ಕೊರೊನಾ ವೈರಸ್ ಬಗ್ಗೆ ಶ್ರೀ. ರವಿಶಂಕರ ಗುರೂಜಿ ನೀಡಿದ ಸಲಹೆಗಳೇನು..?

  • by


ಕೊರೊನಾ ವೈರಸ್ ಒಂದು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಇದರಿಂದ ನಮ್ಮ ಜೀವನ ಹಾಗೂ ಸಮಾಜದಲ್ಲಿ ನಮ್ಮ ಪಾತ್ರಗಳು ಹಾಗೂ ಜವಾಬ್ದಾರಿಗಳನ್ನು ಪ್ರತಿ ಬಿಂಬಿಸುವ ಒಂದು ಅವಕಾಶ ಬಂದಿದೆ. ಇದಕ್ಕಾಗಿ ನಾವು ತುಂಬಾ ಕಾರ್ಯನಿರತರಾಗಿದ್ದೇವೆ ಎಂದು ಆರ್ಟ್ ಆಫ್ ಲೀವಿಂಗ್ ಪ್ರತಿಷ್ಠಾನದ ಸಂಸ್ಥಾಪಕರು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಆಧ್ಯಾತ್ಮಿಕತೆಯು ಪ್ರೀತಿ, ಕರುಣೆ ಮತ್ತು ಉತ್ಸಾಹದ ಜೀವನ ಮೌಲ್ಯಗಳನ್ನು ವರ್ಧಿಸುತ್ತದೆ ಎಂಬುದು ರವಿಶಂಕರ್ ಗುರೂಜೀ ಅವರ ಅಭಿಪ್ರಾಯ. ಇದು ಯಾವುದೇ ಧರ್ಮಕ್ಕೆ ಅಥವಾ ಸಂಸ್ಕೃತಿಗೆ ಸೀಮಿತವಲ್ಲ. ಆದರೆ ವಿಶ್ವದ ಧರ್ಮಗಳ ಹೃದಯಭಾಗವಾಗಿದೆ. ಆದ್ದರಿಂದ ಇದು ಎಲ್ಲಾ ಜನರಿಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಸನ್ನಿವೇಶಗಳನ್ನು ಆಲೋಚಿಸಲು ಮತ್ತು ನಮ್ಮ ಜೀವನದ ಸಂದರ್ಭ ಹೇಗಿರಬೇಕು ಎಂದು ನೋಡಲು ಸಮಯವನ್ನು ಬಳಸಿ. ಇದು ತುಂಬಾ ಪ್ರಯೋಜನಾಕಾರಿಯಾಗಬಲ್ಲದ್ದು ಎಂದು ಕರೆ ನೀಡಿದ್ದಾರೆ.


sri-sri-ravi-shankar-guruji-message-coronavirus-situation, ಶ್ರೀ ಶ್ರೀ ರವಿಶಂಕರ್ ಗುರೂಜಿ, ಕೊರೊನಾ ವೈರಸ್ , ಸಲಹೆಗಳು

ನಮ್ಮಲ್ಲಿ ಹಲವು ಜನ ಯಾವುದೇ ಸಮಯವನ್ನು ತಮ್ಮೊಂದಿಗೆ ಅಷ್ಟಾಗಿ ಕಳೆದಿರುವುದಿಲ್ಲ. ಆ ಮೌನವನ್ನು ಸವೆಯಬೇಕು. ಸ್ವಲ್ಪ ಸಮಯ ನಮ್ಮೊಂದಿಗೆ ಕಳೆಯಬೇಕು. ನಾವು ಎಷ್ಟು ಸಕ್ರೀಯರಾಗಿದ್ದೇವೆ ಎಂದರೆ, ಮಾಡುವವರು ಹಾಗೂ ನೋಡುವರ ದೃಶ್ಯವಳಿಗಳಲ್ಲಿ ಕಳೆದು ಹೋಗುತ್ತಿದ್ದೇವೆ. ಇದೀಗ ಅಸ್ತಿತ್ವಕ್ಕೆ ಬದ್ಧರಾಗಿ ಹಾಗೂ ದೃಶ್ಯಾವಳಿಗಳಿಂದ ಹಿಂತಿರುಗುವ ಸಮಯ ಬಂದಿದೆ. ಅದುವೇ ಯೋಗಾ.

ರವಿಶಂಕರ್ ಗುರೂಜೀ ನೀಡಿದ ಸಲಹೆಗಳೇನು..?

ಕೊರೊನಾ ಬಗ್ಗೆ ತುಂಬಾ ಭಯಪಡುವುದು ಬೇಡ. ಈ ಹಿಂದೆ ಸಾರ್ಸ್ , ಹಂದಿ ಜ್ವರ, ಮತ್ತು ಇಂತಹ ಅನೇಕ ಕಾಯೆಲೆಗಳು ಎದುರಾಗಿದ್ದವು . ವಿಶ್ವ ಯುದ್ಧದ ನಂತರ ಪ್ಲೇಗ್ (ಅತಿದೊಡ್ಡ ಸಾಂಕ್ರಾಮಿಕ ಕಾಯಿಲೆ ) ಕಾಯಿಲೆಗಳನ್ನು ನೋಡಿದ್ದೇವೆ. ಹಾಗಾಗಿ ಇದು ತಾತ್ಕಾಲಿಕ ಹಂತ, ನಿಶ್ಚಿತ್ತೆಯಿಂದಿರಿ. ನಾವು ಇದನ್ನು ಜಯಿಸುತ್ತೇವೆ ಎಂದು ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ನಿಮ್ಮೆಲ್ಲರಿಗೂ ಆರ್ಶೀವಾದವಿದೆ… ಹೆದರಬೇಡಿ.. ನಿವೆಲ್ಲರೂ ಚೆನ್ನಾಗಿರುತ್ತೀರಿ.. ಕೇವಲ ನಿಯಮಗಳನ್ನು ಅನುಸರಿಸಿ. ಮುನ್ನೇಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ.. ಅಮೃತ್ ಹಾಗೂ ಶಕ್ತಿ ಹನಿಗಳಂತಹ ರೋಗ ನಿರೋಧಕಗಳ ವರ್ಧಕಗಳನ್ನು ತೆಗೆದುಕೊಳ್ಳಿ. ಅರಶಿಣ ಹಾಗೂ ಕರಿಮೆಣಸಿನೊಂದಿಗೆ ತಯಾರಿಸಿದ ಆಹಾರ ಸೇವಿಸಿ. ಸಿಹಿ ತಿಂಡಿಗಳನ್ನು ಹಾಗೂ ಸಕ್ಕರೆಯನ್ನು ಸೇವಿಸುವುದು ಕಡಿಮೆ ಮಾಡಿ. ಇವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ತೀವ್ರವಾಗಿ ತಗ್ಗಿಸುತ್ತವೆ. ಹಾಗಾಗಿ ಇವುಗಳನ್ನು ಹೆಚ್ಚು ತಿನ್ನುವುದನ್ನು ಅವೈಡ್ ಮಾಡಿ.

‘ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಧ್ಯಾನ ಮಾಡಿ..’-

ಪ್ರತಿ ದಿನ ಮೂರು ಬಾರಿ ಧ್ಯಾನ ಮಾಡಿ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುವುದಲ್ಲದೇ, ನಿಮ್ಮ ಭಾವನೆಗಳನ್ನು ಶಾಂತಗೊಳಿಸುತ್ತದೆ. ದೈಹಿಕ ಹಾಗೂ ಭಾವನಾತ್ಮಕ ಶಕ್ತಿಯನ್ನು ಹೊಂದಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಬದುಕುವ ಇಚ್ಛಾಶಕ್ತಿ ಇದ್ದರೆ, ಎಲ್ಲವೂ ಸಾಧ್ಯ ಎಂದು ರವಿಶಂಕರ್ ಗೂರುಜೀ ಹೇಳಿದ್ದಾರೆ.

‘ಟಿವಿ ನೋಡುವುದು ಬೇಡ, ಪುಸ್ತಕ ಓದಿ’

ನೀವು ಹೆಚ್ಚಾಗಿ ಟಿವಿ ನೋಡುವುದನ್ನು ತಪ್ಪಿಸಿ. ಸ್ವಲ್ಪ ಸಮಯ ಓದುವ ಚಟುವಿಕೆ ಮಾಡಿ. ಸೃಜನಾತ್ಮಕವಾಗಿ ಏನನ್ನಾದರೂ ಪ್ರಯತ್ನಿಸಿ. ಕವನಗಳು, ಕಥೆಗಳು ಹಾಗೂ ಅಡುಗೆ , ಆಹಾರವನ್ನು ತಯಾರಿಸಲು ಟ್ರೈ ಮಾಡಿ. ಅಥವಾ ಗಿಟಾರ್ ಕಲಿಯಿರಿ. ಹಾಡನ್ನು ಹಾಡಿ, ಅಥವಾ ಹಾಡುಗಳನ್ನು ಬರೆಯಿರಿ. ಚಿತ್ರಕಲೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಹೀಗೆ ನೀವು ಒಂದು ಬಿಲಿಯನ್ ಕೆಲಸಗಳನ್ನು ಮಾಡಬಹುದು. ಬೇರೇನೂ ಕೆಲಸ ಇಲ್ಲದಿದ್ದರೆ, ಹೊಸ ಭಾಷೆಯನ್ನು ಕಲಿಯಿರಿ. ಅದು ಫ್ರೆಂಚ್, ಹಿಂದಿ, ಸಂಸ್ಕೃತ ಅಥವಾ ಯಾವುದಾದರೂ ಬೇರೆ ಭಾಷೆ ಆಗಿರಬಹುದು. ಆದ್ದರಿಂದ ಆಗ ನೀವು ಎಲ್ಲವನ್ನು ಮಾಡಲು ನಿಮ್ಗೆ ಸಮಯ ಇರುತ್ತದೆ.

ಈಗ ಹೆಚ್ಚಿನವರು ತಮ್ಮ ಕುಟುಂಬ ಸದಸ್ಯರ ಜತೆ ಮನೆಯಲ್ಲಿದ್ದಾರೆ. ನೀವು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದೀರಿ. ಕೇವಲ ಆಲಿಸಿ. ಹೆಚ್ಚು ಮಾತನಾಡಬೇಡಿ. ಸ್ವಲ್ಪ ಮೌನವಾಗಿರಿ. ಕಡಿಮೆ ಮಾತನಾಡಿ.. ಹಾಗೂ ವಾದಗಳನ್ನು ತಪ್ಪಿಸಿ. ‘

sri-sri-ravi-shankar-guruji-message-coronavirus-situation, ಶ್ರೀ ಶ್ರೀ ರವಿಶಂಕರ್ ಗುರೂಜಿ, ಕೊರೊನಾ ವೈರಸ್ , ಸಲಹೆಗಳು

‘ನಕಾರಾತ್ಮಕ ಸುದ್ದಿ ಕೇಳುತ್ತಾ ನಿಮ್ಮ ದಿನ ಕಳೆಯಬೇಡಿ.’

ನಕಾರಾತ್ಮಕ ಸುದ್ದಿಗಳನ್ನು ಕೇಳಲು ನಿಮ್ಮ ದಿನವನ್ನು ಕಳೆಯಬೇಡಿ. ಜಗತ್ತಿನಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತೆ. ಹಾಗಾಗಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅದೇ ವಿಷಯವನ್ನೇ ಪುನರಾವರ್ತಿಸುವುದು, ಅಥವಾ ಅದರ ಬಗ್ಗೆ ಮಾತನಾಡುವುದು ಬೇಡ.

‘ಪುಸ್ತಕ ಓದಿ, ಸ್ನೋಹಿತರೊಂದಿಗೆ ಮಾತನಾಡಿ ‘

ಯೋಗ ವಶಿಷ್ಠ, ಈ ಪುಸ್ತಕ ನಿಮ್ಮ ಮನಸ್ಸನ್ನು ಬೇರೆ ಸಮತಲಕ್ಕೆ ಕೊಂಡೊಯ್ಯುತ್ತದೆ. ಅಥವಾ ಭಗವದ್ಗೀತೆಯಂತಹ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ. ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಿ. ಅವರ ಜತೆ ಚಾಟ್ ಮಾಡಿ. ಅವರನ್ನು ಪ್ರೋತ್ಸಾಹಿಸಿ. ದೂರದ ಸ್ನೇಹಿತರೊಂದಿಗೆ ಮಾತನಾಡಿ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಅವರಿಗೆ ತಿಳಿಸಿ. ಮತ್ತು ಅವರನ್ನು ಅದೇ ಹಾದಿಯಲ್ಲಿ (ಮಾರ್ಗದಲ್ಲಿ) ತರಲು ಪ್ರಯತ್ನಿಸಿ ಎಂದು ರವಿಶಂಕರ್ ಗೂರೂಜಿ ಕೊರೊನಾ ವೈರಸ್ ತಡೆಗಟ್ಟುವು ಕುರಿತು ತಮ್ಮ ಹಿತವಚನದ ಮೂಲಕ ಸಲಹೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ