ತೂಕ ಇಳಿಕೆಗೆ ಚಿಂತೆ ಬಿಡಿ, ಸ್ವಿಮ್ಮಿಂಗ್ ಮಾಡಿ..!

  • by

ಈಜು ಒಂದು ಆಸಕ್ತಿದಾಯಕ ಕ್ರೀಡೆ. ಇದು ನಿಮ್ಮನ್ನು ಸಧೃಡ ಮಾಡುವುದಲ್ಲದೇ, ಒತ್ತಡವನ್ನು ಕಡಿಮೆ ಮಾಡಿ, ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಈಜು ಸ್ವಿಮ್ಮಿಂಗ್ ಯಾರೂ ಬೇಕಾದರೂ ಮಾಡಬಹುದಾದ ಒಂದು ಎಕ್ಸ್ ಸೈಜ್ . ನೀವು ತೂಕವನ್ನು ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ಪ್ರತಿ ದಿನ ಸ್ವಿಮಿಂಗ್ ಮಾಡಿ.. ಇದು ತೂಕ ಇಳಿಸಿಕೊಳ್ಳಲು ಸುಲಭವಾದ ಮಾರ್ಗವಾಗಿದೆ. 

ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಮೊದಲನೆಯದಾಗಿ ಸ್ವಿಮ್ಮಿಂಗ್ ಮಾಡುವುದು ಗೊತ್ತಿರಬೇಕು. ತಂತ್ರ ಗೊತ್ತಿದ್ದರೆ, ಈಜುವ ಮೂಲಕ , ನೀವು ಸುಮಾರು ೧ ಗಂಟೆಯಲ್ಲಿ ೯೦ ರಿಂದ ೫೫೦ ಕ್ಯಾಲೋರಿಗಳನ್ನು ಸುಡಬಹುದು. ಆದ್ರೆ ಇದು ನಿಮ್ಮ ತೂಕ ಹಾಗೂ ಶ್ರಮದ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಹೆಚ್ಚು ಶ್ರಮ ವಹಿಸಿ , ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. 

ಇದು ಉತ್ತಮ ತಾಲೀಮು 

ಸ್ವಿಮಿಂಗ್ ಮಾಡುವುದರಿಂದ ದೇಹದ ಹೆಚ್ಚಿನ ಕ್ಯಾಲೋರಿ ಸುಡುತ್ತದೆ. ತಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೇ, ನಿಮ್ಮ ಸ್ನಾಯುಗಳು ಬಲಗೊಳ್ಳುತ್ತದೆ. ಜಿಮ್ ನಲ್ಲಿ ನೀವು ಕೇವಲ ಕೆಲ ಅಂಗಗಳಿಗೆ ಕೆಲಸ ಮಾಡಬೇಕಾಗುತ್ತದೆ. ಆದ್ರೆ ಸ್ವಿಮ್ಮಿಂಗ್ ಮಾಡುವಾಗ ಇಡೀ ದೇಹವೇ ಕಾರ್ಯನಿರ್ವಹಿಸುತ್ತದೆ. ಉತ್ತಮ ತೂಕವನ್ನು ಕಳೆದು ಕೊಳ್ಳಲು ನೀವು ಕನಿಷ್ಠ ೫-೧೦ ಕಿ.ಮೀ ದೂರ ಸ್ವಿಮ್ಮಿಂಗ್ ಮಾಡಬೇಕು. 

ಹೃದಯದ ಫಿಟ್ನೆಸ್ ಗೆ 

ಹೃದಯದ ಫಿಟ್ನೆಸ್ ಗೆ ಸ್ವಿಮ್ಮಿಂಗ್ ಉತ್ತಮವಾದದ್ದು.., ಸ್ವಿಮ್ಮಂಗ್ ಮಾಡುವುದರಿಂದ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಕೆಲವು ವಾರಗಳ ವರೆಗೆ ಈಜಿದ ನಂತರ

ಹೃದಯ ಫಿಟ್ನೆಸ್ ಉತ್ತೇಜಿಸುತ್ತದೆ- ಹೃದಯವು ಸದೃ ಡವಾಗಿರಲು ಈಜು ಉತ್ತಮ ಚಟುವಟಿಕೆಯಾಗಿದೆ. ಹಾರ್ಟ್ ರೇಟ್ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೃದಯದ ಬಡಿತವನ್ನು ಕಡಿಮೆ ಮಾಡುತ್ತದೆ. ರಕ್ತದೋತ್ತಡ ನಿಯಂತ್ರಣದಲ್ಲಿಡುತ್ತದೆ. 

ದೇಹ ಸ್ಟ್ರಾಂಗ್ ಆಗುತ್ತದೆ. 

ಸ್ವಿಮ್ಮಿಂಗ್ ಮಾಡುವುದರಿಂದ ತೂಕ ಕಳೆದು ಕೊಳ್ಳಲು ಸಹಾಯ ವಾಗುತ್ತದೆ. ಜಿಮ್ ನಲ್ಲಿ ಎತ್ತುವುದರಿಂದ ಇದು ನಿಮ್ಮ ಬೆನ್ನಿನ ಹಾಗೂ ಕಾಲುಗಳ ಮೇಲೆ ಬೀಳುತ್ತದೆ. ಇದ್ರಿಂದಾಗಿ ನೋವು ಅನುಭವಿಸಬಹುದು. ಆದ್ರೆ ಈಜುಕೋಳದ ಒಳಗೆ, ನಿಮ್ಮ ಇಡೀ ತೂಕವು ಹಗುರವಾಗಿರುತ್ತದೆ.

ಸ್ವಿಮ್ಮಿಂಗ್ ಮಾಡುವುದರಿಂದ ಯಾರಿಗೆಲ್ಲ ಲಾಭ?

ಸ್ವಿಮ್ಮಿಂಗ್ ಮಕ್ಕಳಿಗೆ ಉತ್ತೇಜನಕಾರಿಯಾಗಿದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಈಜು ಸಹಕಾರಿಯಾಗಿದೆ. ಅಸ್ತಮಾ ರೋಗಿಗಳು ಈಜುವುದು ಶ್ವಾಸಕೋಶ ಅಳತೆ ಹಿಗ್ಗುವಂತೆ ಮಾಡುತ್ತದೆ. ಇದು ಅಸ್ತಮಾ ಇರುವವರಿಗೆ ಉತ್ತಮ ಎಂದು ಹೇಳಲಾಗುತ್ತದೆ. 

ಸ್ವಿಮ್ಮಿಂಗ್ ಮಾಡುವುದರಿಂದ ಮಾನಸಿಕ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು. ವಯಸ್ಸಾದವರು ಈಜುವುದರಿಂದ ಮೂಳೆಗಳು ಗಟ್ಟಿಗೊಳ್ಳುತ್ತದೆ. ಹಾಗೂ ಹೃದಯ ಕಾಯಿಲೆಗಳನ್ನು  ತಡೆಯುವುದರಿಂದ ದೀರ್ಘಕಾಲ ಬಾಳುವುದಕ್ಕೂ ಸಹಕಾರಿಯಾಗುತ್ತದೆ೨೦ ನಿಮಿಷ ಈಜು ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಎಂಡಾರ್ಫಿನ್ ಹಾರ್ಮೋನ್ ನ್ನನು ಬಿಡುಗಡೆಗೊಳಿಸುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ. 

ಕಾಲುನೋವಿಗೆ ಈಜು ಅತ್ಯುತ್ತಮ ಎಂದು ಹೇಳಬಹುದು.  

ಸ್ವಿಮ್ಮಿಂಗ್ ಯಾವ ರೀತಿ ಮಾಡಬೇಕು… 

ಪ್ರತಿಯೊಬ್ಬರಿಗೂ ಬೆಳಿಗ್ಗೆ ಈಜು ಕೊಳಕ್ಕೆ ಹೋಗಿ ಈಜಲು ಸಾಧ್ಯವಾಗದ್ದು. ಆದರೆ ಉಪಹಾರ ಮಾಡುವ ಮೊದಲು ಈಡಿದರೆ ಒಳ್ಳೆಯದು. ಈಜುವುದು ಕೇವಲ ಹೃದಯಕ್ಕೆ ಮಾತ್ರವಲ್ಲದೇ. ಇದ್ರಿಂದ ಅದ್ಭುತ ಫಲಿತಾಂಶ ದೊರೆಯುತ್ತದೆ. 

ವೇಗವಾಗಿ ಈಜಿ..!

ಕ್ಯಾಲರಿ ದಹಿಸಲು ಈಜಬೇಕು. ಈಜುವ ಕೌಶಲ್ಯವು ಸುಧಾರಣೆ ಆದ ಬಳಿಕ ನೀವು ತುಂಬಾ ಪರಿಣಾಮಕಾರಿ ಹಾಗೂ ಹೃದಯದ ಬಡಿತ ಹಿಂದಿನಷ್ಟು ಹೆಚ್ಚಾಗುವುದಿಲ್ಲ. ಇದಕ್ಕಾಗಿ  ನೀವು ತುಂಬಾ ಸಲ ಹಾಗೂ ವೇಗವಾಗಿ ಈಜಬೇಕು, ಇದ್ರಿಂದ ಹೃದಯದ ಬಡಿತವು ಹೆಚ್ಚಾಗುತ್ತದೆ. ಗರಿಷ್ಠ ಹೃದಯ ಬಡಿತದ ೫೦ -೭೦ ರಷ್ಟು ಹೃದಯ ಬಡಿತವು ವ್ಯಾಯಾಮ ಮತ್ತು ಈಜುವ ವೇಳೆ ಇರಬೇಕು. ವಯಸ್ಸನ್ನು ೨೨೦ ರಿಂದ ಕಳೆಯುವ ಮೂಲಕ ಹೃದಯ ಬಡಿತವನ್ನು ಪತ್ತೆ ಮಾಡಬಹುದು. 

ವಾರದಲ್ಲಿ 5 ರಿಂದ ೫ ಸಲ ಈಜಿ ತೂಕ ಕಳೆದುಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ  ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳೂಬೇಕು. ಜಾಗಿಂಗ್ ವಾಕಿಂಗ್ ಹಾಗೂ ಸ್ವಿಮ್ಮಿಂಗ್ ಮಾಡಬಹುದು. ಕೆಲಮೊಮ್ಮೆ ಈ ರೀತಿಯ ವ್ಯಾಯಾಮದಂತೆ ತೂಕ ಕಳೆದುಕೊಳ್ಳಲು ವಾರದಲ್ಲಿ ನಾಲ್ಕರಿಂದ ೫ ದಿನಗಳ ಕಾಲ ಸ್ವಿಮಿಂಗ್ ಮಾಡಬೇಕು. 

ವಾಟರ್ ವೆಯ್ಟ್ ಬಳಸಿ..!

ತೂಕ ಇಳಿಸಲು ಮತ್ತು ಸ್ನಾಯುಗಳನ್ನು ಬಲಪಡಿಸಲು ನೀವು ಈಜಲು ಹೋಗುತ್ತಿದ್ದರೆ, ಆಗ ನೀವು ಮಧ್ಯೆ ಮಧ್ಯೆ ವಾಟರ್ ವೆಯ್ಟ್ ಬಳಸಬೇಕು. ಯಾಕೆಂದರೆ ನೀರು ಪ್ರತಿರೋಧ ಒಡ್ಡುವ ಪರಿಣಾಮವಾಗಿ ನಿಮಗೆ ಹೆಚ್ಚಿನ ಶಕ್ತಿ ವ್ಯಯಿಸಬೇಕಾಗುತ್ತದೆ. 

ಆಹಾರ ಕ್ರಮ ಬದಲಾವಣೆ ಮಾಡಿಕೊಳ್ಳಿ..!

ಈಜಿ ಬಂದ ಬಳಿಕ ಹಸಿವು ತೀವ್ರವಾಗಿ ಹೆಚ್ಚಾಗುತ್ತದೆ. ಈಜಿ ಬಂದ ಬಳಿಕ ತೀವ್ರ ರೀತಿಯಲ್ಲಿ ಹಸಿವಾಗುತ್ತಲಿದ್ದರೆ, ಆಗ ನೀವು ತರಕಾರಿ ಪ್ರೋಟೀನ್, ಶೇಕ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ನೀವು ತರಕಾರಿ , ಪ್ರೋಟೀನ್ ಶೇಕ್ ನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ