ತೂಕ ನಷ್ಟಕ್ಕೆ ತುಳಸಿ ನೀರು

  • by

ಎಲ್ಲರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಮನೆಯಲ್ಲೂ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಪವಿತ್ರವಾದ ಸಸ್ಯ. ಆದ್ರೆ ತುಳಸಿ ಆರೋಗ್ಯಕ್ಕೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಅದು ಹೇಗೆ.. ?

ತುಳಸಿ ಚಹಾ ಸುಸಾಹನೆ ಭರಿತವಾದದ್ದು.. ತುಳಸಿಯ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದನ್ನು ಸಾಮಾನ್ಯವಾಗಿ ಆಯುರ್ವೇದದ ಸುವರ್ಣ ಪರಿಹಾರ ಅಂತಲೇ ಕರೆಯಲಾಗುತ್ತದೆ. ಪ್ರತಿ ದಿನ ತುಳಸಿ ನೀರನ್ನು ಸೇವಿಸುವುದರಿಂದ ಇದು ನಿಮ್ಮ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅಂತಹ ಆರೋಗ್ಯ ಪ್ರಯೋಜನಗಳನ್ನು ನಾವು ನಿಮಗೆ ತಿಳಿಸುತ್ತೇವೆ. 


Tulsi Water, health benefits, 
ತುಳಸಿ ನೀರು, ಆರೋಗ್ಯ ಪ್ರಯೋಜನಗಳು

ದೇಹದ ವಿಷವನ್ನು ಹೊರಹಾಕುತ್ತದೆ

ಮುಖ್ಯವಾಗಿ ತುಳಸಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಂಡಿದೆ. ಬೆಳಿಗ್ಗೆ ತುಳಸಿ ನೀರು ಸೇವನೆಯಿಂದ ಅಜೀರ್ಣ ಸಮಸ್ಯೆ ಹಾಗೂ ತೀರ್ಣಕಾರಿ ಕಾಯಿಲೆಗಳಿಂದ ದೂರವಿರಬಹುದು. ನಿಮ್ಮ ಹೊಟ್ಟೆಯನ್ನು ನೈಸರ್ಗಿಕವಾಗಿ ತುಳಸಿ ನೀರು ಸ್ವಚ್ಛಗೊಳಿಸುತ್ತದೆ. ತುಳಸಿಯಲ್ಲಿ ರುವ ಉತ್ಕರ್ಷಣ ನಿರೋಧಕನ್ನು ಹೊಂದಿದ್ದು, ಇದು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ನಿಮ್ಮ ದೇಹದ ಕಾರ್ಯಚಟುವಟಿಕೆಯನ್ನು ಸಕ್ರೀಯವಾಗಿಡಲು ಸಹಾಯ ಮಾಡುತ್ತದೆ. 

ದೀರ್ಘಕಾಲದ ಸಮಸ್ಯೆ ಹಾಗೂ ಎದೆಉರಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. 

ತುಳಸಿ ನೀರು ಆಂಟಿಟಸ್ಸಿವ್ ಗುಣ ಲಕ್ಷಣಗಳನ್ನು ಹೊಂದಿದೆ. ಇದು ಕಫವನ್ನು ತೊಡೆದುಹಾಕಲು ಮತ್ತು ಕೆಮ್ಮನ್ನು ನಿವಾರಿಸಲು ದೂರ ವಿಡುತ್ತದೆ. ಇದ್ರಿಂದಾಗಿ ದೀರ್ಘಕಾಲದ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ತುಳಸಿ ನೀರಿನಲ್ಲಿ ಹಲವಾರು ಅಲರ್ಜಿ ಮತ್ತು ಉರಿಯೂತ ನಿವಾರಣೆ ಮಾಡುವ ಗುಣಲಕ್ಷಣಗಳಿವೆ. ಇದು ಶೀತ ಮತ್ತು ಎದೆಉರಿ ಸಂಬಂಧಿತ ಸೋಂಕುಗಳನ್ನು ತಡೆಗಟ್ಟುತ್ತದೆ. 

Tulsi Water, health benefits, 
ತುಳಸಿ ನೀರು, ಆರೋಗ್ಯ ಪ್ರಯೋಜನಗಳು

ಒತ್ತಡ ನಿವಾರಣೆಗೆ 

ತುಳಸಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡ ಸಂಬಂಧಿತ ಕಾಯಿಲೆಗಳು ದೂರವಾಗುತ್ತದೆ. ಮೆದುಳಿನ ಕಾರ್ಯವನ್ನು ಉತ್ತಮಗೊಳಿಸಲು ತುಳಸಿ ನೀರು ಸಹಕಾರಿಯಾಗಿದೆ. ಏಕೆಂದರೆ ತುಳಸಿ ದೇಹದಲ್ಲಿನ ಚಯಾಪಚಯ ಒತ್ತಡದ ಮಟ್ಟವನ್ನು ಎದುರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಹಾಗೂ ಒತ್ತಡವನ್ನು ನಿವಾರಿಸುವ ಶಕ್ತಿ ಹೊಂದಿದೆ. ಜ್ಞಾಪಕ ಶಕ್ತಿ ಹೆಚ್ಚಿಸಿ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದ್ರಿಂದ ಒತ್ತಡ ನಿವಾರಣೆಯಾಗುತ್ತದೆ. ಸಂತೋಷದಾಯಕವಾಗಿರುವ ಮಿದುಳು ನಿಮ್ಮನ್ನು ದೀರ್ಘಕಾಲ ಬದಕುವಂತೆ ಮಾಡಲು ಸಾಧ್ಯವಾಗುತ್ತದೆ. 

ತೂಕ ನಷ್ಟಕ್ಕೆ ಸಹಾಯ

ಪ್ರತಿ ದಿನ ತುಳಸಿ ನೀರನ್ನು ಸೇವಿಸುವುದರಿಂದ ಮ್ತತೊಂದು ಪ್ರಯೋಜನವಿದೆ. ಈ ಪಾನೀಯ ನಿಮ್ಮ  ಚಯಾಪಚಯಕ್ರಿಯೆಯನ್ನು ಹೆಚ್ಚಿಸುತ್ತದೆ. ತುಳಸಿ ಎಲೆಯಲ್ಲಿ ನೈಸರ್ಗಿಕ ರಾಸಾಯನಿಕಗಳಿದ್ದು, ಇದು ದೇಹದ ಕೊಬ್ಬನ್ನು ಬರ್ನ ಮಾಡಲು ಸಹಾಯ ಮಾಡುತ್ತದೆ. ಪಾನೀಯಾವನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಥೂಲಕಾಯತೆ ಉಂಟಾಗುವುದಿಲ್ಲ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. 

ಹೀಗೆ ತುಳಸಿ ನೀರು ಅದ್ಧುತ ಪ್ರಯೋಜನಗಳನ್ನ ಹೊಂದಿದ್ದು, ಈಗಿನಿಂದಲೇ ಈ ಪಾನೀಯವನ್ನು ಸೇವಿಸಬಹುದು. 

ತುಳಸಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಪರಿಸರ ಮಾಲಿನ್ಯವನ್ನು ತಡೆಯುತ್ತದೆ. ಮನೆಯ ಮುಂದೆ ತುಳಸಿ ಗಿಡವಿದ್ರೆ ಅದು ಮಾಲಿನ್ಯವನ್ನು ಶೇ ೩೦ ರಷ್ಟು ಕಡಿಮೆ ಮಾಡುತ್ತದೆ. ಹಾಗಾಗಿ ಮನೆ ಮುಂದೆ ತುಳಸಿ ಗಿಡವಿರುವಂತೆ ನೋಡಿಕೊಳ್ಳಿ. ಜತೆಗೆ ತುಳಸಿಯ ರಸವನ್ನು ಸೇವಿಸಿ. 

ತುಳಸಿ ನಿಯಮಿತವಾಗಿ ಸೇವನೆ ಮಾಡೋದ್ರಿಂದ ರಕ್ತ ಶುದ್ಧೀಯಾಗುತ್ತದೆ. ಚರ್ಮ ಹೊಳಪು ಪಡೆಯುತ್ತದೆ. ಮಧುಮೇಹಿಗಳು ತುಳಸಿ ಎಲೆಯನ್ನು ಜಗಿಯುತ್ತಿದ್ದರೆ ಒಳ್ಳೆಯದು. ಮೈಗ್ರೇನ್ ಸಮಸ್ಯೆ ಇರುವವವರು ತುಳಸಿ ಎಲೆಯನ್ನು ಜಗಿದು ತಿನ್ನಿ. 


Tulsi Water, health benefits, 
ತುಳಸಿ ನೀರು, ಆರೋಗ್ಯ ಪ್ರಯೋಜನಗಳು

ಔಷಧಿಯ ಆಗರ ತುಳಸಿ

ತುಳಸಿಯಲ್ಲಿ ಸಾಕಷ್ಟು ಆರೋಗ್ಯ ಸಂಬಂಧಿತ ಔಷಧೀಯ ಗುಣಗಳಿವೆ. 

ತುಳಸಿ ನೀರನ್ನು ಹಾಗೂ ತುಳಸಿ ಎಲೆಗಳನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಕಿಡ್ನಿ ಸ್ಟೋನ್ , ಹೃದಯ ಸಂಬಂಧಿ ಕಾಯಿಲೆ ಹಾಗೂ ಮಧುಮೇಹ ತಡೆಯಲು ಇದು ಸಹಕಾರಿಯಾಗಿದೆ. 

ತುಳಸಿಯಲ್ಲಿ ಓಲಿಯೋನಿಕ್ ಆಸಿಡ್ ಯಕೃತ ರಕ್ಷಕ.. ಗಂತಿರೋಧಕ ಹಾಗೂ ವೈರಸ್ ರೋಧಕ ಗುಣಗಳನ್ನು ಹೊಂದಿದೆ. ರೋಸ್ಮೆರಿನಿಕ್ ಆಮ್ಲವು ಆತಂಕವಲಯ ಕಾರಕ ಗುಣಗಳ್ಳದ್ದು, ಕಾರ್ವಕ್ರಾಲ್ ಬ್ಯಾಕ್ಟೇರಿಯಾ ನಾಶಕ.

ಇದು ಆಯಸ್ಸನ್ನು ಹೆಚ್ಚಿಸುವ ಸಂಜೀವಿನಿಯಂತೆ. ಹೀಗಾಗಿ ಪ್ರತಿ ದಿನ ತೀರ್ಥದ ರೂಪದಲ್ಲಾದರೂ ತುಳಸಿಯ ಅಂಶ ದೇಹಕ್ಕೆ ಹೋಗಲಿ ಎಂದು ತೀರ್ಥದಲ್ಲಿ ತುಳಸಿ ಕಡ್ಡಾಯವಾಗಿ ಹಾಕಲಾಗುತ್ತದೆ. 

ಸಣ್ಣಪುಟ್ಟ ಜ್ವರ , ಫಂಗಸ್ ಹಾಗೂ ಬ್ಯಾಕ್ಟೇರಿಯಾಕ್ಕೆ ಸಂಬಂಧಿಸಿದ ಸೋಂಕುಗಳನ್ನು ಹಾಗೂ ಕೆಮ್ಮನ್ನು ನಿವಾರಿಸುವ ಶಕ್ತಿ ಹೊಂದಿದೆ. 

ತಯಾರಿಸುವುದು ಹೇಗೆ?

ಒಂದು ಬಾಣಲೆಯಲ್ಲಿ 2 ಕಪ್ ನೀರನ್ನು ಕುದಿಸಿ ಮತ್ತು ಇದಕ್ಕೆ ಕೆಲವು ತುಳಸಿ ಎಲೆಗಳನ್ನು ಸೇರಿಸಿ. ಈ ಮಿಶ್ರಣವನ್ನು 3-4 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಬೇಕು. ನಂತರ ಒಲೆ ಆಫ್ ಮಾಡಿ, ಪಾನೀಯವನ್ನು ಒಂದು ಗ್ಲಾಸ್ ಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ನಿಮ್ಮ ಇಷ್ಟಕ್ಕನುಸೂರವಾಗಿ ಪಾನೀಯವನ್ನು ಬೆಚ್ಚಗೆ ಅಥವಾ ತಂಪಾಗಿರಿಸಿಕೊಳ್ಳಬಹುದು.ತುಳಸಿ ಎಲೆಗಳನ್ನು ಪುಡಿ ರೂಪದಲ್ಲಿ ಅಥವಾ ಟ್ಯಾಬ್ಲೆಟ್ ಗಳಲ್ಲಿ  ಆಯ್ಕೆ ಮಾಡಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ