ಯುವ ಜನರ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ

  • by
social media pressures

ಇಂದಿನ ಆಧುನಿಕ  ಯುಗದಲ್ಲಿ ಸಾಮಾಜಿಕ ಜಾಲತಾಣ ಅಥವಾ ಸಾಮಾಜಿಕ ಮಾಧ್ಯಮವು ಜೀವನದ ಅವಿಭಾಜ್ಯ ಅಂಗವಾಗಿ ನಿಂತಿದೆ….ಯುವ ಜನರ ಮಾನಸಿಕ ಆರೋಗ್ಯ ಸಾಕಷ್ಟು ಒತ್ತಡವಿದೆ.

ಸಾಮಾಜಿಕ ಜಾಲತಾಣ ಈ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿರುವ ಸಾಧನವಾಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಹೆಚ್ಚಿನವುಗಳು ಜನರಿಗೆ ಪರಸ್ಪರ ಸಂಪರ್ಕ ಸಾಧಿಸಲು ಅವಕಾಶವನ್ನು ನೀಡುತ್ತಿವೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಇಡೀ ಜಗತ್ತು ನಮ್ಮ ಬೆರಳ ತುದಿಯಲ್ಲಿದೆ ಸಾಮಾಜಿಕ ಮಾಧ್ಯಮಗಳಿಗೆ ಧನ್ಯವಾದಗಳು. ಯುವಕರು ವಿಶೇಷವಾಗಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸಿಕೊಳ್ಳುವವರಲ್ಲಿ ಒಬ್ಬರು.

ಅಷ್ಟು ಶಕ್ತಿಯುತವಾದ ಮತ್ತು ಅಂತಹ ಬೃಹತ್ ವ್ಯಾಪ್ತಿಯೊಂದಿಗೆ ಎಲ್ಲವೂ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಇದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಮುಂದೆ ಓದಿ: ಕೌಶಲ್ಯಾಭಿವೃದ್ಧಿ (skill development) 

ಒಂದು ನಾಣ್ಯಕ್ಕೆ ಯಾವಾಗಲೂ ಎರಡು ಬದಿಗಳು ಹೇಗೆ ಇರುತ್ತವೆ ಎಂಬುದರಂತೆ, ಸಾಮಾಜಿಕ ಮಾಧ್ಯಮಕ್ಕೂ ಅದೇ ಅನ್ವಯಿಸುತ್ತದೆ. ತರುವಾಯ, ಈ ಚರ್ಚಾಸ್ಪದ ವಿಷಯದ ಬಗ್ಗೆ ವಿಭಿನ್ನ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.         

ಸಾಮಾಜಿಕ ಜಾಲತಾಣ ಅನುಕೂಲವನ್ನು ಹೊಂದಿದೆ ಹಾಗೆ ಅನಾನುಕೂಲವನ್ನು ಹೊಂದಿದೆ.

ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಅಂಶಗಳು:

Youth issues from social distancing

ಯುವ ಜನರ ಮಾನಸಿಕ ಆರೋಗ್ಯ ಸಾಕಷ್ಟು ಒತ್ತಡವಿದೆ. ಸಾಮಾಜಿಕ ಮಾಧ್ಯಮವು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಸೋಷಿಯಲ್ ಮೀಡಿಯಾ ಮಾಹಿತಿ, ಸುದ್ದಿ, ಶೈಕ್ಷಣಿಕ ಸಾಮಗ್ರಿಗಳು, ಪ್ರತಿಭಾವಂತ ಯುವಕರು ಮತ್ತು ಬ್ರಾಂಡ್‌ಗಳಿಗೆ ಒಂದು ವೇದಿಕೆಯನ್ನು ನೀಡುತ್ತದೆ


*ಶಿಕ್ಷಣ ಕ್ಷೇತ್ರ  :              

ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಅಂಶಗಳನ್ನು ನೋಡುವುದಾದರೆ ಅನೇಕ ಪ್ರಯೋಜನಗಳನ್ನು ಕಾಣುತ್ತೇವೆ. ಅತ್ಯಂತ ಗಮನಾರ್ಹ ಕ್ಷೇತ್ರ ಎಂದರೆ ಶಿಕ್ಷಣ.

ಒಬ್ಬ ವ್ಯಕ್ತಿಯು ಅಥವಾ ವಿದ್ಯಾರ್ಥಿಗಳು ಬಯಸುವ ಎಲ್ಲಾ ಜ್ಞಾನವೂ ಅವರ ಬೆರಳ ತುದಿಯಲ್ಲಿ ಇರುತ್ತದೆ.ಸಾಮಾಜಿಕ ಮಾಧ್ಯಮಗಳ ಮೂಲಕ ದೂರ ಶಿಕ್ಷಣವನ್ನು ಪಡೆಯಬಹುದು.

ನಿಮ್ ಮಧ್ಯಮದಿಂದ ನೇರ ಮಾತುಕತೆಯನ್ನು ಸಂವಾದವನ್ನು ನಡೆಸಬಹುದು.ಶಿಕ್ಷಣಕ್ಕೆ ಸಂಬಂಧಪಟ್ಟ ಮಾಹಿತಿ ಎಲ್ಲವೂ ಇಲ್ಲಿ ದೊರೆಯುತ್ತದೆ.ಹೊಸ ರೀತಿಯ ಹೊಸ ವಿಷಯದ ಬಗೆಗಿನ ಶಿಕ್ಷಣವನ್ನು ನಾವು ಮನೆಯಲ್ಲಿ ಕೂತು ಕಲಿಯಬಹುದು.

ಮುಂದೆ ಓದಿ: ಖಿನ್ನತೆಗೆ ಯೋಗದಿಂದ ಪರಿಹಾರ

*ಅಂತರ ಕಡಿಮೆ ಮಾಡುತ್ತದೆ:                   

ಯುವ ಜನರ ಮಾನಸಿಕ ಆರೋಗ್ಯ ಸಾಕಷ್ಟು ಒತ್ತಡವಿದೆ.ಸಾಮಾಜಿಕ ಜಾಲತಾಣಗಳಿಂದ ಇಂದು ಪ್ರಪಂಚವನ್ನು ಚಿಕ್ಕದಾಗಿದೆ.ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನಾವು ಸುಲಭವಾಗಿ ನಮ್ಮವರನ್ನು ಸಂಪರ್ಕಿಸಬಹುದು.

ಒಂಟಿತನದಿಂದ ಬಳಲುವವರು ತಮ್ಮ ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ಸಂಪರ್ಕವನ್ನು ಸುಲಭವಾಗಿ ಇಟ್ಟುಕೊಳ್ಳಬಹುದು.


*ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವು:


ಅತಿವೃಷ್ಟಿ-ಅನಾವೃಷ್ಟಿ ಅಥವಾ ಇನ್ನಿತರ  ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿಗೆ ಬರುತ್ತದೆ.ಜನರು ತಮ್ಮ ನೆರವನ್ನು ಕಷ್ಟದಲ್ಲಿರುವ ಜನರಿಗೆ ಸುಲಭವಾಗಿ ತಲುಪಿಸಬಹುದು ಅವರನ್ನು ಬೆಂಬಲಿಸಬಹುದು.

ಸಮಾಜದಲ್ಲಿ ನಡೆಯುವ ಅನ್ಯಾಯ ಹಾಗೂ ಅಪರಾಧವನ್ನು ಖಂಡಿಸಿ ಈ ಸಮಾಜ ಮಾಧ್ಯಮದ ಮೂಲಕ ಹೋರಾಟವನ್ನು ನಡೆಸಿ ನ್ಯಾಯವನ್ನು ಪಡೆದುಕೊಳ್ಳಬಹುದು.


*ಕಲೆಗೆ ವೇದಿಕೆ ಸೃಷ್ಟಿಸುತ್ತದೆ:
             

 ಯುವ ಜನರ ಮಾನಸಿಕ ಆರೋಗ್ಯ ಸಾಕಷ್ಟು ಒತ್ತಡವಿದೆ.ಹವ್ಯಾಸವಾಗಿ ಬೆಳೆದುಬಂದ ಕಲೆಗಳು ಇಂದು ಹೊರಜಗತ್ತಿಗೆ ತಲುಪುವಂತೆ ಮಾಡುತ್ತಿದೆ.ಸಮಾನ ಅಭಿರುಚಿ ಉಳ್ಳ ಜನರೊಂದಿಗೆ ನಿಮ್ಮ ಆಸೆ ಆಗು ಮಹತ್ವ ಪಕ್ಷಗಳನ್ನು ಹಂಚಿಕೊಳ್ಳಬಹುದು.
         

 *ಮಾಹಿತಿ :
            ಇಂದು  ಪ್ರಪಂಚದ ಎಲ್ಲಾ ರೀತಿಯ ಮಾಹಿತಿ ನಮ್ಮ ಬೆರಳಿನ ತುದಿಯಲ್ಲಿ ದೊರೆಯುತ್ತದೆ. ಯಾವುದೇ ವಿಷಯ ವ್ಯಕ್ತಿ ಊರು ಮುಂತಾದವುಗಳ ಬಗ್ಗೆ ನಾವು ಸುಲಭವಾಗಿ ಮಹತ್ವದ ಮಾಹಿತಿಗಳನ್ನು ಕಲೆಹಾಕಬಹುದು ಹಾಗೂ ಹಂಚಿಕೊಳ್ಳಲೂಬಹುದು.

ಸಾಮಾಜಿಕ ಮಾಧ್ಯಮದ ನಕಾರಾತ್ಮಕ ಅಂಶಗಳು:


ಅಂತಹ ವಿಶಿಷ್ಟ ಅನುಕೂಲಗಳನ್ನು ಹೊಂದಿದ್ದರೂ ಸಹ, ಸಾಮಾಜಿಕ ಮಾಧ್ಯಮವನ್ನು ಸಮಾಜದ ಅತ್ಯಂತ ಹಾನಿಕಾರಕ ಅಂಶವೆಂದು ಪರಿಗಣಿಸಲಾಗಿದೆ.

ಸಾಮಾಜಿಕ ಮಾಧ್ಯಮದ ಬಳಕೆಯನ್ನು ಮೇಲ್ವಿಚಾರಣೆ ಮಾಡದಿದ್ದರೆ, ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.

youth issues


ಇದು ಹಾನಿಕಾರಕವಾಗಿದೆ ಏಕೆಂದರೆ ಅದು ನಿಮ್ಮ ಗೌಪ್ಯತೆಯನ್ನು ಹಿಂದೆಂದಿಗಿಂತಲೂ ಆಕ್ರಮಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಓವರ್‌ಶೇರಿಂಗ್ ಮಕ್ಕಳನ್ನು ಪರಭಕ್ಷಕ ಮತ್ತು ಹ್ಯಾಕರ್‌ಗಳಿಗೆ ಗುರಿಯಾಗಿಸುತ್ತದೆ.

ಇದು ಸೈಬರ್ ಬೆದರಿಕೆಗೆ ಕಾರಣವಾಗುತ್ತದೆ, ಅದು ಯಾವುದೇ ವ್ಯಕ್ತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.

*ಸಾಮಾಜಿಕ ಮಾಧ್ಯಮದ ಚಟ:                

ಸೋಷಿಯಲ್ ಮೀಡಿಯಾ ಚಟ’ ಎಂದು ಕರೆಯಲ್ಪಡುವಿಕೆಯನ್ನು ವಿವಿಧ ರೀತಿಯ ಅಧ್ಯಯನಗಳು ಮತ್ತು ಪ್ರಯೋಗಗಳಿಂದ ಉಲ್ಲೇಖಿಸಲಾಗಿದೆ.

ಸಾಮಾಜಿಕ ಮಾಧ್ಯಮಕ್ಕೆ ವ್ಯಸನವು ಸುಮಾರು 5% ರಷ್ಟು ಯುವಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಲಾಗಿದೆ, ಮತ್ತು ಇತ್ತೀಚೆಗೆ ಇದನ್ನು ಆಲ್ಕೋಹಾಲ್ ಮತ್ತು ಸಿಗರೇಟ್ ಗಿಂತ ಹೆಚ್ಚು ವ್ಯಸನಕಾರಿ ಎಂದು ವಿವರಿಸಲಾಗಿದೆ.  

     *ನಿದ್ರಾಹೀನತೆ:

ಶಾಲೆಯಲ್ಲಿ ಯುವಜನರ ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 

ಯುವಜನರು ರಾತ್ರಿಯ ಸಮಯದ ಸಾಮಾಜಿಕ ಮಾಧ್ಯಮ ಬಳಕೆಯ ನಂತರ ವಿಶ್ರಾಂತಿ ಪಡೆಯುವುದು ಕಷ್ಟಕರವಾಗಿದೆ , ಇದು ನಿದ್ರೆಗೆ ತಯಾರಿ ಮಾಡುವ ಅವರ ಮೆದುಳಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ನಿದ್ರೆಯ ನಷ್ಟವು ಮಾನಸಿಕ ಆರೋಗ್ಯದೊಂದಿಗೆ ಬಲವರ್ಧನೆಯ ಕೆಟ್ಟ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತದೆ; ಅಂದರೆ, ರಾತ್ರಿಯ ಸಮಯದ ಸಾಮಾಜಿಕ ಮಾಧ್ಯಮ ಬಳಕೆಯಿಂದಾಗಿ ನಿದ್ರೆಯ ನಷ್ಟವು ಬಡ ಮಾನಸಿಕ ಆರೋಗ್ಯಕ್ಕೆ ಕಾರಣವಾಗಬಹುದು, ಮತ್ತು ಕಳಪೆ ಮಾನಸಿಕ ಆರೋಗ್ಯವು ರಾತ್ರಿಯ ಸಮಯದ ತೀವ್ರ ಬಳಕೆ ಮತ್ತು ನಿದ್ರೆಯ ನಷ್ಟಕ್ಕೆ ಕಾರಣವಾಗಬಹುದು.         

*ಖಿನ್ನತೆ:
            ಒಂದು ಹೊಸ ಸಂಶೋಧನೆಯ ಪ್ರಕಾರ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳು ಅಥವಾ ಮಾಧ್ಯಮಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ ಎಂಬುದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ನೀವು ಮುಳುಗಿ ಹೋಗುವುದರಿಂದ ಜನರೊಂದಿಗಿನ ಭೌತಿಕ ಸಂಪರ್ಕವನ್ನು ಕಳೆದುಕೊಂಡು ಒಂಟಿತನವನ್ನು ಅನುಭವಿಸುತ್ತಾ ಖಿನ್ನತೆಗೆ ಗುರಿಯಾಗುತ್ತಾರೆ.


*ಸೈಬರ್ ಅಪರಾಧಗಳು:
           ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ನಮ್ಮ ವೈಯುಕ್ತಿಕ ಭಾವಚಿತ್ರಗಳು ವೈಯುಕ್ತಿಕ ವಿವರಗಳನ್ನು ಪಡೆದು ಅದನ್ನು ದುರುಪಯೋಗ ಪಡಿಸಿಕೊಳ್ಳುವ ವ್ಯಕ್ತಿಗಳು ಹೆಚ್ಚಾಗಿದ್ದಾರೆ ‌.

ಸೈಬರ್ ಕ್ರೈಮ್ ಗಳು ಹೆಚ್ಚಾಗುತ್ತಿದೆ. ಕೆಲವೊಂದು ಬಾರಿ ವಿಪರೀತಕ್ಕೆ ಹೋಗಿ ಆತ್ಮಹತ್ಯೆಯಲ್ಲಿ ಕೊನೆಗೊಂಡ ಪ್ರಕರಣಗಳು ಕಂಡು ಬರುತ್ತವೆ ‌.

              ಬಹುಶಃ ಹೆಚ್ಚು ಖಿನ್ನತೆ ಮತ್ತು ಒಂಟಿಯಾಗಿರುವವರು ಸಾಮಾಜಿಕ ಮಾಧ್ಯಮವನ್ನು ತಲುಪುವ ಮಾರ್ಗವಾಗಿ ಬಳಸಲು ಹೆಚ್ಚು ಒಲವು ತೋರುತ್ತಾರೆ.


          ನಕಲಿ ವೆಬ್ಸೈಟ್ ಗಳನ್ನು ಸೃಷ್ಟಿ ಮಾಡಿ ಕೆಲಸ ಕೊಡಿಸುವ ಆಮಿಷವನ್ನು ಒಡಿ ಅವರಿಂದ ಹಣವನ್ನು ಪಡೆದು ಮೋಸ ಮಾಡುತ್ತಿದ್ದಾರೆ.

social media issues


*ಒಂಟಿತನದ ಅನುಭವ:

            ‌‌ ಜನರನ್ನು ಹತ್ತಿರಕ್ಕೆ ತರಲು ವಿನ್ಯಾಸಗೊಳಿಸಲಾದ ತಂತ್ರಜ್ಞಾನಕ್ಕಾಗಿ, ಸಾಮಾಜಿಕ ಮಾಧ್ಯಮದೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ನೀವು ಹೆಚ್ಚು ಒಂಟಿತನ ಮತ್ತು ಪ್ರತ್ಯೇಕತೆಯನ್ನು ಅನುಭವಿಸಬಹುದು – ಮತ್ತು ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು .


*ಆತಂಕಕಾರಿ ಆಟಗಳು:
           

ಕೆಲವೊಂದು ಸಾಮಾಜಿಕ ಮಾಧ್ಯಮದ  ಆತಂಕಕಾರಿ ಆಟಗಳು ಮಕ್ಕಳ ಮನಸ್ಸನ್ನು ಹಾಳು ಮಾಡಿ ಅವರನ್ನು ಖಿನ್ನತೆಗೆ ದುಡಿ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.

ಓದಿನಲ್ಲಿ ನಿರಾಸಕ್ತಿ ಹೊಂದುವುದು ಜನರೊಂದಿಗೆ ಸಂಪರ್ಕವನ್ನು ಬಳಸದಿರುವಂತೆ ಮಾಡುತ್ತಿದೆ.

ಮುಂದೆ ಓದಿ: ಖಿನ್ನತೆಗೆ ಯೋಗದಿಂದ ಪರಿಹಾರ

ಕೆಲವೊಂದು ಸಂದರ್ಭದಲ್ಲಿ ಯುವಜನಾಂಗವು ದುಶ್ಚಟಗಳಿಗೆ ಬಲಿಯಾಗುವ ಆತಂಕ

ನಾವು ಯಾವುದೇ ಮಾಧ್ಯಮವನ್ನು ಬಳಸುವಾಗಲೂ ಅದರಿಂದ ಸಕಾರಾತ್ಮಕವಾದ ಉಪಯೋಗವನ್ನು ಪಡೆದುಕೊಳ್ಳಬೇಕು ನಕರಾತ್ಮಕವಾದ ಅಂಶಗಳನ್ನು ಬಿಟ್ಟು ಮುನ್ನಡೆಯಬೇಕು.

ಸಾಮಾಜಿಕ ಮಾಧ್ಯಮವನ್ನು ಬಳಸುವುದಕ್ಕಿಂತ ಮುಂಚೆ ಅವು ನಮ್ಮನ್ನು ವೈಯಕ್ತಿಕವಾಗಿ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಪಡೆದುಕೊಂಡಿರಬೇಕು.

ಕಡಿಮೆಯಾದ ಸಾಮಾಜಿಕ ಮಾಧ್ಯಮ ಬಳಕೆಯು ನಿಮ್ಮ ಯೋಗಕ್ಷೇಮದಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ