ನಿಮ್ಮ ಆಹಾರದಲ್ಲಿ ಇವುಗಳನ್ನು ಸೇವಿಸಿ.. ವರ್ಷವಿಡೀ ಇರುವಿರಿ ಸಧೃಡ

  • by

ವರ್ಷ ಪೂರ್ತಿ ಕೆಲವರು ಫಿಟ್ನೆಸ್, ಡಯೆಟ್. ವರ್ಕೌಟ್ ಬಗ್ಗೆ ಹೊಸ ಸಂಕಲ್ಪ ಮಾಡುತ್ತಾರೆ. ಡಯೆಟ್ ವಿಚಾರಕ್ಕೆ ಬಂದರೆ  ತುಂಬಾ ಜನರು ತಡೆಕೆಡಿಸಿಕೊಳ್ಳುತ್ತಾರೆ. ನಾವು ನಿಮಗೆ 20 ಕ್ಕೂ ಹೆಚ್ಚು ಆಹಾರಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ಆಹಾರಗಳನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಬಹುದು.ಇದರಿಂದ ನೀವು ಇಡೀ ವರ್ಷ ಸಧೃಢವಾಗಿರಬಹುದು. 


these ,things ,help  healthier , 2020,
ಆಹಾರದಲ್ಲಿ ,ಸೇವಿಸಿ.. ವರ್ಷವಿಡೀ ಸಧೃಡ,

ಹಸಿರು ತರಕಾರಿಗಳು!

ನಿಮ್ಮ ಆಹಾರದಲ್ಲಿ ಪಾಲಕ ಸೊಪ್ಪು, ಬಾತಾಮಿ, ಮೂಲಂಗಿ ಎಲೆಕೋಸು ಮುಂತಾದ ಹಸಿರು ಸೊಪ್ಪು ಗಳನ್ನು ಸೇರಿಸಬಹುದು. ಸೊಪ್ಪು ತರಕಾರಿಗಳಲ್ಲಿ ಕ್ಯಾಲೋರಿ ಹಾಗೂ ಕೊಬ್ಬು ಕಡಿಮೆ ಇರುತ್ತದೆ. ಇದು ಕೊಲೆಸ್ಚ್ರಾಲ್ ನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ತಡೆಗಟ್ಟುತ್ತದೆ. ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ದಿನ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ನೀವು ರೋಗದಿಂದ ದೂರ ವಿರುತ್ತೀರಿ. 

ಮೊಳಕೆಯೊಡದೆ ಕಾಳುಗಳು..!

ನೀವು ವರ್ಷಪೂರ್ತಿ ಆರೋಗ್ಯಕರವಾಗಿರಬೇಕಾದರೆ, ಫಿಟ್ ಆಗಿರಲು ಪ್ರತಿ ದಿನ ಮೊಳಕೆ ಕಾಳು ಸೇವಿಸಿ. ಮೊಳಕೆ ಕಾಳುಗಳಲ್ಲಿ ವಿಟಮಿನ್ ಹಾಗೂ ಖನಿಜಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ಮೂಂಗ್ ದಾಲ್ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯನ್ನ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಕ್ಯಾರೇಟ್ ಜ್ಯೂಸ್ ನಲ್ಲಿ ಬೀಟಾ ಕ್ಯಾರೋಟಿನ್ , ಆಲ್ಫಾ ಕ್ಯಾರೋಟಿನ್ ಮತ್ತು ಲುಟೀನ್ ನಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಪ್ರತಿ ದಿನ ಕ್ಯಾರೆಟ್ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚುವುದಿಲ್ಲ. ಮತ್ತು ಹೃದಯಾಘಾತ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಗಂಭೀರ ರೋಗಗಳನ್ನು ತಡೆಗಟ್ಟುತ್ತದೆ. ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ತಿನ್ನುವುದರಿಂದ ಹೊಟ್ಟೆಯ ತೊಂದರೆಗಳು ನಿವಾರಣೆಯಾಗುತ್ತವೆ. 


these ,things ,help  healthier , 2020,
ಆಹಾರದಲ್ಲಿ ,ಸೇವಿಸಿ.. ವರ್ಷವಿಡೀ ಸಧೃಡ,

ಬೀಟ್ ರೂಟ್ , ಬೀಟ್ ರೂಟ್ ಫೈಬರ್ ಹೊಂದಿರುವುದರಿಂದ ಪ್ರತಿ ದಿನ ಬೀಟ್ ರೂಟ್ ಸೇವಿಸುವುದರಿಂದ ನೀವು ದೇಹದ ಹಲವು ಅಗತ್ಯತೆಗಳನ್ನು ಪೂರೈಸಬಹುದು. ಬೀಟ್ ರೂಟ್ ಕೊಲೆಸ್ಟ್ರಾಲ್ ಮಟ್ಟವನ್ನು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಬೀಟ್ ರೂಟ್

ತಿನ್ನುವುದರಿಂದ ಆಯಾಸ ಕಡಿಮೆ ಯಾಗುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಬಾಳೆಹಣ್ಣಿನಲ್ಲಿ ಸಾಕಷ್ಟು ಫೈಬರ್ ಇರುವುದರಿಂದ ಇದು ಜೀರ್ಣ ಕ್ರಿಯೆ ಯನ್ನು ಹೆಚ್ಚಿಸುತ್ತದೆ. ಬಾಳೆ ಹಣ್ಣು ತಿನ್ನುವುದರಿಂದ ಹೆಚ್ಚಿನ ಬಿಪಿ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣಿನಲ್ಲಿ ಉತ್ತಮ ಕಬ್ಬಿಣದ ಅಂಶವಿದ್ದು, ಪ್ರತಿದಿನ ಬಾಳೆಹಣ್ಣನ್ನು ಸೇವಿಸುವುದರಿಂದ ರಕ್ತ ಹೀನತೆ ಅಪಾಯವನ್ನು ಕಡಿಮೆ ಮಾಡಬಹುದು. ಬಾಳೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇಗ್ನೇಶಿಯಂ ಇದ್ದು, ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.  

ಅರಶಿನ ಹಾಲು ನಿರೋಧಕ ದಂತೆ ಕೆಲಸ ಮಾಜುತ್ತದೆ. ಹಾಲಿನಲ್ಲಿ ಕ್ಯಾಲ್ಯಿಯಂ ಹೆಚ್ಚಾಗಿದ್ದು, ದೇಹ ಹಾಗೂ ಮನಸ್ಸಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅರಶಿಣ ಹಾಲು ದೇಹದ ನೋವಿಗೆ ಪರಿಹಾರ ನೀಡುತ್ತದೆ. ರಾತ್ರಿಯಲ್ಲಿ  ನಿದ್ರೆಗೂ ಮುನ್ನ ಮೊದಲು ಅರಶಿಣ ಹಾಲು ಕುಡಿಯಬೇಕು. ಇದರಿಂದ ಉತ್ತಮ ನಿದ್ರೆ ಮಾಡಲು ಸಹಾಯವಾಗುತ್ತದೆ. ಅರಶಿಣ ಹಾಲು ದೇಹದಿಂದ ಅನೇಕ ರೀತಿಯ ಸೋಂಕನ್ನು ಸಹ ತೆಗೆದು ಹಾಕುತ್ತದೆ. 


these ,things ,help  healthier , 2020,
ಆಹಾರದಲ್ಲಿ ,ಸೇವಿಸಿ.. ವರ್ಷವಿಡೀ ಸಧೃಡ,

ದಾಳಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ದಾಳಿಂಬೆ ರಸವನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಅಲ್ಲದೇ, ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣವು ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ. ದಾಳಿಂಬೆ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ದಾಳಿಂಬೆ ರಸವನ್ನು ಪ್ರತಿ ದಿನ ಕುಡಿಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. 

ಮೊಟ್ಟೆ ಸಹ ಉತ್ತಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನೀವು ಅನೇಕ ರೋಗಗಳಿಂದ ದೂರವಿರುತ್ತೀರಿ. ಮೊಟ್ಟೆಯಲ್ಲಿ ವಿಟಮಿನ್ ಎ, ಡಿ, ಬಿ ಮತ್ತು ಬಿ ೧೨ ಹಾಗೂ ಲುಟೀನ್ ನಂತಹ ಪೋಷಕಾಂಶಗಳಿದ್ದು, ಇವು ಕಣ್ಣಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೊಟ್ಟೆ ಒಂದು ಸೂಪರ್ ಫುಡ್ ಇದ್ದಂತೆ. ಪ್ರೋಟೀನ್, ಕ್ಯಾಲ್ಸಿಯಂ ಹಾಗೂಒಮೆಗಾ ೩ ಕಬ್ಬಿನಾಮ್ಲಗಳನ್ನು ಹೆಚ್ಚಾಗಿ ಪಡೆಯಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ