ಥೈರಾಯ್ಡ್ ಬಗ್ಗೆ ನಿರ್ಲಕ್ಷ್ಯ ಮಾಡದಿರಿ

  • by

ಇಂದಿನ ಜೀವನ ಶೈಲಿಯಿಂದಾಗಿ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಥೈರಾಯ್ಡ್ ಸಮಸ್ಯೆ ಇತ್ತೀಚೆಗೆ ಹಲವರಲ್ಲಿ ಕಂಡು ಬರುತ್ತಿದೆ. ಅತಿಯಾದ ದೇಹದ ತೂಕ ಮತ್ತು ಔಷಧಿಗಳ ಸೇವನೆ, ಅನುವಂಶಿಯವಾಗಿ ಥೈರಾಯ್ಡ್ ಸಮಸ್ಯೆ ಉದ್ಭವಿಸಬಹುದು. ಕುತ್ತಿಗೆ ಭಾಗದಲ್ಲಿ ಚಿಟ್ಟೆಯಾಕಾರಾದ ಗ್ರಂಥಿ ಇರುತ್ತದೆ. ಈ ಗ್ರಂಥಿಯಿಂದಾಗಿ ಹಾರ್ಮೋನ ಗಳ ವ್ಯತ್ಸಾಸ ಹಾಗೂ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. 

thyroid , symptoms, Kannada tips , ಥೈರಾಯ್ಡ್ ಕಾಯಿಲೆ, ಲಕ್ಷಣಗಳು,

ಥೈರಾಯ್ಡ್ ಅಪಾಯದ ಲಕ್ಷಣಗಳು !

ಹೃದಯ ಬಡಿತದಲ್ಲಿ ವ್ಯತ್ಯಾಸ 

ಥೈರಾಯ್ಡ್ ನ ಹಾರ್ಮೋನುಗಳು ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಳ ಮೇಲೆ ಪರಿಣಾಮ ಬೀರಬಹುದು. ಇದು ಹೃದಯದ ಬಡಿತದ ಮೇಲೂ ಪರಿಣಾಮ ಉಂಟು ಮಾಡಬಹುದು. 

ಕುತ್ತಿಗೆ ಭಾಗದಲ್ಲಿ ಊದಿಕೊಳ್ಳುವುದು 

ಥೈರಾಯ್ಡ್ ಸಮಸ್ಯೆಯ ಪ್ರಮುಖ ಲಕ್ಷಣಗಳಲ್ಲಿ ಇದು ಕೂಡಾ ಒಂದು ಕುತ್ತಿಗೆ ಭಾಗದಲ್ಲಿ ಅಥವಾ ದೊಡ್ಡದಾಗುವುದು ಈ ಲಕ್ಷಣ ಕಂಡು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ. ಇದು ಥೈರಾಯ್ಡ್ ಸಮಸ್ಯೆಯ ಲಕ್ಷಣವಾಗಿರಬಹುದು.

ಸುಸ್ತು ಕಾಣಿಸಿಕೊಳ್ಳುವುದು 

ಥೈರಾಯ್ಡ್ ಸಮಸ್ಯೆ ಇದ್ದರೆ ಆಗಾಗ ಸುಸ್ತು ಕಾಣಿಸಿಕೊಳ್ಳುತ್ತದೆ. ಕೊಂಚ ಅವಕಾಶ ಸಿಕ್ಕಿದರೂ, ನಿದ್ದೆಗೆ ಜಾರುವುದು. ಇದರ ಲಕ್ಷಣವಾಗಿದೆ. ರಕ್ತದಲ್ಲಿ ಹಾರ್ಮೋನುಗಳ ಪ್ರಮಾಣ ಕಡಿಮೆಯಾದರೆ ಜಡತ್ವವೂ ಹೆಚ್ಚುತ್ತದೆ. ಉತ್ತಮ ಪರಿಹಾರ ವೆಂದರೆ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು. 

thyroid , symptoms, Kannada tips , ಥೈರಾಯ್ಡ್ ಕಾಯಿಲೆ, ಲಕ್ಷಣಗಳು,

ಈ ಥೈರಾಯ್ಡ್ ಹಾರ್ಮೋನ್‌ಗಳ ಉತ್ಪತ್ತಿಯನ್ನು ಸರಿಯಾದ ಪ್ರಮಾಣದಲ್ಲಿಡುವ ಸಾಮರ್ಥ್ಯವು ಕೆಲವು ಆಹಾರಗಳಿಗಿವೆ. ಅಂತಹ ಆಹಾರಗಳನ್ನು ಸೇವಿಸಿದರೆ ಅಧಿಕ ಪ್ರಯೋಜನಗಳನ್ನು ನಾವು ಪಡೆಯಬಹುದು.

ಥೈರಾಯ್ಡ್ ಸಮಸ್ಯೆಯ ನಿಯಂತ್ರಣಕ್ಕೆ ಜೀರ್ಣಕ್ರಿಯೆಯು ಸರಾಗವಾಗಿ ನಡೆಯಬೇಕು. ಮೊಸರಿನಲ್ಲಿ ವಿಟಾಮಿನ್ ಡಿ ಇದ್ದು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಪಾಲಾಕ್‌ನಲ್ಲಿರುವ ಕಬ್ಬಿಣದ ಅಂಶ, ವಿಟಾಮಿನ್ ಬಿ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಸಹಾಯಕಾರಿಯಾಗಿದೆ.

ಸ್ಟ್ರಾಬೆರಿಯಲ್ಲಿ ಅಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಸಮಸ್ಯೆಗೆ ಸ್ಟ್ರಾಬೆರಿ ತಿನ್ನುವುದು ಉತ್ತಮ.

ಸಾಮಾನ್ಯವಾಗಿ ಸೆಲೆನಿಯೊಮ್ ಕೊರತೆಯಿಂದ ಥೈರಾಯ್ಡ್ ಸಮಸ್ಯೆ ಉಂಟಾಗುವ ಸಂಭವವಿರುತ್ತದೆ. ಅಣಬೆಯಲ್ಲಿ ಸೆಲೆನಿಯೊಮ್ ಅಧಿಕವಾಗಿರುವುದರಿಂದ ಅಣಬೆಯನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಮೊಟ್ಟೆಯಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ, ಅಯೊಡೈಡ್ ಕೂಡಾ ಇರುವುದರಿಂದ ಥೈರಾಯ್ಡ್ ಸಮಸ್ಯೆಗೆ ಇದು ಪ್ರಯೋಜನಕಾರಿಯಾಗಿದೆ.

ಬಾದಾಮಿಯಲ್ಲಿ ಕಬ್ಬಿಣದ ಅಂಶ, ಪ್ರೋಟೀನ್ ಮತ್ತು ಸತುವಿನ ಅಂಶವಿರುವುದರಿಂದ ಇದು ಥೈರಾಯ್ಡ್ ಸಮಸ್ಯೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ಸೇಬಿನಲ್ಲಿರುವ ಪೆಕ್ವಿನ್ ನಾರಿನಂಶವು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಬಹಳ ಒಳ್ಳೆಯದು.

ಟೊಮಟೊದಲ್ಲಿ ವಿಟಾಮಿನ್ ಸಿ ಇದೆ. ವಿಟಾಮಿನ್ ಸಿ ಇರುವ ಆಹಾರಗಳು ದೇಹದಲ್ಲಿ ಕಬ್ಬಿಣದಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದು ಥೈರಾಯ್ಡ್ ಸಮಸ್ಯೆಗೆ ಪ್ರಯೋಜನಕಾರಿಯಾಗಿದೆ.

ಮೀನಿನಲ್ಲಿ ಐಯೋಡಿನ್ ಅಂಶವಿರುವುದರಿಂದ ಥೈರಾಯ್ಡ್ ಸಮಸ್ಯೆಗೆ ರಾಮಬಾಣವಾಗಿದೆ. ಪ್ರತಿದಿನ ಮೀನು ತಿಂದರೆ ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳದಿದ್ದರೂ ಥೈರಾಯ್ಡ್ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ.

ಯಾವ ಧಾನ್ಯಗಳನ್ನು ಸೇವಿಸಬೇಕು? 

ಬಾರ್ಲೆ, ಓಟ್ಸ್, ಕೆಂಪಕ್ಕಿ ಅನ್ನ ಇವುಗಳಲ್ಲಿ ವಿಟಾಮಿನ್ ಬಿ ಅಧಿಕವಾಗಿರುತ್ತದೆ ಇದು ಕುತ್ತಿಗೆ ದಪ್ಪವಾಗುವುದನ್ನು ತಡೆಯುತ್ತದೆ. ಇಂತಹ ಆಹಾರ ಪದಾರ್ಥಗಳನ್ನು ನಮ್ಮ ದಿನನಿತ್ಯದ ಅಡಿಗೆಗಳಲ್ಲಿ ಬಳಸುವುದರಿಂದ ಥೈರಾಯ್ಡ್ ಸಮಸ್ಯೆಯನ್ನು ತಡೆಗಟ್ಟಬಹುದು. 

thyroid , symptoms, Kannada tips , ಥೈರಾಯ್ಡ್ ಕಾಯಿಲೆ, ಲಕ್ಷಣಗಳು,

ಯಾವುದೇ ಆಹಾರದ ಸಮಸ್ಯೆಗಳಿಗೆ ಏಕಾಏಕಿ ನಾವೇ ವೈದ್ಯರಾಗುವ ಬದಲು ತಜ್ಞವೈದ್ಯರನ್ನು ಒಮ್ಮೆ ಸಂಪರ್ಕ ಮಾಡಿ ಆರೋಗ್ಯದ ಕುರಿತು ಪರೀಕ್ಷಿಸುವುದು ಒಳಿತು. ಆದರೆ ಥೈರಾಯ್ಡ ಸಮಸ್ಯೆಯನ್ನು ಕಡೆಗಾಣಿಸದೇ ವೈದ್ಯರನ್ನು ಸಂಪರ್ಕಿಸಿ ಅವರು ಸೂಚಿಸುವ ಔಷಧಿಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಸ್ವಾಸ್ಥ್ಯ ಬದುಕನ್ನು ನಡೆಸೋಣ.

ಕ್ಯಾರೆಟ್ ಜ್ಯೂಸ್ ಸೇವಿಸಿದರೆ ಉತ್ತಮ

ರಸಭರಿತ ತಾಜಾಹಣ್ಣುಗಳ ಸೇವನೆ ಮುಖ್ಯವಾಗುತ್ತದೆ. ಹಸಿಯಾಗಿಯಾದ್ರು, ಬೇಯಿಸಿ ತಯಾರಿಸಿದ ಖಾದ್ಯಗಳನ್ನು ಸೇವಿಸಬೇಕು. ಕ್ಯಾರೇಟ್ ನಲ್ಲಿ ಪೌಷ್ಟಿಕಾಂಶ ಹೆಚ್ಚಾಗಿದ್ದು, ಆಂಟಿ ಆಂಕ್ಸಿಡೆಂಟ್ ಗಳು ಮತ್ತು ಬೀಟಾ ಕ್ಯಾರೋಟಿನ್ ಇ್ದದು, ಥೈರಾಯ್ಡ್ ಗ್ರಂಥಿ ಸ್ರವಿಸುವಕೆ ಹಾರ್ಮೋನ್ ಗಳನ್ನು ನಿಯಂತ್ರಿಸಲು ನೆರವಾಗುತ್ತದೆ. 

ಕ್ಯಾರೆಟ್ ಜ್ಯೂಸ್ ನಲ್ಲಿ ಕಡಿಮೆ ಕ್ಯಾಲರಿಯಿದ್ದು. ಮತ್ತು ಅದರಲ್ಲಿರುವ ಸಕ್ಕರೆ ಪ್ರಮಾಣ ಪೋಷಕಾಂಶ ಹಾಗೂ ಖನಿಜಾಂಶಗಳಿವೆ. ಇದ್ರಿಂದ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಿಸಬಹುದು. 

ಹೈಪೋಥೈರಾಯ್ಡ್ ಎಂದರೇನು?

ಥೈರಾಯ್ಡ್ ಎಂಬುದು ಒಂದು ಗುಪ್ತ ಸೋಂಕುರೋಗ. ಈ ಕಾಯಿಲೆ ಬಂದಾಗ ಜನರು ಇದರಿಂದ ತುಂಬಾ ವರ್ಷ ನೋವನ್ನು ಅನುಭವಿಸುತ್ತಾರೆ. ಇದು ಅಷ್ಟೊಂದು ಅಪಾಯಕಾರಿನಾ.. ಅಲ್ಲ. ಆದ್ರೆ ಇದು ನೇರವಾಗಿ ರೋನ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಹೈಪೋ ಥೈರಾಯ್ಡ ಕಾಯಿಲೆ ಬಂದಾಗ ಕೆಲ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ರೋಗ ನಿರೋಧಕ ಶಕ್ತಿಯ ಕುಸಿತದ ಪರಿಸ್ಥಿತಿ ಸುಧಾರಿಸಲು ನೀವು ಅದರ ಮೂಲವನ್ನು ತಿಳಿದು. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.

ಥೈರಾಯ್ಡ್ ಗೆ  ಒತ್ತಡ ಕಾರಣ

ಇನ್ನು ಥೈರಾಯ್ಜ್ ಗೆ ಒತ್ತಡವೇ ಕಾರಣವೆನ್ನಬಹುದು. ಹಲವು ರೀತಿಯ ಹಾರ್ಮೋನುಗಳ ವ್ಯತ್ಯಯಕ್ಕೆ ಕಾರಣವಾಗುತ್ತದೆ. ಯಾವಾಗ ಮಹಿಳೆಯರು ಒತ್ತಡಕ್ಕೆ ಸಿಲುಕುತ್ತಾರೋ , ಆಗ ಅವರು ಥೈರಾಯ್ಡ್ ಸಮಸ್ಯೆಗೆ ಬಲಿಯಾಗುತ್ತಾರೆ. ಹೀಗಾಗಿ ಥೈರಾಯ್ಡ್ ಗ್ರಂಥಿಯನ್ನು ಬಲಹೀನಗೊಳಿಸುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ