ನಾಯಿ ಕಚ್ಚಿದಾಗ ಮಾಡಬೇಕಾದ ಪ್ರಾಥಮಿಕ ಚಿಕಿತ್ಸೆಗಳೇನು..?

  • by

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ಹಿಂಡು ಹಿಂಡಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಹೋಗುವುದರ ಜತೆಗೆ ಶಾಲಾ ಮಕ್ಕಳ ಮೇಲೆ ಹಾಗೂ ಸ್ಥಳೀಯರ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ.  ಒಂದು ನಾಯಿ ಹಿಂದಟ್ಟಿದ್ದರೆ ಏಕಕಾಲಕ್ಕೆ ಅದರ ಹಿಂದೆ ಹತ್ತಾರು ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತವೆ. ನಾಯಿ ಮತ್ತು ಅದರಿಂದ ಹರಡಬಹುದಾದ ರೇಬಿಸ್ ಬಗ್ಗೆ ಪಾಲಕರಲ್ಲಿ ಆತಂಕ ಇರುತ್ತದೆ. ನಾಯಿ ಕಚ್ಚಿದಾಗ ರೇಬಿಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಬೀದಿ ನಾಯಿಗಳು ನಿಮ್ಮನ್ನು ದಾಳಿ ಮಾಡಿ ನಿಮ್ಮನ್ನು ಕಚ್ಚಿದಾಗ ನೀವೇನು ಮಾಡಬೇಕು..? ಇದರ ಪ್ರಥಮ ಚಿಕಿತ್ಸೆ ಹೇಗಿರಬೇಕು? ಆ ಸಂದರ್ಭಕ್ಕೆ ಏನು ಮಾಡಬೇಕು..! ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. 

ರೇಬಿಸ್ ಎಂದರೆ ಏನು?

ರೇಬಿಸ್ ಉಷ್ಣ ರಕ್ತದ ಪ್ರಾಣಿಗಳ ಗಂಭೀರ ಸೋಂಕಾಗಿದೆ. ರೇಬಿಸ್ (ಹುಚ್ಚು ನಾಯಿ) ರೋಗವು ಒಂದು ಮಾರಣಾಂಟಿಕ ವೈರಸ್ ನಿಂದ ಬರುವ ಪ್ರಾಣಿಜನ್ಯ ರೋಗ. ಮನುಷ್ಯನಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ರೋಗಗಳಿಗೆ ಪ್ರಾಣಿ ಜನ್ಯ ರೋಗ ಎಂದು ಕರೆಯಲಾಗುತ್ತದೆ. ನಾಯಿಗಳಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ.

ನರಮಂಡಲಕ್ಕೆ ದಾಳಿ ಯಿಡುವ ವೈರಸ್ ನಿಂದ ರೇಬಿಸ್ ಉಂಟಾಗುತ್ತದೆ. ರೇಬಿಸ್ ಸೋಂಕು ಹೊಂದಿರುವ ನಾಯಿ , ಬೆಕ್ಕು, ಇತರ ಪ್ರಾಣಿಗಳು ವ್ಯಕ್ತಿಯನ್ನು ಕಚ್ಚುವುದರಿಂದ ರೇಬಿಸ್ ಉಂಟಾಗುತ್ತದೆ. ರೇಬಿಸ್ ವೈರಸ್ ಮಾನವ ಶರೀರವನ್ನು ಪ್ರವೇಶಿಸಿದ 5 ದಿನಗಳ ಬಳಿಕ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. 

ರೇಬಿಸ್ ಲಕ್ಷಣಗಳೇನು..?

ಲಕ್ಷಣಗಳು ಅಸ್ಪಷ್ಟವಾಗಿರುತ್ತವೆ… ನಾಯಿಗಳಲ್ಲಿ ಸೋಂಕು ತಗಲುವಿಕೆಯಿಂದ ಹಿಡಿದು ರೋಗದ ಲಕ್ಷಣಗಳು ಕಾಣಿಸುವ  ಅವಧಿಯು 3 ರಿಂದ 6 ವಾರ. ಪ್ರಥಮ ಹಂತದಲ್ಲಿ ರೋಗಿಯಲ್ಲಿ ಜ್ವರ, ತಲೆನೋವು, ದೇಹಾಲಸ್ಯ ಹಸಿವು, ಕ್ಷೀಣ ಮತ್ತು ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಗಾಯವಾದ ಜಾಗದಲ್ಲಿ ನೋವು, ತುರಿಕೆ ಹಾಗೂ ಮರಗಟ್ಟುವಿಕೆ ಅಥವಾ ಜುಮುಗುಡುವಿಕೆ, ಕೆರಳುವ ಬುದ್ಧಿ ತೋರಿಸುವುು. ಉಂಟಾಗಬಹುದು.ಕಾಯಿಲೆ ಮುಂದುವರೆದಂತೆ ಸ್ಪರ್ಶ, ಬೆಳಕು ಮತ್ತು ಧ್ವನಿಗೆ ರೋಗಗ್ರಸ್ತ ನಾಯಿಯು ಅತಿ ಸೂಕ್ಷ್ಮಗ್ರಾಹಿಯಾಗುತ್ತದೆ. ದಿಗ್ಭ್ರಮೆ ಉಂಟಾಗುತ್ತದೆ. ಗಂಟಲು ಮತ್ತು ದವಡೆಯ ಸ್ನಾಯುಗಳು ಪಾರ್ಶ್ವವಾಯು, ವೀಪರೀಕ ಜೊಲ್ಲು ಸೋರುವುದು. ಮುಂದಿನ ಹಂತದಲ್ಲಿ ರೋಗಿಗೆ ಎಂಜಲು ನುಂಗಲೂ ಕಷ್ಟವಾಗಬಹುದು. ಹೀಗಾಗಿ ಬಾಯಿಯಲ್ಲಿ ನೊರೆ ಉಂಟಾಗುತ್ತದೆ. ನೀರನ್ನು ನುಂಗುವುದು ಕಷ್ಟವಾದ್ದರಿಂದ ರೋಗಿಗೆ ನೀರನ್ನು ಕಂಡರೆ ಭಯವಾಗುತ್ತದೆ. ಶರೀರ ನಿಷ್ಕ್ರೀಯಗೊಳ್ಳತ್ತದೆ. ವ್ಯಕ್ತಿ ಕೋಮಾ ಸ್ಥಿತಿ ಹೋಗಿ ಸಾವು ಸಂಭವಿಸುತ್ತದೆ.

ತಡೆಗಟ್ಟುವುದು ಹೇಗೆ..?

ರೇಬಿಸ್ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಾಗಾಗಿ ಇದನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಸಾಕುನಾಯಿ ಹಾಗೂ ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು. ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು.

ನಾಯಿ ಕಚ್ಚಿದಾಗ ಕೂಡಲೇ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆಗಳು!

ಒಂದು ವೇಳೆ ಮನುಷ್ಯರು ಹಾಗೂ ಹುಚ್ಚು ನಾಯಿ ಕಡಿತಕ್ಕೆ ಒಳಗಾದರೆ ಗಾಯವನ್ನು ತಕ್ಷಣ ಸಾಬೂನಿನಿಂದ (ಲೈಫ್ ಬಾಯ್) ತೊಳೆಯಬೇಕು. ನಂತರ ಯಾವುದೇ ಆಂಟಿಸೆಪ್ಟಿಕ್ (ಸಾವ್ಲಾನ್ /ಡೆಟಾಲ್) ದ್ರಾವಣವನ್ನು ಗಾಯಕ್ಕೆ ಲೇಪಿಸಬೇಕು.

ರೋಗ ಬಂದ ನಾಯಿ, ಇತರೆ ಪ್ರಾಣಿ ಮತ್ತು ಅವುಗಳ ಜೋಲ್ಲನ್ನು ಮುಟ್ಟಬಾರದು. ಗಾಯಕ್ಕೆ ಯಾವುದೇ ಹೊಲಿಗೆ, ಬ್ಯಾಂಡೇಜ್ ಹಾಕಿಸಬಾರದು. ಅಥವಾ ಅರಿಶಿಣ, ಗಿಜಮೂಲಿಕೆಗಳ ರಸ ಹಚ್ಚಬಾರದು.

ಗಾಯವು ಆಳವಾಗಿದ್ದರೆ ಅಥವಾ ಅಂಗಾಂಶಗಳಿಗೆ ಘಾಸಿಯಾಗಿದ್ದರೆ ಮತ್ತು ರಕ್ತಸ್ರಾವವಾಗುತ್ತಿದ್ದರೆ ಒತ್ತಡವನ್ನು ಹೇರಿ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಹಾಗೂ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು. ಊತ, ಕೆಂಪಾಗುವಿಕೆ ಕಂಡುಬಂದರೆ ವೈದ್ಯರನ್ನು ಭೇಟಿಮಾಡಿ, ವಿಳಂಬ ಮಾಡಬೇಡಿ. ವ್ಯಕ್ತಿಯನ್ನು ಕಚ್ಚಿದ ನಾಯಿ ವಿಲಕ್ಷಣವಾಗಿ ವರ್ತಿಸುತ್ತಿದ್ದರೆ, ಬಾಯಿ ಇಂದ ನೊರೆ ಸುರಿಯುತ್ತಿದ್ದರೆ ಅಥವಾ ಯಾವುದೇ ಪ್ರಚೋದನೆ ಇಲ್ಲದಿದ್ದಾಗಲೂ ಕಚ್ಚಿದ್ದರೂ ವೈದ್ಯರನ್ನು ತಕ್ಷಣ ಭೇಟಿ ಮಾಡಬೇಕು. ಅವರು ರೇಬಿಸ್ ನಿರೋಧಕ ಚುಚ್ಚುಮದ್ದು ತೆಗೆದುಕೊಳ್ಳುವಂತೆ ಸೂಚಿಸಬಹುದು. ಕೇವಲ ಐದು ಚುಚ್ಚು ಮದ್ದು ಬೇಕಾಗುತ್ತದೆ. ರೇಬಿಸ್ ನಿರೋಧಕ ಔಷಧಿಗಳ ಕುರಿತು ವೈದ್ಯರ ಸಲಹೆ ಪಡೆದುಕೊಳ್ಳುವುದು ಸುರಕ್ಷಿತವಾಗಿರುತ್ತದೆ. ತಕ್ಷಣ 24 ಗಂಟೆಯೊಳಗೆ ಪಶು ವೈದ್ಯರನ್ನು ಸಂಪರ್ಕಿಸಿ ರೇಬಿಸ್ ಲಸಿಕೆಯನ್ನು ಹಾಕಿಸಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ