ಫಿಟ್ ಆಗಿರಬೇಕೇ..? ಮನೆಯಲ್ಲೇ ಮಾಡಿ ವರ್ಕೌಟ್.! (How To Stay Fit – 5 Exercises You Should Do Everyday )

  • by
power yoga

ಕೊರೊನಾ ಭಯ ಇಡೀ ಪ್ರಪಂಚವನ್ನೇ ಆವರಿಸಿದೆ. ಇಂಥ ಸಂದರ್ಭದಲ್ಲಿ ಮನೆಯಲ್ಲೇ ಬಂಧಿಯಾಗುವ ಪರಿಸ್ಥಿತಿ ಬಂದೊದಗಿದೆ. ಫಿಟ್ನೆಸ್ ಪ್ರಿಯರೂ ಜಿಮ್ ಗೆ ಹೋಗದೇ, ಮನೆಯಲ್ಲೇ ವರ್ಕೌಟ್ ಮಾಡ್ತಿದ್ದಾರೆ. ಅನಾರೋಗ್ಯ ನಿಮ್ಮನ್ನು ಕಾಡದೇ ಇರಲು, ಫಿಟ್ ಆಗಿರಲು ಮನೆಯಲ್ಲೇ ಕೆಲ ಯೋಗಾಸನಗಳನ್ನು ಮಾಡಬಹುದು.

ಕಾರ್ಡಿಯೋ ಬದಲು ಸೈಕ್ಲಿಂಗ್

ಜಿಮ್ ನಲ್ಲಿ ಗಂಟೆಗಳ ಕಾಲ ಟ್ರೆಡ್ ಮಿಲ್ ನಲ್ಲಿ ನಿರಂತರವಾಗಿ ಓಡುವ ಅಭ್ಯಾಸ ನಿಮ್ಮಲ್ಲಿದ್ದರೆ, ಟ್ರೇಡ್ ಮಿಲ್ ನಲ್ಲಿ 5 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚು ಓಡಿಸುವ ಅಭ್ಯಾಸ ಹೊಂದಿದ್ದರೆ, ಮೂರು ಕಿ. ಮೀ ವರಗೂ ಸೈಕ್ಲಿಂಗ್ ಮಾಡಬಹುದು. ಸೈಕ್ಲಿಂಗ್ ಮಾಡುವುದಕಿಂದ ಫಿಟ್ ಆಗಿರಲು ಸಾಧ್ಯ. ದಿನಕ್ಕೆ ಕನಿಷ್ಠ 1 ಗಂಟೆಗಳ ಕಾಲ ಸೈಕಲ್ ಓಡಿಸಿ, ಫಿಟ್ ಆಗಿರಲು ಸಾಧ್ಯವಾಗುತ್ತದೆ.ರನ್ನಿಂಗ್ , ರನ್ನಿಂಗ್ ನಿಮ್ಮ ಹೆಚ್ಚಿನ ಕ್ಯಾಲೋರಿಗಳನ್ನು ತೆಗೆದು, ನಿಮ್ಮನ್ನು ಫಿಟ್ ಆಗಿರುಸತ್ತದೆ. ವಾಕಿಂಗ್ ಗಿಂತ ವೇಗವಾಗಿ ನೀವು ಕ್ಯಾಲೋರಿ ಕಳೆದುಕೊಳ್ಳುವುದಕ್ಕಿಂತ ನೀವು ನೀಡುವ ಸಮಯವನ್ನು ಮಿತಿಗೊಳಿಸಬೇಕು.

ಕ್ರೀಡೆಯಲ್ಲಿ ಪಾಲ್ಗೊಳ್ಳುವುದು

ಯಾವುದಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಫಿಟ್ ಆಗಿರಬಹುದು. ನಿಮ್ಮ ಗೆಳೆಯರು, ಹಾಗೂ ಕುಟುಂಬ ಸದಸ್ಯರ ಜತೆ ಆಟವಾಡಬಹುದು. ಫ್ರಿಸ್ಬೀ, ವಾಲಿಬಾಲ್, ಫುಟ್ ಬಾಲ್, ಯಾವುದಾದರೂ ಸರಿ, ನಿಮ್ಮಿಷ್ಟದ ಆಟವನ್ನು ಆಡಿ, ನಿಮ್ಮ ಫಿಟ್ನೆಸ್ ಕಾಯ್ದುಕೊಳ್ಳಬಹುದು.

ಸ್ವಿಮ್ಮಿಂಗ್

ಸ್ವಿಮ್ಮಿಂಗ್ ದೈಹಿಕ ಆಱೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳಬಹುದು. ಈಜುವುದರಿಂದ ಒತ್ತಡ ನಿವಾರಿಸಿಕೊಳ್ಳಬಹುದು. ವಾಟರ್ ಏರೋಬಿಕ್ಸ್ ಹಾಗೂ ವಾಟರ್ ಯೋಗ ಎಂದು ವೈವಿಧ್ಯಮಯ ಫಿಟ್ನೆಸ್ ಕ್ರೀಡೆಗಳನ್ನು ಟ್ರೈ ಮಾಡಬಹುದು.

ಹೈಕಿಂಗ್

ಬೆಟ್ಟ ಗುಡ್ಡಗಳನ್ನು ಪ್ರಾಕೃತಿಕ ಸೌಂದರ್ಯವನ್ನು ಹುಡುಕಿಕೊಂಡು ಹತ್ತಿ ಹೋಗುವುದು ಯಾರಿಗೆ ಬೇಡ ಹೇಳಿ. ಪ್ರಕೃತಿ ಮಡಿಲಲ್ಲಿ. ಹೈಕಿಂಗ್ ಗಿಂತ ಉತ್ತಮ ಫಿಟ್ನೆಸ್ ಬೇರೊಂದಿಲ್ಲ. ತಿಂಗಳಲ್ಲಿ ಕನಿಷ್ಠ 2 ಬಾರಿಯಾದರೂ ಹೈಕ್ ಹೋಗಿ.

ಮನೆಯಲ್ಲೇ ಮಾಡಬಹುದಾದ ಯೋಗಾಸನಗಳು…!

ಈ ಭಂಗಿಯು ನಿಮ್ಮ ಮನಸ್ಸನ್ನು ಏಕಾಗ್ರತೆಯ ಮೇಲೆ ಕೇಂದ್ರಿಕರಿಸುವಂತೆ ಮಾಡುತ್ತದೆ. ಮತ್ತು ಒತ್ತಡವನ್ನು ನಿರ್ವಹಿಸಲು ಅತ್ಯುತ್ತಮ ಮಾರ್ಗವಾಗಿದೆ. ಇದಲ್ಲದೇ, ಇದು ಭುಜ ಹಾಗೂ ಸೊಂಟಗಳಲ್ಲಿನ ಬಿಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿವಾರಿಸುತ್ತದೆ.

ಸುಪ್ಚ ಕೊನಾಸನ

ಇದು ಸೊಂಟ, ಒಳ ತೊಡೆಗಳು ಮತ್ತು ತೊಡೆಸಂದುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ನಾವು ಉದ್ವೇಗ ಹಾಗೂ ಒತ್ತಡವನ್ನು ಹಿಡಿದಿಟ್ಟುಕೊಳ್ಳುವ ಮಾರ್ಗವಾಗಿದೆ. ಉತ್ತನಾಸನ ಇದು ಮನಸ್ಸನ್ನು ವಿಶ್ರಾಂತಿ ಮಾಡಲು, ಹಾಗೂ ನರಮಂಟಲವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಶಾಂತ ಮನಸ್ಸಿನ ಜೆತೆಗ ಶಾಂತ ಭಾವನೆಗಳನ್ನು ಉತ್ತೇಜಿಸಲು ನೆರವಾಗುತ್ತದೆ.

ಬಾಲಾಸನಾ

ಸೊಂಟ , ತೊಡೆ ಮತ್ತು ಪಾದಗಳನ್ನು ಹಿಗ್ಗಿಸುವಾಗ ಮಗುವಿನ ಭಂಗಿ, ಇದು ಒತ್ತಡ ಆಯಾಸವನ್ನು ಕಡಿಮೆ ಮಾಡುತ್ತದೆ.
ಸವಾಸನ ಈ ಭಂಗಿ ದೇಹವನ್ನು ಸುಲಭಗೊಳಿಸುತ್ತದೆ . ಮತ್ತು ವಿಶ್ರಾಂತಿ ಒದಗಿಸುತ್ತದೆ. ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡುವಾಗ ದೇಹ ಹಾಗೂ ಮನಸ್ಸು ಮತ್ತು ಚೈತನ್ಯವನ್ನು ಪುನಃ ಯೌವನಗೊಳಿಸಲು ಇದು ಸಹಾಯ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ