ಸುಸ್ತು ಅನಿಸ್ತಿದ್ದೇಯಾ..? ಈ ಕಾರಣಗಳು ಇರಬಹುದು..!

  • by

ಆಯಾಸ ಹಾಗೂ ಸುಸ್ತು ಸಾಮಾನ್ಯವಾಗಿ ವಿವರಿಸುವುದು ರೋಗಿಗೆ ಕಷ್ಟವಾಗಬಹುದು. ಇದು ದಣಿವು, ಆಲಸ್ಯ ಹಾಗೂ ಬಳಲಿಕೆಯ ಭಾವನೆಗಳಿಂದ ನಿರೂಪಿಸಬಹುದು. ಕೆಲಮೊಮ್ಮೆ ಆಯಾಸ , ನಿದ್ರಾಹೀನತೆ, ಥೈರಾಯ್ಡ್ ಕಾಯಿಲೆ ಮತ್ತು ಮಧುಮೇಹ ಮತ್ತು ರಕ್ತಹೀನತೆಯಂತಹ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಅಲ್ಲದೇ, ಆಯಾಸವು ಕೆಲವೊಮ್ಮೆ ದೀರ್ಘಕಾಲದ ಸಿಂಡ್ರೋಮಾಗೆ ಕಾರಣವಾಗಬಹುದು. ಆಯಾಸವು ಒಂದು ರೋಗವಲ್ಲ. ಇದು ಒಂದು ಲಕ್ಷಣ ಎಂದು ಹೇಳಬಹುದು. ಈ ಲಕ್ಷಣ ಮಾನಸಿಕ ಹಾಗೂ ದೈಹಿಕವಾಗಿರಬಹುದು. ನೀವು ದಿನವಿಡೀ ದೈಹಿಕ ಶ್ರಮದಿಂದ ದೂರವಿರಲು ಪ್ರಾರಂಭಿಸುತ್ತಿದ್ದರೆ.


Tiredness, Causes, Treatment, ಸುಸ್ತು, ಕಾರಣಗಳು. ಚಿಕಿತ್ಸೆ

ಸುಸ್ತು ಸಮಸ್ಯೆಯ ಲಕ್ಷಣಗಳು

ಚಟುವಿಟೆಕೆಯನ್ನು ಆರಂಭಿಸಲು ಪ್ರೇರಣೆಯ ಕೊರತೆ
ಚಟುವಟಿಕೆ ಆರಂಭವಾದ ನಂತರ ತುಂಬಾ ದಣಿವು ಉಂಟಾಗುವುದು
ವೈಯಕ್ತಿಕ ಅನುಭವಗಳು , ಏಕಾಗ್ರತೆಗೆ ಅಡ್ಡಿ ಉಂಟು ಮಾಡಬಹುದು
ವಿಟಮಿನ್ ಡಿ, ವಿಟಮಿನ್ ಬಿ 12 , ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಕೆಲವು ಕೊರತೆಯೇ ಆಯಾಸಕ್ಕೆ ಕಾರಣವಾಗಬಹುದು.
ಮಾನಸಿಕ ಆರೋಗ್ಯವು ಕೆಲವೊಮ್ಮೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂದರೆ ದುಃಖ, ಅಲ್ಕೋಹಾಲ್ ಅಧಿಕ ಸೇವನೆ , ಖಿನ್ನತೆ ಆಯಾಸಕ್ಕೆ ಕಾರಣ ಎನ್ನಲಾಗುತ್ತದೆ.
ಇತರ ಸಮಸ್ಯೆಗಳು ಎಂದರೆ ಸಂಧಿವಾತ, ಅನೇಕ ಕಾಯಿಲೆಗಳು, ಆಯಾಸಕ್ಕೆ ಕಾರಣವಾಗಬಹುದು.

ರೋಗ ನಿರ್ಣಯ ಮಾಡುವುದು ಹೇಗೆ..?

ಕೆಲಮೊಮ್ಮೆ ರೋಗ ತುಂಬಾ ತೀವ್ರವಾಗಿರುತ್ತದೆ. ಹಾಗಾಗಿ ನಿರ್ಲಕ್ಷ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ತಂದೊಡ್ಡಬಹುದು. ವೈದ್ಯರು ಹಾಗೂ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಬೇಕು. ಸಾಮಾನ್ಯವಾಗಿ ಇದಕ್ಕೆ ರಕ್ತ ಪರೀಕ್ಷೆ , ಥೈರಾಯ್ಡ್ ಹಾರ್ಮೋನ್ , ಸಿಪಿಕೆ, ಇಎಸ್ ಆರ್ , ಇಸಿಜಿ ಹಾಗೂ ಇಕೆಜಿ , ಸಿಟಿ ಸ್ಕ್ಯಾನ್ ಮತ್ತು ಎಕ್ಸರೇ ಇವುಗಳ ಮೂಲಕ ಕಾಯಿಲೆಯನ್ನು ಪತ್ತೆ ಹಚ್ಚಲಾಗುತ್ತದೆ.

ರೋಗ ಲಕ್ಷಣಗಳು
ತಲೆ ನೋವು
ದೀರ್ಘಕಾಲದವೆರೆಗೆ ದಣಿವು
ತಲೆಸುತ್ತು
ಸ್ನಾಯು ನೋವು
ಐರನ್ ಕೊರತೆ

ನಿಮಗೆ ಸುಸ್ತು ಎನ್ನಿಸುತ್ತಿದ್ದರೆ ಐರನ್ ಕೊರತೆ ಕಾರಣವಿರಬಹುದು. ಇದು ದೇಹದಲ್ಲಿರುವ ಬಿಳಿ ರಕ್ತ ಕಣಗಳ ಮಟ್ಟವನ್ನು ಲೆಕ್ಕ ಹಾಕುತ್ತದೆ. ಅಂದ್ರೆ ರಕ್ತದಲ್ಲಿ ಐರನ್ ಹಿಡಿದಿಟ್ಟುಕೊಳ್ಳುವ ಪ್ರೋಟೀನ್ ಇದೇ ಆಗಿದೆ. ಇವೆರೆಡು ಕಡಿಮೆ ಇದ್ದಾಗ ಐರನ್ ಮಟ್ಟ ಕಡಿಮೆ ಇರುತ್ತದೆ.
ಕಿತ್ತಳೆ, ಅಥವಾ ಮೂಸಂಬಿ ಆರೇಂಜ್ ಇವುಗಳಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸೋಂಕುಗಳ ವಿರುದ್ಧ
ಹೋರಾಡುವಲ್ಲಿ ಈ ಆಹಾರ ತುಂಬಾ ಸಹಕಾರಿಯಾಗಿದೆ.

ದೇಹದಲ್ಲಿ ನೀರಿನ ಅಂಶದ ಕೊರತೆ

ನೀರು ನಮ್ಮ ದೇಹದ ಅತ್ಯಂತ ಅವಶ್ಯಕ ಅಂಶಗಳಲ್ಲಿ ಒಂದು. ಮತ್ತು ದೇಹವನ್ನು ನಿರ್ಜಲೀಕರಣವಾಗದಂತೆ ನೀರು ತಡೆಗಟ್ಟುತ್ತದೆ. ದೇಹಕ್ಕೆ ನೀರಿನ ಕೊರತೆ ಇದ್ದರೆ, ಅದು ದಿನದ ಯಾವುದೇ ಸಮಯದಲ್ಲಾದರೂ ದೇಹದಲ್ಲಿ ಶಕ್ತಿ ಇಲ್ಲದಂತೆ ಭಾಸವಾಗಬಹುದು. ಆದ್ದರಿಂದ ನೀವು ಸಾಕಷ್ಟು ನೀರು ಮತ್ತು ಜ್ಯೂಸ್ ಗಳನ್ನು ಸೇವಿಸುವುದು ಉತ್ತಮ.

ದೈಹಿಕ ವ್ಯಾಯಾಮದ ಕೊರತೆ
ನಮ್ಮಲ್ಲಿ ಪ್ರತಿಯೊಬ್ಬರೂ ಯಾವುದೇ ರೂಪದ ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನೀವು ಯಾವುದೇ ರೀತಿಯ ದೈಹಿಕ ವ್ಯಾಯಾಮ ಮಾಡದಿದ್ದರೆ, ನಿಮ್ಮ ದೇಹವು ದೈನಂದಿನ ಜೀವನಕ್ಕೆ ಅಡ್ಡಿಪಡಿಸುತ್ತದೆ. ಕಡಿಮೆ ಮಟ್ಟದ ಶಕ್ತಿ ಹೊಂದಲು ಕಾರಣವಾಗುತ್ತದೆ.

ಸರಿಯಾದ ನಿದ್ರೆಯ ಕೊರತೆ

ರಾತ್ರಿ ಉತ್ತಮ ನಿದ್ರೆ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು. ದಿನವಿಡೀ ಸುಸ್ತಾಗುವ ಭಾವನೆ ಹಿಂದೆ ನಿದ್ರೆಯ ಕೊರತೆಯೇ ಕಾರಣವಿರಬಹುದು. ಹಾಗಾಗಿ ಸರಿಯಾದ ದಿನಚರಿ ಅಳವಡಿಸಿಕೊಂಡು, ಪ್ರೋಟೀನ್ ಭರಿತ ಆಹಾರ ಸೇವಿಸಿ, ನಿಮ್ಮ ದಿನವನ್ನು ಅಚ್ಚುಕಟ್ಟಾಗಿ ಅನುಸರಿಸಬೇಕು.

ಕೆಫೀನ್ ಸೇವನೆ ಅವೈಡ್ ಮಾಡಿ
ನಮ್ಮಲ್ಲಿ ಹೆಚ್ಚಿನವರು ಮೈಂಡ್ ರಿಫ್ರೆಶ್ ಆಗಿರಲು ಕಾಫಿ ಸೇವನೆ ಮಾಡುತ್ತಾರೆ. ಆದರೆ ಕೆಫೀನ್ ನಮಗೆ ಶಕ್ತಿಯ ವರ್ಧಕದಂತೆ ಕೆಲಸ ಮಾಡುತ್ತದೆ. ಆದ್ದರಿಂದ ನೀವು ದಿನಕ್ಕೆ 200-300 ಮಿ.ಗ್ರಾಂ ಕೆಫೀನ್ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.


Tiredness, Causes, Treatment, ಸುಸ್ತು, ಕಾರಣಗಳು. ಚಿಕಿತ್ಸೆ

ಡಯೆಟ್

ನೀವು ಡಯೆಟ್ ನೆಪದಲ್ಲಿ ಊಟವನ್ನು ತ್ಯಜಿಸುವುದು ಒಳ್ಳೆಯದಲ್ಲ. ಇದು ನಿಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಊಟ ಮಾಡುವಾಗ ಆರೋಗ್ಯ ಹೆಚ್ಚಿಸುವ ತರಕಾರಿಗಳನ್ನು ಸೇವಿಸಬೇಕು. ವಿಶೇಷವಾಗಿ ಬಾಳೆಹಣ್ಣು, ಕಡಲೆಕಾಯಿ ಬೆಣ್ಣೆ, ಧಾನ್ಯ, ಪ್ರೋಟೀನ್ ಬಾರ್, ಡ್ರೈ ಫ್ರೂಟ್ಸ್ , ಇತ್ಯಾದಿಗಳನ್ನು ಸೇವಿಸುವುದು ಉತ್ತಮ.

ವಿಟಮಿನ್ ಕೊರತೆ

ದಣಿವು ಸಮಸ್ಯೆ ಹೆಟ್ಟಾಗಿ ಮಿಟಮಿನ್ ಕೊರತೆಯಿಂದಾಗಿಯೂ ಕಾಣಿಸಿಕೊಳ್ಳಬಹುದು. ವಿಟಮಿನ್ ಬಿ -1 , ಕಬ್ಬಿಣ, ಮೇಗ್ನೆಶಿಯಂ ಅಥವಾ ಪೊಟ್ಯಾಶಿಯಂ ಅನ್ನು ಒಳಗೊಂಡಿರುತ್ತದೆ.

ನಿದ್ರೆಯ ಕೊರತೆ
ತಡ ರಾತ್ರಿಯವರೆಗೂ ನಿದ್ರೆ ಮಾಡುವುದರಿಂದಲೂ ಅನೇಕ ಸಮಸ್ಯೆಗಳು ಕಾಡಬಹುದು. ಅಂದರೆ ರಾತ್ರಿ ಹೊತ್ತು 8 ಗಂಟೆಗಳವರೆಗೂ ನಿದ್ರೆ ಮಾಡಬೇಕು. ನೀವು ತಡವಾಗಿ ನಿದ್ರೆ ಮಾಡುವ ಅಭ್ಯಾಸ ಹೊಂದಿದ್ದರೆ , ಇದು ನಿದ್ರಾ ಹೀನತೆ ಸಮಸ್ಯೆಯ ಜತೆಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಉತ್ತಮ ನಿದ್ರೆಯ ಅಭ್ಯಾಸವನ್ನು ಹೊಂದಿರಬೇಕು. ನಿದ್ರೆಯ ಗುಣಮಟ್ಟ ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಿ. ಕತ್ತಲೆ, ಶಾಂತ ಮತ್ತು ಆರಾಮದಾಯಕ ಕೋಣೆಯಲ್ಲಿ ಮಲಗಿಕೊಳ್ಳಿ. ಟಿವಿ ನೋಡುವಂತಹ ಅಭ್ಯಾಸಗಳನ್ನು ತಪ್ಪಿಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ