ಕೆಂಪು ಬಾಳೆಹಣ್ಣಿನ ಉಪಯೋಗ ತಿಳಿದ್ರೆ ಅಚ್ಚರಿ ಪಡ್ತೀರಾ!

  • by

ಹಣ್ಣುಗಳ ಸೇವನ ಆರೋಗ್ಯಕ್ಕೆ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ. ವಿಶೇಷವಾಗಿ ಬಾಳೆಹಣ್ಣುಗಳನ್ನು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಹಳದಿ ಹಾಗೂ ಹಸಿರು ಬಾಳೆಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಲು ಸಿಗುತ್ತವೆ. ಕೆಂಪು ಬಾಳೆಹಣ್ಣು ಹೆಚ್ಚಾಗಿ ಕಂಡು ಬರುವುದಿಲ್ಲ. ಕೆಂಪು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಲಾಭವಿದೆ, ಅನಾನುಕೂಲಗಳು ಯಾವುವು ಎಂಬ ಬಗ್ಗೆ ಡಿಟೇಲ್ಸ್ ಇಲ್ಲಿದೆ.


 Red Banana , Benefits , ಕೆಂಪು ಬಾಳೆಹಣ್ಣಿ, ಆರೋಗ್ಯ ಪ್ರಯೋಜನಗಳು

ಕೆಂಪು ಬಾಳೆಹಣ್ಣು ಎಂದರೇನು… ?

ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣಿಗಿಂತ ಸ್ವಲ್ಪ ಮೃದು ಹಾಗೂ ಸಿಹಿಯಾಗಿರುತ್ತದೆ. ಇದು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಈ ಜಾತಿಯ ಬಾಳೆಹಣ್ಣು ಪೂರ್ವ ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕಾ, ಮತ್ತು ಯುನೈಟೆಡ್ ಅರಬ್ ಹೇರಳವಾಗಿ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಇದನ್ನು ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಉತ್ಪಾದಿಸಲಾಗುತ್ತದೆ. ಕೆಂಪು ಬಾಳೆಹಣ್ಣು ರುಚಿಕರವಾಗಿರುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಪಡೆದುಕೊಂಡಿದೆ. ಬಣ್ಣ ಹಾಗೂ ಹೆಸರಿನಲ್ಲಿ ವಿಭಿನ್ನವಾಗಿದ್ದರೂ, ಎಲ್ಲಾ ರೀತಿಯ ಪೋಷಕಾಂಶಗಳು ಬಹುತೇಕ ಒಂದೇ ಆಗಿರುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ..!

ಕೆಂಪು ಬಾಳೆಹಣ್ಣಿನಲ್ಲಿ ಅನೇಕ ರೋಗ ನಿರೋಧಕ ಶಕ್ತಿ ವರ್ಧಿಸುವ ಗುಣಗಳಿವೆ. ಬಿಟಮಿನ್ ಬಿ 6 ಇದರಲ್ಲಿ ಹೇರಳವಾಗಿ ಕಂಡು ಬರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ. ಕ್ಯಾನ್ಸರ್, ಹೃದ್ರೋಗ, ಹಾಗೂ ಮಧುಮೇಹ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತವೆ.


 Red Banana , Benefits , ಕೆಂಪು ಬಾಳೆಹಣ್ಣಿ, ಆರೋಗ್ಯ ಪ್ರಯೋಜನಗಳು

ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ..!

ಬಾಳೆ ಹಣ್ಣಿನ ಪ್ರಭೇದಗಳಲ್ಲಿ ಪೊಟ್ಯಾಶಿಯಂ ಬಹುತೇಕ ಹೆಚ್ಚಾಗಿ ಕಂಡು ಬರುತ್ತದೆ. ಮತ್ತು ಸೋಡಿಯಂ ಕಡಿಮೆ ಇರುವುದರಿಂದ ರಕ್ತದೋತ್ತಡವನ್ನು ಇದು ನಿಯಂತ್ರಿಸುತ್ತದೆ.

ಕಣ್ಣುಗಳ ಆರೋಗ್ಯಕ್ಕೆ !

ಕಣ್ಣುಗಳ ಆರೋಗ್ಯಕ್ಕೆ ಕೆಂಪು ಬಾಳೆಹಣ್ಣು ಹಳದಿ ಬಾಳೆ ಹಣ್ಣಿಗಿಂತ ಹೆಚ್ಚು ಕ್ಯಾರೋಟಿನ್ ನಾಯ್ಡ್ ಗಳನನ್ನು ಒಳಗೊಂಡಿದೆ. ಹಾಗಾಗಿ ಇದು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಕೆಂಪು ಬಾಳೆಹಣ್ಣು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಿಸುವುಲ್ಲದೇ, ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅತಿಸಾರದ ಸಂದರ್ಭದಲ್ಲಿ ಬಾಳೆಹಣ್ಣು ಸೇವಿಸುವುದು ಉತ್ತಮ. ಕೆಂಪು ಬಾಳೆಹಣ್ಣು ಸೇವಿಸುವುದರಿಂ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಬಹುದು.

ಕೆಂಪು ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶದ ಗುಣಗಳು…!

ಕೆಂಪು ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡು ಬರುತ್ತದೆ. 100 ಗ್ರಾಂ ಕೆಂಪು ಬಾಳೆಹಣ್ಣಿನಲ್ಲಿ ಎಷ್ಟು ಪೋಷಕಾಂಶವಿದೆ ತಿಳಿಯೋಣ.

ನೀರು – 74.91 ಗ್ರಾಂ
ಶಕ್ತಿ – 89 ಕ್ಯಾಲೋರಿಗಳು
ಕೊಬ್ಬು – 0.33 ಗ್ರಾಂ
ಪ್ರೋಟೀನ್ 1.09 ಗ್ರಾಂ
ಕಾರ್ಬೋಹೈಡ್ರೇಟ್ 22.84 ಗ್ರಾಂ
ಫೈಬರ್ 2.6 ಗ್ರಾಂ
ಸಕ್ಕರೆ – 12.23 ಗ್ರಾಂ
ಕ್ಯಾಲ್ಸಿಯಂ – 5 ಮಿ.ಗ್ರಾಂ
ಕಬ್ಬಿಣ- 0. 26 ಮಿ.ಗ್ರಾಂ
ಮೆಗ್ನೇಶಿಯಂ – 27 ಮಿ.ಗ್ರಾಂ
ರಂಜಕ- 22 ಮಿ.ಗ್ರಾಂ
ವಿಟಮಿನ್ ಸಿ – 8.7 ಮಿ.ಗ್ರಾಂ
ವಿಟಮಿನ್ ಬಿ 6 – 0.367 ಮಿ.ಗ್ರಾಂ

ಕೆಂಪು ಬಾಳೆಹಣ್ಣನ್ನು ಹೇಗೆ ಬಳಸುವುದು..?

ಕೆಂಪು ಬಾಳೆಹಣ್ಣನ್ನು ಬಳಕೆಯನ್ನು ಹಲವು ವಿಧದಲ್ಲಿ ಮಾಡಬಹುದು. ಆದ್ರೆ ಅದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸುವುದು ಸೂಕ್ತ ಎಂಬುದು ಮುಖ್ಯ,

ಕೆಂಪು ಬಾಳೆಹಣ್ಣನ್ನು ಯಾವಾಗ ಮತ್ತು ಎಷ್ಟು ಸೇವಿಸಬೇಕು?

ಕೆಂಪು ಬಾಳೆಹಣ್ಣನ್ನು ಯಾವುದೇ ಸಮಯದಲ್ಲಾದರೂ ಸೇವಿಸಬಹುದು. ಆದರೆ ಅದನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ವಯಸ್ಸು ಮತ್ತು ಆರೋಗ್ಯಕ್ಕೆ ಅನುಗುಣವಾಗಿ ತಿನ್ನಬಹುದು. ಬಾಳೆಹಣ್ಣನ್ನು ಹೆಚ್ಚು ಸೇವಿಸಬೇಡಿ. ಏಕೆಂದರೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಹೆಚ್ಚು.

ಬಳಸುವ ವಿಧಾನ..!

ಕೆಂಪು ಬಾಳೆಹಣ್ಣನ್ನು ಕಸ್ಟರ್ಡ್ ರೂಪದಲ್ಲಿ ಸೇವಿಸಬಹುದು.
ಹಣ್ಣಿನ ಚಾಟ್ ತಯಾರಿಸಬಹುು. ಇತರ ಹಣ್ಣುಗಳ ಜತೆಗೂ ಸೇವಿಸಬಹುದು.
ಕೆಂಪು ಬಾಳೆಹಣ್ಣುಗಳನ್ನು ಓಟ್ ಮೀಲ್ ಅಥವಾ ಓಟ್ಸ್ ಆಗಿ ಸೇವಿಸಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ