ಕೊರೊನಾ ವೈರಸ್ ಬಗ್ಗೆ ಶ್ವಾಸಗುರು ವಚನಾನಂದ ಸ್ವಾಮೀಜಿ ಹೇಳೋದೇನು..? 

  • by

ಕೊರೊನಾ ವೈರಸ್ ತಡೆಗಟ್ಟುವುದಕ್ಕೆ ಯೋಗಾ ಹಾಗೂ ಮನೆ ಮದ್ದುಗಳನ್ನು ಬಳಸಿ ಅಂತಾ ಶ್ವಾಸಗುರು, ಹರಿಹರ ವಿರಶೈವ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.


Shwaasaguru Sri Vachanananda Swamiji, Advices Measures , Prevent Coronavirus Infection ,ಶ್ವಾಸಗುರು, ವಚನಾನಂದ ಸ್ವಾಮೀಜಿ. ಕೊರೊನಾ ವೈರಸ್, ಸಲಹೆ.

ವಚನಾನಂದ ಸ್ವಾಮೀಜಿ ಹೇಳೋದೇನು..?

ಕೊರೊನಾ ವೈರಸ್ ಎಂಬುದು ಒಂದೇ ವೈರಾಣು ಅಲ್ಲ. ಇದು ಅನೇಕ ಸಮುದಾಯಗಳ ಗುಂಪು. ಈ ವೈರಾಣು ಮೊದಲು ಶ್ವಾಸಕೋಷವನ್ನು ಅಟ್ಯಾಕ್ ಮಾಡುತ್ತದೆ. ನೆಗಡಿ ಕೆಮ್ಮು ಮೂಲಕ ರೋಗ ಪ್ರಾರಂಭವಾಗುತ್ತದೆ. ಹಾಗಾಗಿ ನಮ್ಮ ಶ್ವಾಸಕೋಶವನ್ನು ನಾವು ಮೊದಲು ಸ್ಟ್ರಾಂಗ್ ಮಾಡಿಕೊಳ್ಳಬೇಕು ಎಂದು ಶ್ವಾಸಗುರು ವಚನಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಪ್ರಾಣಾಯಾಮ ಮೂಲಕ ಕೊರೊನೊ ನಿಗ್ರಹ ಮಾಡಬಹುದಂತೆ. ಯೋಗದ ಪ್ರಮುಖ ಆಯಾಮಗಳಾದ ಕಪಾಲಿಬಾತಿ , ಪ್ರಾಣಾಯಾಮ, ಬಸ್ರಿಕಾ ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು. ಕಪಾಲಿಬಾತಿ ನಮ್ಮ ದೇಹದಲ್ಲಿ ಗಾಳಿ ಮೂಲಕ ಒಳಹೋಗುವ ವೈರಾಣುವನ್ನು ಹೊರಹಾಕುತ್ತದೆ. ಭಸ್ತ್ರೀಕಾ ನಮ್ಮ ದೇಹಕ್ಕೆ ಆಕ್ಸಿಜನ್ ಸಪ್ಲೈ ಮಾಡುತ್ತದೆ. ಹಾಗೇ ಕೆಟ್ಟ ಕಾರ್ಬನ್ ಡೈ ಆಕ್ಸೈಡ್ ಹೊರಹಾಕುತ್ತಾ ಹೋಗುತ್ತದೆ. ಇದು ಹೆಚ್ಚು ಪವರ್ ಫುಲ್ . ಪ್ರಾಣಾಮಾಯಾ ನಮ್ಮಶರೀರದಲ್ಲಿ ನರ್ವಸ್ ಸಿಸ್ಟಮ್ ಗೆ ಒಳ್ಳೆಯದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

‘ಔಷಧೀಯ ಗುಣವುಳ್ಳ ಪದಾರ್ಥ ಬಳಕೆ ಮಾಡಿ’ – ಸ್ವಾಮೀಜಿ

ಸ್ವಚ್ಛತೆ ಕಡೆ ಗಮನ ಕೊಡಿ. ಕೈ ಮುಗಿದು ನಮಸ್ಕಾರ ಮಾಡಿ
ರೋಗ ನಿರೋಧಕ ಪದಾರ್ಥ ಬಳಸಿ ಶಕ್ತಿ ಹೆಚ್ಚಿಸಿಕೊಳ್ಳಿ.
ವಿಟಮಿನ್ ಸಿ ಪದಾರ್ಥಗಳ ಬಗ್ಗೆ ಸೇವನೆ ಮಾಡಿ
ಜ್ವರ, ಕೆಮ್ಮು , ನೆಗಡಿ ಬಂದ್ರೆ ನಿರ್ಲಕ್ಷಿಸಬೇಡಿ.. !

Shwaasaguru Sri Vachanananda Swamiji, Advices Measures , Prevent Coronavirus Infection ,ಶ್ವಾಸಗುರು, ವಚನಾನಂದ ಸ್ವಾಮೀಜಿ. ಕೊರೊನಾ ವೈರಸ್, ಸಲಹೆ.

ಮನೆ ಮದ್ದುಗಳ ಬಗ್ಗೆ ವಚನಾನಂದ ಸ್ವಾಮೀಜಿಯ ಸಲಹೆಗಳೇನು..!

ಅರಶಿಣ ಪದಾರ್ಥಗಳಲ್ಲಿ ಹೇರಳವಾಗಿ ಉಪಯೋಗಿಸಬೇಕು. ಪ್ರತಿ ಆಹಾರದಲ್ಲಿ ಹೆಚ್ಚು ಅರಶಿಣ ಉಪಯೋಗಿಸಿ. ಅತಿಹೆಚ್ಚು ಲಾಭವಿರುವಂತಹದ್ದು ಬೆಳ್ಳುಳ್ಳಿ. ಇದರೊಳಗೆ ಬ್ಲಡ್ ಕೊಲೆಸ್ಟ್ರಾಲ್ ತೆಗೆದು ಹಾಕುತ್ತದೆ. ರಕ್ತದಲ್ಲಿ ರೋಗಾಣುಗಳು ತೆಗೆಯುವಂತಹ ಶಕ್ತಿ ಬೆಳ್ಳುಳ್ಳಿಯಲ್ಲಿದೆ. ಹೀಗಾಗಿ ಮನೆಯಲ್ಲಿ ಹೆಚ್ಚು ಉಪಯೋಗಿಸಬೇಕು. ಅದೇ ರೀತಿ ಚಕ್ರ ಮೊಗ್ಗುವಿನಲ್ಲಿ ಸಿಕ್ಮಿಕ್ ಆಸಿಡ್ ಆಂಟಿ ವೈರಲ್ ವೈರಾಣು ನಿರೋಧಕ ಶಕ್ತಿ ಇದೆ. ಇದನ್ನು ಹೇರಳವಾಗಿ ಬಳಸಬಹುದು ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ.

ಚಕ್ರಮೊಗ್ಗನ್ನು ಹೆಚ್ಚು ಬಿಸಿಲಿನಲ್ಲಿ ಕುದಿಸಿ ಬೆಲ್ಲಾ, ಶುಂಠಿ, ಮೆಣಸು, ಚಚ್ಚಿ ಹಾಕುವುದರಿಂದ ಇದ್ರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗ್ರೀನ್ ಟೀ ಕುಡಿಯುವುದರಿಂದಲೂ ನಮ್ಮ ದೇಹದಲ್ಲಿ ಕೊರೊನ್ ವೈರಸ್ ನ್ನು ತಡೆಗಟ್ಟಬಹುದು. ಹಾಗಾಗಿ ಕೊರೊನ್ ವೈರಸ್ ಬಗ್ಗೆ ಭಯ ಪಡಬೇಡಿ. ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಿ. ನಮ್ಮ ಸುತ್ತಮುತ್ತಲಿನ ಮನೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಹ್ಯಾಂಡ್ ಶೇಕ್ ಮಾಡಬೇಡಿ, ನಮಸ್ಕಾರ ಮಾಡಿ. ಫ್ರೆಶ್ ಆಗಿರುವ ಆಹಾರ ಸೇವಿಸಿ. ವಿಟಮಿನ್ ಸಿ ಪದಾರ್ಥ ಸೇವಿಸಿ. ವಿಟಮಿನ್ ಸಿ ಪದಾರ್ಥಗಳಾದ ದ್ರಾಕ್ಷಿ ಬಹಳ ಒಳ್ಳೆಯದು, ವಿಟಮಿನ್ ಸಿ ಇರುವ ಆಹಾರಗಳಾದ ನಿಂಬೆ ಶರಬತ್ತು ಕಿತ್ತಳೆ, ಮಜ್ಜಿಗೆ ಹೆಚ್ಚು ಕುಡಿಯಿರಿ. ಕೆಮ್ಮು , ನೆಗಡಿ , ಜ್ವರ ಬಂದರೆ ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ಶ್ವಾಸಗುರು ವಚನಾನಂದ ಸ್ವಾಮೀಜಿ ತಮ್ಮ ಭಕ್ತರಿಗೆ, ಹಾಗೂ ಇಡೀ ಜನತೆಗೆ ಸಲಹೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ