ಸೂಕ್ಷ್ಮ ಚರ್ಮದ ಸಮಸ್ಯೆಗೆ ಪರಿಹಾರ – (Tips for Sensitive Skin)

  • by

ಸೂಕ್ಷ್ಮ ತ್ವಚೆಯನ್ನು ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಮೊಡವೆ, ತುರಿಕೆ ,ಗುಳ್ಳೆ ಹೀಗೆ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿರುತ್ತಾರೆ. ಯಾವುದೇ ಉತ್ಪನ್ನದ ಬಳಕೆಯು ಸೂಕ್ಷ್ಮ ಚರ್ಮವನ್ನು ತ್ವರಿತವಾಗಿ ಹಾನಿಗೊಳಿಸುತ್ತದೆ. ಆದ್ದರಿಂದ ಈ ರೀತಿಯ ಚರ್ಮವನ್ನು ನೀವು ಹೊಂದಿದ್ದರೆ, ಕೆಲ ಸಲಹೆಗಳನ್ನು ಪಾಲಿಸಬೇಕಾಗುತ್ತದೆ.ಸೂಕ್ಷ್ಮ ಚರ್ಮದ ಮೇಲೆ ಹವಾಮಾನ ಬದಲಾವಣೆ ತುಂಬಾ ಬೇಗನೇ ಕಂಡು ಬರುತ್ತದೆ. ಸೂಕ್ಷ್ಮ ಚರ್ಮದ ಲಕ್ಷಣಗಳು ಮುಖವನ್ನು ತೊಳೆದ ನಂತರ ಕೆಪು ಬಣ್ಣ, ಸುಕ್ಕುಗಳು. ಹಾಗೂ ಯಾವುದೇ ಭಾಗದಲ್ಲಾದರೂ ಕಂಡು ಬರಬಹುದು.

Tips ,Sensitive Skin, ಟಿಪ್ಸ್, ಸೂಕ್ಷ್ಮ ತ್ವಚೆ

ಸೂಕ್ಷ್ಮ ಚರ್ಮದ ಸಮಸ್ಯೆಗೆ ಕಾರಣಗಳು?

ಸೂಕ್ಷ್ಮ ಚರ್ಮಕ್ಕೆ ಪ್ರಮುಖ ಕಾರಣವೆಂದರೆ ಅನುವಂಶಿಯತೆ. ಮೊದಲು ಪೋಷಕರು ಸೂಕ್ಷ್ಮ ಚರ್ಮದ ಸಮಸ್ಯೆಯನ್ನು ಹೊಂದಿದ್ದರೆ, ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.ಚರ್ಮದ ಸತ್ತ ಜೀವಕೋಶಗಳನ್ನು ತೆಗೆದು ಹಾಕುವುದಕ್ಕೆ ಲೈಟ್ ಎಕ್ಸ್ ಫೋಲಿಯೇಟಿಂಗ್ ಸ್ಕ್ರಬ್ ಬಳಸಿ. ಫೇಸ್ ಪ್ಯಾಕ್ ಗಾಗಿ ಕಾಯೋಲಿನ್ ಜೇಡಿಮಣ್ಣನ್ನು ಬಳಸಬಹುದಾಗಿದೆ. ಇದು ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ.

ಸೌಂದರ್ಯ ಉತ್ಪನ್ನಗಳಿಂದ ಅಲರ್ಜಿ ಹೊಂದಿರುವ ಚರ್ಮವನ್ನು ಸೂಕ್ಷ್ಮ ಚರ್ಮ ಎಂದು ಹೇಳಲಾಗುತ್ತದೆ. ಸೆನ್ಸಿಟಿವ್ ಸ್ಕಿನ್ ಹೊಂದಿರುವವರು ವ್ಯಾಕ್ಸಿಂಗ್ ಹಾಗೂ ಥ್ರೆಡ್ಡಿಂಗ್ ಮಾಡಿದಾಗ ಮುಖದ ಮೇಲೆ ದದ್ದು ಕಾಣಿಸಿಕೊಳ್ಳುತ್ತವೆ. ಅಂತಹ ಚರ್ಮವನ್ನು ಹೊಂದಿರುವವರು ಯಾವುದೇ ಕ್ರೀಮ್ ಹಚ್ಚುವ ಮುನ್ನ ಅನೇಕಬೃ ಬಾರಿ ಯೋಚಿಸಬೇಕು.ಸೂಕ್ಷ್ಮ ಚರ್ಮ ಹೊಂದಿರುವವರು, ಅಂಥವರ ಚರ್ಮ ಬೇಗನೆ ಕಂಪು ಬಣ್ಣಕ್ಕೆ ತಿರುಗುತ್ತದೆ. ಸಣ್ಣ ಸಣ್ಣ ಕೆಂಪು ಕಲೆಗಳು, ದದ್ದುಗಳು ಬೇಗನೆ ಕಾಣಿಸಿಕೊಳ್ಳಬಹುದು.

ಮನೆಮದ್ದುಗಳು

ಅಲೋವೆರಾ ಜೆಲ್

ಸೂಕ್ಷ್ಮ ಚರ್ಮಕ್ಕಾಗಿ ಅತ್ಯುತ್ತಮ ಮನೆ ಮದ್ದು ಎಂದರೆ ವಿಟಮಿನ್ ಇ ಗುಣಗಳನ್ನು ಹೊಂದಿರುವ ಜೆಲ್ ಗಳು ಚರ್ಮದ ಕೆಂಪು ಹಾಗೂ ತುರಿಕೆಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಅಲೋವೆರಾ ಜೆಲ್ ನ್ನು ತೆಗೆದುಕೊಂದು ಅದನ್ನು ಕತ್ತರಿಸಿ, ಜೆಲ್ ತೆಗೆದು, ನಂತರ ಅದನ್ನು ಮುಖ ಹಾಗೂ ಕತ್ತಿನ ಮೇಲೆ ಹಚ್ಚಿ , ಇಡೀ ರಾತ್ರಿಯಿಡಿ ಬಿಡಿ. ನಂತರ ಬೆಳಿಗ್ಗೆ ನೀರಿನಿಂದ ಕ್ಲಿನ್ ಮಾಡಿಕೊಳ್ಳಿ.


Tips ,Sensitive Skin, ಟಿಪ್ಸ್, ಸೂಕ್ಷ್ಮ ತ್ವಚೆ

ಜೇನುತುಪ್ಪ

ಜೇನುತುಪ್ಪ ಬ್ಯಾಕ್ಟೇರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಯಾವುದೇ ರೀತಿಯ ಚರ್ಮದ ಕಿರಿಕಿರಿಯನ್ನು ನಿವಾರಿಸುತ್ತದೆ. ಚರ್ಮದ ಮೇಲೆ ಜೇನುತುಪ್ಪ ಹಚ್ಚುವುದರಿಂದ ಹೊಳಪು ಹೆಚ್ಚಾಗುತ್ತದೆ. 1 ಬಟ್ಟಲಿನಲ್ಲಿ 2 ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಎರಡು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಟ್ಟು, ನೀರಿನಿಂದ ತೊಳೆದುಕೊಳ್ಳಿ. ಮೃದುವಾದ ಚರ್ಮವನ್ನು ಪಡೆಯಲು ಇದು ಪ್ರಯೋಜನಕಾರಿಯಾಗಿದೆ.

ಬಾಳೆಹಣ್ಣು ಉಪಯೋಗ

ಮಾಗಿದ ಬಾಳೆಹಣ್ಣು ಸೇವಿಸಲು ಒಳ್ಳೆಯದಲ್ಲ. ಆದರೆ ನೀವು ಫೇಸ್ ಪ್ಯಾಕ್ ತಯಾರಿಸಬಹುದು. ಇದು ಡೆಡ್ ಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಚರ್ಮ ಶುಷ್ಕತೆ ಹಾಗೂ ತುರಿಕೆ ಅನುಭವಿಸುತ್ತಿದ್ದರೆ, 2 ಟೀ ಚಮಚ ಮೊಸರು ಬೆರೆಸಿ ಚೆನ್ನಾಗಿ ಬೆರೆಸಿ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.

ಚರ್ಮಕ್ಕೆ ಅರಶಿಣ
ಅರಶಿಣದ ಪುಡಿಯನ್ನು ಮೊಡವೆ ಹಾಗೂ ದದ್ದು ನಿವಾರಣೆಗಾಗಿ ಬಳಸಲಾಗುತ್ತದೆ. ಅಲ್ಲದೇ, ಚರ್ಮದ ಸೌಂದರ್ಯ ಹೆಚ್ಚಿಸುತ್ತದೆ. ಸೂಕ್ಷ್ಮ ಚರ್ಮದವರು 1 ದೊಡ್ಡ ಟೀ ಚಮಚ ಅರಶಿಣ ಪುಡಿ ಯಲ್ಲಿ ಕೆಲವು ಹನಿ ಜೇನುತುಪ್ಪ ಮತ್ತು 2 ಚಮಚ ಜೇನುತುಪ್ಪ ಬೆರೆಸಿ, ಎಲ್ಲವನ್ನು ಸರಿಯಾಗಿ ಬೆರೆಸಿ, ಈ ಪ್ಯಾಕ್ ಅನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ. ನಂಚರ ನೀರಿನಿಂದ ತೊಳೆಯಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ