ಮಹಿಳೆಯರು ಕಾಲ್ಗೆಜ್ಜೆ ಧರಿಸುವುದರ ಹಿಂದಿನ ರಹಸ್ಯವೇನು?

  • by

ಮಹಿಳೆಯರ ಸೌಂದರ್ಯ ಇಮ್ಮುಡಿಗೊಳಿಸಲು ಕಾಲ್ಗೆಜ್ಜೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಕಾಲ್ಗೆಜ್ಜೆ ಯುವತಿಯರ, ಗೃಹಿಣಿಯರ ಕಾಲಿನ ಅಂದ ಹೆಚ್ಚಿಸುತ್ತೆ. ಕೇವಲ ಫ್ಯಾಶನ್ ಗೋಸ್ಕರ ಮಹಿಳೆಯರು ಕಾಲ್ಗೆಜ್ಜೆ ಧರಿಸುತ್ತಾರೆ ಎಂದರೆ ಅದು ತಪ್ಪು.. ಯಾಕಂದ್ರೆ ಫ್ಯಾಶನ್ ಜತೆಗೆ ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮವಾದ್ದದು. ಕಾಲ್ಗೆಜ್ಜೆ ನಾರಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸವಂಥದ್ದು. ಪುಟ್ಟ ಹುಡಗಿಯರಿಂದ ಹಿಡಿದು ದೊಡ್ಡವರವರಿಗೂ ಕಾಲ್ಗೆಜ್ಜೆ ಎಲ್ಲರಿಗೂ ಇಷ್ಟವಾಗುತ್ತದೆ. 

ಇವತ್ತಿನ ದಿನಗಳಲ್ಲಿ ಕಾಲ್ಗೆಜ್ಜೆ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದಲ್ಲಿ ಲಗ್ಗೆ ಇಟ್ಟಿದೆ. ಯುವತಿಯರ ಕ್ರೇಜ್ ಹೆಚ್ಚಿಸಿವೆ. ತನ್ನದೇ ಆದ ಆಕರ್ಷಕ ವಿನ್ಯಾಸದಿಂದ ಮಹಿಳೆಯರನ್ನ ತನ್ನತ್ತ ಆಕರ್ಷಿಸುತ್ತಿವೆ. ಮದುವೆ ಸಭೆ, ಸಮಾರಂಭದಲ್ಲಿ ಹೆಣ್ಣು ಮಕ್ಕಳ ಗೆಜ್ಜೆಯ ನಿನಾದವೇ ಕೇಳುತ್ತೇವೆ. ಸಿಂಪಲ್ ಆದ ಕಾಲ್ಗೆಜ್ಜೆಯನ್ನು ಸಾಮಾನ್ಯ ದಿನಗಳಲ್ಲಿ ಮಹಿಳೆಯರು ಧರಿಸುತ್ತಾರೆ. 

ಫ್ಯಾನ್ಸಿ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿವೆ. ಎಲ್ಲಾ ವಯಸ್ಸಿನ ಮಹಿಳೆಯರಿಗೂ ಇವು ಮೆಚ್ಚುಗೆಯಾಗತೊಡಗಿವೆ. ಪರಿಸರ ಸ್ನೇಹಿ, ಆಕರ್ಷಕ ಕಾಲ್ಗೆಜ್ಜೆ ಗಳಾದ ಭತ್ತ, ಅಂಟುವಾಳ, ನೀಲಗಿರಿ ಬೀಜ, ಗುಲಗಂಜಿ, ಕಾಶಿಮಣಿ, ಹುಣಸೆ ಬೀಜ, ಪಪ್ಪಾಯ ಬೀಜಗಳಿಂದ ಕಾಲ್ಗೆಜ್ಜೆ ತಯಾರಿಸುತ್ತಾರೆ. 

ಕಾಲ್ದೆಜ್ಜೆಯಿಂದ ಆರೋಗ್ಯ ಹೆಚ್ಚುತ್ತೆ..!

ಮಹಿಳೆಯರು ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯ ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕಾಲ್ಗೆಜ್ಜೆ ಕಾಲಿನ ಬಲ, ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಕಾಲು ನೋವು ಕಡಿಮೆಯಾಗುತ್ತದೆ. ದೇಹವನ್ನು ತಂಪಾಗಿಡುತ್ತದೆ. ಶರೀರ ಸುಕ್ಕು ಗಟ್ಟದಂತೆ ನಿಮ್ಮನ್ನು ರಕ್ಷಣೆ ಮಾಡುತ್ತದೆ. ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಕಾಲಿನ ನೋವು ಹಾಗೂ ಊತ ಕಡಿಮೆಯಾಗುತ್ತದೆ. ಶರೀರ ದೌರ್ಬಲ್ಯ ಉಂಟಾದರೆ, ಬೆಳ್ಳಿಯ ಕಾಲ್ಗೆಜ್ಜೆಯನ್ನು ಮಹಿಳೆಯರು ಧರಿಸಿದರೆ ದೇಹದ ರಕ್ತ ಸಂಚಾರ ಸಲೀಸಾಗಲು ಕಾಲ್ಗೆಜ್ಜೆ ಸಹಕಾರಿ. 

ಕಾಲ್ಗೆಜ್ಜೆ ಧರಿಸುವುದರಿಂದ ಕಾಲು ಜುಮ್ಮೆನ್ನುವುದು, ಕಾಲಿನ ದೌರ್ಬಲ್ಯ ದೂರ ಮಾಡುತ್ತದೆ. ಮಹಿಳೆಯರಿಗೆ ಹಿಮ್ಮಡಿ ಸಮಸ್ಯೆಗಳಿದ್ದರೆ ಕಾಲ್ಗೆಜ್ಜೆ ಧರಿಸಿ. ಹಿಮ್ಮೆಡಿ ಸಮಸ್ಯೆಗಳು ಮಹಿಳೆಯರ ದೈನದಿನ ಕೆಲಸದ ಮೇಲೆ ಪರಿಣಾಮ ಬೀರುತ್ತವೆ. ಆದ್ರೆ ಈ ಸಮಸ್ಯೆ ಗಳನ್ನು ನಿವಾರಿಸಲು ಕಾಲ್ಗೆಜ್ಜೆ ಧರಿಸಿ. ಬೆಳ್ಳಿಯ ಕಾಲ್ಗಜ್ಜೆ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ದೇಹದ ಎನರ್ಜಿ ಹೆಚ್ಚಿಸಲು ಕಾಲ್ಗೆಜ್ಜೆ ಸಹಕಾರಿ. ಇದು ಇಮ್ಯೂನ್ ಸಿಸ್ಟಮ್ ಹೆಚ್ಚಿಸವುದಲ್ಲದೇ, ನರ ದೌರ್ಬಲ್ಯಕ್ಕೆ ಸಂಬಂಧ ಪಟ್ಟ ಎಲ್ಲಾ ಕಾಯಿಲೆಗಳು ನಿವಾರಣೆಯಾಗುತ್ತವೆ. 

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. 

ಕಾಲ್ಗೆಜ್ಜೆ ಧರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮನೆಯ ಶುದ್ಧತೆಯನ್ನು ಕಾಲ್ಜೆಗ್ಗೆ ಕಾಪಾಡುತ್ತದೆ. ಮನೆಯಲ್ಲಿ ಮಹಿಳೆಯರು ಕಾಲ್ಗೆಜ್ಜೆ ಧರಿಸುವುದರಿಂದ ದೇವತೆಗಳ ಶ್ರೀರಕ್ಷೆ , ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ.

ಪಾದಗಳ ಅಂದ ಹೆಚ್ಚಿಸುವ ಹೊರತಾಗಿ, ಮಹಿಳೆಯರು ಕಾಲುಗಳಿಗೆ ರಕ್ಷಣೆ ಒದಗಿಸುತ್ತದೆ. ಸ್ತ್ರೀರೋಗಗಳಿಗೆ ಸಂಬಂಧಿಸಿದ, ಅಸ್ವಸ್ಥತೆ, ಬಂಜೆತನ ಮತ್ತು ಹಾರ್ಮೋನುಗಳ ಅಸಮತೋಲನ ಮತ್ತು ಹೆರಿಗೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಗುಣಪಡಿಸಬಹುದಾಗಿದೆ. 

ಮಹಿಳೆಯರು ಚಿನ್ನಕ್ಕಿಂತಲೂ ಬೆಳ್ಳಿಯಿಂದ ಹೆಚ್ಚಿನ ಕಾಲ್ಗೆಜ್ಜೆ (ಪಾಯಲ್) ಧರಿಸುವುದನ್ನು ಇಷ್ಟ ಪಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಇದು ಹೆಚ್ಚು ಮಹಥ್ವ ಪಡೆದುಕೊಂಡಿದೆ. 

ದಾಪಂತ್ಯ ಜೀವನ ಉತ್ತಮವಾಗಿರಲು ಕಾಲ್ಗೆಜ್ಜೆ ಧರಿಸಿ..

ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ.. ಭಿನ್ನಾಭಿಪ್ರಾಯ ಅತಿಯಾದಾಗ ಘರ್ಷಣೆ, ಜಗಳವಾಗುವುದನ್ನು ನೋಡಿದ್ದೇವೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಬೆಳ್ಳಿ ಎನ್ನುವ ಲೋಹ ಪ್ರಯೋಜನಕಾರಿಯಾಗುತ್ತದೆ. ಮಲಗುವ ಕೋಣೆಯಲ್ಲಿ ತಲೆ ದಿಂಬಿನ ಕೆಳಗೆ ಬೆಳ್ಳಿಯ ಆಭರಣ ಅಥವಾ ಬೆಳ್ಳಿಯ ವಸ್ತುವನ್ನು ಇಡುವುದರಿಂದ ಸಂಗಾತಿಗಳ ನಡುವೆ ಸಂಘರ್ಷ ನಡೆಯುವುದಿಲ್ಲ. 

ಕಾಲ್ಗೆಜ್ಜೆ ಶಬ್ದ ಮನೆಯ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ.  ಕಾಲ್ಗೆಜ್ಜೆ ಧರಿಸಿ ಮನೆಯಲ್ಲಿ ಓಡಾಡಿದರೆ ದುಷ್ಟಶಕ್ತಿಗಳು ಹೊರ ಹೋಗುತ್ತವೆ. ಅಲ್ಲದೇ, ಅನೇಕ ಕಾಯಿಲೆಗಳನ್ನು ತಡೆಯುವ ಶಕ್ತಿ ಈ ಕಾಲ್ಗೆಜ್ಜೆಯಲ್ಲಿದೆ. 

ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಧರಿಸುವುದರಿಂದ ಅವರು ನಡೆದಾಡುವಾಗ ಬರುವ ಲಯಬದ್ಧವಾದ ಸದ್ದು ಆ ಧ್ವನಿ ಆ ಗೆಜ್ಜೆಯ ನಾದದಿಂದ ಬರುವ ಶಬ್ದವನ್ನು ಕೇಳಿಸಿಕೊಂಡಾಗ ಸಾಕ್ಷಾತ ಲಕ್ಷ್ಮೀ ದೇವಿಯೇ ಆ ಮನೆಯನ್ನು ಹುಡುಕಿಕೊಂಡು ಬರುತ್ತಾಳೆ ಎಂಬ ನಂಬಿಕೆ ಇದೆ. ಇನ್ನು ಕಾಲಿಗೆ ಬೆಳ್ಳಿ ಕಾಲುಂಗರ ಹಾಗೂ ಗೆಜ್ಜೆ ಧರಿಸುವ ಹೆಣ್ಣುಮಕ್ಕಳು ಸದಾ ಆರೋಗ್ಯವಾಗಿರುತ್ತಾರೆ. 

ಶಬ್ದ ಮನೆಯ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಅನೇಕ ಕಾಯಿಲೆಗಳನ್ನು ತಡೆಯುವ ಶಕ್ತಿ ಈ ಕಾಲ್ಗೆಜ್ಜೆಯಲ್ಲಿದೆ. ಕಾಲಿನಲ್ಲಿ ಬೆಳ್ಳಿಯ ಕಾಲುಂಗುರ, ಕಾಲ್ಗೆಜ್ಜೆ, ಕೈ ಬಳೆ, ಸೇರಿದಂತೆ ಇನ್ನಿತರ ಆಭರಣಗಳು ಧಾರ್ಮಿಕ ಜತೆಗೆ ವೈಜ್ಞಾನಿಕ ಹಿನ್ನೆಲೆಯಿದೆ. ನಮ್ಮ ಜೀವನದಲ್ಲಿ ಬೆಳ್ಳಿಯ ಆಭರಣಗಳನ್ನು ಉಪಯೋಗಿಸುವುದು ಸಾಕಷ್ಟು ಪ್ರಯೋಜನಗಳನ್ನು ಕಾಣಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ