ಕೊರೊನಾ ವಿರುದ್ಧ ಸಮರ..’ಮುಂಜಾಗ್ರತೆ ಕ್ರಮ ಅನುಸರಿಸೋಣ’- ಶ್ರೀಶೈಲ ಜಗದ್ಗುರುಗಳು

  • by

ಭಾರತದೆಲ್ಲೆಡೆ ಕಿಲ್ಲರ್ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ವಿರುದ್ಧ ಸಮರ ಸಾರಲು ಇಡೀ ಭಾರದಾಂದ್ಯತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಭಕ್ತರಿಗೆ, ಇಡೀ ಜನತೆಗೆ ಸಲಹೆ ನೀಡಿದ್ದಾರೆ.

Srisaila Jagadguru, Channa Siddharama, Panditaradhya , Coronavirus, ಶ್ರೀಶೈಲ ಜಗದ್ಗುರು, ಡಾ.ಸಿದ್ದರಾಮ ಸ್ವಾಮೀಜಿ, ಕೊರೊನಾ ವೈರ್ಸ, ನಿಯಂತ್ರಣ

‘ಆರೋಗ್ಯಕರ ಸಾಮಾಜಿಕ ಅಂತರ ಕಾಪಾಡಿ’

ಈ ಕುರಿತು ಮಾತನಾಡಿರುವ ಶ್ರೀಗಳು, ಭಾರತವು ಮತ್ತೊಂದು ಇಟಲಿ ಆಗಬಾರದು. ಆದ್ದರಿಂದ ಯುಗಾದಿ ಹಬ್ಬದ ನೆಪದಲ್ಲಿ ಹಣ್ಣು, ಕಾಯಿ, ಪೂಜಾ ಸಾಮಾಗ್ರಿ ಮುಂತಾದ ವಸ್ತುಗಳನ್ನು ಖರೀದಿಸಲು ಕೂಡಾ ಯಾರು ಮನೆಯಿಂದ ಹೊರ ಬರಬಾರದು. ಮನೆಯಲ್ಲಿರುವ ಸಾಮಾಗ್ರಿಗಳನ್ನೇ ಮಾತ್ರ ಬಳಸಿ. ಆರೋಗ್ಯಕರ ಸಾಮಾಜಿಕ ಅಂತರ ಕಾಪಾಡಿ. ಯುಗಾದಿ ಹಬ್ಬ ಆಚರಣೆ ಮಾಡಿ ಎಂದು ಶ್ರೀಶೈಲ್ ಶ್ರೀಗಳು ಸಲಹೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ದೇಶದಲ್ಲಿ ಈಗ ಎರಡನೇ ಹಂತದಲ್ಲಿರುವ ಕೊರೊನಾ ವೈರಸ್ ಮೂರನ್ ಹಂತಕ್ಕೆ ಹೋಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಒಂದು ವೇಳೆ ಮೂರನೇ ಹಂತಕ್ಕೆ ತಲುಪಿದರೆ, ಮನುಷ್ಯರ ಮಾರಣಾಹೋಮವೇ ಆರಂಭವಾಗಬಹುದು. ಹಾಗಾಗಿ ಕೊರೊನೊ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಂದು ಡಾ. ಚೆನ್ನಸಿದ್ದರಾಮ ಜಗದ್ಗುರುಗಳು ತಿಳಿಸಿದ್ದಾರೆ.

Srisaila Jagadguru, Channa Siddharama, Panditaradhya , Coronavirus, ಶ್ರೀಶೈಲ ಜಗದ್ಗುರು, ಡಾ.ಸಿದ್ದರಾಮ ಸ್ವಾಮೀಜಿ, ಕೊರೊನಾ ವೈರ್ಸ, ನಿಯಂತ್ರಣ

‘ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬೇಡಿ..’

ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬೇಡಿ ಎಂದು ನಿಷೇಧಾಜ್ಞೆ ಹೊರಡಿಸಿ ಕರ್ಫ್ಯೂ ಜಾರಿ ಮಾಡಿದೆ. ದೇಶದ ಪ್ರತಿಯೊಬ್ಬ ಪ್ರಜೆ ಇದನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸಾರ್ವಜನಿಕರಿಗೆ ಕರೆ ಕೊಡುತ್ತಿದ್ದೇನೆ ಎಂದರು,

‘ಯುಗಾದಿ ಸರಳವಾಗಿ ಆಚರಣೆ ಮಾಡಿ..’

ಯುಗಾದಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿಯಯ ಮನೆಯಲ್ಲಿಯೇ ಎಲ್ಲರೂ ಸಂಕ್ಷಿಪ್ತ ಯುಗಾದಿ ಆಚರಿಸಬೇಕು. ಸರ್ವ ಜನರಿಗೂ ವಿಶೇಷವಾಗಿ ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ ಎಂದು ಶ್ರೀಗಳು ತಿಳಿಸಿದರು.

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹೋಮ, ವಿಶೇಷ ಪೂಜೆ..!

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೊರೊನಾ ವೈರಸ್ ತೆಡೆಗಟ್ಟಲು ಮಹಾ ಮೃತ್ಯುಂಜಯ ಹೋಮ, ಜಪ, ತಪ ಮುಂತಾದ ಪೂಜೆಗು ಏಕಾಂತದಲ್ಲಿ ನಿರಂತರ ನಡೆಯುತ್ತವೆ. ಅಲ್ಲದೇ ಶ್ರೀಶೈಲದ ಯುಗಾದಿ ಜಾತ್ರೆಯನ್ನು ತುಂಬಾ ಸರಳವಾಗಿ ಆಚರಿಸಲಾಗುತ್ತದೆ. ಶ್ರೀಶೈಲದಲ್ಲಿ ಜಾತ್ರೆ ನಡೆಯಲಿಲ್ಲ. ಜಾತ್ರೆಯಲ್ಲಿ ನಾವು ಪಾಲ್ಗೊಳ್ಳಲಿಲ್ಲ ಎಂದು ಯಾರೂ ಅಸಮಾಧಾನ ಮಾಡಿಕೊಳ್ಳಬಾರದು. ಪರಿಸ್ಥಿತಿ ಅರ್ಥ ಮಾಡಿಕೊಂಡು ಸರ್ವರೂ ಸಮಾಧಾನದಿಂದ ಆತ್ಮ ನಿಯಂತ್ರಣ ಪೂರ್ವಕ ಈ ಮಹಾರೋಗವನ್ನು ಎದುರಿಸೋಣ ಎಂದು ಭಕ್ತರಲ್ಲಿ, ಕರುನಾಡಿನ ಜನತೆಯಲ್ಲಿ ಡಾ. ಚೆನ್ನಸಿದ್ದರಾಮ ಜಗದ್ಗುರುಗಳು ಕರೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ