ವೈರಸ್ ಕೊಲ್ಲುವ ಮಾಸ್ಕ್ ಕಂಡು ಹಿಡಿಯಲು ಮುಂದಾದ ತಜ್ಞರು..!

  • by

ಕೊರೊನಾ ವೈರಸ್ ಹರಡುವಿಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿಯವರೆಗೂ ಯಾವುದೇ ವ್ಯಾಕ್ಸಿನ್ ಹಾಗೂ ಔಷಧಿ ಕಂಡು ಹಿಡಿಯಲಾಗಿಲ್ಲ. ಹಲವರ ಪ್ರಾಣ ಉಳಿಸಲು ವ್ಯಾಕ್ಸಿನ್ ಕಂಡು ಹಿಡಿಯಲು ಇನ್ನೆಷ್ಟು ದಿನ ಬೇಕಾಗುತ್ತದೆಯೇ.. ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಮತ್ತೊಂದೆಡೆ ಇದಕ್ಕಾಗಿ ಸಂಶೋಧನೆ ತೀವ್ರವಾಗಿ ನಡೆಯುತ್ತಿದೆ.

ಸದ್ಯಕ್ಕೆ ಲಸಿಕೆಯ ಪ್ರಯೋಗವನ್ನು ಮಾನವರ ಮೇಲೆ ಪ್ರಯೋಗಿಸಲಾಗಿದೆ. ಇದ್ರಿಂದ ಪರಿಣಾಮ ಏನಾಗಲಿದೆ ಎಂದು ತಜ್ಞರು ಕಾಯುತ್ತಿದ್ದಾರೆ. ಪರೀಕ್ಷೆ ನಡೆಯುತ್ತಿದೆ, ಲಸಿಕೆ ಬರಲು ಕನಿಷ್ಠ 1 ವರ್ಷ ಬೇಕಾಗಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದರ್ಥ ಮುಂದಿನ ವರ್ಷ ಕಳೆದ ನಂತರವೇ ಲಸಿಕೆ ಸಿದ್ಧವಾಗಲಿದೆ. ಮಾನವರಲ್ಲಿ ಹರಡಬಹುದಾದ ನಾಲ್ಕು ವಿಧದ ಕೊರೊನಾ ವೈರಸ್ ಗಳಿವೆ. ಇವುಗಳಿಂದ ಉಂಟಾಗುವ ಸಮಸ್ಯೆಗಳಿಗೆ ನಮ್ಮಲ್ಲಿ ಲಸಿಕೆ ಇಲ್ಲ ಸದ್ಯದ ಮಾಹಿತಿ ಪ್ರಕಾರ, ಸಂಶೋಧಕರು ಕೊರೊನಾ ವೈರಸ್ ಕೊಲ್ಲುವ ಫೇಸ್ ಮಾಸ್ಕ್ ಅನ್ನು ತಯಾರಿಸಲು ನಿರತರಾಗಿದ್ದಾರಂತೆ.

ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದ ಬಯೋ ಮೆಡಿಕಲ್ ಎಂಜಿನೀಯರ್ ವಿಭಾಗದ ಪ್ರಾಧ್ಯಾಪಕರಾದ, ಹ್ಯೋ ಜಿಕ್ ಚೊಯ್ ಕೆನಡಾದ ಟೆಲಿವಿಜನ್ ನೆಟವರ್ಕ್ ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದರು. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಫೇಸ್ ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ ಎಂದಿದ್ದಾರೆ. ಶಸ್ತ್ರಚಿಕಿತ್ಸೆ ಮಾಸ್ಕ್ ಅವು ದೊಡ್ಡ ಕೊರೊನಾ ವೈರಸ್ ಹನಿಗಳ ವಿರುದ್ಧ ಮಾತ್ರ ರಕ್ಷಣೆ ನೀಡುತ್ತವೆ. ಆದ್ರೆ ಏರೋ ಸಾಲ್ ಎಂದು ಕರೆಯಲ್ಪಡುವ ಸಣ್ಣ ವೈರಸ್ ಸಾಗಿಸುವ ಹನಿಗಳನ್ನು ತಡೆಗಟ್ಟಲು ಈ ಮಾಸ್ಕ್ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಜನರು ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ತಮ್ಮ ಮುಖವನ್ನು ಸ್ಪರ್ಶಿಸುತ್ತಾರೆ. ಕಲುಷಿತ ಕೈಗಳಿಂದ ವ್ಯಕ್ತಿಗೆ ಸುಲಭವಾಗಿ ರೋಗವು ಹರಡಬಹುದು. ಶಸ್ತ್ರಚಿಕಿತ್ಸೆಯ ಮಾಸ್ಕ್ ಗಳನ್ನು ಪ್ರತಿ ಕೆಲ ಗಂಟೆಗೊಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಳಸಿದ ಮಾಸ್ಕನ್ನು ಪುನಃ ಬಳಸಿದರೆ ಅದು ನಿಷ್ಪ್ರೋಜಕ ಎಂದು ತಿಳಿಸಿದ್ದಾರೆ.

ಸೋಡಿಯಂ ಕ್ಲೋರೈಡ್ ಮಾಸ್ಕ್ ಗಳು ಉಪಯುಕ್ತ

2017ರಲ್ಲಿ ವಿಜ್ಞಾನಿಗಳ ತಂಡ ಸೋಡಿಯಂ ಕ್ಲೋರೈಡ್ ಉಪ್ಪಿನ ಲೇಪನದಿಂದ ತಯಾರಿಸುವ ಮಾಸ್ಕ್ ಗಳ ಬಗ್ಗೆ ಪ್ರಯೋಗ ನಡೆಸಿತ್ತು. ಆಗ ವೈರಸ್ ತಡೆಗಲು ಸೋಡಿಯಂ ಕ್ಲೋರೈಡ್ ಮಾಸ್ಕ್ ಗಳು ಹೆಚ್ಚು ಉಪಯುಕ್ತವಾಗಿವೆ ಎಂದು ಕಂಡು ಹಿಡಿಯಲಾಗಿದೆ. ಸಂಶೋಧನೆ ಪ್ರಕಾರ. ಮಾಸ್ಕ್ ಗಳ ಮೇಲಿರುವ ಉಪ್ಪಿನ ಲೇಪನದ ಮೇಲೆ ವೈರಸ್ ತಾಗಿದಾಗ ಅವು ಕರಗುತ್ತವೆ. ಮತ್ತು ವೈರಸ್ ಗಳು ನಾಶವಾಗುತ್ತವೆ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ