ಚಳಿಗಾಲಕ್ಕೆ ತ್ವಚೆಯ ಚಿಂತೆ ಬಿಡಿ

  • by

ಚಳಿಗಾಲದಲ್ಲಿ ಚರ್ಮ ಒಣಗಿದಂತೆ… ಚರ್ಮದ ಕಾಂತಿಯ ಕಳೆದು ಹೋಗಿರುತ್ತದೆ. ಹವಾಮಾನ ಬದಲಾವಣೆಯಿಂದಾಗಿ ತ್ವಚೆಯ ಮೇಲೆ ಪರಿಣಾಮ ಬೀರಬಹುದು.

ಚಳಿಗಾಲ ಬಂತೆಂದರೆ ಸಾಕು ತ್ವಚೆಗೆ ಎಷ್ಟೇ ಕೇರ್ ಮಾಡಿದ್ರು ಸಾಕಾಗಲ್ಲ. ಬದಲಾಗುತ್ತಿರುವ ಹವಾಮಾನದಿಂದ ತ್ವಚೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಿಂಟರ್ ನಲ್ಲಿ ದೈನಂದಿನ ತ್ವಚೆ ಆರೈಕೆಯನ್ನು ನಿರ್ವಹಿಸುವುದು ಅಗತ್ಯ . ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತ್ವಚೆ ಆರೈಕೆಯ ಕಡೆಗ ಗಮನ ನೀಡುತ್ತಾರೆ ಚಳಿಗಾಲದಲ್ಲಿ ಚರ್ಮ ಒಣಗಿದಂತೆ… ಚರ್ಮದ ಕಾಂತಿಯ ಕಳೆದು ಹೋಗಿರುತ್ತದೆ. ಹವಾಮಾನ ಬದಲಾವಣೆಯಿಂದಾಗಿ ತ್ವಚೆಯ ಮೇಲೆ ಪರಿಣಾಮ ಬೀರಬಹುದು. ಇದನ್ನು ನಿವಾರಿಸಲು ಟಿಪ್ಸ್ ಇಲ್ಲಿವೆ.

health, tips for Healthy winter skin, ಚಳಿಗಾಲಕ್ಕೆ ಆರೋಗ್ಯ ರಕ್ಷಣೆ, ತ್ವಚೆ ರಕ್ಷಣೆ, ಸಲಹೆ,

೧.ಸ್ನಾನಕ್ಕೆ ಅತಿ ಹೆಚ್ಚು ಬಿಸಿ ನೀರು ಬಳಸಬೇಡಿ

ಚಳಿಗಾಲಕ್ಕೆ ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡುವುದು ಸಹಜ. ಆದರೆ ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮದ ಕಾಂತಿ ಕುಂದಬಹುದು. ಬಿಸಿ ನೀರಲ್ಲಿ ಸ್ನಾನ ಮಾಡಿದ ನಂತರ ಚರ್ಮ ಒಣಗುತ್ತದೆ. ಬೂದಿ ಬೂದಿಯಾದಂತೆ ಅನ್ನಿಸುತ್ತದೆ. ಚಳಿಗಾಲದಲ್ಲಿ ತುರಿಕೆ ಅತಿ ಹೆಚ್ಚು ಕಾಡುತ್ತದೆ. ಇದರಿಂದ ಕೆಲವರಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಬಿಸಿ ನೀರಿಗೆ ಸ್ವಲ್ಪ ತೆಂಗಿನ ಎಣ್ಣೆಯ ಹನಿಗಳನ್ನು ಬೆರೆಸಿ ಸ್ನಾನ ಮಾಡುವುದು ಒಳಿತು.

೨. ಚಳಿಗಾಲದಲ್ಲಿ ತುಟಿ ಒಣಗುವುದು, ಪಾದಗಳಲ್ಲಿ ಬಿರುಕು

ಚಳಿಗಾಲದಲ್ಲಿ ತುಟಿ ಶುಷ್ಕತೆ, ನಿರ್ಜಲೀಕರಣದಿಂದಾಗಿ ಮಂದ ತ್ವಚೆ ನಿಮ್ಮದಾಗಬಹುದು. ಹಾಗಾಗಿ ಚರ್ಮಕ್ಕೆ ಉತ್ತಮ ಪ್ರಮಾಣದ ಪೋಷಣೆಬೇಕು. ಒಣಗುವುದು, ಪಾದಗಳಲ್ಲಿ ಬಿರುಕು ಮೂಡುವುದು ಸಹಜ. ಆದರೆ ತುಟಿಗಳಿಗೆ ಹಾಲಿನ ಕೆನೆ, ಲಿಪ್ ಬಾಮ್ ಉಪಯೋಗಿಸಿದರೆ ತುಟಿಗಳ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

healthy winter skin, tips,ಆರೋಗ್ಯ , ತ್ವಚೆಯ ರಕ್ಷಣೆ, ಚಳಿಗಾಲಕ್ಕೆ

೩. ಹೆಚ್ಚು ನೀರು ಕುಡಿಯುವುದು

ದೇಹದಲ್ಲಿ ನೀರಿನಂಶ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ. ದೇಹಕ್ಕೆ ನೀರಿನಾಂಶ ಹೆಚ್ಚು ಅಗತ್ಯವಿರುತ್ತದೆ. ಹಾಗಾಗಿ ಪ್ರತಿ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೆ ಚರ್ಮಕ್ಕೆ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಬಹುದು.

೪. ತ್ವಚೆಗೆ ಮಾಯಿಶ್ಚರೈಸರ್ ಹಚ್ಚಿ

ತ್ವಚೆಯ ರಕ್ಷಣೆಗೆ ಮಾಯಿಶ್ಚರೈಸರ್ ಅಷ್ಟೇ ಮುಖ್ಯ. ಚಳಿಗಾಲದಲ್ಲಿ ತ್ವಚೆಗೆ ಮಾಯಿಶ್ಚರೈಸರನ್ನು ಬಳಸಿದರೆ ಚರ್ಮ ಮೃದುವಾಗುವುದಲ್ಲದೇ, ತ್ವಚೆಯಲ್ಲಿ ಬಿರುಕು ಮೂಡುವುದಲ್ಲ. ಮನೆಯಿಂದ ಹೊರಗೆ ಹೋಗುವಾಗ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ಹೊರಗೆ ಹೋಗಿ.

೫. ಸನ್ ಸ್ಕ್ರೀನ್ ಬಳಸಿ

ಚಳಿಗಾಲದಲ್ಲಿ ಸನ್ ಸ್ಕ್ರೀನ್ ಬಳಸುವುದು ಉತ್ತಮ. ಸೂರ್ಯನ ಕಿರಣಗಳು ತ್ವಚೆಯ ಮೇಲೆ ಬೀಳುವುದರಿಂದ ತ್ವಚೆ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಹೊರಗಡೆ ಹೋಗುವುದಕ್ಕೂ ಮುನ್ನ ಸನ್ ಸ್ಕ್ರೀನ್ ಬಳಸಿ. ಸನ್ ಸ್ಕ್ರೀನ್ ಹಚ್ಚುವುದರಿಂದ ಮುಖಕ್ಕೆ ಸುಂದರ ಕಾಂತಿ ಬರುತ್ತದೆ. ನಿಮ್ಮ ಚರ್ಮಕ್ಕೆ ಹೊಂದುವ ಸನ್ ಸ್ಕ್ರಿನ್ ಲೋಷನ್ ಬಳಸಬೇಕು, ಮನೆಯಲ್ಲೇ ತಯಾರಿಸಿದ ಸನ್ ಸ್ಕ್ರಿನ್ ಲೋಷನ್ ಬಳಸಿದರೆ ಒಳ್ಳೆಯದು.

೬. ಒದ್ದೆ ಬಟ್ಟೆಗಳಿಂದ ದೂರವಿರಿ

ಚರ್ಮ ತುರಿಕೆಗೆ ಒದ್ದೆ ಬಟ್ಟೆಗಳು ಸಹ ಕಾರಣ ಅಂತಾ ಹೇಳಬಹುದು. ಸಂಪೂರ್ಣ ಒಣಗಿರುವ ಡ್ರೈ ಬಟ್ಟೆಗಳನ್ನು ಬಳಸಿದರೆ ಉತ್ತಮ. ಯಾಕೆಂದರೆ ಇದ್ರಿಂದ ಸ್ಕಿನ್ ತುರಿಕೆಯಿಂದಾಗುವ ಕಿರಿ ಕಿರಿಯನ್ನು ತಡೆಗಟ್ಟಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ