ಚರ್ಮದ ಸೌಂದರ್ಯ ಹೆಚ್ಚಿಸುತ್ತೆ ಈ ಮಂತ್ರಗಳು..!

  • by

ಸೌಂದರ್ಯ ಎಂಬ ಪದ ಚಿಕ್ಕದಾದರೂ, ತುಂಬಾ ಪವರ್ ಫುಲ್ ಎಂದು ಹೇಳಬಹುದು. ಅತ್ಯಂತ ಪ್ರಾಚೀನ ಕಾಲದಿಂದಲೂ ಸೌಂದರ್ಯ ಹೆಚ್ಚಿನ ಕಲೆಗಳಿಗೆ ಸ್ಫೂರ್ತಿಯಾಗಿದೆ. ಸೌಂದರ್ಯವು ಗುಣವಾಗಿ ಮಾರ್ಪಟ್ಟಿದ್ದು, ಮನಮೋಹಕ ಗುರುತನ್ನು ಪಡೆದಿದೆ. ಪ್ರತಿಯೊಬ್ಬ ಹುಡುಗಿ ಸುಂದರವಾಗಿ ಕಾಣಲು ಬಯಸುತ್ತಾಳೆ. ಜೀವನದುದ್ದಕ್ಕೂ ಸುಂದರ ಹಾಗೂ ಹೊಳೆಯುವ ಚರ್ಮ ಹೊಂದುವ ಬಗ್ಗೆ ಕನಸು ಕಾಣುತ್ತಾಳೆ. ಕೆಲ ಮಹಿಳೆಯರು ದೋಷರಹಿತ ಚರ್ಮ ಹೊಂದಿರುತ್ತಾರೆ. ಆದ್ರೆ ಸುಂದರ ಚರ್ಮ ಪಡೆಯಲು ಯೋಚಿಸಬೇಕಾಗಿಲ್ಲ. ಸುಂದರ ತ್ವಚೆ ನಿಮ್ಮದಾಗಿಸಿಕೊಳ್ಳಲು ವೈದಿಕ ಮಂತ್ರವನ್ನು ಅಭ್ಯಾಸ ಮಾಡುವ ಮೂಲಕ ಪಡೆಯಬಹುದು. ನಿಮ್ಮ ಧನಾತ್ಮಖ ಶಕ್ತಿಯನ್ನು ಆಕರ್ಷಿಸುವ ಮೂಲಕ ಮಂತ್ರಗಳು ನಿಮ್ಮ ಚರ್ಮವನ್ನು ಹೊಳಪಾಗಿಸುತ್ತವೆ ಹಾಗೂ ಸುಂದರವಾಗಿಸುತ್ತವೆ. ಇದು ನಿಮ್ಮ ಮನಸ್ಸು ಮತ್ತು ದೇಹವನ್ನು ಉತ್ತಮ ಸಕಾರಾತ್ಮಕತೆ ಯೋಚಿಸುವಂತೆ ಮಾಡುವುದಲ್ಲದೇ, ಸೌಂದರ್ಯವನ್ನು ಹೆಚ್ಚಿಸುತ್ತದೆ.


soundarya mantra, glowing skin, beauty tips, ಬ್ಟೂಟಿ ಮಂತ್ರಗಳು, ಚರ್ಮ ಹೊಳಪು. ಸೌಂದರ್ಯ ಮಂತ್ರ,

ಆದಿ ಶಂಕರಾಚಾರ್ಯರು ಸೌಂದರ್ಯ ಲಹರಿ ಬಗ್ಗೆ ಹೀಗೆ ವಿವರಿಸುತ್ತಾರೆ… ಸೌಂದರ್ಯ ಎಂಬುದು ಕೇವಲ ಸುಂದರ ನೋಟವಲ್ಲ. ಇದು ಪ್ರಕೃತಿಯ ಸಹಾಯದಿಂದ ಮತ್ತು ಹೊರಗೆ ಅಭಿವೃದ್ಧಿಪಡಿಸುವ ಒಂದು ನಿರ್ದಿಷ್ಟ ದಿಕ್ಕಿಗೆ ಕಾರಣವಾಗುತ್ತದೆ. ಸೌಂದರ್ಯವಿರುವ ವ್ಯಕ್ತಿಗಳನ್ನು ಜನರು ನೋಡಿದಾಗ ಒಳ್ಳೆಯದನ್ನೇ ಅನುಭವಿಸುತ್ತಾರೆ. ಸೌಂದರ್ಯ ಎಂಬುದು ಸ್ವಾಭಾವಿಕತೆಯಿಂದ ಕೂಡಿದೆ.

ತ್ವಚೆ ಬೆಳ್ಳಗಾಗಿಸುವ ಅಥವಾ ಸುಂದರ ಚರ್ಮ ಪಡೆಯಲು ಮಂತ್ರಗಳು..!

ಕೆಲಮೊಮ್ಮೆ ಹುಡುಗಿಯರು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ನೀವು ಯಾವುದೇ ಚರ್ಮದ ಸಮಸ್ಯೆ ಎದುರಿಸುತ್ತಿದ್ದರೆ, ಈ ಮಂತ್ರಗಳು ನಿಮಗೆ ಸಹಾಯ ಮಾಡಬಲ್ಲವು. ಮುಖದ ಮೊಡವೆ, ಸುಕ್ಕುಗಳನ್ನು ತೊಡೆದು ಹಾಕಲು ಮಂತ್ರಗಳು ನೆರವಾಗಬಲ್ಲವು. ಅಲ್ಲದೇ, ವೈದಿಕ ಮಂತ್ರವುು ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ. ಕೆಲವೇ ದಿನಗಳಲ್ಲಿ ಚರ್ಮದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಮುಂಬರುವ ದಿನದಲ್ಲಿ ಈ ಸಮಸ್ಯೆಯನ್ನು ಎಂದಿಗೂ ಎದುರಿಸುವುದಿಲ್ಲ. ಸುಂದರವಾಗಿ ಕಾಣಲು, ಚರ್ಮದ ಮೈ ಬಣ್ಣ ಪಡೆಯಲು ಈ ಮಂತ್ರಗಳು ನೆರವಾಗಬಲ್ಲವು.

ಸೌಂದರ್ಯಕ್ಕಾಗಿ ಪಾರ್ವತಿ ಮಂತ್ರ..!

ಕೆಲವರು ಕಪ್ಪು ಚರ್ಮ ಹೊಂದಿರುತ್ತಾರೆ. ಇದರಿಂದ ಜನರು ಯಾವಾಗಲೂ ನಿಮ್ಮನ್ನು ಗೇಲಿ ಮಾಡುತ್ತಿದ್ದರೆ, ಆಗ ನಿಮ್ಮಲ್ಲಿ ವಿಶ್ವಾಸ ಕಳೆದುಹೋಗುತ್ತದೆ. ಸುಂದರ ಚರ್ಮಕ್ಕಾಗಿ ನೀವು ಯೋಚಿಸಬೇಕಾಗಿಲ್ಲ. ಪಾರ್ವತಿ ಮಂತ್ರವನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಈ ಮಂತ್ರವು ನಿಮ್ಮ ಮೈ ಬಣ್ಣ ಹೆಚ್ಚಿಸುವುದಲ್ಲದೇ, ಮೊದಲಿಗಿಂತಲೂ ನಿಮ್ಮನ್ನು ಉತ್ತಮಗೊಳಿಸುತ್ತದೆ. ತ್ವಚೆಗಾಗಿ ನೀವು ಟೀಕೆಗೆ ಒಳಗಾಗಿದ್ದರೆ ಸೌಂದರ್ಯಕ್ಕಾಗಿ ಪಾರ್ವತಿ ಮಂತ್ರವು ಖಂಡಿತವಾಗಿಯೂ ನಿಮ್ಮನ್ನು ಬದಲಾಯಿಸುತ್ತದೆ.

ಸೌಂದರ್ಯಕ್ಕಾಗಿ ಲಕ್ಷ್ಮೀ ಮಂತ್ರ.!

ಪ್ರತಿ ಹುಡುಗಿ ತನ್ನ ಮದುವೆಯ ದಿನನಂದು ತಾನು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾಳೆ. ಮುಂಬರುವ ದಿನಗಳಲ್ಲಿ ನೀವು ಮದುವೆಯಾಗುತ್ತಿದ್ದರೆ. ಸೌಂದರ್ಯಕ್ಕಾಗಿ ಲಕ್ಷ್ಮೀ ಮಂತ್ರವು ನಿಮ್ಮ ಮದುವೆಯ ದಿನದಂದು ನಿಮ್ಮನ್ನು ಹೊಳೆಯುವಂತೆ ಮಾಡುತ್ತದೆ. ಸುಂದರವಾದ ಚರ್ಮ ಪಡೆಯಲು ಈ ಮಂತ್ರವನ್ನು ಅಭ್ಯಾಸ ಮಾಡಿ. ಇದು ನಿಮ್ಮನ್ನು ಆಕರ್ಷಕವಾಗಿ ಹಾಗೂ ಪ್ರಜ್ವಲಿಸುವಂತೆ ಮಾಡುತ್ತದೆ. ನಿಮ್ಮ ಸಂಗಾತಿ ನಿಮ್ಮತ್ತ ಆಕರ್ಷಿತರಾಗುತ್ತಾರೆ. ಮತ್ತು ಮೊದಲ ನೋಟದಲ್ಲೇ ನಿಮ್ಮನ್ನು ಪ್ರೀತಿಸುತ್ತಾರೆ. ಸೌಂದರ್ಯಕ್ಕಾಗಿ ಲಕ್ಷ್ಮೀ ಮಂತ್ರವು ತುಂಬಾ ಶಕ್ತಿಶಾಲಿಯಾದ ಮಂತ್ರವಾಗಿದೆ. ಅನುಭವಿ ಜ್ಯೋತಿಷಿಯಿಂದ ಈ ಮಂತ್ರವನ್ನು ಕಲಿಯಬಹುದಾಗಿದೆ.

soundarya mantra, glowing skin, beauty tips, ಬ್ಟೂಟಿ ಮಂತ್ರಗಳು, ಚರ್ಮ ಹೊಳಪು. ಸೌಂದರ್ಯ ಮಂತ್ರ,

ಈಗಾಗ್ಲೇ ಲಕ್ಷ್ಮೀ ಮಂತ್ರವು ತುಂಬಾ ಮಹಿಳೆಯರ ಸೌಂದರ್ಯ ಹೆಚ್ಚಿಸಲು ಸಹಾಯ ಮಾಡಿದೆ. ಚರ್ಮದ ಹೊಳಪು ಹೆಚ್ಚಿಸಿದೆ. ಆದ್ದರಿಂದ ನೀವು ಇದನ್ನು ಅಭ್ಯಾಸ ಮಾಡಬಹುದು. ಕೇವಲ 21 ದಿನಗಳಲ್ಲೇ ನಿಮ್ಮ ಮುಖದ ಬದಲಾವಣೆಯನ್ನು ಕಾಣಬಹುದಾಗಿದೆ.

ಈ ಮತ್ರಗಳು ಯಾವಾಗ ಹೇಳಬೇಕು..?

ರಾತ್ರಿಯ ಸಮಯದಲ್ಲಿ, ಸೋಮವಾರ ಈ ಮಂತ್ರವನ್ನು ಪ್ರಾರಂಭಿಸಬೇಕು, ನೀವು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು. ಆಸನ್ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಆಸೆಗಳನ್ನು ಈಡೇರಿಸುವಂತೆ ಹಾಗೂ ನಿಮ್ಮನ್ನು ಸುಂದರವಾಗಿಸಲು ಲಕ್ಷ್ಮೀ ದೇವಿಗೆ ಪ್ರಾರ್ಥಿಸಿ. ನಂತರ ಈ ಮಂತ್ರವನ್ನು 11 ಬಾರಿ ಹೇಳಬೇಕು. ಈ ಮಂತ್ರ ಹೀಗಿದೆ

”ಓಂ ಸೌಂದರ್ಯ ಸೌಂದರ್ಯ ಪ್ರದಾಯ ಸಿದ್ಧಿಮ್ ದೇಹಿ ನಮಃ..”

21 ದಿನಗಳವರೆಗೆ ಈ ಮಂತ್ರವನ್ನು ಪಠಿಸಬೇಕು. ಖಂಡಿತವಾಗಿಯೂ ನಿಮ್ಮ ಚರ್ಮದಲ್ಲಿ ವ್ಯತ್ಸಾಸ ಕಾಣುತ್ತೀರಿ. ಈ ಮಂತ್ರವನ್ನು ಪುರುಷರು ಅಥವಾ ಮಹಿಳೆಯರು ಅಭ್ಯಾಸ ಮಾಡಬಹುದು. ನಿಮ್ಮ ಚರ್ಮದ ಸೌಂದರ್ಯ ಹಾಗೂ ಹೊಳಪು ಕಾಪಾಡಿಕೊಳ್ಳಲು ಈ ಮಂತ್ರವನ್ನು 21 ದಿನಗಳಿಗಿಂತ ಹೆಚ್ಚು ಕಾಲ ಅಭ್ಯಾಸ ಮಾಡಬಹುದು.

soundarya mantra, glowing skin, beauty tips, ಬ್ಟೂಟಿ ಮಂತ್ರಗಳು, ಚರ್ಮ ಹೊಳಪು. ಸೌಂದರ್ಯ ಮಂತ್ರ,

ಸೌಂದರ್ಯ ಸಾಧನೆ ಮಂತ್ರ

ಈ ಮಂತ್ರವು ನಿಮ್ಮ ಕಣ್ಣುಗಳಿಗೆ ಹೊಳಪನ್ನು ತರುತ್ತದೆ. ವ್ಯಕ್ತಿ ಆಕರ್ಷಕವಾಗಿ ಕಾಣಲು ಪ್ರಾರಂಭಿಸುತ್ತಾನೆ. ಆತನ ಮೈಬಣ್ಣ ಪ್ರಕಾಶ ಮಾನದಿಂದ ಕೂಡಿರುತ್ತದೆ. ಈ ಮಂತ್ರವು ವ್ಯಕ್ತಿಯ ಮೈ ಬಣ್ಣಕ್ಕೆ ವಿಶೇಷ ಸೌಂದರ್ಯ ನೀಡುತ್ತದೆ.

ಈ ಮಂತ್ರವನ್ನು ಯಾವಾಗ, ಹೇಗೆ ಮಾಡಬೇಕು…?

ನಿಯಮದ ಪ್ರಕಾರ , ಈ ಮಂತ್ರವನ್ನು ಗುರುವಾರ ಪ್ರಾರಂಭ ಮಾಡಿ, ಸತತ 9 ದಿನಗಳವರೆಗೆ ಜಪಿಸಬೇಕು. ಇದು ವಿಶೇಷ ರೀತಿಯ ಸಾಧನೆಯಾಗಿದ್ದು, ಇಡೀ 9 ದಿನಗಳವೆರೆಗೆ ಪೂರ್ಣ ಭಕ್ತಿಯಿಂದ ಮಾಡಿದರೆ ಯಶಸ್ವಿ ಫಲಿತಾಂಶ ಕಾಣಬಹುದು.

ಮಂತ್ರ ಜಪಿಸುವ ವಿಧಾನ..!

ಬೆಳಿಗ್ಗೆ ಸ್ನಾನ ಮಾಡಿ, ಈ ಮಂತ್ರ ಪಠಿಸಲು ಕುಳಿತುಕೊಳ್ಳಿ. ನೀವು ಉತ್ತರ ದಿಕ್ಕಿಗೆ ಕುಳಿತುಕೊಳ್ಳಬೇಕು. ಈ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕು. ಅನಿವಾರ್ಯ ಕಾರಣಗಳಿಂದಾಗಿ ಒಬ್ಬ ವ್ಯಕ್ತಿ ಈ ಮಂತ್ರವನ್ನು 9 ದಿನಗಳವೆರೆಗೆ ಪಠಿಸಲು ಸಾಧ್ಯವಾಗದಿದ್ದರೆ, ಕನಿಷ್ಠ 3 ದಿನಗಳವೆರೆಗೆ ಪಠಿಸಬೇಕು. 9 ದಿನಗಳ ಕಾಲ ಮಾತೃಕಾ ಮಂತ್ರವನ್ನು ಪಠಿಸುವುದು ಹೆಚ್ಚು ಫಲಪ್ರದವಾಗಿದೆ ಎಂದು ಹೇಳಬಹುದು.

ಸೌಂದರ್ಯ ಮಂತ್ರ ಪಠಿಸುವುದರಿಂದ ಪ್ರಯೋಜನಗಳು..!

ಆಕರ್ಷಣೆ ತ್ವಚೆ ನಿಮ್ಮದಾಗುತ್ತದೆ. ಹೊಳೆಯುವ ಚರ್ಮ , ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಈ ಮತ್ರವು ಪಠಣ ಮಾಡುವುದರಿಂದ ಮುಖದ ಮೇಲೆ ಆಕರ್ಷಣೆ ಉಂಟು ಮಾಡುವುದಲ್ಲದೇ, ಹೊಳೆಯುವ ಚರ್ಮ ಉಂಟು ಮಾಡುತ್ತದೆ. ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ