ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಲಾಭಗಳು- (benefits of bathing with salt water)

  • by

ಉಪ್ಪು ಸೇರಿಸಿ ಸ್ನಾನ ಮಾಡುವುದರಿಂದ ಆಗುವ ಲಾಭಗಳು ನಿಮಗೆ ತಿಳಿದಿದೆಯೇ, ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಅದ್ಭುತ ಪ್ರಯೋಜನ ಪಡೆಯಬಹುದು. ಪ್ರಾಚೀನ ಕಾಲದಿಂದಲೂ, ಹಿರಿಯರು ರೋಗಗಳನ್ನು ಗುಣಪಡಿಸಲು ಹಾಗೂ ಆರೋಗ್ಯಕರ ಜೀವನಕ್ಕಾಗಿ ಉಪ್ಪು ನೀರಿನಿಂದ ಸ್ನಾನ ಮಾಡುತ್ತಿದ್ದರು. ವಾಸ್ತವವಾಗಿ ಎಲ್ಲರೂ ಉಪ್ಪು ನೀರಿನಿಂದ ಸ್ನಾನ ಮಾಡಬಹುದು. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಆರೋಗ್ಯದಿಂದ ಇರಬಹುದು.

salt water bath, ಉಪ್ಪಿನ ನಿೀರು, ಸ್ನಾನ

ಸ್ನಾನದ ಉಪ್ಪು ಎಂದರೆ ಸಮುದ್ರ ಉಪ್ಪು ದೇಹಕ್ಕೆ ಪೌಷ್ಠಿಕಾಂಶವನ್ನು ಒದಗಿಸುವ ಮೆಗ್ನೇಶಿಯಮ್ , ಪೊಟ್ಯಾಶಿಯಂ , ಸೋಡಿಯಂ , ಸಲ್ಫರ್, ಸತು , ಕ್ಯಾಲ್ಸಿಯಂ , ಕ್ಲೋರೈಡ್, ಸೇರಿದಂತೆ 21 ವಿವಿಧ ಖನಿಜಗಳನ್ನು ಹೊಂದಿರುತ್ತದೆ. ಆದ್ದರಿಂದ ಸ್ವಲ್ಪ ಉಪ್ಪನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ದೇಹಕ್ಕೆ ಅನೇಕ ಪ್ರಯೋಜನಗಳು ಉಂಟಾಗುತ್ತವೆ.

ಉಪ್ಪು ನೀರನ್ನು ತಯಾರಿಸುವ ವಿಧಾನ

ಉಪ್ಪು ನೀರಿನ ಸ್ನಾನ ಮಾಡುವ ಮುನ್ನ ಉಪ್ಪು ಹಾಗೂ ನೀರಿನ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಪಡೆಯಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಸ್ನಾನಕ್ಕೆ ಉಪ್ಪು ನೀರನ್ನು ತಯಾರಿಸಲು, 4 ಲೀಟರ್ ನೀರಿನಲ್ಲಿ ಎರಡು ಕಪ್ ಸಮುದ್ರದ ಉಪ್ಪನ್ನು ಸೇರಿಸಬೇಕು. ಇದಕ್ಕಿಂತ ಹೆಚ್ಚು ಉಪ್ಪು ಸೇರಿಸಿದರೆ, ನಿಮ್ಮ ಚರ್ಮ ಒಣಗಬಹುದು. ಉಪ್ಪಿನ ಸಾಂದ್ರತೆಯನ್ನು ಕಡಿಮೆ ಮಾಡಲು ಬಯಸಿದರೆ 4 ಲೀಟರ್ ನೀರಿನಲ್ಲಿ 1 ಕಪ್ ಉಪ್ಪು ಬೆರೆಸಿದರೆ ಸಾಕು.

ನೀರು ತುಂಬಾ ಬಿಸಿಯಾಗಿರಬಾರದು. ಕನಿಷ್ಠ 15 ನಿಮಿಷಗಳ ಕಾಲ ಉಪ್ಪು ನೀರಿನಿಂದ ಸ್ನಾನ ಮಾಡಿ. ಇಲ್ಲದಿದ್ದೆ, ನಿಮ್ಮ ದೇಹವನ್ನು ಬಾತ್ ಟಬ್ ನಲ್ಲಿ ಮುಳುಗಿಸಬಹುದು. ನಿಮ್ಮ ನೆಚ್ಚಿನ ಸಾರಭೂತ ತೈಲವನ್ನು ಸ್ನಾನದ ನೀರಿನಲ್ಲಿ ಉಪ್ಪಿನ ಜತೆ ಸೇರಿಸಬಹುದಾಗಿದೆ.


salt water bath, ಉಪ್ಪಿನ ನಿೀರು, ಸ್ನಾನ

ಪ್ರಯೋಜನಗಳೇನು

ಉಪ್ಪು ನೀರನಿಂದ ಸ್ನಾನ ಮಾಡುವುದರಿಂದ ಪರಿಹಾರ ಸೀಗುತ್ತದೆ. ಅಲ್ಲದೇ ಸಂಧಿವಾತ ಹಾಗೂ ಸ್ನಾಯು ಉರಿಯೂತ ನಿವಾರಣೆಯಾಗುತ್ತದೆ. ನಿದ್ರಾಹೀನತೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳ ಸಹ ನಿವಾರಣೆಯಾಗುತ್ತವೆ.ನೈಸರ್ಗಿಕ ಸಮುದ್ರ ಉಪ್ಪು ನೀರು ಅನೇಕ ಪ್ರಯೋಜನಗಳನ್ನು ಪಡೆದುಕೊಂಡಿದೆ. ಉದಾಹರಣೆಗೆ ಮೇಗ್ನೆಶಿಯಂ , ಕ್ಯಾಲ್ಸಿಯಂ , ಸೋಡಿಯಂ ಮತ್ತು ಪೊಟ್ಯಾಶಿಯಂ ಇವೆಲ್ಲವು ಚರ್ಮದ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಏನಾಗುತ್ತದೆ ಎಂದು ಹಲವರು ಪ್ರಶ್ನಿಸುತ್ತಾರೆ. ಉಪ್ಪು ನೀರಿನಿಂದ ಸ್ನಾನ ಮಾಡಿದ್ರೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ಆಯಾಸ, ಉದ್ವೇಗ, ನೋವು ನಿವಾರಣೆಯಾಗುತ್ತದೆ. ಇದು ಮನಸ್ಸಿಗೆ ರಿಲ್ಯಾಕ್ಸ್ ನೀಡುತ್ತದೆ.

ಸಂಧಿವಾತ ನಿವಾರಣೆಗೆ

ಸಂಧಿವಾತದಂತಹ ಸಮಸ್ಯೆಯನ್ನು ನಿವಾರಿಸಲು ಉಪ್ಪು ಮಿಶ್ರಿತ ನೀರು ಸಹಾಯಕಾರಿಯಾಗಬಲ್ಲದ್ದು, ಕೀಲು ಹಾಗೂ ಸ್ನಾಯುಗಳ ನೋವನ್ನು ನಿವಾರಿಸುತ್ತದೆ. ಕೆಲಮೊಮ್ಮೆ ವ್ಯಾಯಾಮ ಮಾಡುವ ಸಮಯದಲ್ಲಿ ಸ್ನಾಯುವಿನ ಒತ್ತಡ ಉಂಟಾಗಬಹುದು. ಅಂಥ ಸಂದರ್ಭದಲ್ಲಿ ತಣ್ಣನೇಯ ನೀರಿನಿಂದ ತುಂಬಿಸಿ, 2 ಕಪ್ ಎಪ್ಸಮ್ ಸಾಲ್ಟ್ ಅಥವಾ ಸಮುದ್ರದ ಉಪ್ಪು ಬೆರಸಿ, ನಿಮ್ಮ ದೇಹವನ್ನು 20 ನಿಮಿಷಗಳ ಕಾಲ ಟಬ್ ನಲ್ಲಿ ಮುಳಗಿಸಿ. ಇದರಿಂದ ಕೀಲು ನೋವು ಕಡಿಮೆಯಾಗುತ್ತದೆ.ಅಲ್ಲದೇ ಉಪ್ಪು ಸೇರಿಸಿ ಸ್ನಾನ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸೀಗುತ್ತದೆ. ದೇಹದ ದಣಿವು ನಿವಾರಿಸುತ್ತದೆ. ಇಡೀ ದಿನ ನೀವು ಸಕ್ರೀಯವಾಗಿರುತ್ತೀರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ