ಪೌಷ್ಟಿಕಭರಿತವಾದ ರಾಗಿ ತೂಕ ನಷ್ಟಕ್ಕೆ ಹೆಚ್ಚು ಸಹಕಾರಿ!

  • by

ರಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ವ್ಯಾಪಕವಾಗಿ ಕಂಡು ಬರುವ ಸಸ್ಯ, ಕರ್ನಾಟಕದಲ್ಲಿ ಅತಿದೊಡ್ಡ ಬೆಳೆ ರಾಗಿಯಾಗಿದೆ . ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ ಮತ್ತು ಇತರ ಖನಿಜ, ಪೌಷ್ಟಿಕಾಂಶಭರಿತವಾದದ್ದು ರಾಗಿ. ತೂಕ ನಷ್ಟಕ್ಕೆ ಸೂಕ್ತ ಆಹಾರ ಅಂತಲೇ ಹೇಳಬಹುದು
ರಾಗಿಯ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು. ರಾಗಿ ಮುಖ್ಯವಾಗಿ ಮೂಳೆ , ರಕ್ತಹೀನತೆ ಹಾಗೂ ಮಧುಮೇಹ ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಆತಂಕ , ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ತೂಕ ನಷ್ಟದಲ್ಲಿ ಇದು ಮಹತ್ವದ ಸ್ಥಾನ ಪಡೆದುಕೊಂಡಿದೆ. ರಾಗಿಯಲ್ಲಿರುವ ಟ್ರಿಪ್ಪೋಫಾನ್ ಎಂಬ ವಿಶೇಷ ಆಮೈನೋ ಆಮ್ಲವು ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ. ಇತರ ಯಾವುದೇ ಧಾನ್ಯ ಅಥವಾ ಅಕ್ಕಿಗೆ ಹೋಲಿಸಿದರೆ ಇದು ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಹೊಂದಿದೆ.

 Ragi  benefits, Weight Loss, 
ರಾಗಿ ,ತೂಕ ನಷ್ಟಕ್ಕೆ,

ರಾಗಿ ದೋಸೆ..
ಅರ್ಧ ಕಪ್ ದೋಸೆ, ಸ್ವಲ್ಪ ತುರಿದ ಶುಂಠಿ, ಸಣ್ಣದಾಗಿ ಕತ್ತರಿಸಿದ 1 ಮೆಣಸಿನಕಾಯಿ, ಸಣ್ಣದಾಗಿ ಕತ್ತಕಿಸಿದ ಕರಿಬೇವು, ಕೊತ್ತಂಬರಿ, ಸಣ್ಣದಾಗಿ ಹೆಚ್ಚಿದ 1 ಈರುಳ್ಳಿ, 1 ಸ್ಪೂನ್ ಜೀರಿಗೆ , ಅರ್ಧ ಸ್ಪೂನ್ ಜೀರಿಗೆ
ಮೆಣಸಿನ ಪುಡಿ ಅರ್ಧ ಸ್ಪೂನ್, 1 ಸ್ಪೂನ್ ಉಪ್ಪು, 3.5 ಕಪ್ ನೀರು, ಹಾಗೂ ಎಣ್ಣೆ,

ದೋಸೆ ತಯಾರಿಸುವ ವಿಧಾನ
ಮೊದಲು ಒಂದು ದೊಡ್ಡೆ ಪಾತ್ರೆ ತೆಗೆದುಕೊಂಡು. 1 ಕಪ್ ರಾಗಿ ಹಿಟ್ಟು, 1 ಕಪ್ ರವೆ , ಅರ್ಧ ಕಪ್ ಅಕ್ಕಿ ಹಿಟ್ಟು, ಹಾಕಿಕೊಳ್ಳಬೇಕು . ನಂತರ ಅವಪಗಳಿಗೆ ಅರ್ಧ ಕಪ್ ಮೊಸರು, ತುರಿದ ಶುಂಠಿ , ಕತ್ತರಿಸಿದ ಮೆಣಸಿನಕಾಯಿ,ಸ್ವಲ್ಪ ಕರಿಬೇವು, 2 ಚಮಚ ಕೊತ್ತಂಬರಿ , ಈರುಳ್ಳಿ, ಜೀರಿಗೆ , ಮೆಣಸು, ಹಾಗೂ ಉಪ್ಪು ಹಾಕಿ. ಈ ಪಾತ್ರೆಗೆ 1-2 ಲೋಟದಷ್ಟು ನೀರು ಹಾಕಿ. ಗಂಟುಗಳು ಇಲ್ಲದಂತೆ ಚೆನ್ನಾಗಿ ಬೆರೆಸಿ.

 Ragi  benefits, Weight Loss, 
ರಾಗಿ ,ತೂಕ ನಷ್ಟಕ್ಕೆ,

ಒಂದು 15 -20 ನಿಮಿಷ ಗಳಷ್ಟು ಕಾಲ ಹಿಟ್ಟು ನೆನೆಯಲು ಬಿಡಿ. ನಂತರ ಮೆಲ್ಲೇ ಹಿಟ್ಟನ್ನು ತವಾ ಮೇಲೆ ಉಯ್ಯಿರಿ.
ಮೂಳೆ ಬಲವಾಗಿಸುತ್ತದೆ..

ರಾಗಿ ಪ್ರಯೋಜನ ಕೇವಲ ತೂಕ ನಷ್ಟಕ್ಕೆ ಮಾತ್ರ ಸೀಮಿತವಲ್ಲ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯೊಂದಿಗೆ ಲೋಡ್ ಆಗಿದ್ದು, ಇದು ಮೂಳೆಯ ಬಲವನ್ನು ಬೆಳೆಯುತ್ತಿರುವ ಮಕ್ಕಳು ಮತ್ತು ವಯಸ್ಸಾದ ಜನರಿಗೆ ಕ್ಯಾಲ್ಸಿಯಂ ಹೆಚ್ಚು ದೊರೆಯುತ್ತದೆ. ಇದು ಮಕ್ಕಳಲ್ಲಿ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ.

ರಾಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಡಯಾಬಿಟಿಸ್ ಮೆಲ್ಲಿಟಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದರಲ್ಲಿ ನಾರು ಹಾಗೂ ಪಾಲಿಫಿನಾಲ್ ಗಳು ಹೆಚ್ಚಿನ ಅಂಶವಿದ್ದು, ಅಕ್ಕಿ, ಗೋಧಿ, ಇನ್ನಾವುದೇ ಧಾನ್ಯಗಳಿಗೆ ಹೋಲಿಸಿದರೆ, ಇದು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿದೆ. ರಾಗಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ನಾರುಗಳು ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತವೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಾಗಿ ರಕ್ತದಲ್ಲಿನ ಕೊಲೆಸ್ರ್ಟಾಲ್ ಮಟ್ಟವನ್ನು ತಗ್ಗಿಸುವಲ್ಲಿ ಸಹಾಯ ಮಾಡುತ್ತದೆ. ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಯಕೃತ್ತಿಯಲ್ಲಿ ಕೊ್ಬಬಿನ ರಚನೆಯನ್ನು ತಡೆಯುತ್ತದೆ.

ಎದೆ ಹಾಲು ಹೆಚ್ಚಿಸಲು
ತಾಯಿ ಸೇವಿಸುವ ಆಹಾರಗಳಿಂದಲೇ ತಯಾರಾಗುವ ಹಾಲು ಮಗುವಿಗೆ ಜೀವಾಮೃತವಿದ್ದಂತೆ. ನವಜಾತ ಶಿಶುಗಳಿಗೆ ಹಾಲುಣಿಸುವ ತಾಯಂದಿರಿಗೆ ರಾಗಿ ಪೌಷ್ಟಿಕಾಂಶದಿಂದ ಉತ್ತಮವಾಗಿದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ. ಇದು ಮಗುವಿಗೆ ಮತ್ತು ತಾಯಿಗೆ ಬೇಕಾಗುವ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಅಮೈನೋ ಆಮ್ಲಗಳನ್ನು ದೇಹಕ್ಕೆ ಅಗತ್ಯವಾದ ಎಲ್ಲಾ ಖನಿಜಗಳು ದೊರೆಯುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ