ಟೀ ಸೇವಿಸಿದ್ರೆ ಆಯುಷ್ಯ ವೃದ್ಧಿಯಾಗುತ್ತಾ.. ?

  • by

ಕರುಳಿಗ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ  ಚಹಾವು ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಕರುಳಿನ ಕಾಯಿಲೆಗಳಿಗೆ ಪ್ರತಿಯಾಗಿ ಪ್ರತಿರಕ್ಷಕ ಗುಣಗಳನ್ನು ಒದಗಿಸುವಲ್ಲಿ ಹಾಗೂ ಉತ್ಕರ್ಷಣ ಗುಣಗಳು ಚಹಾದಲ್ಲಿವೆ.. ಚಹಾದಲ್ಲಿ ಫ್ಲೂರೀನ್ ಅಂಶವು ಇರುವುದರಿಂದ , ಅದು ಹಲ್ಲಿನ ಸವೆತವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಹಾದಿಂದ ಏನೆಲ್ಲಾ ಲಾಭಗಳಿಗೆ ಬನ್ನಿ ನೋಡೋಣ.

ಚಹಾದ ಇತಿಹಾಸ..

ಚಹಾ 5000 ವರ್ಷಗಳಿಗಿಂತಲೂ ಹಳೆಯದಾದದ್ದು. ಏಷ್ಯಾದ ಮತ್ತು ಮಧ್ಯಪ್ರಾಚ್ಯದಾಂದ್ಯತ ಚಹಾ ಜನಪ್ರಿಯವಾಗಿದ್ದರೂ, ಯುರೋಪಿಯನ್ನರು ಮತ್ತು ವಸಾಹತುಗಳು 1600 ಗಳಲ್ಲಿ 1 ರುಚಿಯನ್ನು ಅಭಿವೃದ್ಧಿ ಪಡಿಸಲು ಪ್ರಾರಂಭಿಸಿದರು. ವಾಸ್ತವವಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನ ಚಹಾದ ಮೂರನೇ ಅತಿದೊಡ್ಡ ಆಮದುದಾರಾಗಿದೆ. 

1 ಚಹಾ ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಸಾವಿನ ಭಯ ದೂರವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಯುರೋಪಿನ ಪ್ರಿವೆಂಟಿವ್ ಕಾರ್ಡಿಯಾಲೋಜಿ ಜರ್ನಲ್ ನಲ್ಲಿ ಪ್ರಕಟವಾದ ವಿಶ್ತೇಷಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಸಂಶೋಧನೆಯಲ್ಲಿ ಸುಮಾರು 1, 00, 902 ಮಂದಿ ಭಾಗವಹಿಸಿದ್ದರು.ಅಂಥವರಲ್ಲಿ ಹೃದಯ ಸಂಬಂಧಿ, ಪಾರ್ಶ್ವವಾಯು, ಕ್ಯಾನ್ಸರ್ ಲಕ್ಷಣಗಳಿರಲಿಲ್ಲವಂತೆ. 

ಒಟ್ಟಿನಲ್ಲಿ ಚಹಾ ಸೇವಿಸುವವವರು ಆರೋಗ್ಯ ಶಾಲಿಗಳಾಗಿ ಮತ್ತು ದೀರ್ಘಾ ಆಯುಷ್ಯ ಉಳ್ಳವರು ಎಂದು ತಿಳಿದು ಬಂದಿದೆ. ಚಹಾದ ಅಭ್ಯಾಸ ಇಲ್ಲದಿರುವವರಿಗೆ ಹೋಲಿಸಿದ್ರೆ, ಚಹಾ ಸೇವಿಸುವವರಲ್ಲಿ ಹೃದಯಾಘಾತ , ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಅಪಾಯ ಕಡಿಮ ಎನ್ನುವುದು ಸಂಶೋಧನೆಯಿಂದ ಕಂಡು ಬಂದಿದೆ.

1 ಚಹಾ ಸೇವನೆಯಿಂದ ಒತ್ತಡ ನಿವಾರಣೆಯಾಗುವುದಲ್ಲದೇ, ಇದು ಚೈತನ್ಯವನ್ನು ಹಚ್ಚಿಸುತ್ತದೆ. ಕಪ್ಪು ಚಹಾದಲ್ಲಿ ಥೀನ್ ಅಂಶದಿಂದಾಗಿ ನೈಸರ್ಗಿಕವಾಗಿರುತ್ತದೆ. ದಿನವಿಡೀ ಸಕ್ರೀಯವಾಗಿರಲು ಸಹಾಯ ಮಾಡುತ್ತದೆ. 

2. ಶೀತ ಹಾಗೂ ಜ್ವರ ನಿವಾರಣೆ

ಚಹಾ ಉತ್ಕರ್ಷಣಾ ನಿರೋಧಕಗಳನ್ನು ಹೊಂದಿರುವುದರಿಂದ ಶೀತ ಹಾಗೂ ಜ್ವರ ಬಂದಾಗ 1 ಕಪ್ ಚಹಾ ಸೇವಿಸಿದರೆ ರಿಲ್ಯಾಕ್ಸ್ ಫೀಲ್ ನೀಡುತ್ತದೆ. ಶೀತ ಹಾಗೂ ಜ್ವರವನ್ನು ನಿವಾರಿಸುತ್ತದೆ.

3.ಚಯಾಪಚಯ ಕ್ರಿಯ ಯನ್ನು ಹಚ್ಚಿಸುತ್ತದೆ.

ಚಹಾದಲ್ಲಿ ದಾಲ್ಚಿನಿ ಮತ್ತು ಏಲಕ್ಕಿ ಬಳಸುವುದರಿಂದ ಅದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹಚ್ಚಿಸುತ್ತದೆ. ಪ್ರತಿ ದಿನ 1 -2 ಕಪ್ ಚಹಾ ಸೇವಿಸುವುದರಿಂದ ಮೇದೋಜ್ಜಿರಕ್ ಗ್ರಂಥಿಯ ಕಿಣ್ವಗಳನ್ನು ಹಿರಿಕೋಳ್ಳುವುದನ್ನು ಸುಧಾರಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ