ಮೂಲಂಗಿ ಫೇಸ್ ಪ್ಯಾಕ್‌ನಿಂದ ಮುಖದ ಕಾಂತಿ ಹೆಚ್ಚಿಸಿ !

  • by

ತುಂಬಾ ಜನರು ಮೂಲಂಗಿಯನ್ನು ತರಕಾರಿ ಅಥವಾ ಸಲಾಡ್ ಆಗಿ ಬಳಸುವುದನ್ನು ನೋಡಿದ್ದೀರಿ. ಈಗಾಗ್ಲೇ ಮೂಲಂಗಿ ಎಷ್ಟು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ಗೊತ್ತಿರಬಹುದು. ಆದ್ರೆ ಮೂಲಂಗಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೇ, ಚರ್ಮ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಕೆಲವರಿಗೆ ಮಾತ್ರ ಗೊತ್ತು.  ಮೂಲಂಗಿ ಚರ್ಮದ ಹಾಗೂ ಕೂದಲಿನೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಮೂಲಂಗಿಯನ್ನು ಸರಿಯಾಗಿ ಬಳಸಿದರೆ, ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಇದರ ಜತೆಗೆ ಅನೇಕ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. 

Radish face pack , beauty tips, face glowing,
ಮೂಲಂಗಿ ಫೇಸ್ ಪ್ಯಾಕ್ , ಮುಖದ ಕಾಂತಿ,

ಮೂಲಂಗಿಯಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಇದರಲ್ಲಿರುವ ಅಂಶಗಳು ಉತ್ಕರ್ಷಣಾ ನಿರೋಧಕವಾಗಿ ಕಾರ್ಯನಿರ್ವಹಿಸುತ್ತವೆ. ಚರ್ಮದಲ್ಲಿ ಕಾಲಜನ್ ಹೆಚ್ಚಿಸಲು ಇದು ನೆರವಾಗುತ್ತದೆ. ಇದಲ್ಲದೇ ಚರ್ಮದ ಹೊಳಪನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸೂರ್ಯನ ಕಿರಣಗಳಿಂದಾಗುವ ಹಾನಿಯಿಂದಲೂ ರಕ್ಷಿಸುತ್ತದೆ. ವಯಸ್ಸಾಗುವಿಕೆಯನ್ನು ತಡೆಗಟ್ಟಲು ನೆರವಾಗುತ್ತದೆ. 

ಚರ್ಮದ ಆರೋಗ್ಯಕ್ಕೆ ಮೂಲಂಗಿ ಪ್ರಯೋಜನಗಳು..!

1.ಮೂಲಂಗಿ ಬ್ಲ್ಯಾಕ್ ಹೆಡ್ ಗಳನ್ನು ನಿವಾರಿಸುತ್ತದೆ. 

2. ಚರ್ಮವನ್ನು ಹೈಡ್ರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

3. ಚರ್ಮ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುತ್ತದೆ

4.ಮೂಡವೆಗಳನ್ನು ತೊಡೆದು ಹಾಕಲು ಹೆಚ್ಚು ಪ್ರಯೋಜನಕಾರಿಯಾಗಿದೆ.

5. ಚರ್ಮದಲ್ಲಿ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ. 

6. ಕೂದಲು ಉದರುವುದನ್ನು ತಡೆಯುತ್ತದೆ. 

7. ತಲೆಹೊಟ್ಟು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 

Radish face pack , beauty tips, face glowing,
ಮೂಲಂಗಿ ಫೇಸ್ ಪ್ಯಾಕ್ , ಮುಖದ ಕಾಂತಿ,

ಮೂಲಂಗಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ನಿಮ್ಮ ದೇಹದ ವಿಷವನ್ನು ತೊಡೆದು ಹಾಕಲು ನೆರವಾಗುತ್ತದೆ. 

ಮೂಲಂಗಿಯ ಫೇಸ್ ಪ್ಯಾಕ್ ಹೆಚ್ಚು ಪರಿಣಾಮಕಾರಿ…!

ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಮೂಲಂಗಿ ಪೇಸ್ಟ್ ನಿಂದ ನಿಮ್ಮ ಚರ್ಮವನ್ನು ಬ್ಲೀಚ್ ಮಾಡಬಹುದು. ಚರ್ಮ ತುಂಬಾ ಸೂಕ್ಷ್ಮವಾಗಿದ್ದರೆ, ಇದನ್ನು ಬಳಸಬಾರದು. ಏಕೆಂದರೆ ಸೂಕ್ಷ್ಮ ಚರ್ಮದ ಮೇಲೆ ಕಿರಿ ಕಿರಿ ಯನ್ನುಂಟು ಮಾಡಬಹುದು. ಆದಾಗ್ಯೂ ಈ ಫೇಸ್ ಪ್ಯಾಕ್ ಹಚ್ಚುವುದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. 

ಫೇಸ್ ಪ್ಯಾಕ್ ತಯಾರಿಸುವುದು ಹೇಗೆ? 

ತ್ವಚೆಯ ಹೊಳಪನ್ನು ಹೆಚ್ಚಿಸಲು ಮೂಲಂಗಿ ಫೇಸ್ ಪ್ಯಾಕ್ ನೆರವಾಗುತ್ತೆದೆ. ಫೇಸ್ ಪ್ಯಾಕ್ ತಯಾರಿಸುವುದು ತುಂಬಾ ಸುಲಭ. ಒಂದು ದೊಡ್ಡ ಪ್ರಮಾಣದ ಮೂಲಂಗಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನಂತರ ಮೂಲಂಗಿ ಸಿಪ್ಪೆ ತೆಗೆದು, ಚೆನ್ನಾಗಿ ಸಣ್ಣದಾಗಿ ತುರಿಯಬೇಕು. ಅಥವಾ ರುಬ್ಬಬೇಕು.  ಪೇಸ್ಟ್ ಆಗಿ ಬದಲಾಗುವವರೆಗೂ ಹೀಗೆ ಮಾಡಬೇಕು. ಈ ಮೂಲಂಗಿ ಪೇಸ್ಟ್ ನಲ್ಲಿ  ಕೆಲ ಹನಿ ನಿಂಬೆರಸ ಸೇರಿಸಿ. ನಂತರ ೪ ರಿಂದ ೫ ಹನಿ ಆಲಿವ್ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಈಗ ಮೂಲಂಗಿ ಫೇಸ್ ಪ್ಯಾಕ್ ಸಿದ್ಧ. 

ನಂತರ ಈ ಪೇಸ್ಟ್ ನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಈ ಪ್ಯಾಕ್ ನ್ನು ವಾರಕ್ಕೆ 2 ಅಥವಾ 3 ಬಾರಿ ಹಚ್ಚಿಕೊಳ್ಳಬಹುದು. ಇದು ಉತ್ತಮ ನೈಸರ್ಗಿಕ ಕ್ಲೆನ್ಸರ್ ಅಲ್ಲದೇ, ಪರಿಣಾಮಕಾರಿ ಫೇಸ್ ಪ್ಯಾಕ್ ಆಗಿದೆ. 

Radish face pack , beauty tips, face glowing,
ಮೂಲಂಗಿ ಫೇಸ್ ಪ್ಯಾಕ್ , ಮುಖದ ಕಾಂತಿ,

ಗಮನಿಸಿ: ಮುಖಕ್ಕೆ ಈ ಪೇಸ್ಟ್ ಉಪಯೋಗಿಸುವ ಮುನ್ನ , ಮೊದಲು ಕೈಗಳ ಮೇಲೆ ಹಚ್ಚಿ ಪರೀಕ್ಷಿಸಬೇಕು. ಇದರಿಂದ ಚರ್ಮದ ಮೇಲೆ ಹಾನಿಯಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಪರೀಕ್ಷಿಸುವುದಕ್ಕೂ ಮುನ್ನ ಈ ಪೇಸ್ಟ್ ನ್ನು ನೇರವಾಗಿ ಮುಖಕ್ಕೆ ಹಚ್ಚಬೇಡಿ. 

ಈ ಫೇಸ್ ಪ್ಯಾಕ್ ನಿಂದಾಗುವ ಪ್ರಯೋಜನಗಳು..!

ನಿಯಮಿತ ಬಳಕೆಯಿಂದ ಚರ್ಮ ವೈಟ್ ಕಲರ್ ಆಗುತ್ತದೆ. 

ಕಲೆಗಳನ್ನು ನಿವಾರಿಸುತ್ತೆದ. ಕಂದು ಬಣ್ಣದ ಮಚ್ಚೆಗಳನ್ನು ಕಡಿಮೆ ಮಾಡಲು ಸಹಾಯ ವಾಗುತ್ತದೆ. 

ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಮತ್ತು ತೇವಾಂಶವನ್ನು ಕಾಪಾಡುತ್ತದೆ. 

ಕೆಂಪು ಗುಳ್ಳೆಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. 

ಮೂಲಂಗಿಯಲ್ಲಿ ಅನೇಕ ಖನಿಜಗಳಿದ್ದು, ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. 

ವಿಟಮಿನ್ ಎ ಸಹಾಯದಿಂದ ಚರ್ಮವು ಪೋಷಣೆಯನ್ನು ಪಡೆಯುತ್ತದೆ. ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ