ಎಳ್ಳು ತಿನ್ನಿ… ವರ್ಷಪೂರ್ತಿ ಆರೋಗ್ಯವಾಗಿರಿ!

  • by


ಹಣ್ಣುಗಳ ಜೆತೆಗೆ ಆರೋಗ್ಯಕ್ಕೆ ಪ್ರಯೋಜನಗಳನ್ನುಂಟು ಮಾಡುವ ಅನೇಕ ಆಹಾರ ವಸ್ತುಗಳು ಇಲ್ಲಿವೆ. ಚಳಿಗಾಲದಲ್ಲಿ ಹಣ್ಣುಗಳ ಜತೆಗೆ ಎಳ್ಳು ತಿನ್ನುವುದರಿಂದ ಹಲವು ಆಕೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಎಳ್ಳು ಮುಖ್ಯಾವಾಗಿ ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ಮೇಲ ನೋಟಕ್ಕೆ ಎಳ್ಳು. ಸಣ್ಣದಾಗಿ ಕಾಣಿಸಬ ಹುದು. ಆದ್ರೆ ಚಳಿಗಾಲದಲ್ಲಿ ಎಳ್ಳು ಸೇವಿಸುವುದರಿಂದ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಾಕಾರಿ ಯಾಗಲಿದೆ. ಇದು ದೇಹಕ್ಕೆ ಉಷ್ಣತೆಯನ್ನು ನೀಡುವುದಲ್ಲದೇ, ಇದು ದೇಹದ ಎಲಬುಗಳನ್ನು ಬಲಪಡಿಸುತ್ತದೆ.

sesame-seeds, benefits, 
ಎಳ್ಳು, ಆರೋಗ್ಯ ಪ್ರಯೋಜನಗಳು

ಎಳ್ಳು ತಿನ್ನುವುದರಿಂದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ
ಎಳ್ಳು ತಿನ್ನುವುದರಿಂದ ಶಕ್ತಿ ಹೆಚ್ಚುವುದಲ್ಲದೇ. ತ್ವಚೆಗೆ ಒಳ್ಳೆಯದು. ಎಳ್ಳಿನಲ್ಲಿ ಎರಡು ಪ್ರಕಾರಗಳಿವೆ. ಬಿಳಿ ಎಳ್ಳು
ಹಾಗೂ ಕಪ್ಪು ಎಳ್ಳು. ಇದನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ.

ಎಳ್ಳು ಬಳಕೆಯಿಂದ ಆಗುವ ಪ್ರಯೋಜನಗಳು!

ಎಳ್ಳು ಎಣ್ಣೆಯ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಎಳ್ಳು ಎಣ್ಣೆ ನಮ್ಮ ಕೂದಲಿಗೆ ತುಂಬಾ ಪ್ರಯೋಜನ ಒದಗಿಸುತ್ತದೆ. ಇದು ಸಾಕಷ್ಟು ವಿಟಮಿನ್ ಇ, ಬಿ ಕಾಂಪ್ಲೆಕ್ಸ್ , ಕ್ಯಾಲ್ಸಿಯಂ , ಮೆಗ್ನೇಶಿಯಂ, ರಂಜಕ ಹಾಗೂ ಪ್ರೋಟೀನ್ ಗಳಲ್ಲಿ ಕಂಡು ಬರುತ್ತದೆ.

ಇನ್ನು ಎಳ್ಳಿನಲ್ಲಿ ಸೆಸಮಿನ್ ಎಂಬ ಆಂಟಿ ಆಕ್ಸಿಡೆಂಟ್ ಇದ್ದು, ಇದು ಕ್ಯಾನ್ಸರ್ ಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಎಳ್ಳು ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಹೊಟ್ಟೆಯ ಕ್ಯಾನ್ಸರ್, ವಿವಿಧ ಬಗೆಯ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.
ಎಳ್ಳು ಹಸಿವನ್ನು ಹೆಚ್ಚಿಸುತ್ತದೆ. ಎಳ್ಳು ಪಿತ್ತ, ಕಫ ಸಮಸ್ಯೆಯನ್ನು ತಡೆಗಟ್ಟುತ್ತದೆ. ಎಳ್ಳಿನ ಎಣ್ಣೆಯಿಂದ ನಿರಂತರವಾಗಿ ಮಸಾಜ್ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ವೃದ್ಧಾಪ್ಯವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನು ಚಳಿಗಾಲದಲ್ಲಿ ಎಳ್ಳನ್ನು ಸೇವಿಸುವುದರಿಂದ ಹಾಗೂ ಎಣ್ಣೆಯನ್ನು ಹಚ್ಚುವುದರಿಂದ ಚರ್ಮದ ಶುಷ್ಕತೆ ಕೊನೆಗೊಳ್ಳುತ್ತದೆ. ಎಳ್ಳಿನ ಸೇವನೆಯಿಂದ ತ್ವಚೆ ಕಾಂತಿ ಪಡೆಯುತ್ತದೆ. ನಿಮ್ಮ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ, ಆಗ ಕಪ್ಪು ಎಳ್ಳನ್ನು ಬಿಸಿ ನೀರಿನಿಂದ ಸೇವಿಸುವುದರಿಂದ ತಕ್ಷಣ ಪರಿಹಾರ ಕಂಡು ಕೊಳ್ಳಬಹುದು. ಒತ್ತಡ. ಖಿನ್ನತೆಯ ಸಮಸ್ಯೆಗಳನ್ನು ಸಹ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಕ್ಕರೆ ಜತೆಗೆ ಎಳ್ಳು ಸೇವಿಸುವುದರಿಂದ ಒಣ ಕೆಮ್ಮಿನಿಂದ ಪರಿಹಾರ ಕಂಡುಕೊಳ್ಳಬಹುದು.

ಅಲ್ಲದೇ ಕಿವಿಯಲ್ಲಿ ನೋವು ಇದ್ದರೆ, ಅಂಥವರು ಎಳ್ಳು ಎಣ್ಣೆಯನ್ನು ಬೆಳ್ಳುಳ್ಳಿ ಜತೆಗೆ ಬೆರೆಸಿ ಸ್ವಲ್ಪ ಬಿಸಿ ಮಾಡಿ, ಬಳಕೆ ಮಾಡಬಹುದು.
ಎಳ್ಳಿನ ಸೇವನೆಯ ನಮ್ಮ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿ. ಬೆಳಿಗ್ಗೆ ಹಲ್ಲುಜ್ಜಿದ ನಂತರ ಎಳ್ಳನ್ನು ಅಗಿಯುವುದರಿಂದ ಹಲ್ಲುಗಳು ಬಲಗೊಳ್ಳುತ್ತವೆ. ಬಾಯಿ ಹುಣ್ಣಿನಿಂದ ಪರಿಹಾರ ಪಡೆಯಲು ಬಳಸಲಾಗುತ್ತದೆ.

ಕೂದಲಿನ ಆರೈಕೆಗಾಗಿ ಎಳ್ಳು ತಿನ್ನಬಹುದು. ಪ್ರತಿ ದಿನ ಎಳ್ಳು ತಿನ್ನುವುದರಿಂದ ಸಂಧಿಗಳ ನೋವು ಹಾಗೂ ಸವೆತವನ್ನು
ತಡೆಗಟ್ಟಬಹುದು. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ ಹಾಗೂ ಕೀಟಾಣು ವೈರಾಣು ನಾಶಕ , ವಸಡಿನ ರಕ್ತಸ್ರಾವ , ಹಲ್ಲು ನೋವು , ಹಲ್ಲು ಹುಳುಕಾಗುವಿಕೆ, ಬಾಯಿ ಹುಣ್ಣಿನ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಬಹುದು.

sesame-seeds, benefits, 
ಎಳ್ಳು, ಆರೋಗ್ಯ ಪ್ರಯೋಜನಗಳು
FW0504WSA04

ಆಯುರ್ವೇದದಲ್ಲಿ ಎಳ್ಳು.. !
ಆಯುರ್ವೇದದಲ್ಲಿ ಎಳ್ಳನ್ನು ಔಷಧಿಯಾಗಿ ಬಳಸಲಾಗುತ್ತದೆ . ಕರಿ ಎಳ್ಳು ಹೆಚ್ಚು ಔಷಧೀಯ ಗುಣಗಳನ್ನು ಒಳಗೊಂಡಿದೆ. ಹಲ್ಲು ಮತ್ತು ಮೂಳೆಗೂ ಇದು ಉಪಯುಕ್ತ ಎಂದು ಹೇಳಲಾಗುತ್ತದೆ. ನರಮಂಡಲಕ್ಕೆ ಪೋಷಕಾಂಶಗಳನ್ನು ಲಭಿಸಲು ಈ ಎಳ್ಳನ್ನು ಬಳಸುತ್ತಾರೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಳ್ಳಿನಿಂದ ತಂಪು ಪಾನೀಯವನ್ನು ತಯಾರಿಸಲಾಗುತ್ತದೆ. ಕುಂದಾಪುರ ಹಾಗೂ ನಮ್ಮ ಕರಾವಳಿ ಭಾಗದಲ್ಲಿ ಎಳ್ಳು ನೀರು, ರಾಗಿ ನೀರು ಹಾಗೂ ಹೆಸರು ನೀರು ಬಗೆ ಬಗೆಯ ಪಾನೀಯಗಳನ್ನು ತಯಾರಿಸಲಾಗುತ್ತದೆ. ಇವು ದೇಹದ ಉಷ್ಣತೆಯನ್ನು ತಗ್ಗಿಸಿ, ದೇಹವನ್ನು ತಂಪಾಗಿಡುತ್ತವೆ.

ಎಳ್ಳಿನಲ್ಲಿರುವ ಹೆಚ್ಚಿನ ಸೈಬರ್ ಅಂಶ ಹಲ್ಲು ನೋವು, ಹುಳುಕಾಗುವಿಕೆ ತಡೆಗಟ್ಟುತ್ತದೆ.

ಎಳ್ಳು ಉಂಡೆ ಮಾಡುವ ವಿಧಾನ..
1/2 ಕಪ್ ಎಳ್ಳು
1/4 ಕಪ್ ಕೊಬ್ಬರಿ
1/2 ಬೆಲ್ಲ
೪ ಏಲಕ್ಕಿ
ಎಳ್ಳು ಉಂಡೆ ಮಾಡುವ ವಿಧಾನ

ಒಂದು ಬಾಣಲೆಯಲ್ಲಿ ಎಳ್ಳನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಉಬ್ಬು ಬರುವರೆಗೆ ಅಥವಾ ಚಟ ಪಟ ಸಿಡಿಯುವರೆಗೆ ಹುರಿದುಕೊಳ್ಳಿ
ನಂತರ ತುರಿದ ಕೊಬ್ಬರಿ, ಏಲಕ್ಕಿ ಹಾಕಿ, ಸ್ವಲ್ಪ ಹೊತ್ತು ಹುರಿಯಬೇಕು. ಬಳಿಕ ಮಿಕ್ಸಿ ಹಾಕಿ ತರಿ ತರಿಯಾಗಿ ಪುಡಿ ಮಾಡಿ.
ಬಳಿಕ ಪುಡಿ ಮಾಡಿದ ಬೆಲ್ಲಾ ಹಾಕಿ ಪುನಃ ಪುಡಿ ಮಾಡಿ. ಒಂದು ಬಟ್ಟಲಿಗೆ ಪುಡಿ ಮಾಡಿದ ಎಳ್ಳು ಕೊಬ್ಬರಿಯನ್ನು ಮಿಶ್ರಣ
ಹಾಕಿ, ಕಲಸಬೇಕು, ಮಿಶ್ರಣ ತೆಗೆದುಕೊಂಡು, ಮುಷ್ಟಿಯಲ್ಲಿ ಒತ್ತಿ ಉಂಡೆ ಮಾಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ