ದಿನಕ್ಕೆ 10 ಬಾರಿ ಸ್ನಾನ ಮಾಡುವುದು.. ಈ ಕಾಯಿಲೆ ಯಾವುದು?

  • by

ದಿನಕ್ಕೆ 10 ಬಾರಿ ಸ್ನಾನ ಮಾಡುವುದು. ಯಾವುದಾದರೂ ವಸ್ತುವನ್ನು ಸ್ಪರ್ಶಿಸಿದಾಗ ಪದೇ ಪದೇ ಕೈ ತೊಳೆಯುವುದು. ಇದೊಂದು ಮಾನಸಿಕ ಕಾಯಿಲೆ. ಒಬ್ಬ ವ್ಯಕ್ತಿ ತನ್ನ ನಿಯಂತ್ರಣದಲ್ಲಿ ಇರದೇ ಇದ್ದಾಗ ಮತ್ತು ಬಯಸದಿದ್ದರೂ ಕೆಲವೊಂದು ಬಾರಿ ಒಂದೇ ಕೆಲಸವನ್ನು ಪದೇ ಪದೇ ಮಾಡುತ್ತಲೇ ಇರುತ್ತಾನೆ. ಇದೊಂದು ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿದ್ದು, ಒಸಿಡಿ ಎಂದು ಕರೆಯಲಾಗುತ್ತದೆ. 


 signs , obsessive compulsive disorder, treatment,
ಒಸಿಡಿ ಕಾಯಿಲೆ, ಲಕ್ಷಣ, ಪರಿಹಾರಗಳು,

ಏನಿದು ಒಸಿಡಿ.. ?

ಮಾನಸಿಕ ಅನಾರೋಗ್ಯ ಹಲವು ವಿಧದಿಂದ ಬರಬಹುದು. ಹೀಗಾಗಿ ಮಾನಸಿಕ ಆನಾರೋಗ್ಯವನ್ನು ಕಡೆಗಣಿಸಬಾರದು. ಭಾವನೆಗಳು, ಆಲೋಚನೆಗಳು ಮತ್ತು ನಡುವಳಿಕೆಗಳಲ್ಲಿ ಬದಲಾವಣೆಗಳು ಬರುವುದನ್ನು ನಾವು ಮಾನಸಿಕ ಅನಾರೋಗ್ಯವೆಂದು ಹೇಳುತ್ತೇವೆ. ಕೌಟುಂಬಿಕ , ಸಾಮಾಜಿಕ, ಹಾಗೂ ವೃತ್ತಿ ಬದುಕಿನ ಒತ್ತಡದಿಂದಾಗಿ ಇಂತಹ ಮಾನಸಿಕ ಅನಾರೋಗ್ಯ ಕಾಡಬಹುದು. ಇವು ವ್ಯಕ್ತಿಯ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರಬಲ್ಲವು. ಅಂಥ ಮಾನಸಿಕ ಅನಾರೋಗ್ಯಗಳಲ್ಲಿ ಒಸಿಡಿ ( ಒಬೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್) ಕೂಡಾ ಒಂದು. ಈ ಕಾಯಿಲೆ ಇರುವ ಜನರಲ್ಲಿ ಅತಿ ಭೀತಿ, ಆತಂಕ ಕಾಣಬಹುದು. ಉದಾಹರಣೆ ಕೀಟಾಣುಗಳ ಬಗ್ಗೆ ಅತಿಯಾದ ಭೀತಿ ಹೊಂದಿರುವುದುದು. ಇದರಿಂದ ಪದೇ ಪದೇ ಸ್ನಾನ ಮಾಡುವುದು, ಕೈ ತೊಳೆದುಕೊಳುವುದು ಮುಂತಾದ ಬದಲಾವಣೆಗಳನ್ನು ಕಾಣಬಹುದಾಗಿದೆ.

ವ್ಯಕ್ತಿ ತನ್ನ ಮನಸ್ಸಿನಲ್ಲಿ ಬರುವ ಆಲೋಚನೆ ಗಳು ಸರಿಯಾಗಿದೆಯೋ , ಇಲ್ಲವೋ ಎಂಬ ಬಗ್ಗೆ ತಿಳಿದಿರುವುದಿಲ್ಲ. ಧಾರ್ಮಿಕ ಕೆಲಸ ಮಾಡುವಾಗ ಪದೇ ಪದೇ ದೇವರ ಮುಂದೆ ಹಚ್ಚಿರುವ ದೀಪವನ್ನು ಪರಿಶೀಲಿಸುವುದು. ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಆಗಾಗ್ಗೆ ಸ್ನಾನ ಮಾಡುವುದು. ಕೈ ತೊಳೆದು ಕೊಳ್ಳುವುದು , ಮತ್ತು ಪದೇ ಪದೇ ಹಲ್ಲಜ್ಜುವುದು. ಇತ್ಯಾದಿ ಅಭ್ಯಾಸಗಳಿರುತ್ತವೆ. 


 signs , obsessive compulsive disorder, treatment,
ಒಸಿಡಿ ಕಾಯಿಲೆ, ಲಕ್ಷಣ, ಪರಿಹಾರಗಳು,

ಒಸಿಡಿ ಯಿಂದ ಬಳಲುತ್ತಿರುವ ಜನರು ತಮ್ಮ ಸ್ವಚ್ಛತೆ ಬಗ್ಗೆ ಬಹಳ ಸಂವೇದನಾ ಶೀಲರಾಗಿರುತ್ತಾರೆ. ಯಾವುದಾದರೂ ವಸ್ತುವನ್ನು ಸ್ಪರ್ಶಿಸಿದಾಗ, ತಮ್ಮ ಕೈಗಳನ್ನು ತೊಳೆದುಕೊಳ್ಳುವುದು. ಮನೆಯನ್ನು ಸ್ವಚ್ಛಗೊಳಿಸುವ ಗೀಳನ್ನು ಹೊಂದಿರುತ್ತಾರೆ. ಯಾವುದಾದರ ಬಗ್ಗೆಯೂ ಯೋಚಿಸದೇ ಸ್ವಚ್ಛತೆಯಲ್ಲಿ ಮಗ್ನರಾಗಿರುತ್ತಾರೆ. 

ಒಸಿಡಿಯ ಸಾಮಾನ್ಯ ಲಕ್ಷಣಗಳು ಯಾವವು?

ವ್ಯಕ್ತಿಯ ನಡುವಳಿಕೆ ಆಧಾರದ ಮೇಲೆ ಒಸಿಡಿ ಲಕ್ಷಣಗನ್ನು ಗುರುತಿಸಬಹುದಾಗಿದೆ. ಕೆಲವು ಜನರಿಗೆ ಸೋಂಕಿನ  ಬಗ್ಗೆ ನಿರಂತರ ಭಯವಿರುತ್ತದೆ. ಇದಕ್ಕಾಗಿ ಅವರು ಕೈ ತೊಳೆದು, ಮನೆಯನ್ನು ಸ್ವಚ್ಛಗೊಳಿಸುತ್ತಿರುತ್ತಾರೆ. ಸರಿಯಾದ ಸ್ಥಳದಲ್ಲಿ ಎಲ್ಲಾ ವಸ್ತುಗಳನ್ನು ಇಡುವುದು, ಎಲ್ಲವನ್ನೂ ಸರಿಯಾಗಿ ಜೋಡಿಸುವ ಗೀಳನ್ನು ಹೊಂದಿರುತ್ತಾರೆ. ಆತಂಕದಿಂದ ಪಾತ್ರೆಗಳನ್ನು ಸರಿಯಾಗಿ ಇಡುತ್ತಾರೆ. ಕಾರ್ಪೆಟ್ ಸರಿಯಾಗಿ ಜೋಡಿಸುತ್ತಾರೆ. ದಿಂಬುಗಳನ್ನು ಸರಿಪಡಿಸುವುದು ಇತ್ಯಾದಿ ಸೇರಿರುತ್ತದೆ. ಕೆಲವು ಜನರಿಗೆ ಹಳೆಯ ಪುಸ್ತಕಗಳನ್ನು ತೆಗೆದು ಹಾಕುವುದು ತುಂಬಾ ಕಷ್ಟವಾಗುತ್ತದೆ. ಇಂತವರು ಯಾವುದೇ ಕಾರಣವಿಲ್ಲದೇ, ಹಳೆಯ ವಸ್ತುಗಳನ್ನು ಸಂಗ್ರಹಿಸುತ್ತಲೇ ಇರುತ್ತಾರೆ. ಹಳೆ ಬಟ್ಟೆ, ಹಳೆಯ ಪತ್ರಿಕೆ, ಇತರ ವಸ್ತುಗಳು.  

ಕೆಲವು ಜನರಿಗೆ ಅಭದ್ರತೆಯ ಕೊರತೆ ಕಾಡುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಮನೆಯ ಬಾಗಿಲು, ಕಿಟಕಿಗಳನ್ನು ಪರಿಶೀಲಿಸುತ್ತಾರೆ. ಬಾಗಿಲು ಹಾಗೂ ಕಿಟಕಿಗಳನ್ನು ಸರಿಯಾಗಿ ಲಾಕ್ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಈ ಕಾಯಿಲೆಯ ಲಕ್ಷಣಗಳಲ್ಲಿ ಒಂದು. 

ನಿಮಗೆ ಪರಿಚಯವಿರುವ ವ್ಯಕ್ತಿಯಲ್ಲಿ ಇಂತಹ ನಡುವಳಿಕೆ ಕಂಡು ಬಂದರೆ , ನೀವು ಅವರ ಜತೆ ಮಾತನಾಡಲು ಪ್ರಯತ್ನಿಸಬೇಕು. ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯಬೇಕು. ಮತ್ತು ಅವರನ್ನು ಪ್ರೋತ್ಸಾಹಿಸಬೇಕು. 


 signs , obsessive compulsive disorder, treatment,
ಒಸಿಡಿ ಕಾಯಿಲೆ, ಲಕ್ಷಣ, ಪರಿಹಾರಗಳು,

ಒಸಿಡಿ ಕಾರಣಗಳೇನು..?

ಒಸಿಡಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಕೆಲ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ. 

ಅನುವಂಶಿಯ ಕಾರಣಗಳು!

ಒಸಿಡಿ ಕೆಲಮೊಮ್ಮೆ ಪೋಷಕರಿಂದ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚು. 

ಮೆದುಳಿನಲ್ಲಿ ಸಿರೋಟೋನಿನ್ ಎಂಬ ರಾಸಾಯನಿಕದಲ್ಲಿ ಅಸಮತೋಲನ ಉಂಟಾದಾಗ ಒಸಿಡಿ ಉಂಟಾಗುತ್ತದೆ. 

ಕೆಲಮೊಮ್ಮೆ ಮಗು ಜನನ ನಂತರ ಪ್ರಮುಖ ಬದಲಾವಣೆಗಳಾಗುತ್ತದೆ. ವ್ಯಕ್ತಿಯ ಹೊಸ ಜವಾಬ್ದಾರಿಗಳು ಹೊರೆಯಾಗುವಂತೆ ಮಾಡುತ್ತದೆ. ಇದರಿಂದ ಸಹ ಒಸಿಡಿಗೆ ಒಳಗಾಗಬಹುದು. 

ಚಿಕ್ಕವಯಸ್ಸಿನಲ್ಲೇ ಜವಾಬ್ದಾರಿ ತೆಗೆದುಕೊಂಡಿರುವ ಜನರು ಒಸಿಡಿಗೆ ಒಳಗಾಗಬಹುದು. 

ಕೆಲಮೊಮ್ಮೆ ವೈಯಕ್ತಿಕ ಘಟನೆಗಳು ಒಸಿಡಿಗೆ ಕಾರಣವಾಗಬಲ್ಲವು. ವ್ಯಕ್ತಿಯ ಜೀವನದಲ್ಲಿ ಕಹಿ ಘಟನೆಗಳು ಆಘಾತವನ್ನುಂಟು ಮಾಡುತ್ತವೆ. ಇದು ಕೂಡಾ ಒಸಿಡಿಗೆ ಕಾರಣವಾಗಬಲ್ಲದ್ದು. 


 signs , obsessive compulsive disorder, treatment,
ಒಸಿಡಿ ಕಾಯಿಲೆ, ಲಕ್ಷಣ, ಪರಿಹಾರಗಳು,

ಚಿಕಿತ್ಸೆಗಳೇನು?

ಒಸಿಡಿ ತುಂಬಾ ಪರಿಣಾಮಕಾರಿಯಾಗಿರುವ ಕಾಯಿಲೆಯಾದರೂ, ಇದ್ರಿಂದ ಹಲವು ಜನರು ಚೇತರಿಸಿಕೊಂಡಿರುವ ಅನೇಕ ಉದಾರಹಣೆಗಳಿವೆ. ಒಸಿಡಿಯ ತೀವ್ರತೆಯ ಅನುಗುಣವಾಗಿ ಔಷಧಿಯಿಂದ ಚಿಕಿತ್ಸೆ ನೀಡಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಬಿಹೇವಿಯರಲ್ ಥೆರಪ (ಸಿಬಿಟಿ) ಯಂತಹ ಚಿಕಿತ್ಸೆ ನೀಡಲಾಗುತ್ತದೆ. ಕಾಯಿಲೆ ಹೆಚ್ಚು ತೀವ್ರವಾದಾಗ , ಅನೇಕ ಸಂದರ್ಭಗಳಲ್ಲಿ ಔಷಧಿಗಳನ್ನು ನೀಡಲಾಗುತ್ತದೆ. ಖಿನ್ನತೆ, ಆತಂಕದ ಮಟ್ಟವನ್ನು ಕಡಿಮೆ ಮಾಡಲು ಮೆಡಿಸಿನ್ ನೀಡಲಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ