ರೋಸ್ ವಾಟರ್ ನಿಂದ ಮುಖದ ಸೌಂದರ್ಯ ವೃದ್ಧಿಯಾಗುತ್ತಾ..?

  • by

ಹಿಂದಿನ ಕಾಲದಿಂದಲೂ ರೋಸ್ ವಾಟರ್ ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ತ್ವಚೆಯನ್ನು ಕೋಮಲಗೊಳಿಸಲು ರೋಸ್ ವಾಟರ್ ನ್ನು ಹಲವು ಜನರು ಬಳಸುತ್ತಾರೆ. ರೋಸ್ ವಾಟರ್ ಚರ್ಮವನ್ನು ಶುದ್ಧೀಕರಿಸಿ ಚರ್ಮದ ಆರೈಕೆ ಮಾಡುತ್ತದೆ. ಮುಖವನ್ನು ತೊಳೆದು ನಂತರ, ಹತ್ತಿಯಲ್ಲಿ ಗುಲಾಬಿ ನೀರು ಅದ್ದಿ, ಮುಖಕ್ಕೆ ಹಚ್ಚಬೇಕು. ಇದ್ರಿಂದ ಮುಖದಲ್ಲಿರುವ ರಂಧ್ರಗಳನ್ನು ಮುಚ್ಚಲು ಸಹಾಯವಾಗುತ್ತದೆ. ಮೊಡವೆ ಸಮಸ್ಯೆಗಳಿಗೂ ರೋಸ್ ವಾಟರ್ ಬಳಸಲಾಗುತ್ತದೆ. ನಿಮ್ಮ ಚರ್ಮದ ನೈಸರ್ಗಿಕ ಹೊಳಪನ್ನು ರೋಸ್ ವಾಟರ್ ಹೆಚ್ಚಿಸುತ್ತದೆ. ಮುಖದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಎಣ್ಣೆಯನ್ನು ಅಳಿಸಿಹಾಕಲು ರೋಸ್ ವಾಟರ್ ಸಹಾಯ ಮಾಡುತ್ತದೆ. ಅಲ್ಲದೇ, ಬ್ಯಾಕ್ಟೇರಿಯಾವನ್ನು ತಡೆಗಟ್ಟುತ್ತದೆ. ಚರ್ಮದ ಕೋಶಗಳನ್ನು ಬಲಪಡಿಸುತ್ತದೆ. 

ರೋಸ್ ವಾಟರ್, ಮುಖದ ಸೌಂದರ್ಯ , Rose water, benefits ,

ಡಾರ್ಕ್ ಸರ್ಕಲ್ ನಿವಾರಣೆ..!

ಹೆಚ್ಚಿದ ಒತ್ತಡ , ಧೂಳು , ಮಣ್ಣು ಮತ್ತು ಮಾಲಿನ್ಯವು ಮುಖದ ನಲು ಕಂದು ಮಚ್ಚೆಗಳು ಹಾಗೂ ಕಣ್ಣಿ ಕೆಳಗಡೆ ಕಪ್ಪು ಕಾಣಿಸಿಕೊಳ್ಳುತ್ತದೆ. ಇದ್ದಲ್ಲದೇ ನಿದ್ರೆಯ ಕೊರತೆಯಿಂದ ಅಥವಾ ಹೆಚ್ಚು ಅಳುವುದರಿಂದ ಡಾರ್ಕ್ ಸರ್ಕಲ್ ಗಳು ಕಾಣಿಸಿಕೊಳ್ಳುತ್ತವೆ. ರೋಸ್ ವಾಟರ್ ನಲ್ಲಿ ವಿಟಮಿನ್ ಎ ಮತ್ತು ಬಿ ಗುಣಗಳು ಹೆಚ್ಚಾಗಿರುವುದರಿಂದ ಇದು ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ. ಕಣ್ಮುಗಳ ಕೆಳಗೆ ಉಂಟಾಗಿರುವ ಡಾರ್ಕ್ ಸರ್ಕಲ್ ಗಳನ್ನು ನಿವಾರಿಸುತ್ತದೆ. ಗುಲಾಬಿ ನೀರಿನಲ್ಲಿ ಹತ್ತಿಯನ್ನು ಅದ್ದಿ ನಿಮ್ಮ ಕಣ್ಣುಗಳ ಮೇಲೆ ಇರಿಸಿ. ಇದ್ರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುವುದಲ್ಲದೇ, ಕಣ್ಣಿನ ಆಯಾಸ ನಿವಾರಣೆಯಾಗುತ್ತದೆ. 

ರಿಲಾಕ್ಸ್ ಮಾಡಲು ರೋಸ್ ವಾಟರ್ ಸ್ನಾನ

ಸ್ನಾನ ಮಾಡುವಾಗ ಕೆಲವೊಂದಿಷ್ಟು ಹನಿಗಳನ್ನು ರೋಸ್ ವಾಟರ್ ಹಾಕಿಕೊಂಡರೆ ರಿಲ್ಯಾಕ್ಸ್ ದೊರೆಯುತ್ತದೆ. ಮನಸ್ಸಿನ ತಳಮಳ ದೂರವಾಗಿ ಹೊಸ ಉತ್ಸಾಹ ಸೀಗುತ್ತದೆ. ನೀರಲ್ಲಿ ರೋಸ್ ವಾಟರ್ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ದೇಹ ಹಾಗೂ ಚರ್ಮಕ್ಕೆ ಕೂಡಾ ಬಹಳ ಉಪಯೋಗ ಇದೆ. ಚರ್ಮದ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ. 

ರೋಸ್ ವಾಟರ್, ಮುಖದ ಸೌಂದರ್ಯ , Rose water, benefits ,

ನ್ಯಾಚುರಲ್ ಟೋನರ್ 

ಉರಿಯೂತದಿಂದ ಬಳಲುತ್ತಿರುವವರು ರೋಸ್ ವಾಟರ್ ಒಂದು ಮೈಲ್ಡ್ ಸ್ಕಿನ್ ಟೋನರ್ ಆಗಿ ಕೆಲಸ ಮಾಡುತ್ತದೆ. ಮಾರುಕಟ್ಟೆಯಲ್ಲಿಹಲವು ಬಗೆಯ ಸ್ಕಿನ್ ಟೋನಿಂಗ್ ಏಜೆಂಟ್ ಲಭ್ಯವಿವೆ. ಆದ್ರೆ ರೋಸ್ ವಾಟರ್ ನಷ್ಟು ಪರಿಣಾಮಕಾರಿ ಆಗಿರುವುದಿಲ್ಲ. ಬೆವರಿನ ದುರ್ಗಂಧ ಹೊರಹಾಕಲು ಇವು ಅತ್ಯಂತ ಸಹಕಾರಿ. 

ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ 

ಮೊಡವೆಗಳ ನಿವಾರಣೆಗೆ ರೋಸ್ ವಾಟರ್ ಬಳಸುವುದು ಉತ್ತಮ.  ತಣ್ಣನೇಯ ನೀರಿಗೆ ಕೋಲ್ಡ್ ರೋಸ್ ವಾಟರ್ ಬೆರಸಿ ಮುಖ ತೊಳೆದುಕೊಂಡರೆ ಮುಖದ ಮೇಲಿನ ಮೊಡವೆಗಳು ಮಾಯವಾಗುತ್ತವೆ. 

ಮುಖದ ಕಾಂತಿ ಹೆಚ್ಚಿಸುತ್ತದೆ..!

ಚರ್ಮದ ಕಾಂತಿ ಹೆಚ್ಚಿಸಲು ರೋಸ್ ವಾಟರ್ ನ್ನು ಬಳಸಲಾಗುತ್ತದೆ. ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖದ ಮೇಲೆ ಹಚ್ಚಿ ಅರ್ಧಗಂಟೆಗಳ ಕಾಲ ಹಾಗೇ ಬಿಡಿ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. 

ರೋಸ್ ವಾಟರ್ ಬಳಸುವುದು ಹೇಗೆ?

ಮನೆಯಲ್ಲಿ 5 ನಿಮಿಷ ಜೇನುತುಪ್ಪ ಹಾಗೂ ರೋಸ್ ವಾಟರ್ ನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಬೇಕು. ಇದ್ರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕಲೆಗಳು ನಿವಾರಣೆಯಾಗುತ್ತವೆ. ಕಡಲೆಹಿಟ್ಟು 2 ಚಮಚ, ಚಿಟಿಕೆ ಅರಶಿಣ ಮತ್ತು ರೋಸ್ ವಾಟರ್ ಬೆರೆಸಿ, ಫೇಸ್ ಪ್ಯಾಕ್ ಹಾಕಿದರೆ ಮುಖದ ಮೇಲೆ ಕಲೆ ಹಾಗೂ ಜಿಡ್ಡು ಮಾಯವಾಗುತ್ತದೆ. 

ಸೌತೆಕಾಯಿ ರಸಕ್ಕೆ 2 ಚಮಚ  ರೋಸ್ ವಾಟರ್ ಬೆರೆಸಿ , ಮುಖಕ್ಕೆ ಹಚ್ಚಿ, 20 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಚರ್ಮಕ್ಕೆ ಕಾಂತಿ ದೊರೆಯುತ್ತದೆ. 

2 ಚಮಚ ರೋಸ್ ವಾಟರ್ ಗೆ , 2 ಟಮಚ ಕೊಬ್ಬರಿ ಎಣ್ಣೆ ಸೇರಿಸಿ, ಹತ್ತಿಯಿಂದ ಮುಖಕ್ಕೆ ಉಜ್ಜಿ ಮೇಕಪ್ ರಿಮೂವರ್ ನಂತೆ ಬಳಸಬಹುದು. ಇನ್ನೂ ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಹಾಕಿ ಕಲಸಿ, ವಾರಕ್ಕೆರೆಡು ಬಾರಿ ಫೇಸ್ ಪ್ಯಾಕ್ ಹಾಕಿಕೊಳ್ಳಿ. 

ರೋಸ್ ವಾಟರ್, ಮುಖದ ಸೌಂದರ್ಯ , Rose water, benefits ,

ಇನ್ನು ರೋಸ್ ವಾಟರ್ಗೆ ಲಿಂಬೆರಸ ಬೆರೆಸಿ, ಹತ್ತಿಯಿಂದ ಮುಖಕ್ಕೆ ಹಚ್ಚಿ, ಅರ್ಧಗಂಟೆ ಬಿಟ್ಟು ಮುಖ ತೊಳೆದರೆ ಮೊಡವೆ ಕಲೆ ಮಾಯವಾಗುತ್ತದೆ.  ಮುಖದಲ್ಲಿ ಕಪ್ಪು ಚುಕ್ಕೆಗಳಿದ್ದರೆ ರೋಸ್ ವಾಚರ್ ನ್ನು ಮೊಸರು, ಸೌತೆಕಾಯಿ ರಸವನ್ನು ಪುಡಿಯೊಂದಿಗೆ ಮಿಶ್ರಣ ಮಾಡಿ ಮುಕಕ್ಕೆ ಹಚ್ಚಬೇಕು. 20 ನಿಮಿಷ ಬಿಟ್ಟು ನಂತರ , ತಣ್ಣಿನೀರಿನಿಂದ ಚೆನ್ನಾಗಿ ತೊಳೆಯೇಕು. ಇದ್ರಿಂದ ಮುಖದಲ್ಲಿರುವ ಚಿಕ್ಕ 

ಚಿಕ್ಕ ಗುಳ್ಳೆಗಳು ನಿವಾರಣೆಯಾಗುತ್ತವೆ.!

ಫೇಸ್ ಪ್ಯಾಕ್ ನೊಂದಿಗೆ ರೋಸ್ ವಾಟರ್ ಬಳಸಿದರೆ ಉಪಯುಕ್ತ. ಕೇವಲ ನೀರಿನೊಂದಿಗೆ ರೋಸ್ ವಾಟರ್ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿದರೂ ಕೂಡಾ ಮುಖದ ಕಾಂತಿ ಹೆಚ್ಚುತ್ತದೆ. ಅಲ್ಲದೇ ಸುಕ್ಕುಗಳನ್ನು ನಿವಾರಿಸಲು ಎಂಡು ಚಮಚ ಟೊಮೆಟೋ ರಸಕ್ಕೆ ರೋಸ್ ವಾಟರ್ ನ್ನು ಮಿಶ್ರಣ ಮಾಡಿ. ಮುಖಕ್ಕೆ ಹಚ್ಚುವುದರಿಂದ ಸನ್ ಬರ್ನ್ ಕಡಿಮೆಯಾಗುತ್ತದೆ. 

ಅಲ್ಲದೇ , ಕರಿಬೇವಿನ ಎಲೆಯನ್ನು ಪುಡಿ ಮಾಡಿ, ರೋಸ್ ವಾಟರ್ ನೊಂದಿಗೆ ಬೆರೆಸಿ, ಫ್ರೀಡ್ಜ್ ನಲ್ಲಿಟ್ಟು, ಸ್ವಲ್ಪ ಸಮಯದ ನಂತರ, ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯ ಹಾಗೇ ಬಿಟ್ಟರೆ, ಮೊಡವೆಗಳು ಹಣ್ಣಾಗಿ, ನಂತರದಲ್ಲಿ ಮೊಡವೆಗಳು ಕಡಿಮೆಯಾಗುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ