ನೋಯುತ್ತಿರುವ ಗಂಟಲು ಕೊರೊನಾ ಲಕ್ಷಣವಾಗಿರಬಹುದಾ..?

  • by

ಬೇಸಿಗೆಯಾಗಲಿ ಅಥವಾ ಚಳಿಗಾಲವೇ ಆಗಲಿ ಗಂಟಲು ಕೆರೆತ , ಶೀತ ಯಾವಾಗ ಬರುತ್ತದೆಯೋ ಎಂದು ತಿಳಿಯಲು ಸಾಧ್ಯವಿಲ್ಲ. ಗಂಟಲು ನೋವು , ಶೀತ ಏಕಾಏಕಿ ಬರಬಹುದು. ಇದು ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಪಡಿಸುತ್ತದೆ. ನಿಮಗೆ ಗಂಟಲಿನ ಕೆರೆತ, ನೋಯುವ ಲಕ್ಷಣಗಳಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.. ಯಾಕಂದರೆ ಅದು ಕೊರೊನಾ ವೈರಸ್ ಲಕ್ಷಣವಾಗಿರಬಹುದು ಎಚ್ಚರ. ನೋಯುತ್ತಿರುವ ಗಂಟಲಿನ ಸಮಸ್ಯೆಯನ್ನು ಇವತ್ತಿನ ದಿನಗಳಲ್ಲಿ ಕೊರೊನಾ ವೈರಸ್ ನ ಪ್ರಮುಖ ಲಕ್ಷಣ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ನೋಯುತ್ತಿರುವ ಗಂಟಲು, ಜ್ವರ, ಶೀತವನ್ನು ಗುಣಪಡಿಸಲು ಪ್ರಯತ್ನಿಸಬೇಕು. ಆದ್ದರಿಂದ ಜ್ವರ ಹಾಗೂ ಶೂತ, ಗಂಟಲು ಬೇನೆ ಬಳಲುತ್ತಿರುವವರು ಕೋವಿಡ್ -19ಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಚ್ಚರವಹಿಸುವುದು ಮುಖ್ಯ.

ನೋಯುತ್ತಿರುವ ಗಂಟಲಿಗೆ ಮನೆಮದ್ದು…!

ನೋಯುತ್ತಿರುವ ಗಂಟಲು ಹಲವು ಬಗೆಯಲ್ಲಿ ಕಿರಿ ಕಿರಿಯನ್ನುಂಟು ಮಾಡುತ್ತದೆ. ಮಾತನಾಡಲು ಅಡ್ಡಿಪಡಿಸುತ್ತದೆ. ಗಂಟಲಿನ ಸಮಸ್ಯೆ ಇರುವವರು ಕೊರೊನಾ ವೈರಸ್ ಗೆ ಒಳಾಗುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಕೊರೊನಾ ವೈರಸ್ ಸೋಂಕನ್ನು ತಪ್ಪಿಸಲು ಮತ್ತು ಹರಡದಂತೆ ತಡೆಗಟ್ಟಲು ಪ್ರಯತ್ನಿಸಬೇಕು.

ಅರಶಿಣ.. !

ಅರಶಿಣದಲ್ಲಿ ಬ್ಯಾಕ್ಟೇರಿಯಾ ವಿರೋಧಿ ಗುಣಗಳಿವೆ. ಆದ್ದರಿಂದ ಇದು ಎಲ್ಲಾ ರೀತಿಯ ಸೋಂಕುಗಳಿಗೆ ಬಳಸಲಾಗುತ್ತದೆ. ಇದು ಬ್ಯಾಕ್ಟೇರಿಯಾ ಹಾಗೂ ವೈರಸ್ ನಿಂದ ನಿಮ್ಮಗೆ ರಕ್ಷಣೆ ನೀಡುತ್ತದೆ. ನೋಯುತ್ತಿರುವ ಗಂಟಲಿಗೆ ಪರಿಹಾರ ಒದಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅರಶಿಣದ ಹಾಲನ್ನು ಮಲಗುವ ಮುನ್ನ ಪ್ರತಿ ದಿನ ಕುಡಿಯಬೇಕು. ನೋಯುತ್ತಿರುವ ಗಂಟಲಿಗೆ ಪರಿಹಾರ ಪಡೆಯಬೇಕಾದರೆ, ಅರಶಿಣದ ಹಾಲು ಸೇವಿಸಿ. ಪ್ರಾಚೀನ ಕಾಲದಿಂದಲೂ ಇದನ್ನು ಅಳವಡಿಸಿಕೊಂಡು ಬರಲಾಗುತ್ತಿದೆ. ಗಂಟಲಿನ ಕೆರೆತ, ಹಾಗೂ ನೋವನ್ನು ಸುಲಭವಾಗಿ ನಿವಾರಣೆಯಾಗುತ್ತದೆ.

ಇದಲ್ಲದೇ, ಅರಶಿಣ ಬೆಲ್ಲವನ್ನು ಕರಿ ಮೆಣಸು ಪುಡಿಯೊಂದಿಗೆ ಬೆರೆಸಿ , ಸೇವಿಸುವುದು ಸಹ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಚಳಿಗಾಲದಲ್ಲಿ ಶೀತ, ಹಾಗೂ ಗಂಟಲು ನೋವನ್ನು ತಡೆಗಟ್ಟಲು ಆಹಾರಗಳನ್ನು ಸೇವಿಸಬೇಕು. ಜೇನುತುಪ್ಪ ಕೂಡಾ ಬ್ಯಾಕ್ಟೇರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಗಂಟಲಿನ ತೊಂದರೆ ಮತ್ತು ಕಾಲೋಚಿತ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ. ಗಂಟಲಿನ ಸೋಂಕನ್ನು ಕಡಿಮೆ ಮಾಡಲು ಜೇನುತುಪ್ಪ ವನ್ನು ತೆಗೆದುಕೊಳ್ಳಬಹುದು. ರಾತ್ರಿಯಿಡೀ 1-2 ಲವಂಗವನ್ನು 1 ಚಮಚ ಜೇನುತುಪ್ಪ ಹಾಕಿ, ಬೆಳಿಗ್ಗೆ ಸೇವಿಸಿ. ಹೀಗೆ ಮಾಡುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ

ನೋಯುತ್ತಿರುವ ಗಂಟಲಿಗೆ ಗಾರ್ಗ್ಲ್ ಮಾಡುವುದು ಅತ್ಯುತ್ತಮ ಪರಿಹಾರ ಅಂತಲೇ ಹೇಳಬಹುದು. ಇದು ಅತ್ಯಂತ ಹಳೆಯ ಪರಿಹಾರಗಳಲ್ಲಿ ಒಂದು. ಉಪ್ಪು ಬ್ಯಾಕ್ಟೇರಿಯಾ ವಿರೋಧಿ ಗುಣಗಳಿಂದ ಕೂಡಿದೆ. ಹಾಗಾಗಿ ಇದು ಸುಲಭವಾಗಿ ಗಂಟಲು ನೋವನ್ನು ನಿವಾರಿಸುತ್ತದೆ. ಬೆಚ್ಚಿಗಿನ ನೀರಿನಲ್ಲಿ 1/4 ಟೀ ಚಮಚ ಉಪ್ಪನ್ನು ಸೇರಿಸಿ, ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.

ಹರ್ಬಲ್ ಟೀ…
1 ಲೋಟ ನೀರಿನಲ್ಲಿ ಶುಂಠಿ, ದಾಲ್ಚಿನ್ನಿ, ಮದ್ಯಸಾರವನ್ನು ಬೆರೆಸಿ, ನಂತರ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಗಂಟಲ ನೋವು ನಿವಾರಣೆಯಾಗುತ್ತೆ.

ಬೆಳುಳ್ಳಿ

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೋರಿಯಾವನ್ನು ನಿವಾರಿಸುವ ಗುಣಗಳಿವೆ. ಆದ್ದರಿಂದ ನೋಯುತ್ತಿರುವ ಗಂಟಲಿಗೆ ಇದು ಪರಿಹಾರ ಒದಗಿಸುತ್ತದೆ. ಬೆಳ್ಳುಳ್ಳಿ ಬ್ಯಾಕ್ಟೇರಿಯಾವನ್ನು ಕೊಲ್ಲುತ್ತದೆ.

ಆಪಲ್ ವಿನೆಗರ್

ಆಪಲ್ ವಿನೆಗರ್ ನೋಯುತ್ತಿರುವ ಗಂಟಲಿಗೆ ಪರಿಹಾರ ಒದಗಿಸುತ್ತದೆ. ಇದು ಬ್ಯಾಕ್ಟೇರಿಯಾವನ್ನು ನಿವಾರಿಸುತ್ತದೆ. ಹರ್ಬಲ್ ಟೀಯಲ್ಲಿ ಒಂದು ಟೀ ಸ್ಪೂನ್ ಆಪಲ್ ವಿನೆಗರ್ ಬೆರೆಸಿ ಸೇವಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ