ಮೊಸಂಬಿ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು..! 

  • by

ಪ್ರತಿಯೊಬ್ಬರು ಮೊಸಂಬಿ ಹುಳಿ ಮಿಶ್ರಿತ ಹಣ್ಣನ್ನು ಇಷ್ಟಪಡುತ್ತಾರೆ. ಮೊಸಂಬಿ ಹಣ್ಣಿನಲ್ಲಿ ರುಚಿ ಹಾಗೂ ಪೌಷ್ಠಿಕಾಂಶದ ಅಂಶಗಳಿವೆ. ಕೆಲವರು ಅದರ ರಸವನ್ನು ತುಂಬಾ ಇಷ್ಟಪಟ್ಟು ಕುಡಿಯುತ್ತಾರೆ. ಮೊಸಂಬಿ ಹಣ್ಣಿನಲ್ಲಿ ವಿಟಮಿನ್ ಸಿ, ಹಾಗೂ ಫೈಬರ್ ಇರುವುದರಿಂದ ನಿಮ್ಮ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಮತ್ತು ನಿಮ್ಮಲ್ಲಿ ಎನರ್ಜಿ ಹೆಚ್ಚಿಸುತ್ತದೆ.

ಇದನ್ನು ಮುಖ್ಯವಾಗಿ ಆಗ್ನೇಯ ಏಷ್ಯಾ ದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ದೆ. ಇದರ ಬಣ್ಣ ಹಸಿರು ಅಥವಾ ಹಳದಿಯಾಗಿದ್ದು, ಮೊಸಂಬಿ ಹಣ್ಣಿನ ಹಲವು ಆರೋಗ್ಯ ಪ್ರಯೋಜನಗಳಿವೆ.

sweet-lime-health-benefitsboosts-immunity, ರೇಗನಿರೋಧಕ ಶಕ್ತಿ, ಮೊಸಂಬಿ ಹಣ್ಣು, ಆರೋಗ್ಯ ಪ್ರಯೋಜನಗಳು

ಮೊಸಂಬಿ ಜ್ಯೂಸ್ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ. ನಿಮ್ಮ ಚರ್ಮ ಹಾಗೂ ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ.

ಮೊಸಂಬಿ ಹಣ್ಣಿನ ಆರೋಗ್ಯ ಪ್ರಯೋಜನಗಳು..!

ಮೊಸಂಬಿ ಹುಳಿ ಸಿಹಿ ಮಿಶ್ರಿತ ಹಣ್ಣಾಗಿದ್ದು, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಪೌಷ್ಠಿಕಾಂಶ ಮತ್ತು ರುಚಿಯಿಂದ ತುಂಬಿರುತ್ತದೆ. ಈ ಹಣ್ಣನ್ನು ರಸ, ಜಾಮ್ ಹಾಗೂ ಉಪ್ಪಿನಕಾಯಿ ಮತ್ತು ಕ್ಯಾಂಡಿ ಮುಂತಾದ ಆಹಾರಗಳ ಜತೆಗೆ ಸೇವಿಸಬಹುದು. ಮೊಸಂಬಿಯನ್ನು ಔಷಧಿಯಾಗಿಯೂ ಬಳಸಲಾಗುತ್ತದೆ.

ಮಧುಮೇಹ ನಿಯಂತ್ರಣ

ಮಧುಮೇಹ ಯಾರಿಗಾದರೂ ಸಂಭವಿಸಬಹುದು. ಆದರೆ ಅದನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮಧುಮೇಹ ರೋಗಿಗಳು ಮೊಸಂಬಿ ಹಣ್ಣಿನ ಕೆಲವು ಪಾಕವಿಧಾನಗಳನ್ನು ಬಳಸಬಹುದು.

ಮೊಸಂಬಿ ಸಿಪ್ಪೆಯನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಪುಡಿ ತಯಾರಿಸಿ. ನಂತರ ಪ್ರತಿ ದಿನ 1 ಚಮಚಾ ಮೊಸಂಬಿ ಪುಡಿ ತೆಗೆದುಕೊಂಡು ಸೇವಿಸಿ. ನಂತರ ಬೆಚ್ಚಗಿನ ನೀರನ್ನು ಸೇವಿಸಿ.


sweet-lime-health-benefitsboosts-immunity, ರೇಗನಿರೋಧಕ ಶಕ್ತಿ, ಮೊಸಂಬಿ ಹಣ್ಣು, ಆರೋಗ್ಯ ಪ್ರಯೋಜನಗಳು

ಯಾವಾಗ ಸೇವಿಸಬೇಕು..?
ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು

ಇದು ಹೇಗೆ ಕೆಲಸ ಮಾಡುತ್ತದೆ?

ಮೊಸಂಬಿ ಮಧಮೇಹಕ್ಕೆ ಔಷಧಿಯಿದ್ದಂತೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.

ತೂಕ ನಷ್ಟಕ್ಕೆ ಮೊಸಂಬಿ

ಪ್ರತಿ ದಿನ ಈ ಹಣ್ಣನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದ. ಮೊಸಂಬಿಯಲ್ಲಿರುವ ವಿಟಮಿನ್ ಸಿ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ದೇಹದಲ್ಲಿ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ.

ಮಲಬದ್ಧತೆ..!

ಮೊಸಂಬಿಯನ್ನು ಕತ್ತರಿಸಿ ಅದರ ಮೇಲೆ ಸ್ವಲ್ಪ ಉಪ್ಪು ಸೇರಿಸಿ ತಿನ್ನಬಹುದು. ಮೊಸಂಬಿಯಲ್ಲಿರುವ ಆಮ್ಲವು ದೇಹದ ವಿಷವನ್ನು ಹೊರ ಹಾಕಲು ನೆರವಾಗುತ್ತದೆ. ಇದರ ಜತೆಗೆ ಇದರಲ್ಲಿ ಫೈಬರ್ ಅಧಿಕವಾಗಿದ್ದು, ಮಲಬದ್ಧತೆಯನ್ನು ನಿವಾರಿಸುತ್ತದೆ.

ಗುಳ್ಳೆಗಳನ್ನು ನಿವಾರಿಸುತ್ತದೆ!

ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಯೋಟಿಕ್ ಗುಣಗಳು ಹೆಚ್ಚಾಗಿದ್ದು, ಇದು ರಕ್ತವನ್ನು ಸ್ವಚ್ಚಗೊಳಿಸುವುದಲ್ಲದೇ, ಗುಳ್ಳೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಂಗ್ ಆಗಿ ಕಾಣಲು ನೆರವಾಗುತ್ತದೆ.


sweet-lime-health-benefitsboosts-immunity, ರೇಗನಿರೋಧಕ ಶಕ್ತಿ, ಮೊಸಂಬಿ ಹಣ್ಣು, ಆರೋಗ್ಯ ಪ್ರಯೋಜನಗಳು

ಮೊಸಂಬಿ ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಗುಳ್ಳೆಗಳು ನಿವಾರಣೆಯಾಗುತ್ತದೆ.

ಕೀಟಗಳ ಕಡಿತದ ನೋವು ನಿವಾರಿಸಲು !

ಕೀಟಗಳು, ಹುಳು ಕಚ್ಚಿದಾಗ ಅದರಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಮೊಸಂಬಿ ನೆರವಾಗುತ್ತದೆ.

ಬಳಕೆ ಮಾಡುವುದು ಹೇಗೆ..?

ಕೀಟಗಳು ಕಚ್ಚಿದ ಜಾಗಕ್ಕೆ ಮೊಸಂಬಿ ಜ್ಯೂಸ್ ಜತೆಗೆ ಕ್ಯಾಸ್ಟರ್ ಆಯಿಲ್ ಬೆರೆಸಿ ಈ ಮಿಶ್ರಣವನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.

ತುಟಿಯ ಕಪ್ಪು ಬಣ್ಣವನ್ನು ನಿವಾರಿಸಲು!

ಮೊಸಂಬಿ ಜ್ಯೂಸ್ ಬಿರುಕು ಬಿಟ್ಟ ತುಟಿಗಳನ್ನು ಮೃದುಗೊಳಿಸುತ್ತದೆ. ತುಟಿ ಸುತ್ತ ಕಪ್ಪಾಗುವುದು, ಕಿರಿ ಕಿರಿ, ಸೋಂಕನ್ನು ಉಂಟು ಮಾಡುತ್ತದೆ. ಅಂಥ ಸಂದರ್ಭದಲ್ಲಿ ಮೊಸಂಬಿ ಸಹಾಯ ಮಾಡುತ್ತದೆ.

ಬಳಕೆಯ ವಿಧಾನ!

ಪ್ರತಿ ದಿನ ಮೂರು ಅಥವಾ ನಾಲ್ಕು ಬಾರಿ ಮೊಸಂಬಿ ಜ್ಯೂಸ್ ನ್ನು ತುಟಿಗಳಿಗೆ ಹಚ್ಚಬೇಕು. ಇದು ತುಟಿಯ ಬಣ್ಣವನ್ನು ಬಿಳಿಯಾಗಿಸುತ್ತದೆ. ಮತ್ತು ಬಿರುಕು ಬಿಟ್ಟ ತುಟಿಗಳನ್ನು ನಿವಾರಿಸುತ್ತದೆ.

ಕೂದಲಿಗೂ ಉಪಯುಕ್ತ ಮೊಸಂಬಿ..!

ಮೊಸಂಬಿ ಕೂದಲು, ಚರ್ಮ ಹಾಗೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಮೊಸಂಬಿ ಜ್ಯೂಸ್ ಒಣ, ದುರ್ಬಲ, ತಲೆಹೊಟ್ಟು ಸಮಸ್ಯೆಗಳನ್ನು ನಿವಾರಿಸುತ್ತದೆ. ಮೊಸಂಬಿ ಹಣ್ಣು ಅಥವಾ ಜ್ಯೂಸ್ ರೂಪದಲ್ಲಿ ಇದನ್ನು ಸೇವಿಸಬಹುದಾಗಿದೆ.

ಕೂದಲು ಉದುರುತ್ತಿದ್ದರೆ, ಮೊಸಂಬಿ ರಸವನ್ನು ಕೂದಲಿಗೆ ಹಚ್ಚಬಹುದು. ಇದರಲ್ಲಿರುವ ವಿಟಮಿನ್ ಸಿ ಕೂದಲನ್ನು ಬಲಪಡಿಸುತ್ತದೆ. ಮತ್ತು ಕೂದಲು ಉದರುವುದನ್ನು ತಡೆಗಟ್ಟುತ್ತದೆ. ಆಂಟಿ ಆಕ್ಸಿಡೆಂಟ್ ಗುಣಗಳಿಂದ ಇದು ಸಮೃದ್ದವಾಗಿದೆ. ನಿಮ್ಮ ಕೂದಲು ಮಾಲಿನ್ಯದಿಂದ ಹಾಳಾಗದಂತೆ ರಕ್ಷಿಸುತ್ತದೆ.

ಮೊಸಂಬಿ ಹಣ್ಣನ್ನು ಯಾವಾಗ ಸೇವಿಸಬೇಕು..?

ಮೊಸಂಬಿಯನ್ನು ಸಾಮಾನ್ಯವಾಗಿ ಜುಲೈನಿಂದ ಅಕ್ಟೋಬರ್ ವರೆಗೆ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದನ್ನು ವರ್ಷಪೂರ್ತಿ ಕೋಲ್ಡ್ ಸ್ಟೋರೇಜ್ ನೊಂದಿಗೆ ಸೇವಿಸಬಹುದು. ನೀವು ಮೊಸಂಬಿಯನ್ನು ನೇರವಾಗಿ ಹಣ್ಣಾಗಿ ತೆಗೆದುಕೊಳ್ಳಬಹುದು. ದೇಹದಲ್ಲಿ ಶಕ್ತಿಯ ಕೊರತೆ ಉಂಟಾದಾಗ, ಅಥವಾ ಆಯಾಸವಾದ ಸಮಯದಲ್ಲಿ ಮೊಸಂಬಿ ಜ್ಯೂಸ್ ಕುಡಿಯುವುದರಿಂದ ತ್ವರಿತವಾಗಿ ಎನರ್ಜಿ ದೊರೆಯುತ್ತದೆ. ನೀವು ಮಧುಮೇಹ ಅಥವಾ ಇನ್ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಸೇವಿಸಬಹುದು.


sweet-lime-health-benefitsboosts-immunity, ರೇಗನಿರೋಧಕ ಶಕ್ತಿ, ಮೊಸಂಬಿ ಹಣ್ಣು, ಆರೋಗ್ಯ ಪ್ರಯೋಜನಗಳು

ಮೊಸಂಬಿ ಜ್ಯೂಸ್ ಯಾವಾಗ ಕುಡಿಯಬೇಕು?

ಬೆಳಗಿನ ಉಪಹಾರದ ಸಮಯದಲ್ಲಿ ಮೊಸಂಬಿ ಜ್ಯೂಸ್ ಕುಡಿಯುವುದು ತುಂಬಾ ಆರೋಗ್ಯಕರ ಎಂದು ಹೇಳಲಾಗುತ್ತದೆ. ನೀವು ಚಹಾ ಅಥವಾ ಕಾಫಿ ಸೇವಿಸಿದ್ದರೆ, ಮೊಸಂಬಿ ಜ್ಯೂಸ್ ಹಾಗೂ ಚಹಾ ನಡುವೆ ಕನಿಷ್ಠ 1 ಗಂಟೆಯ ಅಂತರವನ್ನು ಕಾಯ್ದುಕೊಳ್ಳಬೇಕು.

ಗಮನಿಸಿ : ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಮೊಸಂಬಿ ರಸ ಪರಿಣಾಮಕಾರಿಯಾಗಿದೆ. ಅದರಲ್ಲಿರುವ ಕ್ಯಾಲೋರಿಗಳು ದೇಹದಲ್ಲಿ ತ್ವರಿತ ಚೈತನ್ಯವನ್ನು ನೀಡುತ್ತದೆ. ಮೊಸಂಬಿ ಜ್ಯೂಸ್ ನಲ್ಲಿ ಸಕ್ಕರೆಯ ಪ್ರಮಾಣ 1.69 ಗ್ರಾಂ ಇರುವುದರಿಂದ ಇದು ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ನಿಮಗೆ ಮಧುಮೇಹ ಸಮಸ್ಯೆಯಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆದು, ಸೇವಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ