಬ್ಬದಂದು ಮುಂಜಾನೆ ಸ್ನಾನ ಕಾರ್ಯಗಳು ಮುಗಿದ ಬಳಿಕ, ಹೊಸ ಬಟ್ಟೆ ಧರಿಸಿ, ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ. ಬೇವು- ಬೆಲ್ಲ, ಸುಖ-ದುಃಖದ ಸಂಕೇತ . ಮನುಷ್ಯನ ಜೀವನದಲ್ಲಿ ಸುಖ- ದುಃಖ್ಯಗಳು ಅವಿಭಾಜ್ಯ ಅಂಗಗಳು ಇದ್ದಂತೆ. ಎರಡನ್ನೂ ಸಮ ದೃಷ್ಟಿಯಿಂದ ಸವಿಯುವದೇ ಯುಗಾದಿ ಹಬ್ಬದ ದಿನವಂದು ಬೇವು- ಬೆಲ್ಲ ತಿನ್ನಿಸುವವರು. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನು ಸಮನಾಗಿ ಸ್ವೀಕರಿಸುವವರು, ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ, ಬೇವು ಆ ಉರಿಯ ಶಮನಕಾರಿ.

ಈ ದಿನ ಪಂಚಾಂಗ ಕೇಳುವುದರಿಂದ ಮನುಷ್ಯನ ಆಯುಷ್ಯ ಹೆಚ್ಚಾಗುತ್ತದೆ. ರೋಗ- ಪಾಪಗಳು ನಾಶವಾಗಿ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಸೀಗುತ್ತದೆ ಎಂದು ಹೇಳಲಾಗುತ್ತದೆ.

ಯುಗಾದಿಯ ಶುಭಾಷಯಗಳು.. ಸಂದೇಶಗಳು..!

  1. ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕೆ-ಹೊಸವರುಷವ ಹೊಸತು ಹೊಸತು ತರುತ್ತಿದೆ’.- ದ. ರಾ ಬೇಂದ್ರೆ

2. ‘ಕಂಡ ಕನಸುಗಳೆನೆಲ್ಲಾ ಹೊಸ ವರ್ಷದ ಬೆಳಕಿನ ಸಿಂಚನದಲ್ಲಿ ಚಿಗುರಿ ಸಮೃದ್ಧವಾಗಿ ಬೆಳೆದು ನನಸಾಗಲಿ’

3. ‘ಮರಳಿ ಬಂದಿದೆ ಯುಗಾದಿ. ತಂದಿದೆ ಹೊಸ ವರುಷದ ಆದಿ, ತೋರಲಿ ಹೊಸ ವರುಷಕ್ಕೆ ಹಾದಿ.. ನೀಡಲಿ ನಮ್ಮೆಲ್ಲರ ಬಾಳಿಗೂ ಭದ್ರ ಬುನಾದಿ. ಯುಗಾದಿ ಹಬ್ಬದ ಶುಭಾಷಯಗಳು’

4. ‘ಹೊಸ ವರುಷ, ನೂತನ ಸಂವತ್ಸರದ ಹೊಸ ದಿನ, ಹೊಸ ಕನಸುಗಳೆಲ್ಲಾ ಹೊಸೆದುಕೊಳ್ಳಲಿ, ಕನಸುಗಳು ನನಸಾಗಲು ಶ್ರೀ ಶಾರ್ವರಿ ಸಂವತ್ಸರ ನಿಮಗೆ ಸಕಲ ಶಕ್ತಿ, ಸಾಮರ್ಥ್ಯ ಕಲ್ಪಿಸಲಿ..’

5. ‘ನಿಮ್ಮ ಸುತ್ತಲಿನ ಕತ್ತಲು ಬೆಳಕಾಗಲಿ. ಈ ಯುಗಾದಿ ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ ತರಲಿ..’

6. ‘ಹಸಿರಾಗಲಿ ನಿಮ್ಮೆಲ್ಲರ ಬಾಳು, ಯುಗಾದಿಯ ಸಂಭ್ರಮದಲ್ಲಿ ನೋವೆಲ್ಲಾ ದೂರವಾಗಿ, ಸಂತೋಷದ ಕಾರಂಜಿ ಹೊಮ್ಮಲಿ’- ಯುಗಾದಿ ಹಬ್ಬದ ಶುಭಾಷಯಗಳು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ