ಹೆಚ್ಚು ಮಾತನಾಡುತ್ತೀರಾ..? ಸಂಗಾತಿಗೆ ಈ ಅಭ್ಯಾಸ ಇಷ್ಟವಾಗದೇ ಇರಬಹುದು, ಎಚ್ಚರ!

  • by

ಪ್ರತಿ ಬಾರಿ ನಾವು ಹೊರಗೆ ಹೋದಾಗ, ನಮ್ಮ ಆತ್ಮೀಯರು ನಮ್ಮ ಜತೆಗಿದ್ದಾಗ, ಅಥವಾ ನೀವು ನಿಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಜತೆಗಿದ್ದಾಗ. ನಾವೇ ಹೆಚ್ಚು ಮಾತನಾಡಬೇಕು ಎಂಬ ಭಾವನೆ ಹೊಂದಿರುತ್ತೇವೆ. ಹುಡುಗಿಯರಿಗಿಂತ ಹುಡುಗರು ಹೆಚ್ಚು ಮಾತನಾಡುತ್ತಾರೆ. ಯಾವಾಗಲೂ ನಾವೇ ಹೆಚ್ಚು ಮಾತನಾಡಬೇಕು ಎಂದು ಬಯಸುತ್ತಾರೆ. ಇದು ತಪ್ಪಲ್ಲ.

relationships tips , 

ರಿಲೇಷನ್ ಶಿಪ್ ಟಿಪ್ಸ್, ಪ್ರೀತಿ, ಸಂಬಂಧ

ಇನ್ನು ಹೆಚ್ಚು ಮಾತನಾಡುವ ಹುಡುಗರನ್ನೇ ಹುಡುಗಿಯರು ಇಷ್ಟಪಡುತ್ತಾರಂತೆ. ಆದ್ರೆ ಕೆಲವು ಸಂದರ್ಭಗಳಲ್ಲಿ ಹೊರಗಡೆ ಹೋಗಬೇಕಾದಾಗ, ಹುಡುಗರು ಎಷ್ಟು ಮಾತನಾಡಬೇಕೋ ಅಷ್ಟು ಮಾತನಾಡಬೇಕು. ಇಲ್ಲದಿದ್ದರೆ ಇದು ನಿಮ್ಮ ಸಂಗಾತಿಗೆ ಕಿರಿಕಿರಿ ಅನ್ನಿಸುಬಹುದು. ಕೆಲಮೊಮ್ಮೆ ಹೆಚ್ಚು ಮಾತನಾಡುವುದು ಅಹಿತಕರ ವಾತಾವರಣವನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಕಡಿಮೆ ಮಾತನಾಡಲು ಹುಡುಗರಿಗೆ ಸಲಹೆ ನೀಡಲಾಗುತ್ತದೆ.

ಮತ್ತೊಂದೆಡೆ ತುಂಬಾ ಮಾತನಾಡುವರನ್ನು ಸ್ಮಾರ್ಟ್ ಎಂದು ಕರೆಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ನೀವು ಕೂಡಾ ಹೆಚ್ಚು ಮಾತನಾಡುತ್ತಿದ್ದರೆ, ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ ನಿಮ್ಮ ಸಂಗಾತಿಯಿಂದ ಪ್ರಶಂಸೆ ಪಡೆಯುತ್ತೀರಿ.

relationships tips , 

ರಿಲೇಷನ್ ಶಿಪ್ ಟಿಪ್ಸ್, ಪ್ರೀತಿ, ಸಂಬಂಧ

ಯಾವುದೇ ಔಷಧಿ ಇಲ್ಲ..!
ಕಡಿಮೆ ಮಾತನಾಡಲು ಯಾವುದೇ ಔಷಧಿ ಇಲ್ಲ. ತಕ್ಷಣವೇ ಇದು ಪರಿಣಾಮ ಬೀರುವ ಮ್ಯಾಜಿಕ್ ಅಲ್ಲ. ಇದಕ್ಕಾಗಿ ನೀವು ಪ್ರಯತ್ನ ಮಾಡಬೇಕು. ನಂತರ ಈ ಅಭ್ಯಾಸವನ್ನು ನಿಯಂತ್ರಣಕ್ಕೆ ತರಬಹುದು.

ಸುತ್ತಿ-ಬಳಸಿ ಮಾತನಾಡಬೇಡಿ!

ಯಾವುದೋ ಸಮಾರಂಭದಲ್ಲಿ ಸಾಹಿತ್ಯ , ಕಥೆ, ಕವಿತೆ ಅಥವಾ ಪ್ರವಚನವನ್ನ ನೀವು ನೀಡುತ್ತಿಲ್ಲ. ನೀವು ಇತರರು ಮಾತನಾಡುವುದನ್ನು ಕೇಳಲು ಪ್ರಾರಂಭಿಸಿದಾಗ, ಹೆಚ್ಚು ಮಾತನಾಡುವ ಅಭ್ಯಾಸವನ್ನು ನಿಯಂತ್ರಣಕ್ಕೆ ತರಬಹುದು. ಒಂದು ವೇಳೆ ಹುಡುಗಿಯ ಜತೆಗಿದ್ದರೆ ಆಕೆಗೂ ಮಾತನಾಡಲು ಅವಕಾಶ ನೀಡಿ. ಇದರಿಂದ ಆಕೆ ನಿಮ್ಮೊಂದಿಗೆ ಕೆಲ ವಿಷಯಗಳನ್ನು ಹಂಚಿಕೊಳ್ಳಬಹುದು. ಮೊದಲು ವಿಷಯವನ್ನು ಆಲಿಸಿ, ನಂತರ ಪ್ರತಿಕ್ರಿಯೆ ನೀಡಿ. ಇದರಿಂದ ನಿಮ್ಮನ್ನು ನಿರ್ಲಕ್ಷಿಸುವ ಹುಡುಗಿ ಜತೆಗೆ ನೀವು ಸುಲಭವಾಗಿ ಮಾತನಾಡಬಹುದು.

relationships tips , 

ರಿಲೇಷನ್ ಶಿಪ್ ಟಿಪ್ಸ್, ಪ್ರೀತಿ, ಸಂಬಂಧ

ದೀರ್ಘ ಸಮಯದವರೆಗೆ ಮಾತನಾಡಬೇಡಿ!

ಜನರು ತುಂಬಾ ಹೆಚ್ಚಾಗಿ ಮಾತನಾಡಲು ಇಷ್ಟಪಡುತ್ತಾರೆ. ಹೆಚ್ಚು ಮಾತನಾಡಬೇಕಾದರೆ, ಹೆಚ್ಚು ಪದಗಳ ಅಗತ್ಯವಿರುತ್ತದೆ. ಅದಕ್ಕಾಗಿಯೇ ಜನರು ಸಣ್ಣ ವಿಚಾರವನ್ನು ವಿವರಿಸಲು ದೀರ್ಘ ಕಥೆಯನ್ನು ಹೇಳಲು ಮುಂದಾಗುತ್ತಾರೆ. ಇನ್ನು ನಿಮ್ಮ ಸಂಗಾತಿ ಜತೆಗೆ ಡೇಟಿಂಗ್ ಮಾಡಲು ಹೋರಗಡೆ ಹೋದಾಗ, ಈ ರೀತಿ ಮಾಡುವುದರಿಂದ ಹುಡುಗಿಯರಿಗೆ ಇಷ್ಟವಾಗುವುದಿಲ್ವಂತೆ. ಹುಡುಗಿಯರು ಸುದೀರ್ಘ ಭಾಷಣ ಮಾಡುವವರನ್ನು ಇಷ್ಟಪಡುವುದಿಲ್ಲ. ನಿಮ್ಮ ಮಾತುಕತೆಯಲ್ಲಿ ಎಷ್ಟು ಹಾಸ್ಯವಿದೆ. ಎಷ್ಟು ಸುಂದರವಾಗಿ ಮಾತನಾಡುತ್ತೀರಿ ಎಂಬುದು ಪರಿಗಣಿಸಲಾಗುತ್ತದೆ. ಹೀಗಾಗಿ ಹೆಚ್ಚು ಮಾತನಾಡುವುದನ್ನು ನಿಲ್ಲಿಸಿ.

ಸನ್ನೆಗಳಿಗೂ ಅವಕಾಶ ನೀಡಿ!

ಸನ್ನೆಗಳ ಮೂಲಕವು ಬಹಳಷ್ಟು ಹೇಳಬಹುದು ಎಂದು ಬಹಳ ಜನರಿಗೆ ಗೊತ್ತಿರುವುದಿಲ್ಲ. ಸನ್ನೆ ಕೂಡಾ ಸಂವಹನದ ಉತ್ತಮ ಮಾಧ್ಯಮ ಎಂದೇ ಹೇಳಬಹುದು. ಇದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ನಿಮಗೆ ತಿಳಿದರೆ, ನೀವು ಎಲ್ಲರ ಹೃದಯವನ್ನು ಗೆಲ್ಲಬಹುದು, ಸನ್ನೆ ಭಾಷೆ ಎಲ್ಲರಿಗೂ ಅರ್ಥವಾಗುವಷ್ಟು ಸರಳವಾಗಿರುತ್ತದೆ. ಇನ್ನು 1 ಅಥವಾ 2 ವರ್ಷದ ವಯಸ್ಸಿನ ಮಕ್ಕಳು ಸಹ ಸನ್ನೆಯನ್ನೇ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅಂದ ಮೇಲೆ ಹುಡುಗಿಯರು ಹೇಗೆ ಅರ್ಥಮಾಡಿಕೊಳ್ಳುವುದಿಲ್ಲ ಉದಾಹರಣೆಗೆ: ಒಳ್ಳೆಯದನ್ನು ನೋಡಿ ಕಿರುನಗೆ ವ್ಯಕ್ತಪಡಿಸುವುದು, ತಮಾಷೆಯ ಮಾತುಗಳಿಗೆ ನಗುವುದು, ಉತ್ತಮ ಮಾತುಗಳಿಗೆ ಚಪ್ಪಾಳೆ ತಟ್ಟುವುದು ಹೀಗೆ ಅನೇಕ ವಿಷಯಗಳ ಬಗ್ಗೆ ಸನ್ನೆಯಲ್ಲೇ ಮಾತನಾಡಬಹುದು.

ಇದರ ಜತೆಗೆ ನಿಮ್ಮ ಸಂಗಾತಿ ಜತೆಗೆ ಆನ್ ಲೈನ್ ನಲ್ಲಿ ಚಾಟ್ ಮಾಡಲು ಬಯಸಿದರೆ, ಮೊದಲು ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳುವುದು ಉತ್ತಮ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ