ಯೌವನದಲ್ಲಿ ಬೇಗ ಮುಪ್ಪಾಗದಂತೆ ತಡೆಯಬೇಕೇ.. ಇಲ್ಲಿದೆ ಪರಿಹಾರ..!

  • by

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ವೃದ್ಧಾಪ್ಯ ಚಿಹ್ನೆಗಳು ಕಂಡು ಬರುತ್ತಿದೆ. ಹೆಚ್ಚುತ್ತಿರುವ ವಯಸ್ಸು.. ವಯಸ್ಸಿಗೆ ತಕ್ಕಂತೆ ಆಯಾಸ, ಬಿಳಿ ಕೂದಲು ಚರ್ಮದ ಮೇಲೆ ಸುಕ್ಕುಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ವಯಸ್ಸಾಗುವಿಕೆ ವಯಸ್ಸಿಗೆ ಮುಂಚೆಯೇ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಇದ್ರಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗಬಹುದು. ಆದ್ರೆ ನೀವು ಯಂಗ್ ಇದ್ದಾಗಲೂ, ವಯಸ್ಸಾದಂತೆ ಕಂಡು ಬಂದರೆ ಜಾಗರೂಕರಾಗಿರಿ.. ಕೆಲಸಗಳನ್ನು ಎಂದಿಗೂ ಮಾಡದಿರಿ. ಉತ್ತಮ ಆರೋಗ್ಯಕ್ಕೆ ಸಲಹೆ ಗಳು ಇಲ್ಲಿವೆ.

ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾಗುವಿಕೆಗೆ ಕಾರಣಗಳೇನು?

ಪ್ರತಿಯೊಬ್ಬ ವ್ಯಕ್ತಿ ವೃದ್ಧಾಪ್ಯ ಎಂಬ ಜೀವನದ  ಹಂತವನ್ನು ದಾಟಲೇಬೇಕು. ಸಮಯದೊಂದಿಗೆ ಪ್ರತಿಯೊಬ್ಬರು ವಯಸ್ಸಾಗಲು ಪ್ರಾರಂಭಿಸುತ್ತಾರೆ. ಆದ್ರೆ ಕೆಲವು ತಪ್ಪುಗಳಿಂದ ವೃದ್ಧಾಪ್ಯಕ್ಕೂ ಮುನ್ನವೇ ಹಲವರು ವಯಸ್ಸಾದವರಂತೆ ಕಾಣಿಸುತ್ತಾರೆ. ಅನಿಯಮಿತ ದಿನಚರಿಯೇ ಇದಕ್ಕೆಲ್ಲಾ ಕಾರಣವಿರಬಹುದು. ಅಕಾಲಿಕ ಮುಪ್ಪಿಗೆ ಬಲಿಪಶು ವಾಗದಿರಲು ಟಿಪ್ಸ್ ಇಲ್ಲಿದೆ. 

ಸರಿಯಾಗಿ ನಿದ್ರೆ ಮಾಡದಿರುವುದು..!

ಚಿಕ್ಕ ವಯಸ್ಸಿನಲ್ಲಿಯೇ ನಿಮಗೆ ವೃದ್ಧಾಪ್ಯದ ಲಕ್ಷಣಗಳು ಕಂಡು ಬಂದರೆ, ಕಡಿಮೆ ನಿದ್ರೆಯೇ ಕಾರಣವಿರಬಹುದು. ವಾಸ್ತವವಾಗಿ ಕೆಲಸದ ಸಾಮರ್ಥ್ಯ ಮತ್ತು ಒತ್ತಡದಿಂದಾಗಿ, ಕೆಲವು ಜನರಿಗೆ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ನೀವು 8 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದೀರಾ.. ಹಾಗಾದ್ರೆ ಜಾಗರೂಕರಾಗಿರಿ. ಇದು ದೇಹದ ಆಯಾಸ ಮತ್ತು ದೌರ್ಬಲ್ಯ ಹೆಚ್ಚಲು ಕಾರಣವಾಗುತ್ತದೆ. 

ಹೆಚ್ಚು ಸಕ್ಕರೆ ಸೇವಿಸುವುದು..!

ಹೆಚ್ಚು ಸಕ್ಕರೆ ಸೇವಿಸುವುದರಿಂದ ವೃದ್ಧಾಪ್ಯದ ಲಕ್ಷಣಗಳು ಕಾಣಿಸುತ್ತವೆ. ನೀವು ಹೆಚ್ಚು ಸಕ್ಕರೆ ಸೇವಿಸುವುದರಿಂದ ಚರ್ಮದ ಮೇಲೆ ಸುಕ್ಕುಗಳು ಉಂಟಾಗಬಹುದು. ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವು ಅನಿಯಂತ್ರಿತವಾಗಬಹುದು. ಇದು ಮಧುಮೇಹಕ್ಕೆ ಕಾರಣವಾಗಬಹುದು.

ವ್ಯಾಯಾಮ ಮಾಡದಿರುವುದು.!

ನೀವು ದೈಹಿಕವಾಗಿ ಸಕ್ರೀಯವಾಗಿಲ್ಲದಿದ್ದರೆ , ಸಮಯಕ್ಕೆ ಮುಂಚಿತವಾಗಿಯೇ ವೃದ್ಧಾಪ ಕಾಡಬಹುದು. ನೀವು ಕೇವಲ ಕ್ಯಾಲೋರಿ ಹೆಚ್ಚಾಗಿ ಸಂಗ್ರಹವಾಗುತ್ತದೆ. ಹಾಗಾಗಿ ದೇಹದ ಕ್ಯಾಲೋರಿಗಳನ್ನು ಬರ್ನ್ ಮಾಡಬೇಕು. ವ್ಯಾಯಾಮ ಮಾಡದೇ ಹೋದರೆ, ರೋಗಗಳು ಕಾಡಬಹುದು, ಮಾತ್ರವಲ್ಲ ಬೊಜ್ಜು ಕೂಡಾ ಹೆಚ್ಚಾಗಬಹುದು. ಜತೆಗೆ ಅಕಾಲಿಕ ವೃದ್ಧಾಪ್ಯ ಸಮಸ್ಯೆ ಎದುರಿಸಬಹುದು.

ಆಹಾರದ ಬಗ್ಗ ಕಾಳಜಿ ವಹಿಸದೇ ಇರುವುದು!

ನೀವು ತಿನ್ನುವ ಆಹಾರದ ಬಗ್ಗೆ ಕಾಳಜಿ ವಹಿಸದಿದ್ದರೆ, ನೀವು ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚು, ಹೀಗಾಗಿ ಆಹಾರದ ಬಗ್ಗೆ ಸರಿಯಾಗಿ ಅನುಸರಿಸಬೇಕು. ನಿಮ್ಮ ಜೀವನ ಶೈಲಿ ಅನಿಯಮಿತವಾಗಿದ್ದರೆ, ಅಕಾಲಿಕ ಮುಪ್ಪು ಕಾಡಬಹುದು.

ಅಧಿಕ ಕೊಬ್ಬಿನಂಶ..!

ಅಧಿಕ ಕೊಬ್ಬಿನಾಂಶ ವಿರುವ ಆಹಾರಗಳಿಂದ ದೂರವಿರಬೇಕು. ಕೊಬ್ಬಿನಾಂಶ ದೇಹದಲ್ಲಿ ಹೆಚ್ಚಾದಾಗ, ಬೊಜ್ಜು ಹೆಚ್ಚುವುದಲ್ಲದೇ, ಅಕಾಲಿಕ ಮುಪ್ಪು ಸಮಸ್ಯೆ ಕಾಡಬಹುದು. ಬೇಗನೆ ವಯಸ್ಸಾದಂತೆ ಕಾಣಿಸುವಿರಿ. ಕೊಬ್ಬಿನಂಶದಲ್ಲಿ ಒಮೆಗಾ 3 ಇರುವ ಕೊಬ್ಬಿನಂಶ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಧೂಮಪಾನ, ಮದ್ಯ ಸೇವನೆ!

ಮದ್ಯ ಕುಡಿಯುವುದರಿಂದಲೂ ಅಕಾಲಿಕ ಮುಪ್ಪು ಎದುರಿಸಬೇಕಾಗಿ ಬರಬಹುದು.ಧೂಮಪಾನದಿಂದ ತುಟಿಗಳು ಕಪ್ಪಾಗುವುದಲ್ಲದೇ, ಮುಖದಲ್ಲಿ ಬೇಗನೆ ನೇರಿಗೆ ಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂ ತ್ವಚೆ ತಾರುಣ್ಯವಾಗಿ ಕಾಣಬೇಕಾದರೆ, ದಿನನಿತ್ಯ ಸರಿಯಾದ ಆಹಾರ ಕ್ರಮ ಹಾಗೂ ವ್ಯಾಮಾಮ ಮಾಡಬೇಕು.

ಮಾನಸಿಕ ಕಾರಣಗಳು..

ವೈಷಮ್ಯ..

ವಿಪರೀತ ಸಿಟ್ಟು ಮಾಡಿಕೊಳ್ಳುವುದು,,, ಅಪನಂಬಿಕೆ, ವೈಷಮ್ಯ ಸಹ ಅಕಾಲಿಕ ಮುಪ್ಪು ಬರಲು ಕಾರಣವಾಗುತ್ತದೆ. ವಿಪರೀತ ಸಿಟ್ಟು ಮಾಡಿಕೊಳ್ಳುವ ಜನರು ಬೇಗನೆ ಒತ್ತಡಕ್ಕೆ ಒಳಗಾಗುತ್ತಾರೆ. ಬಹುಬೇಗ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಮಹಿಳೆಯರಲ್ಲಿ ಸಿಟ್ಟು ಮತ್ತು ವೈಷಮ್ಯ ಹೆಚ್ಚಾಗಿದ್ದರೆ. ಅಕಾಲಿಕ ಮುಪ್ಪು ಸಮಸ್ಯೆ ಎದುರಿಸುವುದಲ್ಲದೇ, ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು. 

2. ಒಂದೇ ವಿಷಯದ ಬಗ್ಗೆ ಯೋಚನೆ ಮಾಡುವುದು!

ಪದೇ ಪದೇ ಒಂದೇ ವಿಚಾರವಾಗಿ ಯೋಚಿಸುವುದು, ಚಿಂತೆಯಿಂದಾಗಿ ಅಕಾಲಿಕ ಮುಪ್ಪು ಕಾಡಬಹುದು. ಇದ್ರಿಂದ ಖಿನ್ನತೆ, ಹಾಗೂ ದುಗುಡ ಹೆಚ್ಚಾಗಿರುವುದರಿಂದ ಜೀವಕೋಶಗಳಿಗೆ ಬಹಳ ಬೇಗ ಮುಪ್ಪು ಬರುತ್ತದೆ. ಅಲ್ಲದೇ ಅವರ ವಯಸ್ಸಿಗೂ ಮಿರಿದ ಅನೇಕ ಸಮಸ್ಯೆಗಳು ಕಾಡಬಹುದು.

ಚಂಚಲ ಮನಸ್ಸು…!

ಒಂದೇ ಕೆಲಸದಲ್ಲಿ ಮಗ್ನ ರಾಗದೇ ಇರುವುದು, ನಮ್ಮ ಮನಸ್ಸು ಒಂದೇ ಜಾಗದಲ್ಲಿ ಇರದೇ ಅತ್ತಿತ್ತ ಹರಿದಾಡುತ್ತಿರುತ್ತದೆ. ಆಗ ಖಿನ್ನತೆ ಮತ್ತು ಅಸಂತೋಷ ಹೆಚ್ಚಾಗುತ್ತದೆ. ಮೆಡಿಟೇಷನ್, ವ್ಯಾಯಾಮದಿಂದ ಸಮಸ್ಯೆಯನ್ನು ನಿವಾರಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ