ಸನ್ ಸಿಲ್ಕ್ ಬ್ಲ್ಯಾಕ್ ಶಾಂಪೂ – ನಿಮಗೆಷ್ಟು ಗೊತ್ತು..?

 • by

ಸನ್ ಸಿಲ್ಕ್ ಬ್ಲ್ಯಾಕ್ ಶ್ಯಾಂಪೂ ರಿವ್ಯೂ
ಇಂದಿನ ಲೇಖನದಲ್ಲಿ ಸನ್‌ಸಿಲ್ಕ್ ಬ್ಲ್ಯಾಕ್ ಶ್ಯಾಂಪೂವಿನ ವಿವರವಾದ ಮಾಹಿತಿಯನ್ನು
ತಿಳಿದುಕೊಳ್ಳೋಣ ಸನ್‌ಸಿಲ್ಕ್ ಬ್ಲ್ಯಾಕ್ ಶ್ಯಾಂಪೂವನ್ನು ಹೆಚ್ಚಾಗಿ ಬಳಸುವವರು ಈ ಶ್ಯಾಂಪೂವನ್ನೇ
ಕೂದಲು ತೊಳೆಯಲು ಹೆಚ್ಚು ಬಳಸುತ್ತಾರೆ. ಹೆಚ್ಚಿನ ರಿವ್ಯೂಗಳಿಂದ ತಿಳಿದು ಬಂದಿರುವ ಅಂಶವೆಂದರೆ ಈ
ಶ್ಯಾಂಪೂ ಬಿಟ್ಟು ಉಳಿದ ಶ್ಯಾಂಪೂಗಳನ್ನು ಟ್ರೈ ಮಾಡಿದರೂ ಅದು ಸನ್‌ಸಿಲ್ಕ್ ಬಳಸಿದಂತೆ ಆಗುವುದಿಲ್ಲ
ಎಂದಾಗಿದೆ. ಸ್ಮಿತಾ ಅವರು ಹೇಳುವಂತೆ ಶಾಲಾ ಕಾಲೇಜು ದಿನಗಳಿಂದ ಅವರು ಸನ್‌ಸಿಲ್ಕ್ ಬ್ಲ್ಯಾಕ್
ಶ್ಯಾಂಪೂ
ವನ್ನೇ ಬಳಸುತ್ತಿದ್ದಾರೆ. ಒಮ್ಮೊಮ್ಮೆ ಇತರ ಶ್ಯಾಂಪೂಗಳನ್ನು ಬಳಸಿದರೂ ಮರಳಿ ಸನ್ ಸಿಲ್ಕ್
ಅನ್ನೇ ಅವರು ಆಯ್ದುಕೊಳ್ಳುತ್ತಾರಂತೆ. ಅವರು ಹೇಳುವ ಪ್ರಕಾರ ಸನ್‌ ಸಿಲ್ಕ್ ಬಳಸಿದಂತೆ ಇತರ
ಶ್ಯಾಂಪೂಗಳನ್ನು ಬಳಸಲು ನನ್ನಿಂದ ಆಗುವುದಿಲ್ಲ. ಎಷ್ಟೇ ದೂರ ಹೋಗಿಯಾದರೂ ಅಂಗಡಿ ಅಂಗಡಿ
ಸುತ್ತಿ ಆದರೂ ನಾನು ಸನ್ ಸಿಲ್ಕ್ ಶ್ಯಾಂಪೂವನ್ನು ಖರೀದಿಸುತ್ತೇನೆ ಎಂಬುದು ಅವರ ಮಾತಾಗಿದೆ.

ಈ ಶ್ಯಾಂಪೂ ಆಮ್ಲ ಮತ್ತು ಪರ್ಲ್ ಕಾಂಬಿನೇಶನ್‌ನಿಂದ ತಯಾರಾಗಿದ್ದು ಇದು ಸೂರ್ಯನಿಂದ ಸಂರಕ್ಷಕ
ಕವಚದಂತೆ ಕೆಲಸ ಮಾಡುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳು ನಿಮ್ಮ ಕೂದಲಿಗೆ ಹಾನಿಯನ್ನುಂಟು
ಮಾಡುತ್ತದೆ. ಆದರೆ ಈ ಶ್ಯಾಂಪೂ ಒಂದು ಸುರಕ್ಷಾ ಕವಚದಂತೆ ನಿಮ್ಮ ಕೂದಲಿಗೆ
ಪೋಷಣೆಯನ್ನುನೀಡುತ್ತದೆ. ಇದು ತಲೆಬುರುಡೆಯನ್ನು ಸ್ವಚ್ಛ ಮಾಡುತ್ತದೆ ಮತ್ತು ಕೂದಲಿನಲ್ಲಿರುವ
ಕೊಳೆಯನ್ನು ನಿವಾರಿಸುತ್ತದೆ. ಒಮ್ಮೆ ತೊಳೆದು ಪುನಃ ಶ್ಯಾಂಪೂವಿನ ಬಳಕೆಯನ್ನು ಮಾಡಿ. ಇಲ್ಲಿ ನಾವು
ಹೇಳಲಿರುವ ಇನ್ನೊಂದು ಟಿಪ್ಸ್ ಎಂದರೆ ಆದಷ್ಟು ಶ್ಯಾಂಪೂವನ್ನು ನೀರಿನೊಂದಿಗೆ ಬೆರೆಸಿ ನಂತರ
ಕೂದಲಿಗೆ ಹಚ್ಚಿಕೊಳ್ಳಿ. ನೇರವಾಗಿ ಶ್ಯಾಂಪೂವನ್ನು ಕೂದಲಿಗೆ ಬಳಸಲು ಹೋಗದಿರಿ. ಇನ್ನು ಶ್ಯಾಂಪೂವಿನ
ಜೊತೆಗೆ ಸನ್ ಸಿಲ್ಕ್ ಬ್ಲ್ಯಾಕ್ ಕಂಡೀಷನರ್ ಅನ್ನು ಬಳಸಿದರೆ ನಿಮಗೆ ಉತ್ತಮ ಫಲಿತಾಂಶಗಳು
ದೊರೆಯುತ್ತದೆ.

ಶ್ಯಾಂಪೂವು ಕಪ್ಪು ಬಣ್ಣದ ಬಾಟಲಿಯಲ್ಲಿದ್ದು ಇದರ ಮುಚ್ಚಳ ಫ್ಲಿಪ್ ಫ್ಲಾಪ್ ಕ್ಯಾಪ್ ಅನ್ನು
ಹೊಂದಿದೆ. ನೀವು ಮುಚ್ಚಳ ಹಾಕುವಾಗ ಕೊಂಚ ಜಾಗರೂಕತೆ ವಹಿಸಿ ಇಲ್ಲದಿದ್ದರೆ ಪೂರ್ತಿ ಮುಚ್ಚಳ
ಕೈಗೆ ಬರುವ ಸಾಧ್ಯತೆ ಇದೆ ನಂತರ ಶ್ಯಾಂಪೂವನ್ನು ಬೇರೊಂದು ಬಾಟಲಿಗೆ ಸ್ಥಳಾಂತರಿಸಬೇಕಾಗಬಹುದು.
ಸ್ಮಿತಾ ಅವರು ಹೇಳುವಂತೆ ಹಲವಾರು ವರ್ಷಗಳಿಂದ ಅವರು ಸನ್ ಸಿಲ್ಕ್ ಶ್ಯಾಂಪೂವಿನ ಅಭಿಮಾನಿಯಂತೆ.
ಅವರು ವಾರಕ್ಕೆ ಎರಡು ಬಾರಿ ಶ್ಯಾಂಪೂವನ್ನು ಬಳಸಿ ಸ್ನಾನ ಮಾಡುತ್ತಾರೆ. ಇದು ಅವರಿಗೆ ಹೆಚ್ಚು
ಆರಾಮದಾಯಕ ಎಂದೆನಿಸಿದೆ. ಮತ್ತು ಶ್ಯಾಂಪೂವಿನ ಸುವಾಸನೆ ಮನಮೋಹವಾಗಿದೆ ಎಂಬುದು ಸ್ಮಿತಾ
ಅವರ ಮನದ ಮಾತಾಗಿದೆ. ಇದು ಸ್ವಲ್ಪ ದಪ್ಪನೆಯ ಮಿಶ್ರಣವನ್ನು ಹೊಂದಿದ್ದು ನಿಮ್ಮ ಸಂಪೂರ್ಣ
ಕೂದಲಿಗೆ ಶ್ಯಾಂಪೂವಿನ ಅಂಶ ದೊರೆಯುವಂತೆ ಮಾಡುತ್ತದೆ. ಸನ್‌ಸಿಲ್ಕ್‌ನ ಕೆಂಪು ಮತ್ತು ಹಳದಿ
ಬಾಟಲಿಯ ಶ್ಯಾಂಪೂವನ್ನು ಇವರು ಟ್ರೈ ಮಾಡಿದ್ದಾರೆ. ಆದರೆ ಸನ್ ಸಿಲ್ಕ್ ಬ್ಲ್ಯಾಕ್ ಶ್ಯಾಂಪೂ

ಕೊಡುವಷ್ಟು ಫಲಿತಾಂಶ ಇವುಗಳು ನೀಡಿಲ್ಲ ಎಂದು ಹೇಳುತ್ತಾರೆ. ಈ ಶ್ಯಾಂಪೂ ಕೂದಲಿಗೆ
ಪೋಷಣೆಯನ್ನು ನಯವನ್ನು ನೀಡುತ್ತದೆ.

ಇನ್ನೂ ಈ ಶ್ಯಾಂಪೂವಿನ ಬಗ್ಗೆ ಹೇಳುವುದಾದರೆ ಶ್ಯಾಂಪೂ ಬಳಸಿದ ನಂತರ ಯಾವುದೇ ತುರಿಕೆ
ಇನ್‌ಫೆಕ್ಶನ್ ಉಂಟಾಗಿಲ್ಲ ಇದು ಬಜೆಟ್‌ಗೆ ಸೂಕ್ತವಾಗಿದೆ. ನಿತ್ಯದ ಬಳಕೆಗೆ ದಿ ಬೆಸ್ಟ್ ಶ್ಯಾಂಪೂ
ಇದಾಗಿದೆ. ಕೂದಲನ್ನು ಮೃದುವಾಗಿಸಿ ಆರೋಗ್ಯವಂತವನ್ನಾಗಿಸುತ್ತದೆ. ನಿಮ್ಮ ತಲೆಬುಡದಲ್ಲಿ
ಯಾವುದೇ ಕೊಳೆ ಇಲ್ಲದಂತೆ ಸಂಪೂರ್ಣವಾಗಿ ಶ್ಯಾಂಪೂ ತೊಳೆಯುತ್ತದೆ. ಕೂದಲನ್ನು ನಯ ಮತ್ತು
ಹೊಳೆಯುವಂತೆ ಮಾಡುತ್ತದೆ ಮತ್ತು ದಟ್ಟನೆಯ ಅನುಭೂತಿಯನ್ನು ಉಂಟುಮಾಡುತ್ತದೆ. ಎಲ್ಲಾ
ಜನರಲ್ ಸ್ಟೋರ್‌ಗಳಲ್ಲಿ ಮೆಡಿಕಲ್‌ಗಳಲ್ಲಿ ಶ್ಯಾಂಪೂ ಲಭ್ಯವಿದೆ. ಇದರ ಸುವಾಸನೆ
ಮನಮೋಹಕವಾಗಿದೆ. ಇನ್ನು ಯುವಿ ಸಂರಕ್ಷಣೆಯನ್ನು ಶ್ಯಾಂಪೂ ಒಳಗೊಂಡಿದೆ.

ಇದಿಷ್ಟು ಶ್ಯಾಂಪೂ ಬಗ್ಗೆ ಹೇಳುವುದಾದರೆ ಇದರ ಜೊತೆಗೆ ನೀವು ನೈಸರ್ಗಿಕ ಹೇರ್ ಪ್ಯಾಕ್‌ಗಳ
ಬಳಕೆಯನ್ನು ಕೂದಲಿಗೆ ಮಾಡಬೇಕು. ವಾರಕ್ಕೊಮ್ಮೆಯಾದರೂ ಮೆಂತ್ಯ, ಮೊಟ್ಟೆ, ಮೊಸರು, ಲಿಂಬೆಯ
ಹೇರ್ ಪ್ಯಾಕ್ ಅನ್ನು ಹಚ್ಚಿ ಒಂದರ್ಧ ಗಂಟೆಯ ತರುವಾಯ ಕೂದಲನ್ನು ತೊಳೆದುಕೊಳ್ಳಿ. ಇದಲ್ಲದೆ
ಇನ್ನೂ ಹಲವಾರು ನೈಸರ್ಗಿ ಹೇರ್ ಪ್ಯಾಕ್‌ಗಳು ಲಭ್ಯವಿದ್ದು ಇದರ ಸಂಪೂರ್ಣ ಪ್ರಯೋಜನವನ್ನು
ಕೂದಲಿಗೆ ಪಡೆದುಕೊಳ್ಳಿ.

ನೈಸರ್ಗಿಕ ಶ್ಯಾಂಪೂ
ಸೀಗೆಕಾಯಿ ಶ್ಯಾಂಪೂ ಮಾಡುವ ಸಾಮಾಗ್ರಿಗಳು

 • ಸೀಗೆಕಾಯಿ ಅರ್ಧ ಕೆಜಿ * ಮೆಂತೆ ಕಾಲು ಕೆಜಿ * ಹೆಸರು ಕಾಳು 1/4 ಕೆಜಿ * ಕರಿಬೇವಿನ ಎಲೆ 1 ಕಟ್ಟು *
  ತುಳಸಿ ( ಎರಡು ಹಿಡಿಯಷ್ಟು) * ಅಂಟ್ವಾಳ 100 ಗ್ರಾಂ ತಯಾರಿಸುವ ವಿಧಾನ ವಿಧಾನ 1: * ಈ
  ಸಾಮಾಗ್ರಿಗಳನ್ನು ಬಿಸಿಲಿನಲ್ಲಿ 3-4 ದಿನ ಇಟ್ಟು ಒಣಗಿಸಿ. ಇವು ಒಣಗಿದ ನಂತರ ಪುಡಿ ಮಾಡಿಡಿ. ಸ್ನಾನ
  ಮಾಡುವಾಗ ಸ್ವಲ್ಪ ನೀರು ಹಾಕಿ ಕಲೆಸಿದರೆ ನೊರೆ ಉಂಟಾಗುತ್ತದೆ. ಇದರಿಂದ ತಲೆ ತೊಳೆಯಿರಿ. *
  ಪುಡಿಯನ್ನು ನೀರಿನಲ್ಲಿ ಕಲೆಸಿ ತಲೆಗೆ ಹಚ್ಚಿ ಅರ್ಧ ಗಂಟೆ ಕಾಲ ಇಡಿ. ನಂತರ ತಣ್ಣೀರಿನಲ್ಲಿ ತಲೆ
  ತೊಳೆಯಿರಿ. * ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಇಟ್ಟು ಬೇಕಾದಾಗ ಬಳಸುತ್ತಾ ಬಂದರೆ
  ವರ್ಷದವರೆಗೆ ಇಡಬಹುದು. ಸೀಗೆಕಾಯಿಯಲ್ಲಿ ವಿಟಮಿನ್ ಸಿ,ಡಿ ಇರುವುದರಿಂದ ಕೂದಲಿನ ಆರೊಗ್ಯಕ್ಕೆ
  ಒಳ್ಳೆಯದು. * ಮೆಂತೆಯಲ್ಲಿ ನಿಕೋಟಿನ್ ಆಸಿಡ್, ಪ್ರೊಟೀನ್ ಇದ್ದು ಕೂದಲಿನ ಬುಡವನ್ನು
  ಗಟ್ಟಿಯಾಗಿಸುತ್ತದೆ. * ಕರಿಬೇವಿನ ಎಲೆ ಕೂದಲಿಗೆ ಕಪ್ಪು ಬಣ್ಣವನ್ನು ನೀಡುತ್ತದೆ. * ತುಳಸಿ ಕೂದಲು
  ಉದುರುವುದನ್ನು ತಡೆಗಟ್ಟುತ್ತದೆ ಹಾಗೂ ತಲೆ ಹೊಟ್ಟು ಬರುವುದಿಲ್ಲ. * ಅಂಟ್ವಾಳ ಕೂದಲಿನಲ್ಲಿರುವ

ಕೊಳೆಯನ್ನು ಹೋಗಲಾಡಿಸುವಲ್ಲಿ ಸಹಕಾರಿ. ನೈಸರ್ಗಿಕ ಪರಿಹಾರಗಳಿಂದ ಕೂದಲಿನ ರಿಪೇರಿ
ಮಾಡುವುದು ಶಾಶ್ವತ ಫಲವನ್ನು ನೀಡುತ್ತದೆ. ನಿಯಮಿತ ಎಣ್ಣೆಯ ಬಳಕೆ, ಮೈಲ್ಡ್ ಶಾಂಪೂವನ್ನು
ಉಪಯೋಗಿಸುವುದು, ಮೊಸರು, ಲಿಂಬೆ, ಮೊಟ್ಟೆಯ ಹೇರ್‌ಪ್ಯಾಕ್‌ನೊಂದಿಗೆ ಇನ್ನಿತರ ಹೇರ್
ಪ್ಯಾಕ್‌ಗಳ ಬಳಕೆಯನ್ನು ಕೂದಲಿಗೆ ಮಾಡಿ. ಆದಷ್ಟು ಮೈಲ್ಡ್ ಶ್ಯಾಂಪೂ ಬಳಸಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ