ಟಾಪ್-5 ಕೋಲ್ಡ್ ಕ್ರೀಂ ಗಳು

  • by

ಚಳಿಗಾಲಕ್ಕೆ ಬೆಸ್ಟ್ ಕೋಲ್ಡ್ ಕ್ರೀಮ್
ಚಳಿಗಾಲದಲ್ಲಿ ವಾತಾವರಣ ತಂಪಾಗಿರುತ್ತದೆ ಮತ್ತು ಬೀಸುವ ಗಾಳಿಯಲ್ಲಿ ಒಣ ಅಂಶ ಇರುತ್ತದೆ. ಈ
ಸಮಯದಲ್ಲಿ ನಿಮ್ಮ ತ್ವಚೆಯ ಕುರಿತು ನೀವು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮುಖದ
ಭಾಗವು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿಯನ್ನು ನೀವು
ಒದಗಿಸಬೇಕು. ಚಳಿಗಾಲದಲ್ಲಿ ಮಾಯಿಶ್ಚರೈಸರ್ ಮತ್ತು ನೈಸರ್ಗಿಕ ಎಣ್ಣೆಯ ನಷ್ಟವುಂಟಾಗುತ್ತದೆ.
ಮಾಯಿಶ್ಚರೈಸರ್ ಅನ್ನು ಲಾಕ್ ಮಾಡಲು ನೀವು ಒಳ್ಳೆಯ ಗುಣಮಟ್ಟದ ಫೇಸ್ ಮಾಯಿಶ್ಚರೈಸರ್
ಅನ್ನು ಬಳಸಬೇಕು. ಇಲ್ಲದಿದ್ದರೆ ಈ ಸಮಯದಲ್ಲಿ ಕೋಲ್ಡ್ ಕ್ರೀಮ್ ನಿಮ್ಮ ಬೆಸ್ಟ್ ಸಂಗಾತಿಯಾಗಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಅತ್ಯುತ್ತಮ ಕೋಲ್ಡ್ ಕ್ರೀಮ್‌ಗಳು ಯಾವುವು ಮತ್ತು ಚಳಿಗಾಲದಲ್ಲಿ
ತ್ವಚೆಯ ಕಾಳಜಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ

ಜೊವೀಸ್ ಹಿಮಾಲಯನ್ ಚೆರಿ ಕೋಲ್ಡ್ ಕ್ರೀಮ್:
ಹಿಮಾಲಯನ್ ಚೆರಿ, ಜರ್ಮ್ ಆಯಿಲ್, ಅಲೊವೇರಾ, ಆಲೀವ್ ಆಯಿಲ್, ಬಾದಾಮಿ, ಕ್ಯಾರೆಂಟ್ ಸಾರ,
ವಿಟಮಿನ್ ಎ ಮತ್ತು ಇ ಕ್ರೀಮ್‌ನಲ್ಲಿದೆ. ಇದು ನಿಮ್ಮ ಒಣತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ
ಮತ್ತು ತ್ವಚೆಗೆ ಬೇಕದ ಪೋಷಣೆಯನ್ನು ಕೂಡ ಮಾಡುತ್ತದೆ.

ವಿಎಲ್‌ಸಿಸಿ ಲಿಕೊರೈಸ್ ಕೋಲ್ಡ್ ಕ್ರೀಮ್
ಈ ಸುವಾಸನೆಯುಕ್ತ ಕೋಲ್ಡ್ ಕ್ರೀಮ್ ನಿಮ್ಮ ಒಣ ಮತ್ತು ನಿಸ್ತೇಜ ತ್ವಚೆಗೆ ಮರಳಿ ಕಾಂತಿಯನ್ನು
ಚೈತನ್ಯವನ್ನುಂಟು ಮಾಡುತ್ತದೆ. ಇದರಲ್ಲಿ ವಿಟಮಿನ್ ಇ, ಕೇಸರಿ, ದ್ರಾಕ್ಷಿ ಬೀಜದ ಸಾರಗಳು, ಗುಲಾಬಿ
ದಳಗಳು ಇವೆ. ಗುಲಾಬಿ ದಳ ಮತ್ತು ಕೇಸರಿ ಸಾರವು ತ್ವಚೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ಇದು ಎಸ್‌ಎಪಿಎಫ್ 10 ಅನ್ನು ಹೊಂದಿದೆ.

ಗಾರ್ನಿಯರ್ ಸ್ಕಿನ್ ನ್ಯಾಚುರಲ್ಸ್ ನರಿಶಿಂಗ್ ಕೋಲ್ಡ್ ಕ್ರೀಮ್
ಈ ಅದ್ಭುತ ಕ್ರೀಮ್‌ನಲ್ಲಿ ಅಡಗಿರುವ ತ್ವಚೆಯನ್ನು ಸಂರಕ್ಷಿಸುವ ಅಂಶಗಳಿಂದ ಈ ಚಳಿಗಾಲದ
ತೊಡಕುಗಳನ್ನು ನಿವಾರಿಸಿ. ಇದರಲ್ಲಿ ಜೇನು, ಅಕೇಶಿಯಾ ಅಂಶಗಳಿದ್ದು ಇದು ನಿಮ್ಮ ತ್ವಚೆಯನ್ನು
ಮಾಯಿಶ್ಚರೈಸ್ ಮಾಡುತ್ತದೆ.

ಪಾಂಡ್ಸ್ ಮಾಯಿಶ್ಚರೈಸಿಂಗ್ ಕೋಲ್ಡ್ ಕ್ರೀಮ್
ಈ ಮಾಯಿಶ್ಚರೈಸಿಂಗ್ ಕೋಲ್ಡ್ ಕ್ರೀಮ್ ಚಳಿಗಾಲದ ಸಮಸ್ಯೆಗಳಿಂದ ನಿಮ್ಮ ತ್ವಚೆಯನ್ನು
ಸಂರಕ್ಷಿಸುತ್ತದೆ. ಸಿಲಿಕಾನ್, ಗ್ಲಿಸರಿನ್, ಲಿಪಿಡ್ಸ್ ಮತ್ತು ಹಾಲಿನ ಅಂಶಗಳಿದ್ದು ಇದು ನಿಮ್ಮ ಒಣ ತ್ವಚೆಗೆ
ಸೂಕ್ತ ಪೋಷಣೆಯನ್ನು ಒದಗಿಸುತ್ತದೆ

ನಿವಿಯಾ ಕೋಲ್ಡ್ ಕ್ರೀಮ್
ಇದು ನಿಮ್ಮ ಒಣ ತ್ವಚೆಗೆ ಉತ್ತಮವಾದ ಪೋಷಕಾಂಶವನ್ನು ನೀಡಿ ಚಳಿಗಾಲದಲ್ಲಿ ತ್ವಚೆಯನ್ನು
ಸಂರಕ್ಷಿಸುತ್ತದೆ. ಇದು ತ್ವಚೆಗೆ ಮೃದುವಾದ ಅಂಶವನ್ನು ಒದಗಿಸುತ್ತದೆ ಮತ್ತು ತ್ವಚೆಗೆ ಆರೋಗ್ಯವನ್ನು
ಒದಗಿಸುತ್ತದೆ. ಅಲ್ಲದೆ ಅಲರ್ಜಿಗಳಿಂದ ತ್ವಚೆಯನ್ನು ಸಂರಕ್ಷಣೆ ಮಾಡುತ್ತದೆ.

ಲೇಕ್ಮಿ ಸ್ಕಿನ್ ಗ್ಲೋಸ್ ವಿಂಟರ್ ಕ್ರೀಮ್
ಲೇಕ್ಮಿಯವರ ಈ ಅತ್ಯದ್ಭುತ ಕ್ರೀಮ್ ತ್ವಚೆಗೆ ಪರಿಪೂರ್ಣ ಕಾಂತಿಯನ್ನು ಒದಗಿಸುತ್ತದೆ ಮತ್ತು
ಹೊಳಪನ್ನು ನೀಡುತ್ತದೆ. ಒಣ ತ್ವಚೆಯನ್ನು ರಿಪೇರಿ ಮಾಡುವ ಅಂಶವನ್ನು ಲೇಕ್ಮಿ ಕ್ರೀಮ್ ಒಳಗೊಂಡಿದೆ.

ಇದರ ಜೊತೆಗೆ ಕೆಲವೊಂದು ಮನೆಮದ್ದುಗಳ ಪ್ರಯೋಜನವನ್ನು ಪಡೆದುಕೊಂಡು ಚಳಿಗಾಲದಲ್ಲಿ
ತ್ವಚೆಯ ಸಂರಕ್ಷಣೆಯನ್ನು ಪಡೆದುಕೊಳ್ಳಿ. ಹಾಲಿನ ಪುಡಿಯ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಅಪ್ಲೈ
ಮಾಡುವುದು ಚಳಿಗಾಲದಲ್ಲಿ ಉತ್ತಮ ಪರಿಹಾರ ಎಂದೆನಿಸಿದೆ. ಎರಡು ಟೇಬಲ್ ಚಮಚಗಳಷ್ಟು ಹಾಲಿನ
ಪುಡಿ, ಎರಡು ಟೇಬಲ್ ಚಮಚಗಳಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು
ಬಾದಾಮಿ ಪುಡಿಗಳನ್ನು ಮಿಶ್ರಗೊಳಿಸಿರಿ. ಈಗ ಒ೦ದು ಟೇಬಲ್ ಚಮಚದಷ್ಟು ಹಾಲಿನ ಕೆನೆ ಹಾಗೂ
ಒ೦ದು ಟೇಬಲ್ ಚಮಚದಷ್ಟು ಲಿ೦ಬೆಯ ರಸಗಳನ್ನು ಈ ಮಿಶ್ರಣಕ್ಕೆ ಸೇರಿಸಿರಿ ಹಾಗೂ ಜೊತೆಗೆ ಕೆಲವು
ಹನಿಗಳಷ್ಟು ಪನ್ನೀರು ಹಾಗೂ ಆಲಿವ್ ಎಣ್ಣೆಯನ್ನೂ ಸೇರಿಸಿರಿ. ಈ ಮಿಶ್ರಣವನ್ನು ಒ೦ದು ಪೇಸ್ಟ್‌ನ
ರೂಪಕ್ಕೆ ತ೦ದು, ಅದನ್ನು ನಿಮ್ಮ ಮುಖ ಹಾಗೂ ನಿಮ್ಮ ಮೈಮೇಲೆಲ್ಲಾ ಹದವಾದ ಮಾಲೀಸಿನೊ೦ದಿಗೆ
ಲೇಪಿಸಿಕೊಳ್ಳಿರಿ. ಈ ಪ್ಯಾಕ್ ಅನ್ನು ಮೈಮೇಲೆ ಹಾಗೆಯೇ ಕೆಲಕಾಲ ಒಣಗಲು ಬಿಡಿರಿ ಹಾಗೂ ತದನ೦ತರ
ಉಗುರುಬೆಚ್ಚಗಿನ ನೀರಿನಿ೦ದ ಅದನ್ನು ತೊಳೆದು ತೆಗೆಯಿರಿ.

ಬಾಳೆಹಣ್ಣಿನ ಫೇಸ್ ಪ್ಯಾಕ್ ಕೂಡ ಚಳಿಗಾಲಕ್ಕೆ ಅತ್ಯಂತ ಸೂಕ್ತವಾಗಿದೆ. ಕಳಿದ ಬಾಳೆಹಣ್ಣನ್ನು
ತೆಗೆದುಕೊಂಡು ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ. ನಂತರ ಒಂಟು ಚಮಚ ಜೇನು ಬೆರೆಸಿ. ಈ

ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು
ಆರೋಗ್ಯಕಾರಿಯನ್ನಾಗಿಸುತ್ತದೆ ಮತ್ತು ಕಾಂತಿಯುಕ್ತವಾಗಿ ಹೊಳೆಯುವಂತೆ ಮಾಡುತ್ತದೆ.

ತುಟಿಗಳು ಒಡೆದಿದ್ದಲ್ಲಿ ಶುಂಠಿ ಸ್ಕ್ರಬ್ ಅನ್ನು ಬಳಸಿ. ಶುಂಠಿ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ
ಮಾಡಿ. ಇದಕ್ಕೆ ಕಂದು ಸಕ್ಕರೆ ಸೇರಿಸಿ ಮತ್ತು ಜೇನು ತುಪ್ಪ ಬೆರೆಸಿ. ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿ.
ವೃತ್ತಾಕಾರವಾಗಿ ಈ ಮಿಶ್ರಣವನ್ನು ತುಟಿಗೆ ಹಚ್ಚಿಕೊಳ್ಳಿ.

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಬಿಟ್ಟಿದ್ದರೆ ಬೇವಿನ ಅಲೆಗಳನ್ನು ಎರೆದು ಲೇಪನ ಮಾಡಿಕೊಳ್ಳಿ.
ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು
ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ
ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ
ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ
ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರವಾಗಿ
ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ
ಮಾತ್ರ ಉಪಯೋಗಿಸಿದರೆ ಸಾಕು.

ಲೋಳೆಸರದ ರಸವನ್ನು ಮುಖಕ್ಕೆ ಹಚ್ಚಿ ಕೆಲವು ನಿಮಿಷ ಹಾಗೆ ಬಿಡಿ. ಅನಂತರ ಗುರು ಬೆಚ್ಚಗಿನ ನೀರಿನಿಂದ
ಮುಖ ತೊಳೆಯಿರಿ.

ಸ್ನಾನ ಮಾಡುವ ನೀರಿಗೆ ಕರಿ ಬೇವಿನ ಎಲೆಯನ್ನು ಹಾಕಿಕೊಂಡು ಸ್ನಾನ ಮಾಡಿ. ಇದರಿಂದ ತುರಕೆಯಂಥ
ಅಲರ್ಜಿ ಸಮಸ್ಯೆಗಳಿಂದ ದೂರವಾಗಬಹುದು. ಕ್ಯಾರೆಟ್‌ನಲ್ಲಿ ವಿಟಮಿನ್ ಎ ಹೇರಳವಾಗಿದ್ದು ಇದು
ಕಣ್ಣಿನ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. 2-3 ಸ್ಪೂನ್ ಮಿಲ್ಕ್ ಕ್ರೀಮ್ ಅನ್ನು ಕ್ಯಾರೆಟ್
ರಸದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿ. ಕೆಲವು ನಿಮಿಷದ ನಂತರ ಮುಖ ತೊಳೆಯಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ