ಆಲಿವ್ ಎಣ್ಣೆ ಅಡುಗೆಗೆ ಬಳಸುವ ಮುನ್ನ ಎಚ್ಚರ..!

  • by

ಭಾರತದ ಹೆಚ್ಚಿನ ಜನರು ಅಡುಗೆ ಪದಾರ್ಥಗಳಲ್ಲಿ ಸೋಯಾಬೀನ್ ಅಥವಾ ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಆದರೆ ಫಿಟ್ನೆಸ್ ಗಮನದಲ್ಲಿಟ್ಟುಕೊಂಡು, ಆಲಿವ್ ಎಣ್ಣೆ ಯನ್ನು ಬಳಸುವ ಅದೆಷ್ಟೋ ಜನರಿದ್ದಾರೆ. ಭಾರತೀಯರಿಗಿಂತ ಹೆಚ್ಚಾಗಿ, ಈ ತೈಲವನ್ನು ಇಟಾಲಿಯನ್ , ಚೈನೀಸ್ ಹಾಗೂ ಥಾಯ್ ನಂತಹ ವಿದೇಶಿiಗರು ಬಳಸುತ್ತಾರೆ. ಆಲಿವ್ ಎಣ್ಣೆಯಿಂದ ತಯಾರಿಸಿದ ಆಹಾರವು ಆರೋಗ್ಯಕ್ಕೆ ತುಂಬಾ ಒ ಸಾಮಾನ್ಯವಾಗಿ ಹಲವರು ಭಾವಿಸಿದ್ದಾರೆ. ಆರೋಗ್ಯಕರ ಕೊಬ್ಬಿನಾಮ್ಲಗಳು ಹಾಗೂ ಉತ್ಕರ್ಷಣ ನಿರೋಧಕ ಅಂಶಗಳು ಆಲಿವ್ ಎಣ್ಣೆಯಲ್ಲಿ ಕಂಡು ಬರುತ್ತವೆ. ಆದ್ರೆ ಈ ಎಣ್ಣೆಯಲ್ಲಿ ಕೊಬ್ಬು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲದ್ದು. 

Olive oil, side effects, ಆಲಿವ್ ಎಣ್ಣೆ , ಅಡ್ಡಪರಿಣಾಮಗಳು

ಇತ್ತೀಚಿನ ದಿನಗಳಲ್ಲಿ ಆಲಿವ್ ಎಣ್ಣೆಯ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂದಹಾಗೇ ಆಲಿವ್ ಎಣ್ಣೆ ನಮ್ಮ ಆರೋಗ್ಯಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿವೆ.  ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ಹೃದಯಾಘಾತದಂತಹ ಗಂಭೀರ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಲು ಇದು ಕೆಲಸ ಮಾಡುತ್ತದೆ. ಹಾಗೂ ಹೃದಯಾಘಾತವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಎಂದು ಹೇಳಲಾಗಿದೆ. ಮಾರುಕಟ್ಟೆಯಲ್ಲಿ ಹಲವು ವಿಧದ ಆಲಿವ್ ಎಣ್ಣೆಗಳಿವೆ. ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾರುಕಟ್ಟೆಯಲ್ಲಿ ನೀವು ಹೆಚ್ಚು ಸಂಸ್ಕರಿಸಿದ ಆಲಿವ್ ಎಣ್ಣೆ ಸೀಗುತ್ತದೆ. ಆದರೆ ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ. 

ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಆಲಿವ್ ಎಣ್ಣೆಗಳಿವೆ. ಶುದ್ಧವಿಲ್ಲದೇ ಆಲಿವ್ ಎಣ್ಣೆ ಆರೋಗ್ಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಆಲಿವ್ ಎಣ್ಣೆಯಿಂದ ಅಡುಗೆ ಮಾಡುವುದು ನಮ್ಮ ಆರೋಗ್ಯಕ್ಕೆ ತುಂಬಾ ಕೆಟ್ಟದಾಗಿದೆ. ವಿಶೇಷವಾಗಿ ಈ ಎಣ್ಣೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. 

ಆಲಿವ್ ಮರದ ಹಣ್ಣಿನಿಂದ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ. ಪ್ರಾಚೀನ ಕಾಲದಲ್ಲಿ, ಆಲಿವ್ ಹಣ್ಣನ್ನು ಕಲ್ಲುಗಳ ಮಧ್ಯೆ ಇಟ್ಟು, ಅದನ್ನು ಹಿಂಡಿ, ಅದರಿಂದ ಎಣ್ಣೆಯನ್ನು ತೆಗೆಯುತ್ತಿದ್ದರು, ಆದರೆ ಇತ್ತೀಚಿಗೆ ಸ್ಟೀಲ್ ಬ್ಲೇಡ್ ಗಳ ಸಹಾಯದಿಂದ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ. 

Olive oil, side effects, ಆಲಿವ್ ಎಣ್ಣೆ , ಅಡ್ಡಪರಿಣಾಮಗಳು

ಆಲಿವ್ ಎಣ್ಣೆ ಎಷ್ಟು ಬಗೆಗಳಲ್ಲಿ ಲಭ್ಯವಿದೆ..?

ಆಲಿವ್ ಎಣ್ಣೆ ಮೂರು ಬಗೆಗೆಗಳಲ್ಲಿ ಲಭ್ಯವಿದೆ. 

ಸಂಸ್ಕರಿಸಿದ ಆಲಿವ್ ಎಣ್ಣೆ.. !

ಈ ಎಣ್ಣೆಯನ್ನು ಶಾಖ ಮತ್ತು ದ್ರಾವಕಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗುತ್ತದೆ. ಇದರಿಂದ ಆಲಿವ್ ಎಣ್ಣೆ ರುಚಿ ಇರುವುದಿಲ್ಲ. 

ಸಂಸ್ಕರಿಸದ ಎಣ್ಣೆ ..!

ಈ ಎಣ್ಣೆಯನ್ನು ಯಾವುದೇ ರೀತಿಯ ರಾಸಾಯನಿಕ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಸೇರಿಸಲಾಗುವುದಿಲ್ಲ. ಆದ ಕಾರಣ ಈ ಎಣ್ಣೆಯ ಉತ್ಪಾದಕರು ಒಳ್ಳೆಯ ಆಲಿವ್ ಹಣ್ಣುಗಳನ್ನೇ ಉಪಯೋಗಿಸಲಾಗುತ್ತದೆ. 

ಆಲಿವ್ ಎಣ್ಣೆ ಯ ಆರೋಗ್ಯಕಾರಿ ಪ್ರಯೋಜನಗಳು ಜನಪ್ರಿಯತೆ ಪಡೆದಿದ್ದರೂ, ಅದಕ್ಕೆ ತನ್ನದೇ ಆದ ಕೆಲವು ಅಡ್ಡಪರಿಣಾಮಗಳು ಇವೆ. ಆಲಿವ್ ಎಣ್ಣೆಯನ್ನು ಅತಿಯಾಗಿ ಬಳಸಿದರೆ, ಅಲರ್ಜಿ ಆಗಬಹುದು. ಇದ್ರಿಂದ ನಿಮ್ಮ ಚರ್ಮದ ಮೇಲೆ ದದ್ದು ಹಾಗೂ ಉರಿ ಶುರುವಾಗಬಹುದು. ಅದರ ಜತೆಗೆ ಭೇದಿಯಂತಹ ಸಮಸ್ಯೆಯೂ ಶುರುವಾಗಬಹುದು. ಅದರೊಂದಿಗೆ ರಕ್ತದೋತ್ತಡ ಹೆಚ್ಚಾಗುವುದಲ್ಲದೇ, ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. 

ಆಲಿವ್ ಎಣ್ಣೆಯನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತದೆ. ಈ ಎಣ್ಣೆ ಚರ್ಮದ ಆಳದವರೆಗೆ ಹೀರಿಕೊಂಡು, ನಿಮ್ಮ ಚರ್ಮವನ್ನು ಮೃದುವಾಗಿಸುವಲ್ಲಿ ಸಹಾಯ ಮಾಡುತ್ತದೆ. 

ಶುಷ್ಕ ತ್ವಚೆ ಹೊಂದಿರುವವರು ಆಲಿವ್ ಎಣ್ಣೆ ಉಪಯೋಗಿಸುವುದು ಸೂಕ್ತ. ಆಲಿವ್ ಎಣ್ಣೆ ಚರ್ಮವನ್ನು ಮೃದುವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಚರ್ಮದ ಹೊಳಪು ಹೆಚ್ಚಿಸಲು ಆಲಿವ್ ಎಣ್ಣೆಯನ್ನು ಬಳಸಲಾಗುತ್ತದೆ. ಆಲಿವ್ ಎಣ್ಣೆ ಸ್ಟ್ರಾಬೆರಿ ಹಣ್ಣಿನೊಂದಿಗೆ ಸೇರಿಸಿ, ಹಚ್ಚಿಕೊಂಡರೆ ತ್ವಚೆಯನ್ನು ಸ್ವಚ್ಛಗೊಳಿಸುವ ಗುಣ ಇದರಲ್ಲಿದೆ. ಇದು ಚರ್ಮದ ಡೆಡ್ ಕೋಶಗಳನ್ನು ನಿವಾರಿಸುತ್ತದೆ. ಅಲ್ಲದೇ, ನಿಮ್ಮ ಚರ್ಮದ ಹೊಳಪಿನ ಚರ್ಮವನ್ನು ನೀಡುತ್ತದೆ. 

ಸೀಳು ಹಿಮ್ಮಡಿ ನಿವಾರಿಸುವಲ್ಲಿ ಆಲಿವ್ ಎಣ್ಣೆ ಮಹತ್ವದ ಪಾತ್ರ ವಹಿಸುತ್ತದೆ. ಈ ಎಣ್ಣೆಯು ಸೀಳು ಅಥವಾ ಬಿರುಕು ಬಿಟ್ಟ ಹಿಮ್ಮಡಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉಗುರುಗಳ ಬೆಳವಣಿಗೆಗೆ ಮತ್ತು ಅವುಗಳ ಬಲಿಷ್ಠತೆಯನ್ನು ಹೆಚ್ಚಿಸುವಲ್ಲಿ ಆಲಿವ್ ಎಣ್ಣೆ ಕಾರ್ಯನಿರ್ವಹಿಸುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ