ಚರ್ಮದ ಸೌಂದರ್ಯ ಹಾಳಾಗಲು ಒತ್ತಡ ಕಾರಣನಾ?

  • by

ನೀವು ಹೆಚ್ಚು ಚಿಂತೆ ಮಾಡುತ್ತಿದ್ದೀರಾ..? ಹೌದು ಎಂದಾದರೆ,  ಒತ್ತಡ ಹೆಚ್ಚಾಗಲು ಚಿಂತೆ ಕೂಡಾ ಕಾರಣವಾಗಬಹುದು. ಯಾಕಂದ್ರೆ ಚಿಂತೆ ಹೆಚ್ಚಾದರೆ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಅಲ್ಲದೇ ಒತ್ತಡ ಸೌಂದರ್ಯ ಹಾಗೂ ಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಒತ್ತಡದಿಂದ ಕೂಡಿದ ಜೀವನ ನಿಮ್ಮದಾಗುತ್ತದೆ. 

Skin problem ,stress, health , 
ಚರ್ಮದ ಸೌಂದರ್ಯ , ಒತ್ತಡ,

ಇಂದಿನ ಲೈಫ್ ಸ್ಟ್ರೈಲ್ ನಲ್ಲಿ ಸಾಮಾನ್ಯವಾಗಿ ಒತ್ತಡ ಎಲ್ಲರಲ್ಲೂ ಕಂಡು ಬರುತ್ತದೆ. ಕೆಲವರು ಕೆಲಸದ ಒತ್ತಡ ಅನುಭವಿಸುತ್ತಾರೆ. ಮತ್ತೆ ಕೆಲವರು ಹಲವು ಜವಾಬ್ದಾರಿಯಿಂದ ಒತ್ತಡ ನಿರ್ವಹಿಸುತ್ತಾರೆ. ಆದ್ರೆ ಒತ್ತಡ ಕೂದಲು ಹಾಗೂ ಮುಖದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಒತ್ತಡವನ್ನು ಹೇಗೆ ಕಡಿಮೆ ಮಾಡುವುದು..  ಇಲ್ಲಿದೆ ಮಾಹಿತಿ. 

ಖಿನ್ನತೆ ಹಾಗೂ ಒತ್ತಡದಿಂದ ನರಳುತ್ತಿರುವವರು  ಸಾಮಾನ್ಯವಾಗಿ ಕೂದಲು ಉದರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಲ್ಲದೇ ಮುಖದ ಶುಷ್ಕತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಹೋರಾಡುತಿರುತ್ತಾರೆ. 

ಕೆಲವರಿಗೆ ಹಾರ್ಮೋನಗಳ ಅಸಮತೋಲನದಿಂದ ಒತ್ತಡ ಉಂಟಾಗುತ್ತದೆ. ಆಡ್ರೆಲೈನ್ ಮತ್ತು ಕಾರ್ಟಿಸೋಲ್ ಎಂಬ ಹಾರ್ಮೋನ್ ನಲ್ಲಿ ಆಗುವ ಬದಲಾವಣೆಯಿಂದಾಗಿ ಒತ್ತಡ ಉಂಟಾಗುತ್ತದೆ. ನಿದ್ರಾಹೀನತೆ , ತೂಕ ಕಡಿಮೆಯಾಗುವುದು. ಅತಿಯಾದ ತಲೆನೋವು , ಚರ್ಮದ ತೊಂದರೆ, ಹಾರ್ಮೋನಗಳ ಅಸಮತೋಲನ ಕಾರಣಗಳಾಗುತ್ತವೆ. 

ಒತ್ತಡ ನಿರ್ವಹಿಸುವುದು ಹೇಗೆ..?

ಮಸಾಜ್ 

ಇದು ನಿಮ್ಮ ದೇಹಕ್ಕೆ ರಿಲ್ಯಾಕ್ಯ್ ನೀಡುತ್ತದೆ.  ನರಗಳನ್ನು ಸಡಿಲಗೊಳಿಸಿ, ವಿಶ್ರಾಂತಿ ನೀಡುತ್ತದೆ. 

ಪ್ರತಿದಿನ ವ್ಯಾಯಾಮವನ್ನು ಮಾಡುವುದರಿಂದ ಒತ್ತಡವನ್ನು ನಿರ್ವಹಿಸಬಹುದು. ನಿಮ್ಮ ಮನಸ್ಥಿತಿಯನ್ನು ವ್ಯಾಯಾಮ ಸರಿಪಡಿಸುತ್ತದೆ. ಅಲ್ಲದೇ ಆರೋಗ್ಯಕರ ಮೈಕಟ್ಟನ್ನು ಪಡೆಯಬಹುದು. ಯೋಗ, ವ್ಯಾಯಾಮ ನಿಮ್ಮನ್ನು ಶಕ್ತಿಗತಗೊಳಿಸುತ್ತದೆ.  ಪ್ರತಿ ದಿನ ೧೫-೨೦ ನಿಮಿಷ ಧ್ಯಾನ ಮಾಡಿ, ಯಾವುದೇ ಸ್ಶಳದಲ್ಲಿ ಹಾಗೂ ಯಾವುದೇ ಸಮಯದಲ್ಲಾದರೂ ಧ್ಯಾನವನ್ನು ಮಾಡಬಹುದಾಗಿದೆ. ಸದ್ದಿಲ್ಲದೇ , ನಿಮ್ಮ ನೆಗೆಟಿವ್ ಆಲೋಚನೆಗಳಿಂದ ಹೊರ ಬರಬಹುದು. ಒತ್ತಡವನ್ನು ನಿವಾರಿಸಲು ಧ್ಯಾನ ಸಹಾಯ ಮಾಡುತ್ತದೆ. 

Skin problem ,stress, health , 
ಚರ್ಮದ ಸೌಂದರ್ಯ , ,ಒತ್ತಡ,

ಪೌಷ್ಟಿಕ ಆಹಾರ ಸೇವಿಸಿ 

ಪ್ರತಿದಿನ ಹೆಚ್ಚು ಪೌಷ್ಟಿಕ ಆಹಾರ ಸೇವಿಸಬೇಕು. ಬಾದಾಮಿ ,ಹಣ್ಣುಗಳು, ಮತ್ತು ಸಾಲ್ಮಾನ್ , ಮೀನು, ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇನ್ನು 8 ಗಂಟೆಗಳ ಕಾಲ ನಿದ್ರೆ ಮಾಡುವುದು ಉತ್ತಮ. ಆರೋಗ್ಯಕ್ಕೆ ನಿದ್ರೆಗಿಂತ ಉತ್ತಮವಾದದ್ದು ಬೇರೆ ಏನು ಇಲ್ಲ. ನಿದ್ರೆಯ ಕೊರತೆ ಕೆಲವೊಂದು ಸಲ ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. 

ವಿಶ್ರಾಂತಿಗೆ ಸಮಯ ಮೀಸಲಿಡಿ

ವಿಶ್ರಾಂತಿ ಮಾಡುವುದರಿಂದ ಒತ್ತಡವನ್ನು ನಿಯಂತ್ರಿಸಬಹುದಾಗಿದೆ.  ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಅದೇ ರೀತಿ , ಮಸಾಜ್ ಅಥವಾ ಸ್ಪಾ ಟ್ರಿಂಟ್ ಮೆಂಟ್ ಪಡೆದುಕೊಳ್ಳಿ. ಇದ್ರಿಂದ ಒತ್ತಡ ಕಡಿಮೆ ಮಾಡಬಹುದು. 

ಒತ್ತಡಕ್ಕೂ ಚರ್ಮಕ್ಕೂ ಏನು ಸಂಬಂಧ..? 

ಮಾನಸಿಕ ಒತ್ತಡವು ವ್ಯಕ್ತಿಯೊಬ್ಬನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ. ಪರಿಣಾಮ ಬೀರುವುದಲ್ಲದೇ, ಕೆಲವು ಚರ್ಮದ ಕಾಯಿಲೆಗಳಾದ ಮೊಡವೆ, ಕೂದಲು ಉದುರುವಿಕೆ ಮತ್ತು ದುರ್ಬಲ ಉಗುರುಗಳಿಗೆ ದಾರಿ ಕಲ್ಪಿಸುತ್ತದೆ ಕಜ್ಜಿ, ಮೊಡವೆ, ಸೋರಿಯಾಸಿಸ್ ಮುಂತಾದ ಚರ್ಮರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾನಸಿಕ ಒತ್ತಡವು ಹೇಗೆ ಚರ್ಮವನ್ನು ಉದ್ದೀಪನಗೊಳಿಸುತ್ತದೆ. ಇನ್ನಷ್ಟು ಒತ್ತಡವನ್ನು ಉಂಟುಮಾಡುತ್ತದೆ. ದೇಹದ ಒತ್ತಡದ ಹಾರ್ಮೋನ್(ಕಾರ್ಟಿಸಲ್) ದೇಹದಲ್ಲಿ ತೈಲ ಅಂಶವನ್ನು ಹೆಚ್ಚು ಉತ್ಪಾದಿಸುವ ಮೂಲಕ ತೈಲಪೂರಿತ ಚರ್ಮ, ಮೊಡವೆ ಮುಂತಾದ ಚರ್ಮದ ಸಮಸ್ಯೆಗಳಿಗೆ ಅವಕಾಶ ಕಲ್ಪಿಸುತ್ತದೆ.

ಮಾನಸಿಕ ಒತ್ತಡವು ಚರ್ಮದ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಚರ್ಮದ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಎಂದು ಹೇಳಿದ್ದಾರೆ. ಕಾರಣವಿಲ್ಲದೇ ಕೂದಲು ಉದುರುವುದಕ್ಕೂ ಮಾನಸಿಕ ಒತ್ತಡ ಕಾರಣ ಎನ್ನಲಾಗುತ್ತದೆ. 

Skin problem ,stress, health , 
ಚರ್ಮದ ಸೌಂದರ್ಯ , ,ಒತ್ತಡ,

ಮಾನಸಿಕ ಒತ್ತಡವು ಭಿನ್ನ ರೀತಿಯಲ್ಲಿ ದುಷ್ಪರಿಣಾಮ ಉಂಟುಮಾಡುತ್ತದೆ. ಕೆಲವರಿಗೆ ಹೊಟ್ಟೆಯ ಹುಣ್ಣು ಅಥವಾ ಹೃದಯಾಘಾತ ಅಥವಾ ಕೂದಲು ಉದುರುವಿಕೆ ಉಂಟಾಗುತ್ತದೆ. ಒತ್ತಡಕ್ಕೆ ಕೂದಲು ಉದುರುವುದು ಸಹಜ ಪ್ರತಿಕ್ರಿಯೆಯಾಗಿದೆ. 

ಯೋಗ, ಧ್ಯಾನ ಹಾಗೂ ಆಳವಾದ ಉಸಿರಾಟ ತೆಗೆದುಕೊಳ್ಳುವ ಮೂಲಕ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ನಿಮ್ಮ ಕುಟುಂಬದ ಜತೆ ಹಾಗೂ ಸ್ನೇಹಿತರ ಜತೆ ಅನಿಸಿಕೆಗಳನ್ನು  ಹಂಚಿಕೊಳ್ಳುವುದಕ್ಕೆ ಹಿಂಜರಿಕೆ ಬೇಡ.  ಹಾಗೇ , ವ್ಯಾಯಾಮ ಮಾಡುವುದರಿಂದ ಮಾನಸಿಕ ಹಾಗೂ ಭಾವನಾಥ್ಮಕ ಒತ್ತಡಗಳು ಕಡಿಮೆಯಾಗುತ್ತದೆ. ದದ್ದು ಇರುವ ಜಾಗವನ್ನು ಮುಚ್ಚಿಕೊಳ್ಳಲು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ