ಮಕ್ಕಳ ಭಾವನೆಗಳನ್ನು ಪೋಷಕರು ಅರ್ಥಮಾಡಿಕೊಳ್ಳದೇ ಇರಲು ಕಾರಣಗಳು..!

  • by

ಇತ್ತೀಚಿನ ದಿನಗಳಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳ ಭಾವನಾತ್ಮಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ. ಉದಾಹರಣೆಗೆ ಮಕ್ಕಳು ಪೋಷಕರು ಮಾಡುವ ಕೆಲಸಗಳಿಂದ ಹೆಚ್ಚು ಪ್ರೇರಿತರಾಗುತ್ತಾರೆ. ಹೆತ್ತವರು ಶಾಂತ ಹಾಗೂ ಆತ್ಮವಿಶ್ವಾಸ ಸ್ವಭಾವ ನೋಡುತ್ತಾ ಬೆಳೆದ ಮಗುವಿನಲ್ಲಿ, ಬರುಬರುತ್ತಾ ಆತ್ಮವಿಶ್ವಾಸ ಹೆಚ್ಚುತ್ತದೆ. ಮತ್ತೊಂದೆಡೆ, ಪೋಷಕರು ನಿರಂತರವಾಗಿ ಜಗಳವಾಡುವ ಮತ್ತು ಘರ್ಷಣೆ ಸ್ವಭಾವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರೆ ಯಾವ ಸಂಶಯವೂ ಇಲ್ಲ. ಹೆತ್ತವರ ನಡುವಳಿಕೆ ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಪೋಷಕರು ಮಕ್ಕಳಿಗೆ ಪ್ರೀತಿ ನೀಡಲು ವಿಫಲರಾಗಬಹುದು. ಭಾವನಾತ್ಮಕ ಅಗತ್ಯತೆ ಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲಬಹುದು. ಸ್ವಂತಃ ಮಕ್ಕಳ ಬಗ್ಗೆ ಪೋಷಕರ ಈ ರೀತಿ ನಡೆದುಕೊಳ್ಳಲು ಕೆಲವು ಕಾರಣಗಳಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಕಹಿ ಘಟನೆಗಳು…!

ವ್ಯಕ್ತಿಯು ಕಷ್ಟಕಾರವಾಗಿ ಹಿಂದಿನ ದಿನಗಳನ್ನು ಎದುರಿಸಿರುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಪ್ರೀತಿಯ ಕೊರತೆ ಕಾಣಬಹುದು. ಒಬ್ಬ ವ್ಯಕ್ತಿಯು ಆಘಾತಕ್ಕೆ ಒಳಗಾಗಿದ್ದಾಗ, ಮಕ್ಕಳ ಕಡೆ ಗಮನ ನೀಡದೇ ಹೋಗಬಹುದು. ಅಥವಾ ಮಗು ಹುಟ್ಟುವ ಸಮಯದಲ್ಲಿ ಪೋಷಕರು ಆಘಾತವನ್ನುು ಅನುಭವಿಸಿದ್ದರೆ, ಮಕ್ಕಳ ಮೇಲಿನ ಪ್ರೀತಿಯ ಕೊರತಗೆ ಇದು ಕಾರಣ ಎನ್ನಬಹುದು.

ನಕಾರಾತ್ಮಕ ಭಾವನೆಗಳು..!

ನಕಾರಾತ್ಮಕ ಭಾವನೆಗಳು ಸಂಬಂಧಗಳಲ್ಲಿ ಬಿರುಕು ಮೂಡಿಸಬಲ್ಲವು. ಒಬ್ಬ ವ್ಯಕ್ತಿ ನಕಾರಾತ್ಮಕ ಭಾವನೆಗಳನ್ನು ಹೊಂದಿದ್ದರೆ, ಆತ ಸ್ವಯಂ ಪ್ರೀತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಹಾಗೂ ಇತರರನ್ನು ಪ್ರೀತಿಸಲು ಸಾಧ್ಯವಾಗುವುದಿಲ್ಲ. ನಿಮ್ಮನ್ನು ನೀವೇ ಒಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಇತರರನ್ನು ಸ್ವೀಕರಿಸಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ತಮ್ಮನ್ನು ಪ್ರೀತಿಸಲು ಅಸಮರ್ಥರು ಎಂದು ಭಾವಿಸುವ ಪೋಷಕರು ತಮ್ಮ ಮಕ್ಕಳಿಗೆ ಪ್ರೀತಿಯನ್ನು ನೀಡಲು ಸಾಧ್ಯವಾಗದೇ ಇರಬಹುದು.

ಹೆಚ್ಚು ಹಣ ಸಂಪಾದಿಸುವ ಬಯಕೆ..!

ಹೆಚ್ಚು ಹಣ ಸಂಪಾದಿಸುವ ಬಯಕೆ ಕೂಡಾ ಮಕ್ಕಳ ಪ್ರೀತಿಯ ಮೇಲೆ ಪರಿಣಾಮ ಬೀರುತ್ತದೆ. ಹಣ ಸಂಪಾದಿಸುವ ಹಂಬಲ, ಸಮಯ ಹಾಗೂ ಸಂತೋಷವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಮಕ್ಕಳೊಂದಿಗೆ ಸಮಯ ಕಳೆಯಬೇಕು ಎದು ಕೆಲ ಹೆತ್ತವರಿಗೆ ತಿಳಿದಿದ್ದರೂ, ಹಣ ಸಂಪಾದಿಸುವ ಭರದಲ್ಲಿ ಸಾಧ್ಯವಾಗುವುದಿಲ್ಲ. ಮನೆಯಲ್ಲಿ ತಮ್ಮ ಉಪಸ್ಥಿತಿಯ ಅಗತ್ಯವಿದೆ ಎಂದು ತಿಳಿದರೂ, ಪೋಷಕರು ಹೆಚ್ಚು ಸಮಯ ಕೆಲಸ ಮಾಡಲು ಕಳೆಯುತ್ತಾರೆ. ಹೀಗಾಗಿ ಇದು ಪ್ರೀತಿ ಹಾಗೂ ಪ್ರೀತಿಯ ಬಂಧವನ್ನು ಬೆಳೆಸಲು , ಮಕ್ಕಳ ಜತೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.

ವೈವಾಹಿಕ ಸಮಸ್ಯೆಗಳು…!

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇತ್ತೀಚಿಗೆ ಮಗುವಿನ ಮೇಲೆ ಪರಿಣಾಮ ಬೀರುತ್ತಿದೆ. ವೈವಾಹಿಕ ಸಮಸ್ಯೆಗಳ ಮೂಲಕ ಸಾಗುತ್ತಿರುವ ದಂಪತಿಗಳು ,ಪೋಷಕರ ಒತ್ತಡ ಹಾಗೂ ಹತಾಶೆಗೆ ಕಾರಣವಾಗಬಹುದು. ತಮ್ಮ ಮಕ್ಕಳನ್ನು ಪ್ರೀತಿಸಿದರೂ ಸಹ, ಅವರು ತಮ್ಮ ಮಕ್ಕಳಿಂದ ದೂರವಿರಬಹುದು. ದಂಪತಿಗೆ ವೈವಾಹಿಕ ಜೀವನದ ಬಗ್ಗೆ ತೃಪ್ತಿ ಇಲ್ಲದೇ ಇರಬಹುದು. ಈ ಮೂಲಕ ಮಕ್ಕಳ ಭಾವನಾತ್ಮಕ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗದೇ ಹೋಗಬಹುದು.

ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸದೇ ಇರುವುದು!

ಕೆಲಮೊಮ್ಮೆ ಪೋಷಕರಿಗೆ ಪ್ರೀತಿ ಇದ್ದರೂ, ಸಹ ಮಕ್ಕಳಿಗೆ ನೇರವಾಗಿ ವ್ಯಕ್ತಪಡಿಸುವುದಿಲ್ಲ. ಬೆಳೆಯುತ್ತಿರುವ ಮಗುವಿಗೆ ಪ್ರೀತಿ ತೋರಿಸಲು ಬೇಸರ ವ್ಯಕ್ತಪಡಿಸಬಹುದು.

ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದು..!

ಮಕ್ಕಳ ಭಾವನಾತ್ಮಕ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳವಷ್ಟು ಪ್ರಬುದ್ಧರಾಗಿರದ ಪೋಷಕರು ಇರಬಹುದು. ಮಕ್ಕಳ ಜವಾಬ್ದಾರಿಗಳಿಗಿಂತ ಹೆಚ್ಚು ಪೋಷಕರು ತಮ್ಮನ್ನೇ ತಾವೇ ನೋಡಿಕೊಳ್ಳಬಹುದು. ಪೋಷಕರು ಮಕ್ಕಳ ಮನಸ್ಸನ್ನು , ಅವರ ಬೇಕು ಬೇಡಗಳನ್ನು ಅರ್ಥಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಮಕ್ಕಳ ಮನಸ್ಸನ್ನು ತಿಳಿಯುವುದು ಕಷ್ಟದ ಕೆಲಸವಲ್ಲ. ತಾಳ್ಮೆ, ಸಹನೆ ಮೂಲಕ ಮಕ್ಕಳ ಅಗತ್ಯತೆಗಳನ್ನು ಪೂರೈಸುವ ಮೂಲಕ ನೀವೂ ಸಹ ಬೆಸ್ಟ್ ಪೇರೆಂಟ್ಸ್ ಆಗಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ