ಬೊಜ್ಜು ನಿಯಂತ್ರಿಸಬೇಕೇ? ಪ್ಯಾಕೇಟ್ ಚಿಪ್ಸ್ ಅವೈಡ್ ಮಾಡಿ

  • by

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರು ಪ್ಯಾಕೇಟ್ ಚಿಪ್ಸ್ ಹೆಚ್ಚಾಗಿ ಸೇವಿಸುತ್ತಾರೆ. ಆದ್ರೆ ನಿಮ್ಗೆ ಗೊತ್ತಾ.. ಪ್ಯಾಕೇಟ್ ಚಿಪ್ಸ್ ನಲ್ಲ ಹಾನಿಕಾರಕ ಹೆಚ್ಚಿನ ಸೋಡಿಯಂ ಇರುವುದರಿಂದ ಮಕ್ಕಳು, ಸೇರಿದಂತೆ ವಯಸ್ಕರು ಪ್ಯಾಕೇಟ್ ಚಿಪ್ಸ್ ಸೇವಿಸುವುದಕ್ಕೂ ಮುನ್ನ ಎಚ್ಚರವಹಿಸಬೇಕು,ಏಕೆಂದರೆ ಪ್ಯಾಕೇಟ್ ಚಿಪ್ಸ್ ಮಕ್ಕಳಿಗೆ ಸ್ಥೂಲಕಾಯ ಸೇರಿದಂತೆ ಮೂತ್ರಪಿಂಡ, ಹಾಗೂ ಬಿಪಿ ಸಮಸ್ಯೆಗಳು ಅಧಿಕವಾಗುವ ಸಾಧ್ಯತೆ ಹೆಚ್ಚು… ಪ್ಯಾಕೇಟ್ ಚಿಪ್ಸ್ ತಿನ್ನುವುದರಿಂದ ಮಧುಮೇಹ ಉಂಟಾಗುತ್ತದೆ. ಪ್ಯಾಕೇಟ್ ಚಿಪ್ಸ್ ತಿನ್ನುವುದರಿಂದ ಅನಾನೂಕೂಲಗಳು ಇಲ್ಲಿವೆ.

stop eating, packet chips, 
ಬೊಜ್ಜು , ಪ್ಯಾಕೇಟ್ ಚಿಪ್ಸ್ , ಅಪಾಯಕಾರಿ

ಚಿಪ್ಸ್ ಹೆಚ್ಚಾಗಿ ಕ್ಯಾಲೋರಿಗಳನ್ನು ಹೊಂದಿದೆ. ಇದು ತೂಕ ಹೆಚ್ಚಾಗಲು ಮತ್ತು ಬೊಜ್ಜಿಗೆ ಕಾರಣವಾಗುತ್ತದೆ. 28 ಗ್ರಾಂ ಕ್ಯಾಲೋರಿಗಳನ್ನು ಹೊಂದಿರುತ್ತದೆ. 2015ರಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ಹುರಿದ ಆಲುಗಡ್ಡೆ ಚಿಪ್ಸ್ ಸ್ಳೂಲಕಾಯ ಅಪಾಯ ಹೆಚ್ಚಿಸುವ ಸಾಧ್ಯತೆ ಇರುತ್ತದೆ. 

ನಿಮ್ಮ ಮಗು ನಿರಂತರವಾಗಿ ಚಿಪ್ಸ್ ತಿನ್ನುತ್ತಿದ್ದರ ಪೌಷ್ಟಿಕಾಂಶ ಕೊರತೆ ಎದುರಾಗಬಹುದು. ಚಿಪ್ಸ್ ಬಹಳ ಕಡಿಮೆ ಪ್ರಮಾಣದ ಜೀವಸತ್ವಗಳು ಹಾಗೂ ಖನಿಜಗಳನ್ನು ಹೊಂದಿರುತ್ತದೆ. ಮತ್ತು ದೇಹವು ಪೋಷಣೆಯನ್ನು ಪಡೆಯುವುದಿಲಲ್. ಚಿಪ್ಸ್ ನಲ್ಲಿ ಸೋಡಿಯಂ ಅಧಿಕವಾಗಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ. ದೇಹದಲ್ಲಿ ಸೋಡಿಯಂ ಅಧಿಕವಾಗಿ ಸೇವಿಸುವುದರಿಂದ  ಅನೇಕ ರೋಗಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇವುಗಳಲ್ಲಿ ಪಾರ್ಶ್ವ ವಾಯು ಮತ್ತು ಹೃದಯ ಮತ್ತು ಮೂತ್ರಪಿಂಡದ ಕಾಯಿಲೆ ಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. 

28 ಗ್ರಾಂ ಆಲುಗಡ್ಡೆ ಚಿಪ್ಸ್ 120 ಮಿಲಿ ಗ್ರಾಂ ನಿಂದ 180 ಮಿಲಿಗ್ರಾಂ ಸೋಡಿಯಂ ಅನ್ನು ಹೊಂದಿರುತ್ತದೆ.ದಿನದಲ್ಲಿ ಎಷ್ಟು ಉಪ್ಪು ತೆಗೆದುಕೊಳ್ಳಬೇಕು ಎಂಬುದನ್ನು ವೈದ್ಯರ ಸಲಹೆ ಪಡೆಯಬೇಕು, ದಿನದಲ್ಲಿ 2,300 ಮಿಗ್ರಾಂ ಗಿಂತ ಹೆಚ್ಚು ಉಪ್ಪನ್ನು ತೆಗೆದುಕೊಳ್ಳಬಾರದು. ಈ ಪ್ರಕಾರ, ದಿನದಲ್ಲಿ 2,300 ಮಿ.ಗ್ರಾಂ ಗಿಂತ ಹೆಚ್ಚು ಉಪ್ಪನ್ನು ತೆಗೆದುಕೊಳ್ಳಬಾರದು. ಹೀಗೆ ಮಾಡಿದರೆ, ಅಧಿಕ ರಕ್ತದೋತ್ತಡ ಸೇರಿದಂತೆ ಮೂತ್ರಪಿಂಡದ ಅನೇಕ ಮಾರಕ ಕಾಯಿಲೆಗಳು ಉಂಟಾಗಬಹುದು, 

ಇನ್ನು ಪ್ಯಾಕೇಟ್ ಚಿಪ್ಸ್ ತಿನ್ನುವುದರಿಂದ ಮಕ್ಕಳಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಇದ್ರಿಂದ ಬೊಜ್ಜು ಹೆಚ್ಚಾಗುವುದಲ್ಲದೇ, ತೂಕ ಕೂಡಾ ಹೆಚ್ಚಾಗುತ್ತದೆ. ಚಿಪ್ಸ್ ಹೆಚ್ಚು ಡಿಪ್ ಆಗಿ ಫ್ರೈ ಮಾಡಲಾಗುತ್ತದೆ. ಇದು ಅಪಯಕಾರಿ ಬೊಜ್ಜು ಸಂಗ್ರಹವಾಗಲು ಸಹಾಯ ಮಾಡುತ್ತದೆ. ಈ ಬೊಜ್ಜು ಮಕ್ಕಳ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗುತ್ತದೆ. 

ಇನ್ನು ಆಲುಗಡ್ಡೆ ಚಿಪ್ಸ್ ಅನ್ನು ಗುಣಮಟ್ಟದ ಪದಾರ್ಥಗಳಿಂದ ತಯಾರಿಸಲಾಗುವುದಿಲ್ಲ. ಆಘಾತಕಾರಿ ಸಂಗತಿ ಎಂದರೆ, ಪ್ಯಾಕೇಟ್ ಮಾಡಲಾದ ಚಿಪ್ಸ್ ಗಳನ್ನು ಕಳಪೆ ಗುಣಮಟ್ಟದ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದರ ವೆಚ್ಚವನ್ನು ಕಡಿಮೆ ಮಾಡಲು ಚಿಪ್ಸ್ ತಯಾರಕರು ಇಂತಹ ಎಣ್ಣೆ ಉಪಯೋಗಿಸುವುದು ಹೆಚ್ಚು. ಆಹಾರ ತಜ್ಞರ ಪ್ರಕಾರ, ಈ ಚಿಪ್ಸ್ ಸೇವಿಸುವುದು ಎಂದರೆ 5 ಲೀಟರ್ ಅಡುಗೆ ಎಣ್ಣೆ ಸೇವಿಸಿದಷ್ಟು ಹಾನಿಕಾರಕವಾಗಿದೆ. ಈ ನಾಲಿಗೆಗೆ ರುಚಿಯಾಗಿ, ಟೇಸ್ಟಿಯಾಗಿ ಅನಿಸಿದರೂ, ಅಷ್ಟೇ ಹಾನಿಕಾರಕ ಎಂದೇ ಹೇಳಬಹುದು. ಇದನ್ನು ಜಂಕ್ ಫುಡ್ ವಿಭಾಗದಲ್ಲೂ ಸೇರಿಸಲಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಜೀರ್ಣಾಂಗವ್ಯೂಹಕ್ಕೆ ನೂಡಲ್ಸ್ ಹಾಗೂ ಚಿಪ್ಸ್ ಫ್ರೈ ಗಳು ಹೆಚ್ಚು ಅನಾರೋಗ್ಯವನ್ನುಂಟು ಮಾಡುತ್ತವೆ ಎಂದು ಹೇಳಬಹುದು. 

stop eating, packet chips, 
ಬೊಜ್ಜು , ಪ್ಯಾಕೇಟ್ ಚಿಪ್ಸ್ , ಅಪಾಯಕಾರಿ

ಅಲ್ಲದೇ ಆಲುಗಡ್ಡೆ ಚಿಪ್ಸ್ ನಲ್ಲಿ ಸೋಡಿಯಂ ಅಧಿಕವಾಗಿದ್ದು, ಇದನ್ನು ಸೇವಿಸುವುದರಿಂದ ರಕ್ತದೋತ್ತಡ ಹೆಚ್ಚಳಕ್ಕೆ ಕಾರಣವಾಗಬಹುದು. ವರದಿ ಪ್ರಕಾರ, ಪ್ಯಾಕೇಟ್ ಚಿಪ್ಸ್ ಸುಮಾರು 120 ರಿಂದ 180 ಮಿಲಿ ಗ್ರಾಂ ಸೋಡಿಯಂ ಅನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ಸೇವಿಸಿದಾಗ ದೇಹಕ್ಕೆ ಅಪಾಯಕಾರಿಯಾಗುವುದಲ್ಲದೇ, ಪಾರ್ಶ್ವವಾಯು, ಹೃದಯದ ವೈಫಲ್ಯ  ಹೃದಯದ ಕಾಯಿಲೆ ಹಾಗೂ ಮೂತ್ರಪಿಂಡದ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಹೆಚ್ಚು. 

ಮಧುಮೇಹ ಕಾಯಿಲೆ ಅಪಾಯ

ಆಲುಗಡ್ಡೆ ಚಿಪ್ಸ್ ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಅಲ್ಲದೇ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಳಿತವಾಗುತ್ತದೆ ತಜ್ಞರ ಪ್ರಕಾರ, ಆಲುಗಡ್ಡೆ ಚಿಪ್ಸ್ , ಟೈಪ್ 2 ಮಧುಮೇಹ ಹೆಚ್ಚಳವಾಗಲು ಕಾರಣವಾಗಬಹುದು. 

ಚಿಪ್ಸ್ ನಲ್ಲಿ ಕೆಟ್ಟ ಕೊಬ್ಬು ಇರುವುದರಿಂದ ಇದು ಮಿದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಿದುಳಿನ ಕಾರ್ಯ ನಿಧಾನವಾಗುತ್ತದೆ. ತಜ್ಞರ ಪ್ರಕಾರ, ಸ್ಥೂಲಕಾಯದ ಮಕ್ಕಳು ನಿಧಾನ ವಾಗಿ ಕಲಿಕೆಗೆ ಇದು ಕೂಡಾ ಕಾರಣವಾಗಿದೆ ಎಂದು ಹೇಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ